ವೀಕೆಂಡ್ ವಿಥ್ ಮೋಹನ್
ಮೋಹನ್ ವಿಶ್ವ
ಮುಸ್ಲಿಂ ಧರ್ಮವನ್ನು ಶಾಂತಿಪ್ರಿಯರ ಧರ್ಮವೆಂದು ಬಿಂಬಿಸುವ ಪ್ರಯತ್ನಗಳು ಜಾಹೀರಾತುಗಳ ಮೂಲಕ ನಡೆಯುತ್ತಿರುವ
ವಿಷಯ ಹೊಸದೇನಲ್ಲ, ಸಿನಿಮಾಗಳ ಮೂಲಕ ಬಾಲಿವುಡ್‌ನಲ್ಲಿ ಹಿಂದೂ ಧರ್ಮಕ್ಕೆ ಧಕ್ಕೆ ಬರುವಂತೆ ಮಾಡಿ, ಮುಸಲ್ಮಾನ ರನ್ನು ಶಾಂತಿಪ್ರಿಯರೆಂದು ಬಿಂಬಿಸಿದ ನಂತರ ದೇಶದ ಬಹುದೊಡ್ಡ ಜನಸಂಖ್ಯೆಯನ್ನು ತಲುಪಿಸಲು ಉಪಯೋಗಿಸಿ ಕೊಂಡಂಥ ಅಸ್ತ್ರವೆಂದರೆ ಜಾಹೀರಾತುಗಳು. ಭಾರತದಲ್ಲಿ ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಂಡು ಬಹುಸಂಖ್ಯಾತರಾಗ ಬೇಕೆಂಬ ಒಂದೇ ಒಂದು ಉದ್ದೇಶ ದೊಂದಿಗೆ ಮುಸಲ್ಮಾನರು ಮಾಡುತ್ತಿರುವ ಹಲವು ರೀತಿಯ ಪ್ರಯತ್ನಗಳನ್ನು ಹಿಂದುಗಳಾದ ನಾವು ಕೈ ಕಟ್ಟಿ ಕುಳಿತುಕೊಂಡು ನೋಡುತ್ತಾ ಬಂದಿದ್ದೇವೆ.
ಆದರೀಗ ಕಾಲ ಬದಲಾಗಿದೆ. ಹಿಂದುಗಳಿಗೆ ತಮ್ಮ ಧರ್ಮದ ಮೇಲಾಗುತ್ತಿರುವ ಅನ್ಯಾಯದ ಅರಿವಾಗಿದೆ. ಸಾಮಾಜಿಕ ಜಾಲತಾಣ ಗಳಲ್ಲಿ ಯಾವಾಗಲೂ ಎಚ್ಚರನಾಗಿರುವ ಹಿಂದೂ, ತನ್ನ ಧರ್ಮಕ್ಕೆ ಧಕ್ಕೆ ಬರುವಂತಹ ಯಾವೊಂದು ವಿಷಯವನ್ನೂ ಸಹಿಸುವು ದಿಲ್ಲ, ಸಹಿಸಲೂ ಬಾರದು. ಟಾಟಾ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ತನಿಷ್ಕ್ ತನ್ನ ಜಾಹೀರಾತಿನ ಮೂಲಕ ಹಿಂದೂ ಹೆಣ್ಣು ಮಗಳೊಬ್ಬಳು ಮುಸ್ಲಿಂ ಹುಡುಗನನ್ನು ಮದುವೆಯಾದರೆ ಅವಳ ಗಂಡನ ಮನೆಯಲ್ಲಿ ರಾಣಿಯಂತೆ ನೋಡಿಕೊಳ್ಳುತ್ತಾರೆಂಬಂತೆ
ಬಿಂಬಿಸಲಾಗಿದೆ.
ಆದರೆ ಸ್ವಾಸ್ತ್ಯ ಸಮಾಜದಲ್ಲಿರುವ ಯಾರೊಬ್ಬರೂ ಸಹ ಒಪ್ಪುವಂತಹ ವಿಷಯವಲ್ಲವಿದು, ದಿನ ಬೆಳಗಾದರೆ ಮುಸ್ಲಿಂ ಹೆಣ್ಣು ಮಕ್ಕಳು ‘ಲವ್ ಜಿಹಾದ್ ಎಂಬ ಪಾಶಕ್ಕೆ ಬಿದ್ದು ತಮ್ಮ ಜೀವನವನ್ನು ಹಾಳುಮಾಡಿಕೊಳ್ಳು ತ್ತಿರುವ ದೃಶ್ಯ ಕಣ್ಣ ಮುಂದೆ
ಇದ್ದರೂ ಸಹ, ಇಂತಹ ಜಾಹೀರಾತಿನ ಮೂಲಕ ಸಮಾಜಕ್ಕೆ ಕೆಟ್ಟ ಸಂದೇಶವನ್ನು ನೀಡುವ ಪ್ರಯತ್ನ ನಡೆದಿದೆ. ಅಸ್ಸಾಂ ರಾಜ್ಯದ ಮಂತ್ರಿಯೊಬ್ಬರು ತಮ್ಮ ರಾಜ್ಯದಲ್ಲಿ ಇನ್ನು ಮುಂದೆ ಲವ್ ಜಿಹಾದ್‌ನಂಥ ಪ್ರಕರಣಗಳು ನಡೆದರೆ ತಕ್ಕ ಶಾಸ್ತಿ ಮಾಡುತ್ತೇನೆಂದು ಹೇಳಿದ್ದಾರೆ, ಆದರೆ ಇತ್ತ ತನಿಷ್ಕ್ ಸಂಸ್ಥೆ ತನ್ನ ವಸ್ತುಗಳಿಗೆ ಹೆಚ್ಚಿನ ಪ್ರಚಾರ ಪಡೆಯುವ ಸಲುವಾಗಿ ಲವ್ ಜಿಹಾದ್ ಅನ್ನು ಬಳಸಿಕೊಳ್ಳುತ್ತಿದೆ.
