Thursday, 19th September 2024

ಡೊನಾಲ್ಡ್ ಟ್ರಂಪ್, ಪತ್ನಿ ಮೆಲಾನಿಯಾ ಟ್ರಂಪ್‌ಗೆ ಕೊರೊನಾ ದೃಢ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್‌ಗೆ ಕೊರೊನಾ ಸೋಂಕು ತಗುಲಿರು ವುದು ದೃಢಪಟ್ಟಿದೆ.

ಖುದ್ದಾಗಿ ಟ್ರಂಪ್ ಈ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮಿಬ್ಬರಿಗೂ ಕೊರೊನಾ ಸೋಂಕು ತಗುಲಿದೆ, ಇಬ್ಬರೂ ಒಟ್ಟಾಗಿ ರೋಗ ವನ್ನು ಎದುರಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಅವರ ಆಪ್ತ ಸಹಾಯಕರಿಗೆ ಕೊರೊನಾ ಸೋಂಖು ತಗುಲಿದ್ದ ಕಾರಣ ಟ್ರಂಪ್ ಹಾಗೂ ಮೆನಾಲಿಯಾ ಟ್ರಂಪ್ ಕ್ವಾರಂಟೈನ್‌ಗೆ ಒಳಗಾಗುವುದಾಗಿ ತಿಳಿಸಿದ್ದರು. ಬಳಿಕ ಅವರನ್ನು ಪರೀಕ್ಷೆ ಮಾಡಲಾಗಿದ್ದು, ಇಬ್ಬರಿಗೂ ಪಾಸಿಟಿವ್ ಬಂದಿದೆ.

ಹೆಲಿಕಾಪ್ಟರ್‌ನಲ್ಲಿ ಕೂಡ ಹಲವೆಡೆ ಪ್ರಯಾಣ ಬೆಳೆಸಿದ್ದರು. ಶ್ವೇತಭವನದ ಹಲವು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮೊದಲು ಕೊರೊನಾ ಲಸಿಕೆ ಸಿಗುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದರು, ಅಷ್ಟೇ ಅಲ್ಲದೆ ಲಸಿಕೆ ಕೊಳ್ಳಲು ಹಣ ವನ್ನೂ ಮೀಸಲಿಟ್ಟಿದ್ದರು. ಅಧ್ಯಕ್ಷೀಯ ಚುನಾವಣೆಗೂ ಮುನ್ನವೇ ಕೊರೊನಾ ಲಸಿಕೆ ದೊರೆತರೆ ತಮ್ಮ ಪ್ರಚಾರಕ್ಕೂ ಸಹಾಯವಾಗುತ್ತಿತ್ತು ಎಂದು ಡೊನಾಲ್ಡ್ ಟ್ರಂಪ್ ಬಯಸಿದ್ದರು. ಆದರೆ ಚುನಾವಣೆಗೂ ಮುನ್ನ ಲಸಿಕೆ ಸಿಗುವುದು ಕಷ್ಟ ಎಂದು ಮಾಡೆರ್ನಾ ಹೇಳಿದೆ.

ಕೋವಿಡ್ ಸೋಂಕಿಗೆ ತುತ್ತಾಗಿರುವ ಅಮರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಾಗೂ ಫಸ್ಟ್ ಲೇಡಿ ಮೆಲನಿಯಾ ಟ್ರಂಪ್ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾರೈಸಿದರು.