ಕೊಚ್ಚಿ: ಕೇರಳದ ಕೊಚ್ಚಿಯಲ್ಲಿ ಭಾನುವಾರ ಗ್ಲೈಡರ್ ವಿಮಾನ ಪತನಗೊಂಡು ಇಬ್ಬರು ನೌಕಾಪಡೆ ಸಿಬ್ಬಂದಿ ಮೃತಪಟ್ಟಿ ದ್ದಾರೆ.
ಕೊಚ್ಚಿಯ ತೂಪಪುಂಪುಡಿ ಸೇತುವೆ ಬಳಿ ನೌಕಾಪಡೆಯ ಇಬ್ಬರು ಅಧಿಕಾರಿಗಳು ಮುಖಾಮುಖಿ ಡಿಕ್ಕಿ ಹೊಡೆದುಕೊಂಡು ಸಾವನ್ನಪ್ಪಿದ್ದಾರೆ. ನೌಕಾಪಡೆಯ ಪವರ್ ಗ್ಲೈಡರ್ ಎಂದಿನಂತೆ ತರಬೇತಿಯಲ್ಲಿದ್ದ ವೇಳೇಯಲ್ಲಿ ಘಟನೆ ಸಂಭವಿಸಿದೆ. ಗ್ಲೈಡರ್ ಐ.ಎಸ್.ಗರುಡಾದಿಂದ ಟೇಕ್ ಆಫ್ ಆಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಮೃತರನ್ನು ಲೆಫ್ಟಿನೆಂಟ್ ರಾಜೀವ್ ಝಾ ಮತ್ತು ಪೆಟಿ ಆಫೀಸರ್ – ಎಲೆಕ್ಟ್ರಿಕಲ್ ಏರ್ ಸುನಿಲ್ ಕುಮಾರ್ ಎಂದು ಗುರುತಿಸಲಾಗಿದೆ.