ತುಂಟರಗಾಳಿ
ಸಿನಿಗನ್ನಡ
ಮೊನ್ನೆ ಶ್ರೀರಂಗಪಟ್ಟಣದಲ್ಲಿ ನಟ, ನಿರ್ಮಾಪಕ ಪ್ರಕಾಶ್ ರಾಜ್ ಡಾಲಿ ಧನಂಜಯ, ಪವನ್ ಅವರ ಜೊತೆಗೆ ಗ್ರೂಪ್ ಫೋಟೋ ತೆಗೆಸಿಕೊಂಡರು.
ಇದ್ಯಾಕಪ್ಪಾ ಅಂತ ಅಂದ್ಕೊಬೇಡಿ. ಪ್ರಕಾಶ್ ರಾಜ್ ಅವರು ಪೋಟೋ ಅನ್ನೋ ಸಿನಿಮಾದ ಬೆಂಬಲಕ್ಕೆ ನಿಂತು ಕೆಆರ್‌ಜಿ ಸ್ಟುಡಿಯೋಸ್ ಮೂಲಕ ಅದನ್ನ ಬಿಡುಗಡೆ ಮಾಡ್ತಾ ಇದ್ದಾರೆ. ಅಂದಹಾಗೆ ಈ ಸಿನಿಮಾ ಈಗಾಗಲೇ ತುಂಬಾ ಕಡೆ ಚಿತ್ರೋತ್ಸವ ಮತ್ತು ಸ್ಪೆಷಲ್ ಸ್ಕ್ರೀನಿಂಗ್ ಆಗಿದೆ. ಈಗ ಅಧಿಕೃತವಾಗಿ ಬಿಡುಗಡೆ ಆಗ್ತಾ ಇದೆ. ವಿಷಯ ಏನಪ್ಪಾ ಅಂದ್ರೆ ಕರೋನಾ ಕಾಲದ ಜನರ ಸಂಕಷ್ಟ ತೋರಿಸಿ ಬಿಜೆಪಿ ಸರಕಾರವನ್ನು ತೆಗಳುವ ಕಂಟೆಂಟ್ ಇದರಲ್ಲಿದೆ.
ಪ್ರಕಾಶ್ ರಾಜ್ ಈ ಸಿನಿಮಾನ ೮ ತಿಂಗಳು ಹಿಂದೆಯೇ ನೋಡಿದ್ದರೂ ಅದನ್ನು ಈಗ ಬಿಡುಗಡೆ ಮಾಡ್ತಾ ಇದ್ದಾರೆ ಅಂದ್ರೆ ಲೋಕಸಭಾ ಚುನಾವಣೆ ಸಮಯದಲ್ಲಿ ಜನರ ಬ್ರೈನ್ ವಾಷ್ ಮಾಡಿ, ಅವರನ್ನ ಬಿಜೆಪಿ ವಿರುದ್ಧ ಎತ್ತಿ ಕಟ್ಟೋ ಉದ್ದೇಶ ಅನ್ನೋದು ಎಲ್ಲರಿಗೂ ಗೊತ್ತಾಗುತ್ತೆ.
ಇದಕ್ಕೆ ಈಗಾಗಲೇ ವೆಟ್ರಿಮಾರನ್, ಕನ್ನಡದ ಕಿಶೋರ್ ಧನುಷ್ ಅವರಂಥ ಸಮಾನ ಮನಸ್ಕರನ್ನೂ ಪ್ರಕಾಶ್ ತಮ್ಮೊಂದಿಗೆ ಸೇರಿಸಿಕೊಂಡಿದ್ದಾರೆ. ಆದರೆ ಇದಕ್ಕೆ ರಾಜಕೀಯ ಉದ್ದೇಶ ಇದೆಯಾ ಅಂತ ಪತ್ರಕರ್ತರು ಪ್ರಶ್ನೆ ಕೇಳಿದ್ರೆ ಮಾತ್ರ ಪ್ರಕಾಶ್ ರಾಜ್ ಅವರಿಗೆ ಮಾತಾಡೋಕೆ ಮೀಟರ್ ಇಲ್ಲ. ಪ್ರಶ್ನೆಗೆ ಉತ್ತರ
ಹುಡುಕಿದರೆ ಏನಿಲ್ಲ, ಕೆದಕಿದರೆ ಏನೇನಿಲ್ಲ ಅನ್ನೋ ಥರ. ಪತ್ರಕರ್ತರು ಪ್ರಶ್ನೆ ಕೇಳಿದಾಗ ಸಿನಿಮಾ ವಿಷಯದಲ್ಲಿ ರಾಜಕೀಯ ಯಾಕೆ ಅನ್ನೋ ಇವರಿಗೆ ಸಿನಿಮಾದ
ಕಂಟೆಂಟ್‌ನಲ್ಲಿಯೇ ಇರೋ ರಾಜಕೀಯದ ಬಗ್ಗೆ ಜಾಣ ಕುರುಡು. ಹಾಗಂತ ಅವರು ರಾಜಕೀಯ ಮಾತಾಡೋದೇ ಇಲ್ವಾ? ಮಾತಾಡ್ತಾರೆ, ತಮಗೆ ಬೇಕಾದಾಗ ಮಾತ್ರ.
