Saturday, 23rd November 2024

ಕಂಡ್ ಕಂಡೋರಿಗೆಲ್ಲ ಹಂಚೋಕೆ ಭಾರತ್ ರೈಸ್ ಅಲ್ಲ

ತುಂಟರಗಾಳಿ

ಸಿನಿಗನ್ನಡ

ಒಂದು ಚಿತ್ರರಂಗವನ್ನು ಎತ್ತಿ ಹಿಡಿಯೋಕೆ ಬರೀ ಕೆಜಿಎಫ್ ನಂಥ ದೊಡ್ಡ ಬಜೆಟ್ ಸಿನಿಮಾಗಳು ಮಾತ್ರ ಅಲ್ಲ, ಒಂದು ಸರಳ ಪ್ರೇಮಕಥೆ ಯಂಥ
ಸಿಂಪಲ್ ಚಿತ್ರಗಳೂ ಅವಶ್ಯಕ ಅನ್ನೋದನ್ನ ಒತ್ತಿ ಹೇಳುವಂಥ ಸಿನಿಮಾ ಒಂದು ಸರಳ ಪ್ರೇಮಕಥೆ. ಹಾಗಾಗಿ ಸಿನಿಮಾ ನೋಡೋಕೆ ಮುನ್ನ ಇದು ಪ್ರಶಾಂತ್ ನೀಲ್ ಸಿನಿಮಾ ಅಲ್ಲ, ಸುನೀಲ್ ಅವರ ಸಿನಿಮಾ ಅನ್ನೋದು ತಲೆಯಲ್ಲಿದ್ರೆ ಒಂದು ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೈನ್ ಮೆಂಟ್ ಗ್ಯಾರಂಟಿ.

ಇನ್ನು ಈ ಸಿನಿಮಾ ವಿಷಯಕ್ಕೆ ಬಂದ್ರೆ ಇದು ಒಂದು ಸರಳ ಪ್ರೇಮಕಥೆ. ಆದ್ರೆ, ಇಲ್ಲಿ ಸರಳ ಅನ್ನೋದು ಹೀರೋಯಿನ್ ಹೆಸರಂತೂ ಅಲ್ಲ. ಟಿವಿ ಶೋಗಳ ಭಾಷೆಯಲ್ಲಿ ಹೇಳೋ ದಾದ್ರೆ ಇದು ಒಂದು ಫ್ಯಾಮಿಲಿ ಶೋನಂಥ ಸಿನಿಮಾ. ಎಲ್ಲೂ ನಿಮಗೆ ಡಬಲ್ ಮೀನಿಂಗ, ಅಶ್ಲೀಲ ಅನ್ನಿಸೋ ಮಾತು, ದೃಶ್ಯಗಳು ಇಲ್ಲ. ಹಾಗಾಗಿ ಕುಟುಂಬ ಸಮೇತ ನೋಡುವ ಚಿತ್ರಗಳು ಅನ್ನೋ ಹೆಸರಲ್ಲಿ ಬಂದ್ರೂ ಎರಡನೇ ಕುಟುಂಬದ ಜೊತೆ, ರಾತ್ರಿ ಎರಡನೇ ಆಟ ಮಾತ್ರ ನೋಡೋಕೆ ಚೆನ್ನ ಅನ್ನುವಂಥ ಹೈಬ್ರೀಡ್ ಸಿನಿಮಾ ಇದಲ್ಲ. ಆದ್ರೆ, ಇಲ್ಲಿ ಫ್ಯಾಮಿಲಿ ಅಂದ್ರೆ ಒಂಥರಾ ಡಿಫೆಂಟ್ ಆಗಿರೋ ಜಾಯಿಂಟ್ ಫ್ಯಾಮಿಲಿ ಇದೆ.

