ಮಶಾಕ ಬಳಗಾರ
ಕೊಲ್ಹಾರ: ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರ ಹಾಗೂ ಗ್ರಾಮ ಮಟ್ಟದಲ್ಲಿ ಕೂಲಿ ಮಾಡುವ ಕಾರ್ಮಿಕರ ಮಕ್ಕಳ ಸಮರ್ಪಕ ಪಾಲನೆ ಹಾಗೂ ಪೋಷಣೆಯ ಸದುದ್ದೇಶದಿಂದ ರಾಜ್ಯ ಸರ್ಕಾರ ಕೂಸಿನ ಮನೆ(ಶಿಶುಪಾಲನಾ) ಕೇಂದ್ರ ನಿರ್ಮಾಣಕ್ಕೆ ರೂಪುರೇಷೆ ಹಾಕಿ ಕೊಂಡಿದ್ದು ಈ ನಿಟ್ಟಿನಲ್ಲಿ ಕೊಲ್ಹಾರ ತಾಲೂಕ ವ್ಯಾಪ್ತಿಯಲ್ಲಿ ಆಯ್ದ 7 ಗ್ರಾಮಗಳಲ್ಲಿ ಶಿಶುಪಾಲನಾ ಕೇಂದ್ರಗಳ ನಿರ್ಮಾಣಕ್ಕೆ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಮುದ್ದಿನ ನೇತೃತ್ವದಲ್ಲಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.
ಕಟ್ಟಡಗಳ ಗುರುತು: ಕೂಸಿನ ಮನೆ (ಶಿಶುಪಾಲನಾ ಕೇಂದ್ರ) ಗಳನ್ನು ಪ್ರಾರಂಭಿಸಲು ಗ್ರಾಮ ಪಂಚಾ ಯಿತ್ ವ್ಯಾಪ್ತಿಯಲ್ಲಿ ಹೆಚ್ಚುವರಿ ಅಂಗನವಾಡಿ ಕಟ್ಟಡ, ಸರ್ಕಾರಿ ಶಾಲೆ ಸಹಿತ ಇತರೆ ಸರ್ಕಾರಿ ಕಟ್ಟಡಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸರಕಾರ ಪ್ರತಿ ಶಿಶುಪಾಲನಾ ಕೇಂದ್ರ ದುರಸ್ತಿಗೆ ಅನು ದಾನ ನೀಡಿದ್ದು ಹೆಚ್ಚುವರಿ ಖಾಲಿ ಇರುವ ಕಟ್ಟಡ ಗುರುತಿಸಿ ಸುಣ್ಣ ಬಣ್ಣ ಬಳಿದು ಮಕ್ಕಳ ಕಲಿಕೆಗೆ ಹಾಗೂ ಆರೈಕೆಗೆ ಪೂರಕವಾಗುವಂತಹ ವಾತಾವರಣ ಇಲ್ಲಿ ನಿರ್ಮಿಸಲಾಗುತ್ತಿದೆ.
7 ಕೂಸಿನ ಮನೆಗಳ ಪ್ರಾರಂಭ: ತಾಲೂಕ ವ್ಯಾಪ್ತಿಯ ಆಯ್ದ 7 ಗ್ರಾಮಗಳಲ್ಲಿ ಕೂಸಿನ ಮನೆಗಳ ಪ್ರಾರಂಭಕ್ಕೆ ಸಿದ್ಧತೆ ನಡೆಸಿದ್ದು ಅರಷಣಗಿ, ತಾಲೂಕಿನ ಹಣಮಾಪುರ, ಮುಳವಾಡ, ಸಿದ್ದನಾಥ (ಆರ್ ಸಿ), ತೆಲಗಿ, ತಳೇವಾಡ ಹಾಗೂ ರೋಣಿಹಾಳ ಸಹಿತ ಒಟ್ಟು 7 ಗ್ರಾಮಗಳಲ್ಲಿ ಗ್ರಾಮಕ್ಕೊಂದರಂತೆ 7 ಕೂಸಿನ ಮನೆ (ಶಿಶುಪಾಲನಾ) ಕೇಂದ್ರಗಳು ಶೀಘ್ರದಲ್ಲೇ ಪ್ರಾರಂಭಗೊಳ್ಳಲಿವೆ.
ಕೇರ್ ಟೇಕರ್ಸ್: ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಮಾಡುವ 10 ನೆ ತರಗತಿ ವಿದ್ಯಾಬ್ಯಾಸ ಪಡೆದ ಮಹಿಳಾ ಕೂಲಿ ಕಾರ್ಮಿಕರೇ ಈ ಕೂಸಿನ ಮನೆಗೆ ಕೇರ್ ಟೇಕರ್ಸ್ ಗಳನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ನೂರು ದಿನಗಳ ವರೆಗೆ ಕೆಲಸ ನೀಡುವ ನಿಯಮ ವನ್ನು ಪಾಲನೆ ಮಾಡಲಾಗುತ್ತಿದೆ. ಗ್ರಾಮ ಮಟ್ಟದ ಕೂಲಿ ಕಾರ್ಮಿಕರ ಶಿಶುಗಳ ಉತ್ತಮ ಆರೈಕೆ ಹಾಗೂ ಅಪೌಷ್ಟಿಕತೆಯನ್ನ ತೊಡೆದುಹಾಕುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.
*
ತಾಲೂಕ ವ್ಯಾಪ್ತಿಯ ಗ್ರಾಮಗಳಲ್ಲಿ ಶಿಶುಗಳ ಉತ್ತಮ ಆರೈಕೆಯ ದೃಷ್ಟಿಯಿಂದ ಆಯ್ದ 7 ಗ್ರಾಮಗಳಲ್ಲಿ ಶಿಶುಪಾಲನಾ ಕೇಂದ್ರಗಳ ಸ್ಥಾಪನೆ ಮಾಡಲಾ ಗುತ್ತಿದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆ ಪೂರ್ಣಗೊಂಡಿದೆ ಶೀಘ್ರದಲ್ಲೇ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು.
ಸುನೀಲ್ ಮುದ್ದಿನ, ತಾ ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಕೊಲ್ಹಾರ.