ನನಗೆ ಇದ್ದಕ್ಕಿದ್ದಂತೆ ತುಡಿತ, ಕೆರೆತ ಶುರು ಆದಾಗ ನಾನು ಮಾತಾಡ್ತೀನಿ. ಆಗ ಅದನ್ನು ಸುದ್ದಿ ಮಾಡಿ, ಆದ್ರೆ ನೀವು ಪ್ರಶ್ನೆ ಕೇಳಿದಾಗ ನಾನು ಮಾತಾಡಲ್ಲ ಅನ್ನೋ ಧೋರಣೆ ಈ ಆಸಾಮಿಯದ್ದು. ಆದ್ರೆ ಕಳೆದ ಬಾರಿ ಚುನಾವಣೆಗೆ ನಿಂತು ಹೀನಾಯವಾಗಿ ಸೋತ ಪ್ರಕಾಶ್ ರಾಜ್ ಈಗ ಚುನಾವಣೆ ಸಮಯದಲ್ಲಿ ತಮ್ಮ ದೇಶದಲ್ಲಿರೋ ಬಿಜೆಪಿ ರಾಜ್ ಬಗ್ಗೆ ತಮಗಿರೋ ಧೋರಣೆಗಳ ಬೇಳೆ ಬೇಯಿಸಿಕೊಳ್ಳೋ ಪ್ರಯತ್ನ ಮಾಡ್ತಿದ್ದಾರೆ. ಈ ಬಾರಿಯಾದ್ರೂ ಇವರ ಪೊಲಿಟಿಕಲ್ ಅಜೆಂಡಾದ ಬೇಳೆ ಬೇಯುತ್ತಾ, ಕಾಯುತ್ತಾ ಇಲ್ವಾ ಅಂತ ಕಾದು ನೋಡೋಣ.
ಲೂಸ್ ಟಾಕ್: ರಾಮ್ ಗೋಪಾಲ್ ವರ್ಮಾ
ವರ್ಮಾ ಅನ್ನೋ ಹೆಸರು ಕೇಳಿದರೆ ನಿಮ್ದು ಯಾವುದೋ ರಾಜರ ವಂಶ ಅನ್ಸುತ್ತೆ. ಹೌದಾ?
-ಹೌದು. ನಮ್ದು ರಾಜರ ವಂಶನೇ. ಆದ್ರೆ, ವ್ಯತ್ಯಾಸ ಅಂದ್ರೆ ನಮ್ ವಂಶದಲ್ಲಿ ನಾನೇ ಮೊದಲ ರಾಜ.
ಸರಿ ರಾಜ್ ಗೋಪಾಲ್ ವರ್ಮಾ ಅವ್ರೇ ಸಾರಿ, ರಾಮ್ ಗೋಪಾಲ್ ವರ್ಮಾ ಅವ್ರೇ ನಿಮ್ಮ ಪ್ರಕಾರ ಪರ್ಫೆಕ್ಷನಿ ಅಂದ್ರೆ ಯಾರು?
-ಏನನ್ನೂ ಮಾಡದೇ ಎಲ್ಲವನ್ನೂ ಚೆನ್ನಾಗಿ ಮಾಡಿದ್ದೀನಿ ಅಂದೊಳ್ಳುವವನು. ಉದಾಹರಣೆಗೆ ಕರಣ್ ಜೋಹರ್!
ಈ ಕರಣ್ ಜೋಹರ್ ಫ್ಯಾಮಿಲಿ ಸಿನಿಮಾಗಳಿಗೂ ನಿಮ್ಮ ಸಿನಿಮಾಗಳಿಗೂ ಏನು ವ್ಯತ್ಯಾಸ?