ಹಾಗಾಗಿ ಅಲ್ಲಿ ಕೆಲವು ಜಾಯಿಂಟ್ ಪೇಯ್ನ್ ಗಳೂ ಇವೆ ಅಂದ್ರೆ ಈ ಕಥೆಯಲ್ಲಿ ಅಜ್ಜಿಯ ಪಾತ್ರಕ್ಕೆ ಪ್ರಾಮುಖ್ಯತೆ ಇರೋ ಕಥೆ ಇದೆ ಅನ್ನೋದು ಕಾರಣ ಅಲ್ಲ. ಅತಿಶಯ್ ಅನ್ನೋ ಪಾತ್ರದಲ್ಲಿ ನಟಿಸಿರೋ ವಿನಯ್ ರಾಜ್ ಕುಮಾರ್ ಅವರು ಎಲ್ಲೂ ತಮ್ಮ ಮ್ಯಾನರಿಸಂಗಳನ್ನ ಅತಿ ಮಾಡದೆ ನಿರ್ದೇಶಕರ ಟೇಸ್ಟಿಗೆ ತಕ್ಕಂತೆ ತುಂಬಾ ಸಿಂಪಲ್ ಆಗಿ ನಟಿಸಿದ್ದಾರೆ. ಆದ್ರೆ ಅವರು ಒಬ್ಬ ನಟನಾಗಿ ಇನ್ನೊಂಚೂರು ಓಪನ್ ಅಪ್ ಆದ್ರೆ ಅವರಿಗೆ ಇನ್ನಷ್ಟು ಉತ್ತಮ ಪಾತ್ರಗಳ ಅವಕಾಶಗಳೂ ಓಪನ್ ಅಪ್ ಆಗಬಹುದು. ಸೀರೆ ಅಂಗಡಿ ಇಟ್ಕೊಂಡಿರೋ ಅಪ್ಪನ ಪಾತ್ರ ಮಾಡಿರೋ ರಾಜೇಶ್ ನಟರಂಗ ತಮ್ಮ ಅಭಿನಯದಲ್ಲಿ ಬೇರೆ ಕಲರ್ರ‍ು, ಬೇರೆ ಡಿಸೈನು ಎಲ್ಲವನ್ನೂ ತೋರಿಸಿzರೆ. ಈಗಿ ನ ಜೆನರೇಶನ್ಗೆ ತಕ್ಕಂತೆ ಸಿನಿಮಾ ಮಾಡೋ ಕೆಲವೇ ನಿರ್ದೇಶಕರಲ್ಲಿ ಒಬ್ಬರಾದ ಸುನಿ, ಈ ಸಿನಿಮಾದ ಮೂಲಕ ನಿಂತ ನೀರಾಗಿದ್ದ ವಿನಯ್ ರಾಜ್ ಕುರ್ಮಾ ಅವರ ಕೆರಿರ್ಯ ನ -ಡ್ ಗೇಟ್ಸ್ ಅನ್ನ ದೊಡ್ಡದಾಗೇ ಓಪನ್ ಮಾಡಿದ್ದಾರೆ.

ಅತಿಶಯ್ ಅನ್ನೋ ಪಾತ್ರದಲ್ಲಿ ನಟಿಸಿರೋ ವಿನಯ್ ರಾಜ್ ಕುರ್ಮಾ ಅವರ ಕೆರಿರ್ಯ ನಲ್ಲಿ ಅನಂತು ವರ್ಸಸ್ ನುಸ್ರತ್ ಮತ್ತು ಈ ಸಿನಿಮಾ ಅವರ ಇದುವರೆಗಿನ ಬೆಸ್ಟ ಅಂದ್ರೆ ಅದು ಅತಿಶಯೋಕ್ತಿ ಏನಲ್ಲ.

ಲೂಸ್ ಟಾಕ್: ನರೇಂದ್ರಮೋದಿ
ಏನ್ ಸಾರ್, ಭಾರತ ರತ್ನ ಅವಾರ್ಡ್‌ನ ಭಾರತ್ ರೈಸ್ ಥರ ಕಂಡ ಕಂಡೋರಿಗೆಲ್ಲ ಹಂಚ್ತಾ ಇದ್ದೀರಲ್ಲ. ಜನ ಏನೆ ಮಾತಾಡ್ತಾ ಇದ್ದಾರೆ ಗೊತ್ತಾ?
– ಅಯ್ಯೋ, ರತ್ನನ್ ಪ್ರಪಂಚ, ರತ್ನನ್ ಪದಗಳು ಮಾತಾಡ್ಲಿ ಬಿಡ್ರೀ.