ಕರಾವಳಿ ಭಾಗದಲ್ಲಿ ನಿರಂತರವಾಗಿ ಇಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ, ಹದಿಹರೆಯದ ಹಿಂದೂ ಹೆಣ್ಣು ಮಕ್ಕಳನ್ನು ತಮ್ಮ ಧರ್ಮಕ್ಕೆ ಮತಾಂತರ ಮಾಡುವ ಸಲುವಾಗಿ ಮುಸಲ್ಮಾನ್ ಯುವಕರು ಪ್ರೇಮ ಪಾಶದಲ್ಲಿ ಹೆಣ್ಣು
ಮಕ್ಕಳನ್ನು ಸಿಲುಕಿಸಿ, ನಂತರ ಬಲವಂತವಾಗಿ ಮತಾಂತರ ಮಾಡಿರುವ ಹಲವು ಉದಾಹರಣೆಗಳಿವೆ. ಮತಾಂತರಗೊಂಡ
ಹೆಣ್ಣು ಮಕ್ಕಳು ಜೀವನ ಮಾಡಲಾಗದೇ ಆತ್ಮಹತ್ಯೆ ಮಾಡಿಕೊಂಡಂಥ ಉದಾಹರಣೆಗಳಿವೆ.
ತೀರಾ ಇತ್ತೀಚಿಗೆ ಉತ್ತರ ಪ್ರದೇಶದ ಲಕ್ನೋನಲ್ಲಿ 35 ವರ್ಷದ ಹಿಂದೂ ಮಹಿಳೆಯೊಬ್ಬಳು ಆಸೀ- ಎಂಬ ಯುವಕನನ್ನು ಮದುವೆ ಯಾಗಿದ್ದಳು, ಮದುವೆಯ ನಂತರ ಆಕೆಯ ಗಂಡ ಕೆಲಸದ ನಿಮಿತ್ತ ಕೊಲ್ಲಿ ರಾಷ್ಟ್ರಕ್ಕೆ ತೆರಳಿದ ನಂತರ, ಆಕೆಯ ಗಂಡನ ಮನೆ ಯವರು ಆಕೆಯನ್ನು ಮನೆಯೊಳಗೇ ಸೇರಿಸಲೇ ಇಲ್ಲ. ಆಕೆಗೆ ಕೊಡಬಾರದ ಕಿರುಕುಳವನ್ನೂ ಸಹ ಕೊಟ್ಟಿದ್ದಾರೆ, ಇದರಿಂದ
ಮನನೊಂದ ಮಹಿಳೆ ಉತ್ತರ ಪ್ರದೇಶದ ಸರಕಾರಿ ಕಾರ್ಯಾಲಯದ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಪ್ರಯತ್ನವನ್ನು ಮಾಡಿದ್ದಳು.
ಆಕೆಯು ಬಹುತೇಕ ಬದುಕುಳಿಯುವ ಸಾಧ್ಯತೆಯು ಕಡಿಮೆಯೆಂದು ಹೇಳಲಾಗುತ್ತಿದೆ. ಈ ಘಟನೆ ಕೇವಲ ಒಂದು ಉದಾಹರಣೆ ಯಷ್ಟೇ, ಇದೆ ರೀತಿ ನೂರಾರು ಘಟನೆಗಳು ಇದುವರೆಗೂ ನಡೆದು ಹೋಗಿವೆ. ಇಷ್ಟೆ ಘಟನೆಗಳು ನಮ್ಮ ಮುಂದಿದ್ದರೂ ಸಹ ಯಾಕೆ ಈ ಸಂಸ್ಥೆ ಈ ರೀತಿಯ ಜಾಹೀರಾತನ್ನು ಮಾಡಬೇಕಿತ್ತು? ಮುಸ್ಲಿಂ ಧರ್ಮದಲ್ಲಿ ಅಂತರ್ ಜಾತೀಯ ಮದುವೆಗಳು ನಿಷಿದ್ಧ, ಮದೆವೆಯಾದರೂ ಸಹ ಹಿಂದೂ ಹೆಣ್ಣು ಮಗಳು ಮುಸಲ್ಮಾನ್ ಧರ್ಮಕ್ಕೆ ಮತಾಂತರ ಹೊಂದಿದರೆ ಮಾತ್ರ ಆಕೆಗೆ ತನ್ನ ಗಂಡನ ಮನೆಯ ಆಸ್ತಿಯಲ್ಲಿ ಪಾಲು ಸಿಗುತ್ತದೆ, ಆಕೆ ಏನಾದರೂ ಮತಾಂತರವಾಗಲಿಲ್ಲವೆಂದರೆ ಆಕೆಗೆ ತನ್ನ ಗಂಡನ ಆಸ್ತಿಯಲ್ಲಿ ಏನೂ ಸಿಗುವುದಿಲ್ಲ.
