Thursday, 19th September 2024

ಗೆಲುವಿನಾಟ ಮುಂದುವರಿಸಿದ ರಾಜಸ್ತಾನ ರಾಯಲ್ಸ್

*ಕೊನೆಯ ಐದು ಓವರಿನಲ್ಲಿ ಗರಿಷ್ಠ ರನ್ ಬಾರಿಸಿದ ತಂಡ ರಾಜಸ್ತಾನ್ 86.
*ರಾಜಸ್ತಾನ್ ತಂಡ ಅತೀ ಹೆಚ್ಚು ರನ್ 223 ರನ್ ಅನ್ನು ಚೇಸ್ ಮಾಡಿತು.

ಶಾರ್ಜಾ: ರಾಜಸ್ತಾನ ತಂಡ ತನ್ನ ಗೆಲುವಿನ ಹವ್ಯಾಸವನ್ನು ಮುಂದುವರಿಸಿದೆ. ಕಿಂಗ್ಸ್ ಎಲೆವೆನ್ ಪಂಜಾಬ್ ನೀಡಿದ ಭಾರೀ ಸವಾಲಿನ ಮೊತ್ತವನ್ನು ಕೇವಲ ಆರು ವಿಕೆಟ್ ಕಳೆದುಕೊಂಡು ಮೆಟ್ಟಿ ನಿಂತಿದೆ. ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ರಾಜಸ್ತಾನ ಎರಡು ಗೆಲುವಿನೊಂದಿಗೆ ಎರಡನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲಗ್ಸ್ ಅಗ್ರಸ್ಥಾನದಲ್ಲಿದೆ. ಸನ್ರೆöÊರ‍್ಸ್ ಹೈದರಾಬಾದ್ ತಂಡದ ಎರಡು ಪಂದ್ಯ ಸೋತಿದ್ದು, ಖಾತೆ ತೆರೆದಿಲ್ಲ.

ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪಂಜಾಬಿಗೆ ಆರಂಭಿಕ ಹಾಗೂ ಕನ್ನಡಿಗ ಜೋಡಿಗಳಾದ ಮಯಾಂಕ್ ಅಗರ್ವಾಲ್ ಹಾಗೂ ನಾಯಕ ಕೆ.ಎಲ್.ರಾಹುಲ್ ಭರ್ಜರಿ ಆರಂಭ ಮತ್ತು 183 ರನ್ನುಗಳ ಜತೆಯಾಟ ನೀಡಿದರು. ಇದರಲ್ಲಿ ಅಗರ್ವಾಲ್ ಶತಕ ದಾಖಲಿಸಿದರು. ಇದರಲ್ಲಿ ಹತ್ತು ಬೌಂಡರಿ ಹಾಗೂ ಏಳು ಸಿಕ್ಸರ್ ಒಳಗೊಂಡಿತ್ತು. ರಾಹುಲ್ ಕೂಡ ಅರ್ಧಶತಕ ದಾಖಲಿಸಿ, ತಮ್ಮ ಪ್ರಚಂಡ ಫಾರ್ಮ್ ಮುಂದುವರಿಸಿದರು. ಅವರ ಬತ್ತಳಿಕೆಯಿಂದ ಏಳು ಬೌಂಡರಿ ಹಾಗೂ ಏಕೈಕ ಸಿಕ್ಸರ್ ಬಂತು. ಕೊನೆಯಲ್ಲಿ ನಿಕೋಲಸ್ ಪೂರನ್ ಸ್ಪೋಟಕ ಆಟಕ್ಕೆ ಕೈ ಹಾಕಿದರು. ಒಂದು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ ತಂಡದ ಮೊತ್ತವನ್ನು 200 ಗಡಿ ದಾಟಿಸಿದರು.

ಪ್ರತಿಯಾಗಿ ಮೊತ್ತ ಬೆನ್ನಟ್ಟಲಾರಂಭಿಸಿದ ರಾಜಸ್ತಾನಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಸ್ಪೋಟಕ ಆಟಕ್ಕೆ ಹೆಸರುವಾಸಿಯಾದ ಜೋಸ್ ಬಟ್ಲರ್ ನಾಲ್ಕಕ್ಕೆ ಸಾಕೆಂದರು. ಮೊತ್ತೊಮ್ಮೆ ಶೆಲ್ಡನ್ ಕಾಟ್ರೆಲ್ ಆರಂಭಿಕ ಬ್ರೇಕ್ ನೀಡಿದರು. ಆದರೆ, ಬಳಿಕ ಕಿಂಗ್ಸ್’ಗೆ ಈ ಸಂತಸ ಹೆಚ್ಚು ಹೊತ್ತು ಉಳಿಯಲಿಲ್ಲ. ನಾಯಕ ಸ್ಟೀವ್ ಸ್ಮಿತ್, ವಿಕೆಟ್ ಕೀಪರ್ ಸಂಜೂ ಸ್ಯಾಮ್ಸನ್ ಮತ್ತು ರಾಹುಲ್ ಟೆವಾಟಿಯಾ ಮೂವರು ಭರ್ಜರಿ ಆಟ ಪ್ರದರ್ಶಿಸಿದರು.