ಹೌದೌದು, ಸರಿ, ಅದೇನು, ಕಾಂಗ್ರೆಸ್‌ನೋರಿಗೂ ಭಾರತ ರತ್ನ ಕೊಡ್ತಾ ಇದ್ದೀರಲ್ಲ?
– ಕಾಂಗ್ರೆಸ್ ನೋರೂ ಕಾಂಗ್ರೆಸ್ ನೋರಿಗೆ ಕೊಟ್ರಲ್ಲ, ಸಚಿನ್ ತೆಂಡೂಲ್ಕರ್‌ಗೆ. ಹಂಗೆ ನೋಡಿದ್ರೆ ಹೆವಿ ಬ್ಯಾಟಲ್ಲಿ ಆಡ್ತಾ ಇದ್ದ ತೆಂಡೂಲ್ಕರ್‌ಗೆ ‘ಭಾರದ’ ರತ್ನ ಅವಾರ್ಡ್ ಕೊಡಬೇಕಿತ್ತು. ಭಾರತರತ್ನ ಅಂದ್ಮೇಲೆ ಇಂಡಿಯಗೆ ತಾನೇ ಕೊಡ್ಬೇಕು?

ಸರಿ ಹೋಯ್ತು, ಹಂಗಾದ್ರೆ ನೆಲ್ಸನ್ ಮಂಡೇಲಾಗೆ ಕೊಟ್ಟಿದ್ದೇನ್ ಫಿಲ್ಮ್ ಫೇರ್ ಅವಾರ್ಡಾ? ಅದ್ ಬಿಡಿ, ಹಿಂಗೆ ಕೊಡ್ತಾ ಹೋದ್ರೆ
ಒಂದಿನ ನಮ್ಮ ದೇಶದಲ್ಲಿ ಒಲಂಪಿಕ್ ಪದಕ ಪಡೆದೋರಿಗಿಂತ ಭಾರತ ರತ್ನ ತಗೊಂಡೋರೇ ಜಾಸ್ತಿ ಆಗ್ತಾರೆ ಅಷ್ಟೇ
– ಆಗ್ಲಿ ಬಿಡ್ರೀ,ಒಳ್ಳೇದೇ ಆಯ್ತು. ಹಂಗಾದ್ರೆ ಭಾರತರತ್ನ ಪಡೆದೋರ ಪದಕ ಪಟ್ಟಿಯದ್ರೂ ಭಾರತ ನಂಬರ್ ಒನ್ ಆಗಿರುತ್ತೆ.

ಎಲ್ಲಾರಿಗೂ ಹಂಚೋದಾದ್ರೆ ನಮ್ ಲಗ್ಗೆರೆ ಮುನಿರತ್ನ ಅವರಿಗೂ ಒಂದ್ ಕೊಟ್ಬಿಡಿ ಮತ್ತೆ..

– ಮುನಿರತ್ನಂಗೆ ಹಂಚೋಕೆ ಅದು ಕುಕ್ಕರ್ರ‍ೂ ಅಲ್ಲ, ಓರ್ಟ ಐಡಿನೂ ಅಲ್ಲ ಸುಮ್ನಿರ್ರ‍ೀ

ಸರಿ, ಸಿಕ್ ಸಿಕ್ಕೋರಿಗೆ ಭಾರತ ರತ್ನ ಕೊಡ್ತಾ ಇದ್ದೀರ, ಆದ್ರೆ ನಮ್ಮ ಶಿವಕುಮಾರ್ ಸ್ವಾಮಿಗಳಿಗೆ, ಅಣ್ಣಾವ್ರಿಗೆ ಮಾತ್ರ ಬರಲೇ ಇಲ್ಲವಲ್ಲ?
– ಏನ್ ಮಾಡಕ್ಕಾಗಲ್ಲ, ಅವರ ಪಾಲಿಗೆ ಅದು ‘ಬಾರದ’ ರತ್ನ

(ಕಾಲ್ಪನಿಕ ಸಂದರ್ಶನ)

ನೆಟ್ ಫಿಕ್ಸ್

ಖೇಮು ಆಫೀಸಿನಲ್ಲಿ ಕಾಣಿಸ್ತಾ ಇರಲಿಲ್ಲ, ಅವನನ್ನು ಹುಡುಕಿಕೊಂಡು ಬಂದ ಬಾಸ್ ‘ಖೇಮು ಇನ್ನೂ ಬಂದಿಲ್ವಾ?’ ಅಂತ ಅ ಇದ್ದ ಸೋಮುವನ್ನು ಕೇಳಿದರು. ಅದಕ್ಕೆ ಬಂದಿದ್ದಾರೆ ಸರ್, ಆದ್ರೆ ಇ ಎ ಹೊರಗೆ ಹೋಗಿದ್ದಾರೆ ಅಂತ ಉತ್ತರ ಬಂತು. ಯಾವಾಗ್ಲೂ ಆಫೀಸಿನಲ್ಲಿ ಇರೋದಿಲ್ಲ ಇವನು, ಬರೀ ಹೊರಗೆ ಹೋಗ್ತಾನೆ, ಹೇಳೋರಿಲ್ಲ ಕೇಳೋರಿಲ್ಲ ಇವನಿಗೆ. ಕ್ಯಾಂಟೀನ್‌ನಲ್ಲಿ ಬಿದ್ದಿರಬೇಕು ಅನ್ಸುತ್ತೆ. ಆಫೀಸ್‌ನಲ್ಲಿ ಮಾತ್ರ ದುರ್ಬೀನು ಹಾಕ್ಕೊಂಡು ನೋಡಿದ್ರೂ ಕಾಣೋಲ್ಲ.