ಹಿಂದೂ ಧರ್ಮದಲ್ಲಿ ತಾನು ವಯಸ್ಸಿಗ್ಗೆ ಬಂದಾಗಿನಿಂದ ಹಣೆಯಲ್ಲಿ ಕುಂಕುಮ, ಕೈಯಲ್ಲಿ ಬಳೆ, ತಲೆಯಲ್ಲಿ ಹೂವು ಮುಡಿದು ಕೊಂಡು ಬಂದಿರುವಂಥ ಹುಡುಗಿಯು ಹೇಗೆ ತಾನೇ ಕುಂಕುಮ ಅಳಿಸಿಕೊಂಡು ತನ್ನ ಮುಖವನ್ನು ಬುರ್ಖಾ ಮೂಲಕ ಮುಚ್ಚಿ ಕೊಳ್ಳಲು ಒಪ್ಪುತ್ತಾಳೆ? ತನ್ನ ಗಂಡನ ಮೇಲಿನ ಪ್ರೀತಿಯ ಸಲುವಾಗಿ ಆ ಕ್ಷಣಕ್ಕೆ ಆಕೆ ಒಪ್ಪಿದರೂ ಸಹ, ಗಂಡನ ಮನೆಯವರು
ನೀಡುವ ಕಿರುಕುಳವನ್ನು ಆಕೆ ಒಪ್ಪಲು ಸಾಧ್ಯವಾಗುವುದಿಲ್ಲ.
ಜಾತ್ಯತೀತತೆ ಯ ಪರವಾಗಿ ಉದ್ದುದ್ದವಾಗಿ ಮಾತನಾಡುವ ಶಾರುಖ್ ಖಾನ್ ತನ್ನ ಹೆಂಡತಿಯಾದ ಗೌರಿಯ ಹೆಸರಿನ ಪಕ್ಕ ಯಾಕೆ ಖಾನ್ ಸೇರಿಸಿzನೆ? ಕರ್ನಾಟಕದ ರಾಜಕಾರಣಿ ದಿನೇಶ್ ಗುಂಡು ರಾವ್ ತಮ್ಮ ಪತ್ನಿಟಬುಅವರ ಹೆಸರಿನ ಪಕ್ಕ ಯಾಕೆ ರಾವ್
ಸೇರಿಸಿzರೆ? ಅವರನ್ನು ಅವರ ಹಾಗೆಯೇ ಇರಲು ಬಿಡಬಹುದಿತ್ತಲ್ಲ, ಅವರವರ ಧರ್ಮ ಪಾಲನೆಯನ್ನು ಮಾಡಲು ಬಿಡುವುದೇ ನಿಜವಾದ ಜಾತ್ಯತೀತತೆಯಲ್ಲವೇ ? ಶಾರುಖ್ ಖಾನ್ ಮದುವೆಯಾದ ನಂತರ ಗೌರಿ ಎಷ್ಟು ಬಾರಿ ಹಿಂದೂ ಧರ್ಮದ ಪರವಾಗಿ ನಿಂತಿzರೆ? ಮದುವೆಯಾದ ನಂತರ ಕರೀನಾ ಕಪೂರ್ ಎಷ್ಟು ಬಾರಿ ಹಿಂದೂಗಳ ಪರವಾಗಿ ನಿಂತಿದ್ದಾರೆ? ಮಹಾರಾಷ್ಟ್ರದಲ್ಲಿ ನಡೆದ ಸಾಧುಗಳ ಹತ್ಯೆಯ ಪರವಾಗಿ ಎಂದಾದರೂ ಇವರು ಧ್ವನಿ ಎತ್ತಿದ್ದಾರೆಯೇ ? ಪಶ್ಚಿಮ ಬಂಗಾಳದಲ್ಲಿ ನಡೆದ ನೂರಾರು ಹಿಂದೂ ಕಾರ್ಯಕರ್ತರ ಪರವಾಗಿ ಎಂದಾದರೂ ದ್ವನಿ ಎತ್ತಿದ್ದಾರೆಯೇ? ಮುಸ್ಲಿಮರನ್ನು ಮದುವೆ ಯಾದಾಕ್ಷಣ ಇವರ ವರಸೆಯೇ ಬದಲಾಗುತ್ತದೆಯೆಂದರೆ, ಲವ್ ಜಿಹಾದ್‌ನ ಮಹತ್ವವನ್ನು ಅರ್ಥ ಮಾಡಿಕೊಳ್ಳಿ.
