ನವದೆಹಲಿ: ದೂರದರ್ಶನದ ಜನಪ್ರಿಯ ಕಾರ್ಯಕ್ರಮ ಸಿಐಡಿಯಲ್ಲಿ ಫ್ರೆಡೆರಿಕ್ಸ್ ಪಾತ್ರ ನಿರ್ವಹಿಸುವ ಮೂಲಕ ಜನಪ್ರಿಯರಾಗಿದ್ದ ನಟ ದಿನೇಶ್ ಫಡ್ನಿಸ್(57 )ಮಂಗಳವಾರ ನಿಧನರಾದರು.
ನಟ ಮುಂಬೈನ ತುಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.
ಈ ಹಿಂದೆ, ನಟ ಹೃದಯಾಘಾತದಿಂದ ಬಳಲುತ್ತಿದ್ದರು ಮತ್ತು ಮುಂಬೈನ ತುಂಗಾ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ ಎಂಬ ವರದಿಗಳು ವೈರಲ್ ಆಗಿದ್ದವು. ಡಿಸೆಂಬರ್ 1, ಶುಕ್ರವಾರ ರಾತ್ರಿ ಅವರ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಸಿಐಡಿಯ ಇಡೀ ಪಾತ್ರವರ್ಗ ಮತ್ತು ಸಿಬ್ಬಂದಿಗೆ ಮಾಹಿತಿ ನೀಡಲಾಯಿತು.