-ಏನೂ ಇಲ್ಲ, ಮಾ. ಬೆಹನ್, ಭಾಯ, ಬಾಪ್, ಔಲಾದ್ ಅನ್ನೋ ಸಂಭಾಷಣೆಗಳು ಇಬ್ರ ಸಿನಿಮಾದಲ್ಲೂ ಇರುತ್ತೆ. ಆದ್ರೆ ಬೇರೆ ಬೇರೆ ರೂಪದಲ್ಲಿ!
ಸರಿ ಮೊನ್ನೆ ವ್ಯಾಲೆಂಟೈ ಡೇ. ಅದಕ್ಕೆ ಕೇಳ್ತಾ ಇದೀನಿ. ಬರೀ ರಕ್ತದ ಸಿನಿಮಾ ಮಾಡೋ ನಿಮಗೆ ಗುಲಾಬಿ ಹೂ ಇಷ್ಟ ಆಗಲ್ವಾ?
-ಅಯ್ಯೋ ಆಗುತ್ತೆ ಕಣ್ರೀ.. ಆ ಕಾಲದ ಸಿನಿಮಾ ಮಾಡಿದ್ದಲ್ಲ ಅನಗನಗ ಒಕ್ಕ ‘ರೋಜು’
ಸಕ್ಸಸ್ ಅನ್ನೋದು ಕೆಲವರಿಗೆ ಒಂದೇ ಸಲಕ್ಕೆ ಸುಲಭವಾಗಿ ಸಿಗುತ್ತೆ. ಕೆಲವರಿಗೆ ಎಷ್ಟು ಕಷ್ಟ ಪಟ್ಟ ಸಿಗಲ್ಲ ಯಾಕೆ?
-ಮಕ್ಕಳಾಗಲಿಲ್ಲ ಅಂತ ಕೆಲವರು ಎಷ್ಟೊಂದ್ ಟ್ರೈ ಮಾಡ್ತಾ ಇರ್ತಾರೆ. ಆದ್ರೂ ಆಗೊಲ್ಲ, ಆದ್ರೆ ನಮ್ಮ ಸಿನಿಮಾಗಳಲ್ಲಿ ವಿಲನ್ ವಿಲನ್ ಒಂದ್ ಸಲ ರೇಪ್
ಮಾಡಿದ್ ತಕ್ಷಣ ಹುಡುಗಿ ಗರ್ಭಿಣಿ ಆಗ್ಬಿಡ್ತಾಳಲ್ಲ. ಇದೂಹಂಗೆ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮುಗೆ ವಯಸ್ಸಾಗಿತ್ತು. ಓಡಾಡುವುದೂ ಕಷ್ಟ, ಕಣ್ಣೂ ಸರಿಯಾಗಿ ಕಾಣೋಲ್ಲ. ಹೆಂಡತಿ ಬೇರೆ ಇಲ್ಲ. ಮಕ್ಕಳು ದೂರದ ಊರಿನಲ್ಲಿದ್ದಾರೆ. ಹೇಗೋ ಜೀವನ ಸಾಗುತ್ತಿತ್ತು. ಅನಿವಾರ್ಯ ಕಾರಣಗಳಿಂದಾಗಿ ಪರ ಊರಿನಲ್ಲಿ ಜೀವನ ಮಾಡುತ್ತಿದ್ದ ಮಕ್ಕಳು ಒಂದು ದಿನ ಒಂದೇ ಕಡೆ ಸೇರಿದರು. ಅಪ್ಪ ಪಾಪ, ಊರಿನಲ್ಲಿ ಒಬ್ಬರೇ ಇರ್ತಾರೆ. ಅವರಿಗೆ ಬೋರಾಗ್ತಾ ಇರುತ್ತೆ. ಅವರನ್ನು ಸಂತೋಷವಾಗಿಡಲು ಏನಾದರೂ ಮಾಡಬೇಕು ಎಂದು ಯೋಚಿಸಿ ಎಲ್ಲರೂ ಅಪ್ಪ ಖೇಮುಗೆ ಒಂದೊಂದು ಗಿ- ಕೊಡಲು ನಿರ್ಧಾರ ಮಾಡಿದರು. ಸರಿ ದೊಡ್ಡ ಮಗ ಹೇಳಿದ ‘ನಾನು ಅಪ್ಪನಿಗೆ ಮರ್ಸಿಡಿಸ್ ಬೆಂಝ್ ಕಳಿಸುತ್ತೇನೆ’. ಅವನಿಗಿಂತ ಸಣ್ಣವ
ಹೇಳಿದ ‘ನಾನು ಅಪ್ಪನಿಗೆ ಒಂದು ದೊಡ್ಡ ಬಂಗಲೆ ಕಟ್ಟಿಸಿಕೊಡುತ್ತೇನೆ’.