ನಿಜ ಜೀವನದಲ್ಲಿ ಹುಡುಗನ ಅಮ್ಮ ತನ್ನ ಹಿಂದೂ ಸೊಸೆಯನ್ನು ಮುಸಲ್ಮಾನ್ ಕಟ್ಟುಪಾಡುಗಳಲ್ಲಿ ಬಂಧಿಸಿಡುವ ಸಲುವಾಗಿ ಕಿರುಕುಳ ನೀಡುತ್ತಿದ್ದರೆ, ಜಾಹೀರಾತಿನಲ್ಲಿ ಮಾತ್ರ ಮಗಳಿಗಿಂತಲೂ ಹೆಚ್ಚಾಗಿ ನೋಡಿಕೊಳ್ಳುವಂತೆ ತೋರಿಸಲಾಗಿದೆ, ಇದೇ ಜಾಹೀರಾತನ್ನು ಮುಸ್ಲಿಂ ಧರ್ಮದ ಆಚರಣೆಗಳಿಗೆ ಧಕ್ಕೆ ಬರುವಂತೆ ತೋರಿಸಿದ್ದರೆ ಮುಸ್ಲಿಂ ಸಂಘಟನೆಗಳು ಸುಮ್ಮನಿರುತ್ತಿದ್ದವೇ ? ಮುಸ್ಲಿಂ ಹುಡುಗಿಯೊಬ್ಬಳು ಹಿಂದೂ ಹುಡುಗನೊಬ್ಬನನ್ನು ಮದುವೆ ಯಾಗುವಂತೆ ತೋರಿಸಿ, ಆಕೆಯು ದೀಪಾವಳಿಯಂದು ತನ್ನ ಮನೆಯ ಸುತ್ತಲೂ ದೀಪಗಳನ್ನು ಹಚ್ಚುತ್ತಿರುವಂತೆ ತೋರಿಸಲು ಇವರಿಗೆ ಸಾಧ್ಯವೇ? ಆಕೆಯು ಗಣೇಶ ಚತುರ್ಥಿಯ ದಿವಸ ಗಣಪತಿಯ ಪೂಜೆಯನ್ನು ಮಾಡುತ್ತಿರುವುದನ್ನು ತೋರಿಸಲು ಸಾಧ್ಯವೇ? ಯುಗಾದಿಯ ದಿನದಂದು ಬೇವು ಬೆಲ್ಲ ಹಂಚುವು ದನ್ನು ತೋರಿಸಲು ಸಾಧ್ಯವೇ? ಸಂಕ್ರಾಂತಿಯಂದು ಎಳ್ಳು ಬೆಲ್ಲ ಹಂಚುವುದನ್ನು ತೋರಿಸಲು ಸಾಧ್ಯವೇ? ದಸರಾ ಹಬ್ಬದ ಸಮಯದಲ್ಲಿ ಮನೆಯಲ್ಲಿ ಗೊಂಬೆ ಕೂರಿಸುವುದನ್ನು ತೋರಿಸಿ ಜಾತ್ಯಾತೀತತೆಯನ್ನು ತೋರಿಸಲು ಸಾಧ್ಯವೇ? ಅಪ್ಪಿ ತಪ್ಪಿ ಹೀಗೇನಾದರೂ ಮಾಡಿದ್ದರೆ ಅದೆಷ್ಟು ಮುಸ್ಲಿಂ ಸಂಘಟನೆಗಳು ಬೀದಿಗಿಳಿಯುತ್ತಿದ್ದವೋ, ಅದೆಷ್ಟು ಬುದ್ಧಿಜೀವಿಗಳು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದರು.
ನಾವು ಟಿ.ವಿ.ಪರದೆಯ ಮುಂದೆ ನೋಡುವ 30 ಸೆಕೆಂಡಿನ ಜಾಹೀರಾತನ್ನು ಚಿತ್ರೀಕರಣ ಮಾಡಲು ಕನಿಷ್ಠವೆಂದರೂ ಎರಡು
ತಿಂಗಳುಗಳ ಪರಿಶ್ರಮವಿರುತ್ತದೆ. ಮೊದಲು ಜಾಹೀರಾತನ್ನುವ ವಿನ್ಯಾಸ ಮಾಡುವ ಏಜೆನ್ಸಿ ಗಳನ್ನು ಕರೆಸಲಾಗುತ್ತದೆ, ಅವರ ಬಳಿ ವಾರ ಗಟ್ಟಲೆ ಮಾತು ಕಥೆಗಳು ನಡೆಯುತ್ತವೆ, ಕಂಪನಿಯ ವಸ್ತುಗಳ ಬಗ್ಗೆ ಚರ್ಚೆಯಾಗುತ್ತದೆ, ಮಾರುಕಟ್ಟೆಯಲ್ಲಿನ ಪ್ರತಿಸ್ಪರ್ಧಿಗಳ ಬಗ್ಗೆ ಚರ್ಚೆಯಾಗುತ್ತದೆ, ನಂತರ ಏಜೆನ್ಸಿಗಳು ವಿವಿಧ ಬಗೆಯ ಪರಿಕಲ್ಪನೆಯನ್ನು ಮುಂದಿಡುತ್ತವೆ, ಕಂಪನಿ ಯವರು ಮಾದರಿ ತುಣುಕುಗಳನ್ನು ಕೇಳುತ್ತಾರೆ, ಒಂದು ಪರಿಕಲ್ಪನೆಯು ಅಂತಿಮವಾದ ಮೇಲೆ ಜಾಹೀರಾತಿಗೆ ಬೇಕಿರುವ ನಟ,
ನಟಿಯರನ್ನು ಅಂತಿಮಗೊಳಿಸಲಾಗುತ್ತದೆ, ನಂತರವಷ್ಟೇ ಚಿತ್ರೀಕರಣ ಪ್ರಾರಂಭವಾಗುತ್ತದೆ.