ಅವ್ನು ಬಂದ ತಕ್ಷಣ ನನ್ನ ಕ್ಯಾಬೀನ್‌ಗೆ ಬರೋಕೆ ಹೇಳು ಅಂತ ಗರಂ ಆಗಿ ಹೇಳಿ ಬಾಸ್ ವಾಪಸ್ ಹೋದರು. ಸ್ವಲ್ಪ ಹೊತ್ತಾದ ಮೇಲೆ ಖೇಮು ಆಫೀಸಿಗೆ ವಾಪಸ್ ಬಂದ. ಪುಲ್ ಹೇರ್ ಕಟಿಂಗ್ ಮಾಡಿಸಿಕೊಂಡು ಟ್ರಿಮ್ ಆಗಿ ಬಂದಿದ್ದ. ಅವನನ್ನು ನೋಡಿದ ಸೋಮು ಹೇಳಿದ ‘ಬಾರಪ್ಪಾ, ನಿನ್ ಹುಡುಕ್ಕೊಂಡ್ ಬಾಸ್ ಬಂದಿದ್ರು. ಅವರ ಕ್ಯಾಬೀನ್‌ಗೆ ಹೋಗಬೇಕಂತೆ’ ಅಂತ ವರದಿ ಒಪ್ಪಿಸಿದ. ಸರಿ, ಹೆಂಗಿದ್ರೂ ‘ಕಟಿಂಗ್ ಮಾಡಿಸಿದ್ದುದರಿಂದ’ ಜಾಸ್ತಿ ‘ತಲೆ ಕೆಡಿಸಿಕೊಳ್ಳದೆ’ ಬಾಸ್ ಕ್ಯಾಬೀನ್‌ಗೆ ಹೋದ ಖೇಮು. ಇವನನ್ನು ನೋಡಿದ ಬಾಸ್ ಸಿಟ್ಟಿನ ಮಾತು ಶುರು ಮಾಡಿದ್ರು.

‘ಎಲ್ಲಿಗ್ರೀ ಹೋಗಿದ್ರಿ ಇಷ್ಟೊತ್ತು?’ ‘ಕಟಿಂಗ್ ಶಾಪ್‌ಗೆ ಹೋಗಿದ್ದೆ ಸರ್, ಹೇರ್ಕಟ್ ಮಾಡ್ಸೋಕೆ. ‘ಏನು, ಆಫೀಸ್ ಅವರ್ಸ್‌ನಲ್ಲಿ ಕಟಿಂಗ್ ಮಾಡ್ಸೋಕೆ .ಹೋಗಿದ್ರಾ?’ಆಫೀಸ್ ನಲ್ಲಿ ಇದ್ದಾಗ ಪರ್ಸನಲ್ ಕೆಲ್ಸಕ್ಕೆ ಹೋಗ್ಬಾರದು ಅಂತ ಗೊತ್ತಿಲ್ವಾ? ‘ಯಾಕೆ, ಕೂದಲು ಬೆಳೆಯೋದು ಆಫೀಸ್ ಅವರ್ಸ್‌ನ ಅಲ್ವಾ?’ ‘ಆದ್ಯಾಕೆ? ಬೆಳಗ್ಗೆ ಆಫೀಸ್‌ಗೆ ಬರೋಕೆ ಮುಂಚೆ, ಆಮೇಲೆ ರಾತ್ರಿ ಮನೆಗೋದ್ಮೇಲೆ ಮನೆಯಲ್ಲೂ ಕೂದಲು ಬೆಳೆಯುತ್ತಲ್ವಾ?’ ‘ಹೌದು, ನಿಜ. ಅದಕ್ಕೇ ನಾನೇನು ಪೂರ್ತಿ ತಲೆ ಬೋಳಿಸಿಕೊಂಡು ಬಂದಿದೀನಾ? ಆಫೀಸ್ ಅವರ್ಸ್‌ನಲ್ಲಿ ಎಷ್ಟು ಬೆಳೆದಿತ್ತೋ ಅಷ್ಟನ್ನ ಮಾತ್ರ ಕಟ್ ಮಾಡಿಸಿಕೊಂಡು ಬಂದಿದೀನಿ, ಏನಿವಾಗ?’