ಚಿಕ್ಕವನ ಬಳಿ ಅಷ್ಟೊಂದು ಹಣ ಇರಲಿಲ್ಲ. ಅದಕ್ಕೆ ಅವನು ಹೇಳಿದ ‘ನಾನು ಅಪ್ಪನಿಗೆ ಒಂದು ವಿಶೇಷ ಗಿಣಿ ಕಳಿಸಿಕೊಡುತ್ತೇನೆ. ನಿಮಗೊತ್ತಲ್ಲ ಅಪ್ಪ ದಿನಾ ಭಗವದ್ಗೀತೆ ಓದ್ತಾರೆ. ಆದರೆ ಅವರಿಗೆ ಕಣ್ಣು ಸರಿಯಾಗಿ ಕಾಣಿಸೊಲ್ಲ ಪಾಪ. ಈ ಗಿಣಿ ಭಗವದ್ಗೀತೆಯ ಎಲ್ಲ ಅಧ್ಯಾಯಗಳನ್ನೂ ಕಂಠಪಾಠ ಮಾಡಿಕೊಂಡಿದೆ. ಅಪ್ಪ ಸುಮ್ಮನೆ ಒಂದು ಅಧ್ಯಾಯದ ಹೆಸರು ಹೇಳಿದರೆ ಸಾಕು ಈ ಗಿಣಿ ಅದನ್ನು ಸಂಪೂರ್ಣವಾಗಿ ಹೇಳಿಬಿಡುತ್ತದೆ. ೧೨ ವರ್ಷದಿಂದ ತರಬೇತಿ ಪಡೆದಿರುವ ಗಿಣಿ ಇದು’. ಸರಿ ಮೂವರೂ ತಮ್ಮ ತಮ್ಮ ಗಿಫ್ಟ್ ಗಳನ್ನು ಅಪ್ಪನಿಗೆ ಕೊಟ್ಟರು. ಒಂದು ವಾರದ ನಂತರ ಖೇಮು ಮಕ್ಕಳಿಗೆ ಪತ್ರ ಬರೆದ ‘ದೊಡ್ಡ ಮಗನೇ, ನೀನು ಕಾರು ಕಳಿಸಿಕೊಟ್ಟೆ. ಆದರೆ ನನಗೆ ವಯಸ್ಸಾಗಿದೆ.
ಎಲ್ಲೂ ಹೊರಗೆ ಹೋಗಲಾರೆ. ಹಾಗಾಗಿ ಅದು ನನಗೆ ನೋ ಯೂಸ್. ಇನ್ನು ಎರಡನೇ ಮಗನಿಗೆ ಬರೆದ, ಮಗನೇ ನೀನು ಮನೆ ಕೊಡಿಸಿದೆ. ಆದರೆ ಅಷ್ಟು ದೊಡ್ಡ ಮನೆಯಲ್ಲಿ ನಾನು ಏನು ಮಾಡಲಿ. ನನಗೊಂದು ರೂಮ್ ಸಾಕು. ಇಡೀ ಮನೆ ಕ್ಲೀನ್ ಮಾಡೋದೇ ಕಷ್ಟ ಆಗ್ತಿದೆ. ಕೊನೆಗೆ, ಮೂರನೇ ಮಗನಿಗೆ ಬರೆದ ನೀನೊಬ್ಬನೇ ಕಣೋ, ಅಪ್ಪನಿಗೆ ಏನು ಬೇಕು ಅಂತ ಸರಿಯಾಗಿ ಅರ್ಥ ಮಾಡಿಕೊಂಡಿರೋದು. ನೀನು ಕಳಿಸಿದ ನಾಟಿ ಕೋಳಿ ಬಹಳ ಟೇಸ್ಟೀ ಆಗಿತ್ತು’
ಲೈನ್ ಮ್ಯಾನ್
ರೇಡಿಯೋ, ವಾಕ್ ಮನ್, ಟಿವಿ, ಮಿಕ್ಸರ್ ಥರ domestic appliances ವರ್ಕ್ ಆಗದೇ ಇದ್ದಾಗ ನಾವು ಮಾಡೋ ಮೊದಲ ಕೆಲಸ ಅಂದ್ರೆ ಅವುಗಳ ತಲೆ ಅಥವಾ ಬೆನ್ನಿನ ಮೇಲೆ ಹೊಡೆಯೋದು.