ಚಿತ್ರೀಕರಣ ಮುಗಿದ ಮೇಲೂ ತಾವು ಮಾಡಿದ್ದು ಸರಿಯೋ, ತಪ್ಪೋ ಎಂದು ಯೋಚಿಸಲು ಅವಕಾಶವಿರುತ್ತದೆ. ಇಷ್ಟೆ ದೊಡ್ಡ ಪ್ರಕ್ರಿಯೆಗಳ ನಡುವೆಯೂ ಒಂದು ಜಾಹೀರಾತಿ ನಲ್ಲಿರುವ ಹುಳುಕನ್ನು ಹುಡುಕಲು ಸಾಧ್ಯವಾಗಲಿಲ್ಲವೆಂದರೆ, ಇದರ ಹಿಂದಿನ ಉದ್ದೇಶವು ಒಳ್ಳೆಯದಲ್ಲವೆಂದೇ ಅರ್ಥ ವಾಗುತ್ತದೆ. ತನಿಷ್ಕ್‌ರವರ ಜಾಹೀರಾತನ್ನು ರತನ್ ಟಾಟಾ ಸ್ವತಃ ತಾನೇ ಕುಳಿತು ಮೇಲ್ವಿ ಚಾರಣೆ ಮಾಡಲಿಕ್ಕಾಗುವುದಿಲ್ಲ, ಅವರಿಗೆ ತಮ್ಮದೇ ಆದ ನೂರಾರು ವ್ಯವಹಾರಗಳಿವೆ ಅದಕ್ಕಾಗಿಯೇ ಕೋಟ್ಯಂತರ ರುಪಾಯಿಯ ಸಂಬಳವನ್ನು ನೀಡಿ ಹಲವರನ್ನು ಕೆಲಸಕಿಟ್ಟುಕೊಂಡಿದ್ದಾರೆ.
ನನಗೆ ತಿಳಿದಿರುವ ಮಟ್ಟಿಗೆ ಈ ಜಾಹೀರಾತನ್ನು ಜನರ ಮುಂದೆ ಬರುವ ಮುಂಚೆ ರತನ್ ಟಾಟಾ ನೋಡಿರಲಿಕ್ಕಿಲ್ಲ. ಆದರೆ ಒಂದು ದೊಡ್ಡ ಸಂಸ್ಥೆಯ ಜವಾಬ್ದಾರಿಯನ್ನು ಹೊತ್ತಿಕೊಂಡ ಮೇಲೆ, ತಮ್ಮ ಕಂಪನಿಗಳ ಮೂಲಕ ಹಿಂದೂ ಧರ್ಮದ ಮೇಲಾಗುವ
ದುಷ್ಪರಿಣಾಮಗಳಿಗೆ ಅವರೇ ನೇರ ಹೊಣೆಗಾರರಾಗಿರುತ್ತಾರೆ. ಸಿನಿಮಾಗಿಂತಲೂ ಅತೀ ವೇಗವಾಗಿ ಹೆಚ್ಚು ಜನರನ್ನು
ಜಾಹೀರಾತಿನ ಮೂಲಕ ತಲುಪುಬಹುದು. ಸಿನಿಮಾ ನೋಡಲು ಎರಡರಿಂದ ಮೂರು ತಾಸು ಬೇಕಾಗುತ್ತದೆ. ಆದರೆ ಜಾಹೀರಾತು
ಕೇವಲ 30 ಸೆಕೆಂಡುಗಳಲ್ಲಿ ಮುಗಿದಿರುತ್ತದೆ. ಆ 30 ಸೆಕೆಂಡುಗಳಲ್ಲಿ ಜನರಿಗೆ ಬೇಕಿರುವ ವಿಚಾರ ಕಾಡ್ಗಿಚ್ಚಿನಂತೆ ತಲುಪಿರುತ್ತದೆ. ಈ ಹಿಂದೆ ಹಲವು ಬಗೆಯ ವಿಭಿನ್ನ ಜಾಹೀರಾತುಗಳು ನಮಗೆ ಖುಷಿಯನ್ನು ತಂದಿವೆ, ಉದಾಹರಣೆಗೆ ಫೆವಿ ಕ್ವಿಕ್ ಜಾಹೀರಾತಿನಲ್ಲಿ
ಒಬ್ಬ ಮೀನು ಹಿಡಿಯುವವ ತನ್ನ ಕಡ್ಡಿಗೆ ಫೆವಿ ಕ್ವಿಕ್ ಅಂಟಿಸಿ ನೀರಿನಲ್ಲಿಟ್ಟಾಕ್ಷಣ ಮೀನುಗಳು ಬಂದು ಅಂಟಿಕೊಳ್ಳುತ್ತವೆ, ಅವನ
ಪಕ್ಕದಲ್ಲಿ ಕುಳಿತ್ತಿದ್ದವನು ಗಂಟೆಗಟ್ಟಲೆಯಿಂದ ಗಾಳದಲ್ಲಿ ಮೀನು ಹಿಡಿಯಲು ಪ್ರಯತ್ನ ಪಡುತ್ತಿದ್ದರೂ ಸಹ ಅವನಿಗೆ ಮೀನು
ಸಿಕ್ಕಿರುವುದಿಲ್ಲ.
