Thursday, 19th September 2024

ಬಲಿಷ್ಠ ದಕ್ಷಿಣ ಆಫ್ರಿಕಾಕ್ಕೆ ಬಾಂಗ್ಲಾದೇಶ ಸವಾಲು

ಮುಂಬೈ: ಏಕದಿನ ವಿಶ್ವಕಪ್‌ ಸರಣಿಯ 23ನೇ ಪಂದ್ಯ ಮಂಗಳವಾರ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ನಡುವೆ ಮುಂಬೈನ ವಾಂಖೆಡೆ ಮೈದಾನ ದಲ್ಲಿ ನಡೆಯಲಿದೆ.

ಇಂಗ್ಲೆಂಡ್​ ವಿರುದ್ಧದ ಹಿಂದಿನ ಪಂದ್ಯದಲ್ಲಿ 229 ರನ್​ಗಳ ದೊಡ್ಡ ಮೊತ್ತದ ಗೆಲುವು ದಾಖಲಿಸಿರುವ ಹರಿಣಗಳು ಟೂರ್ನಿಯಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರಲ್ಲಿ ಜಯಿಸಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕೇವಲ ಒಂದರಲ್ಲಿ ಮಾತ್ರ ಗೆದ್ದಿರುವ ಬಾಂಗ್ಲಾ 7ನೇ ಸ್ಥಾನದಲ್ಲಿದೆ.

ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬಾವುಮಾ ಇಂಗ್ಲೆಂಡ್​ ವಿರುದ್ದದ ಕೊನೆಯ ಪಂದ್ಯವನ್ನು ಆಡಿರಲಿಲ್ಲ. ಅವರ ಬದಲಿಗೆ ರೀಜಾ ಹೆಂಡ್ರಿಕ್ಸ್ ಪಂದ್ಯ ವನ್ನಾಡಿದ್ದರು. ಇಂಗ್ಲೆಂಡ್ ವಿರುದ್ಧ 85 ರನ್‌ಗಳ ಮಹತ್ವದ ಇನ್ನಿಂಗ್ಸ್ ಆಡಿದ್ದರು. ಬವುಮಾ ಬಾಂಗ್ಲಾದೇಶದ ವಿರುದ್ಧದ ಪಂದ್ಯಕ್ಕೆ ಮರಳುವ ಸಾಧ್ಯತೆ ಹೆಚ್ಚಿದೆ. ಭುಜದ ಗಾಯದಿಂದ ಭಾರತ ವಿರುದ್ದದ ಪಂದ್ಯದಿಂದ ಹೊರಗುಳಿದಿದ್ದ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಕೂಡ ಈ ಪಂದ್ಯದಲ್ಲಿ ಪುನರಾಗಮನ ಮಾಡುವ ಸಾಧ್ಯತೆ ಹೆಚ್ಚಿದೆ.

ಸಂಭಾವ್ಯ ತಂಡಗಳು

ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾ), ಕ್ವಿಂಟನ್ ಡಿ ಕಾಕ್ (ವಿ.ಕೀ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡಾ, ಕೇಶವ್ ಮಹಾರಾಜ್, ಜೆರಾಲ್ಡ್ ಕೊಯೆಟ್ಜಿ, ಲುಂಗಿ ಎನ್ಗಿಡಿ

ಬಾಂಗ್ಲಾದೇಶ: ತಂಝಿದ್ ಹಸನ್, ಲಿಟ್ಟನ್ ದಾಸ್, ಮೆಹಿದಿ ಹಸನ್ ಮಿರಾಜ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್ (ವಿ.ಕೀ), ತೌಹಿದ್ ಹೃದಯೋಯ್, ಮಹ್ಮುದುಲ್ಲಾ, ನಸುಮ್ ಅಹ್ಮದ್/ಶೋರಿಫುಲ್ ಇಸ್ಲಾಂ, ತಂಝಿಮ್ ಸಾಕಿಬ್/ಹಸನ್ ಮಹ್ಮದ್