ಮೂವರಿಂದಲೂ ಅರ್ಧಶತಕದ ಕೊಡುಗೆ ಸಲ್ಲಿಕೆಯಾಯಿತು. ಮೂವರ ಇನ್ನಿಂಗ್ಸ್ನಲ್ಲಿ 16 ಸಿಕ್ಸರ್ ಹಾಗೂ 11 ಬೌಂಡರಿ ಹೊರಹೊಮ್ಮಿದ್ದೇ, ಪಂಜಾಬ್ ತಂಡದ ಸವಾಲು ಲೆಕ್ಕಕ್ಕಿಲ್ಲದಂತೆ ಮಾಡಿತು. ವೇಗಿ ಜೋಫ್ರಾ ಆರ್ಚರ್ ಎರಡು ಸಿಕ್ಸರ್ ಸಿಡಿಸಿ, ತಂಡವನ್ನು ಗೆಲುವಿನ ಹತ್ತಿರ ತಂದು ನಿಲ್ಲಿಸಿದರು.

ಟೆವಾಟಿಯಾ ಮ್ಯಾಜಿಕ್
ಮೊದಲ 19 ಎಸೆತಗಳಲ್ಲಿ ಯಾವುದೇ ಬೌಂಡರಿಗಳಿಲ್ಲದೆ 8 ರನ್ ಗಳಿಸಿದ್ದ ಟೆವಾಟಿಯಾ, ಬಳಿಕ 12 ಎಸೆತಗಳಲ್ಲಿ 45 ರನ್ ದೋಚಿದರು. ಅದರಲ್ಲಿ ಏಳು ಸಿಕ್ಸರ್ ಒಳಗೊಂಡಿತ್ತು. ಶೆಲ್ಡನ್ ಕಾಟ್ರೆಲ್ ಅವರ 18ನೇ ಓವರಿನಲ್ಲಿ 30 ರನ್ ಹರಿದು ಬಂತು.

೨೦೨೦ರ ಐಪಿಎಲ್‌ನಲ್ಲಿ ಪವರ್ ಪ್ಲೇ ಆಟದಲ್ಲಿ ಅತೀ ಹೆಚ್ಚು ರನ್ ಪೇರಿಸಿದ ತಂಡಗಳು ಇವು,
69/1 – ಕಿಂಗ್ಸ್ ಎಲೆವೆನ್ ಪಂಜಾಬ್ ವಿರುದ್ದ ರಾಜಸ್ತಾನ್ ರಾಯಲ್ಸ್,
60/0 – ರಾಜಸ್ತಾನ್ ರಾಯಲ್ಸ್ ವಿರುದ್ದ ಕಿಂಗ್ಸ್ ಎಲೆವೆನ್ ಪಂಜಾಬ್
59/1 – ಕೋಲ್ಕತಾ ನೈಟ್ ರೈರ‍್ಸ್ ವಿರುದ್ದ ಮುಂಬೈ ಇಂಡಿಯನ್ಸ್
54/1 – ಚೆನ್ನೆöÊ ಸೂಪರ್ ಕಿಂಗ್ಸ್ ವಿರುದ್ದ ರಾಜಸ್ತಾನ್ ರಾಯಲ್ಸ್

ಐಪಿಎಲ್‌ನಲ್ಲಿ ಕಿಂಗ್ಸ್ ಎಲೆವೆನ್ ಪಂಜಾಬ್ ಪರ ಅತೀ ಹೆಚ್ಚು ಜೋಡಿ ರನ್ ಗಳಿಕೆ
202 – 2011ರಲ್ಲಿ ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡದ ವಿರುದ್ದ ಆಡಮ್ ಗಿಲ್‌ಕ್ರೆöÊಸ್ಟ್ ಮತ್ತು ಶಾನ್ ಮಾರ್ಷ್ ಜೋಡಿ.
183 – 2020ರಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ದ ಮಯಾಂಕ್ ಅಗರ್ವಾಲ್ ಮತ್ತು ಕೆ.ಎಲ್.ರಾಹುಲ್ ಜೋಡಿ
148 – 2013ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಶಾನ್ ಮಾರ್ಷ್ ಮತ್ತು ಅಜರ್ ಮೆಹಮೂದ್ ಜೋಡಿ.

ಸ್ಕೋರ್ ವಿವರ
ಕಿಂಗ್ಸ್ ಎಲೆವೆನ್ ಪಂಜಾಬ್ 223/2
ಕೆ.ಎಲ್.ರಾಹುಲ್ 69, ಮಯಾಂಕ್ ಅಗರ್ವಾಲ್ 106, ಮ್ಯಾಕ್ಸ್’ವೆಲ್ 13 ಅಜೇಯ, ಪೂರನ್ 25 ಅಜೇಯ.
ಬೌಲಿಂಗ್: ರಾಜಪೂತ್ 39/1, ಕರ‍್ರನ್ 44/1
ರಾಜಸ್ತಾನ್ ರಾಯಲ್ಸ್ 226/6
ಸ್ಟೀವ್ ಸ್ಮಿತ್ 50, ಸಂಜೂ ಸ್ಯಾಮ್ಸನ್ 85, ರಾಹುಲ್ ಟೆವಾಟಿಯಾ 53, ಜೋಫ್ರಾ ಆರ್ಚರ್ 13 ಅಜೇಯ
ಬೌಲಿಂಗ್: ಮೊಹಮ್ಮದ್ ಶಮಿ 53/3, ನೀಶಂ 40/1, ಮುರುಗನ್ ಅಶ್ವಿನ್ 16/1, ಶೆಲ್ಡನ್ ಕಾಟ್ರೆಲ್ 52/1.
ಪಂದ್ಯಶ್ರೇಷ್ಠ: ಸಂಜೂ ಸ್ಯಾಮ್ಸನ್