ಕೇವಲ ಇಪ್ಪತ್ತು ಸೆಕೆಂಡುಗಳ ಈ ಜಾಹೀರಾತು ಎಲ್ಲರ ಮನ ಗೆದ್ದಿತ್ತು, ಇಲ್ಲಿ ಯಾರೊಬ್ಬರ ಧರ್ಮವನ್ನು ನಿಂದಿಸುವ ಕೆಲಸ ನಡೆದಿರಲಿಲ್ಲ. ಕೆಲವು ಕಮ್ಯುನಿಷ್ಟರು ಇದು ಕೇವಲ ಒಂದು ಜಾಹೀರಾತಾಗಿದ್ದು ಇದನ್ನು ಗಂಭೀರವಾಗಿ ತೆಗೆದುಕೊಳ್ಳ ಬೇಡಿ
ಎಂದು ಬೊಬ್ಬೆ ಹೊಡೆಯುತ್ತಿzರೆ. ಆದರೆ ಇದೇ ಕಮ್ಯುನಿಷ್ಟರು ಮುಸ್ಲಿಂ ಧರ್ಮಕ್ಕೆ ಧಕ್ಕೆ ತರುವಂಥ ಜಾಹೀರಾತನ್ನು ಕಂಡಿದ್ದರೆ
ಸುಮ್ಮನಿರುತ್ತಿದ್ದರೆ? ಕಮಲ್ ಹಾಸನ್ ಅಭಿನಯದ ವಿಶ್ವರೂಪಂ ಸಿನಿಮಾದಲ್ಲಿ ಅಫಘಾನಿಸ್ತಾನದಲ್ಲಿ ನಡೆಯುವ ಮುಸ್ಲಿಂ
ಭಯಯೋತ್ಪಾದಕತೆ ಯನ್ನು ಹಸಿಹಸಿಯಾಗಿ ತೋರಿಸಲಾಗಿತ್ತು, ಅಲ್ಲಿನ ಭಯೋತ್ಪಾದಕರ ಅಟ್ಟಹಾಸ, ಅವರ ವೇಷ ಭೂಷಣಗಳು, ಅವರ ಭಯೋತ್ಪಾದನ ಯೋಜನೆಗಳು, ಹೆಣ್ಣು ಮಕ್ಕಳನ್ನು ನೋಡಿಕೊಳ್ಳುವ ರೀತಿ ಎಲ್ಲವೂ ಅಫಘಾನಿಸ್ತಾನ ದಲ್ಲಿ ನಡೆಯುತ್ತಿರುವ ನೈಜ ವಿಚಾರಗಳೇ ಆಗಿದ್ದವು.
ಇಂತಹ ವಿಚಾರಗಳು ಮುಸಲ್ಮಾನ್ ಸಮುದಾಯಕ್ಕೆ ದಕ್ಕೆ ತರುತ್ತವೆಂದು ಇದೇ ಕಮ್ಯುನಿಸ್ಟರು ಹಾಗೂ ಹಲವು ಮುಸ್ಲಿಂ ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದವು. ತೀವ್ರ ವಿರೋಧದ ನಡುವೆ ಈ ಚಿತ್ರದ ಏಳು ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು. ತಮ್ಮ ಧರ್ಮಕ್ಕೆ ಧಕ್ಕೆ ಬರುವಂಥ ವಿಚಾರಗಳನ್ನು ಮಾತ್ರ ಯಾರೂ ಸಹ ಸಿನಿಮಾ ಹಾಗೂ ಜಾಹೀರಾತುಗಳ ಮೂಲಕ ತಿಳಿಸ ಬಾರದು, ಆದರೆ ಹಿಂದೂ ಧರ್ಮಕ್ಕೆ ಧಕ್ಕೆ ಬರುವಂಥ ವಿಚಾರಗಳನ್ನು ತೋರಿಸಿದರೆ ಇವರಿಗೆ ಜಾತ್ಯಾತೀತತೆಯು ಎದ್ದು ಕಾಣುತ್ತದೆ.
ಎಚ್.ಪಿ. ಕಂಪನಿಯ ಜಾಹೀರಾತಿನಲ್ಲಿ ಮಹಿಳೆಯೊಬ್ಬಳು ದೀಪಾವಳಿಯ ಸಂದರ್ಭದಲ್ಲಿ ಮಣ್ಣಿನ ದೀಪಗಳನ್ನು ರಸ್ತೆಯಲ್ಲಿ
ಮಾರುತ್ತಿರುತ್ತಾಳೆ. ಯಾರೂ ಸಹ ಆಕೆಯ ಬಳಿ ದೀಪಗಳನ್ನು ಕೊಳ್ಳುತ್ತಿರುವುದಿಲ್ಲ, ಅಂತಹ ಸಂದರ್ಭದಲ್ಲಿ ಪುಟ್ಟ ಬಾಲಕ ನೊಬ್ಬ ತನ್ನ ತಾಯಿಯ ಬಳಿ ಹಣ ಪಡೆದುಕೊಂಡು ಆಕೆಯ ಬಳಿ ಎರಡು ದೀಪಗಳನ್ನು ಖರೀದಿಸುತ್ತಾನೆ. ಖರೀದಿಸಿದ ನಂತರ ಆಕೆಯ ದೀಪಗಳೆಲ್ಲವೂ ಮಾರಾಟ ವಾಗುತ್ತದೆಯೆಂದು ಹೇಳಿ ತನ್ನ ತಾಯಿಯ ಮೊಬೈಲ್‌ನಲ್ಲಿ ಆಕೆಯ ಒಂದು ಫೋಟೋ ತೆಗೆದು ಹೊರಡುತ್ತಾನೆ. ಮನೆಗೆ ಹೋದ ನಂತರ ಆಕೆಯ ಫೋಟೋವನ್ನು ಹಲವು ಶುಭಾಶಯಪತ್ರಗಳೊಂದಿಗೆ ಅಂಟಿಸಿ ತನ್ನ ಏರಿಯಾದಲ್ಲಿನ ಪ್ರತಿಯೊಂದು ಮನೆಗೆ ಹಂಚುತ್ತಾನೆ.