-ಮೋಸ್ಟ್ಲಿ, domestic violence ಶುರು ಆಗಿದ್ದೇ, ಇದರಿಂದ ಅನ್ಸುತ್ತೆ
ಇಂಡಿಯಾ-ಪಾಕಿಸ್ತಾನ್ ಮ್ಯಾಚ್ ಇಂಡಿಯಾ ಗೆದ್ರೆ
-ಇಂಡಿಯಾ ಅಭಿಮಾನಿಗಳ ಮುಖ ‘ಪೈಂಟೆಡ್’
-ಪಾಕ್ ಅಭಿಮಾನಿಗಳು ‘ಫೈಂಟೆಡ್’
ಸುದೀಪ್ ಮಾತಾಡೋ ಸ್ಟೈಲು
-ಅಡ್ಡಗೋಡೆ ಮೇಲೆ ‘ದೀಪ’ ಇಟ್ಟಂಗೆ
ದರ್ಶನ್ ಮಾತಾಡೋ ಸೈಲು –
ಮೋಟು ಗೋಡೆ ಮೇಲೆ ಉಚ್ಚೆ ಹೊಯ್ದಂಗೆ
ಹರಾಜು ಪ್ರಕ್ರಿಯೆಯಲ್ಲಿ ಶೋಷಣೆ ನಡೆದರೆ ಅದನ್ನ ಏನಂತ ಕರೀಬಹುದು?
-ಹರಾಜ್ ಮೆಂಟ್
ಸ್ಪೆಲ್ಲಿಂಗ್ ಚಾಂಪಿಯ ಸ್ಪರ್ಧೆಯಲ್ಲಿ ಗೆದ್ದವರಿಗೆ ಕೊಡುವ ಪ್ರಶಸ್ತಿ
-‘ವರ್ಡ್’ ಕಪ್
ಕ್ರಿಕೆಟ್ ಆಡದೇ ಇದ್ರೂ ಈಗ ಯಾವ ಮಾಧ್ಯಮಗಳಲ್ಲಿ ನೋಡಿದರೂ ವಿರಾಟ್ ಕೊಹ್ಲಿದೇ ಸಮಾಚಾರ
-ವಿರಾಟ ಕಾಲೇ, ವಿಪರೀತ ಸುದ್ದಿ
ಪವರ್ ಫುಲ್ ಶಾಟ್ ಹೊಡೆಯುವನನ್ನು ಪವರ್ ಹೌಸ್ ಅಂದ್ರೆ ಯಾವಾಗಲೂ ಫಾರ್ಮ್‌ನಲ್ಲಿರುವವರನ್ನು ಏನಂತಾರೆ?
–ಫಾರ್ಮ್ ಹೌಸ್
ತುಂಬಾ ಜನರ ಫೇಸ್‌ಬುಕ್ ಅಕೌಂಟ್‌ನಲ್ಲಿ ಆಕ್ಟಿವಿಟಿನೇ ಇರಲ್ಲ. ಲೈಕ್, ಕಾಮೆಂಟ್ ಬಿಡಿ. ಯಾವುದೇ ವಿಷಯದ ಬಗ್ಗೆ ತಮ್ಮ post ಗಳಲ್ಲೂ ತಮ್ಮ ನಿಲುವನ್ನೂ ಹೇಳಲ್ಲ.. ಸುಮ್ನೆ ಒಂದು ಬಳಗದ ದೃಷ್ಟಿಯಲ್ಲಿ ಯಾಕೆ ಕೆಟ್ಟೋರಾ ಗೋದು ಅಂತ, ಎರಡೂ ಕಡೆಯ ವರ ಜೊತೆ ಬ್ಯಾಲೆನ್ಸಿಂಗ್ ಮಾಡ್ತಾರೆ..
-ಇದೊಂಥರ ಬ್ಯಾಂಕಲ್ಲಿ ಏನೂ transaction ಇಲ್ಲದೇ ಇದ್ರೂ ಮಿನಿಮಮ್ ಬ್ಯಾಲೆ ಇಟ್ಟ ಹಾಗೆ
ಆಡುವ ಮಾತಿನ ಪ್ರತಿ ಪದದಲ್ಲೂ ತೂಕ, ಮೌಲ್ಯ ಇರೋ ಥರ ಮಾತಾಡೋನು
-ವರ್ಲ್ಡ್ ‘worth’
ನಿಜವಾಗ್ಲೂ ಡೌನ್ ಟು ‘ಅರ್ಥ್’
ಮನುಷ್ಯ ಅಂದ್ರೆ ಯಾರು?
-ರೈv