ನೀತಿ: ಲಾಜಿಕ್ ಅನ್ನೋದು ತುಂಬಾಡೆಲಿಕೇಟ್ ವಿಷಯ.

ಲೈನ್ ಮ್ಯಾನ್

ಒಬ್ಬ ನಟ ಪೀಕ್‌ನಲ್ಲಿದ್ದಾಗ ಯಾರಾದರೂ ಅವರ ಕಾಂಟ್ಯಾಕ್ಟ್ ನಂಬರ್ ತಗೊಳ್ಳೋಕೆ ‘ನಿಮ್ಮ ನಂಬರ್ ಹೇಳಿ’ ಅಂದ್ರೆ, ತಮ್ಮ ಯಶಸ್ಸಿನ ಗುಂಗಿನಲ್ಲಿ ಅವರು ಏನು ಹೇಳ್ತಾರೆ?

– ಒನ್

ತನ್ನ ಗೆಳೆಯ ಗೆಳತಿಯರನ್ನು ನೋಡಿ ತಾವೂ ಲಿವಿಂಗ್ ಟುಗೆದರ್ ಜೀವನ ಪದ್ಧತಿ ಆಯ್ದುಕೊಳ್ಳುವವರದ್ದು
– ಸಹ‘ವಾಸ’ ದೋಷ

ಯಾವಾಗೂ ಫೇಸ್ಬುಕ್, ವಾಟ್ಸಾಪ್‌ನಲ್ಲಿರೋ ಹುಡುಗಿ ಕೇಳಿದಳು ನಿನಗೆ ಯಾವ ಸ್ಟಿಕ್ಟರ್ ಇಷ್ಟ?’
– ಹುಡುಗ ಹೇಳಿದ ‘ಹುಡುಗೀರು ಹಣೆಗೆ ಇಟ್ಟುಕೊಳ್ಳೋದು’ ರಸ್ತೆಯಲ್ಲಿ ಕೆಲವು ಕಡೆ ಇರೋ ಓಪನ್ ಸಿಗ್ನಲ್‌ಗಳಲ್ಲಿ ಎಲ್ಲರೂ ಪಾಲಿಸುವ ನೀತಿ
– ಗಾಡಿ ಬರದೇ ಇದ್ದಾಗ ತೂರಿಕೋ

ಇಬ್ಬರು ೪೨೦ ಗಳು ಜಗಳ ಆಡ್ತಾ ಇದ್ದರೆ ಅದು

– ಕಳ್ಳ ಕಳ್ಳ ಆಟ

ಓದದೇ ಇದ್ದರೂ ಶೋ ಆಫ್ ಮಾಡೋದಕ್ಕಾಗಿ ಪುಸ್ತಕಗಳನ್ನು ತಂದು ಶೋಕಶಸ್‌ನಲ್ಲಿ ಪ್ರೇಮ್ ಹಾಕಿ ಇಡೋನು
– ಪುಸ್ತಕ ‘ಪ್ರೇಮಿ’

ಕಟಿಂಗ್ ಶಾಪ್‌ನಲ್ಲಿ ಕೆಳಗೆ ಬಿದ್ದಿರುವ ಕತ್ತರಿಸಿದ ಕೂದಲುಗಳ ರಾಶಿಯನ್ನು ಏನೆನ್ನಬಹುದು?
– ಕೂದಲ ಸಂಗಮ

ಡಿಕೆಶಿ ಅವರ ಮಾತು ಬೋರಿಂಗ್ ಆಗಿದ್ದರೆ
– ತೂಕ‘ಡಿಕೆ’

ಅವರ ಮಾತು ಬೈಗುಳಗಳಿಂದ ತುಂಬಿದ್ದರೆ

– ‘ಥೂ’ಕಡಿಕೆ

ರಾಜಸ್ಥಾನದಲ್ಲಿರೋ ದೇವರು
– ಮರಳು‘ಗಾಡ್’