ಇದನ್ನು ಕಂಡ ಹಲವು ಜನರು ಆಕೆಯ ಬಳಿ ಬಂದು ದೀಪಗಳನ್ನು ಖರೀದಿ ಮಾಡುತ್ತಾರೆ. ದೀಪ ಗಳೆಲ್ಲವೂ ಮಾರಾಟವಾದ ಮೇಲೆ ಆಕೆಯ ಬಳಿ ಬಂದು, ತಾನು ಹೇಳಿದ ಹಾಗೆ ದೀಪಗಳೆಲ್ಲವನ್ನೂ ಮಾರಿಸಿರುವುದಾಗಿ ಹೇಳಿ ಹೊರಟು ಹೋಗುತ್ತಾನೆ. ಅದನ್ನು ಕಂಡ ಮಹಿಳೆಯ ಕಣ್ಣಿನಲ್ಲಿ ಆನಂದ ಬಾಷ್ಪ ತುಂಬಿ ಬರುತ್ತದೆ, ಆಕೆಯು ಅವನ ಹಿಂದೆ ಎಷ್ಟೇ ಓಡಿದರೂ ಸಹ ಅವನು ಸಿಗುವುದಿಲ್ಲ,ನಂತರ ಎಚ್.ಪಿ.ಯವರ ವಿಭಿನ್ನವಾಗಿ ಯೋಚಿಸಿಎಂಬ ಜಾಹೀರಾತು ಪರದೆಯ ಮೇಲೆ ಕಂಡು ಬರುತ್ತದೆ. ಈ ಜಾಹೀರಾತನ್ನು ಎಷ್ಟು ಅಚ್ಚುಕಟ್ಟಾಗಿ ಮಾಡಲಾಗಿದೆ ಯೆಂದರೆ, ಹೊಟ್ಟೆಪಾಡಿಗಾಗಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡು ವವರಿಗೆ ಅನುಕೂಲ ಮಾಡಿಯೆಂಬ ಅಂಶವನ್ನೂ ಹೇಳಿಯಾಯಿತು, ತಾವು ಇತರರಿಗಿಂತಲೂ ವಿಭಿನ್ನವೆಂಬುದನ್ನೂ ಹೇಳಿ ಯಾಗಿತ್ತು.
ತನಿಷ್ಕ್ ಕಂಪನಿಯವರಿಗೆ ಹಿಂದೂ ಭಾವನೆಗಳಿಗೆ ಧಕ್ಕೆ ಬರುವಂತಹ ವಿಚಾರಗಳಣ್ಣಿಟ್ಟು ಕೊಂಡೇ ಜಾಹೀರಾತು ಮಾಡುವ ಅವಶ್ಯಕತೆ ಇರಲಿಲ್ಲ. ದಿನ ಬೆಳಗ್ಗೆ ಎದ್ದು ರಾತ್ರಿ ಮಲಗುವವರೆಗೂ ಹಿಂದೂ ಧರ್ಮಕ್ಕೆ ಧಕ್ಕೆ ತರುವಂಥ ಹಲವು ಆಚರಣೆಗಳನ್ನು ಮುಸಲ್ಮಾನರು ಮಾಡುತ್ತಿರುತ್ತಾರೆ, ಎಲ್ಲವನ್ನೂ ನುಂಗಿಕೊಂಡು ಹಿಂದೂಗಳು ತಮ್ಮ ಆಕ್ರೋಶವನ್ನು ಹೊರಹಾಕದೆ ಸುಮ್ಮನಿ ರುವುದೇ ತಪ್ಪಾಗಿ ಹೋಗಿದೆ. ಅಲ್ಪಸಂಖ್ಯಾತರೆಂಬ ಹಣೆ ಪಟ್ಟಿಯಿಂದ ಇವರು ಮಾಡಿದ್ದ ಸರಿಯೆಂಬಂತೆ ಸಮಾಜದಲ್ಲಿ ಬೀಗುತ್ತಿರುತ್ತಾರೆ, ತಮಗೆ ಒಳ್ಳೆಯದಾಗುವ ಅಂಶಗಳಿದ್ದರೆ ಅದು ಎಂತಹ ಜಾಹೀರಾತಾದರೂ ಅಷ್ಟೇ ಯಾರೊಬ್ಬನೂ ತುಟಿ ಬಿಚ್ಚುವುದಿಲ್ಲ.
ತನಿಷ್ಕ್ ಸಂಸ್ಥೆಯ ಜಾಹೀರಾತಿನಲ್ಲೂ ಅಷ್ಟೇ ಆದದ್ದು, ತಾವು ಪ್ರಚೋದಿಸುತ್ತಿದ್ದ ಲವ್ ಜಿಹಾದ್ ಕೇವಲ ಒಂದು ಜಾಹೀರಾತಿನ ಮೂಲಕ ಇಡೀ ದೇಶವನ್ನೇ ತಲುಪಲು ಸಹಕಾರಿಯಾಗಿತ್ತು. ರತನ್ ಟಾಟಾರಂತಹ ಕಂಪನಿಗಳ ಜಾಹೀರಾತಿನ ಮೂಲಕ ತಲುಪಿದರೆ ಹಿಂದೂಗಳ ಮಧ್ಯೆಯೇ ಒಡಕುಂಟಾಗುತ್ತದೆ ಯೆಂಬ ಖುಷಿಯೂ ಒಳಗೊಳಗೇ ಇರುತ್ತದೆ. ತನಿಷ್ಕ್ ಸಂಸ್ಥೆಯ ಜಾಹೀರಾತಿನ ವಿಚಾರದಲ್ಲಿ ಮತ್ತೊಂದು ಟ್ವಿಸ್ಟ್ ಇದೆ. ದಕ್ಷಿಣ ಭಾರತದಲ್ಲಿ ಚಿನ್ನದ ವ್ಯಾಪಾರದಲ್ಲಿ ಕೇರಳ ಮೂಲದ ಹಲವು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಒಡೆತನದ ಸಂಸ್ಥೆಗಳು ಮುಂಚೂಣಿಯಲ್ಲಿ ಮಳಿಗೆಗಳನ್ನು ತೆರೆದು ವ್ಯಾಪಾರವನ್ನು ನಡೆಸುತ್ತಿವೆ.
ಮಲಬಾರ್ ಗೋಲ್ಡ, ಸುಲ್ತಾನ್ ಗೋಲ್ಡ ಅಂಡ್ ಡೈಮಂಡ್ಸ್, ಜಾಯ್ ಅಲ್ಲುಕ್ಕಸ್, ಮುತ್ತೂಟ್ ಫೈನಾನ್ಸ್ ಮಳಿಗೆಗಳು ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ತಮ್ಮ ಮಳಿಗೆಗಳನ್ನು ತೆರೆದು ವ್ಯಾಪಾರ ಮಾಡುತ್ತಿವೆ. ಇವರಲ್ಲಿ ಬಹುತೇಕರು ಕೊಲ್ಲಿ ರಾಷ್ಟ್ರಗಳಿಂದ ಚಿನ್ನವನ್ನು ಖರೀದಿಸಿ ವ್ಯಾಪಾರ ಮಾಡುತ್ತಾರೆ. ಹಿಂದುಗಳಾದ ನಾವು ತನಿಷ್ಕ್ ಜಾಹೀರಾತನ್ನು ಬಹಿಷ್ಕರಿಸುವು ದರ ಜೊತೆಗೆ ತನಿಷ್ಕ್ ಸಂಸ್ಥೆಯ ವಸ್ತುಗಳನ್ನು ಬಹಿಷ್ಕರಿಸಿದರೆ, ಕೇರಳ ಮೂಲದ ಚಿನ್ನದ ವ್ಯಾಪಾರಿಗಳಿಗೆ ಲಾಭವಾಗುತ್ತದೆ. ಕೇರಳ ಮೂಲದ ಹಣವು ಎಲ್ಲಿಂದ ಬರುತ್ತದೆ, ಹೇಗೆ ಬರುತ್ತದೆ, ನಂತರ ಎಲ್ಲಿ ಬಳಕೆಯಾಗುತ್ತದೆಯೆಂದು ನಾನು ಪುನಃ ಹೇಳಬೇಕಿಲ್ಲ.
ಹಲವು ದಶಕಗಳಿಂದ ನಾವೆಲ್ಲರೂ ಕೇರಳ ಹಾಗೂ ಕೊಲ್ಲಿ ರಾಷ್ಟ್ರಗಳ ನಂಟನ್ನು ನೋಡಿಕೊಂಡು ಬಂದಿದ್ದೇವೆ. ಹಾಗಾಗಿ ಇವರೇ ಈ ರೀತಿಯ ಒಂದು ಷಡ್ಯಂತ್ರವನ್ನು ಮಾಡಿದ್ದಾರೆಯೇ ಎಂಬ ಅನುಮಾನವೂ ಸಹ ಇದೆ. ನಮ್ಮ ಅನುಮಾನ ಏನೇ ಇದ್ದರೂ ಸಹ ಹಿಂದೂ ಧರ್ಮಕ್ಕೆ ಧಕ್ಕೆ ಬರುವಂತೆ ತನ್ನ ಜಾಹೀರಾತಿನ ಮೂಲಕ ಲವ್ ಜಿಹಾದ್ ಪ್ರಚಾರ ಮಾಡಿದ್ದು ಮಾತ್ರ ಅಕ್ಷಮ್ಯ ಅಪರಾಧ, ಅದಕ್ಕೆ ಮಾತ್ರ ಕ್ಷಮೆಯಿಲ್ಲ. ಹಿಂದೂಗಳಿಗೂ ಮುಸಲ್ಮಾನರಿಗೂ ಇರುವ ವ್ಯತ್ಯಾಸವಿದು, ನಮ್ಮವರೇ ನಮಗೆ ಅವಮಾನ ಮಾಡಿದರೂ ನಾವು ಖಂಡಿಸುತ್ತೇವೆ.
ಯಾಕೆಂದರೆ ನಮಗೆ ನಮ್ಮ ಧರ್ಮ ಮುಖ್ಯ, ನಮ್ಮ ಆಚರಣೆಗಳು ಮುಖ್ಯ, ಸಾವಿರಾರು ವರ್ಷಗಳಿಂದ ಅಚರಿಸಿಕೊಂಡು ಬಂದಿರುವಂಥ ಸನಾತನ ಸಂಪ್ರದಾಯಗಳು ಮುಖ್ಯ. ಜೊತೆಗೆ ಮುಸಲ್ಮಾನರ ರೀತಿಯಲ್ಲಿ ಬೀದಿಯಲ್ಲಿ ನಿಂತು ಕಲ್ಲು ತೋರುವುದು, ಸಾರ್ವಜನಿಕ ಅಸ್ತಿ ಪಾಸ್ತಿಗಳಿಗೆ ಬೆಂಕಿ ಹಚ್ಚುವ ಕೆಲಸ ಮಾಡುವುದಿಲ್ಲ. ದೆಹಲಿಯಲ್ಲಿ ನಡೆದ ರೀತಿಯಲ್ಲಿ ಎಲ್ಲಿಯೂ ಸಹ ಪ್ರತಿಭಟನೆಯನ್ನು ಮಾಡಲಿಲ್ಲ, ನಮ್ಮ ಆಕ್ರೋಶವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೊರಹಾಕಿ ದ್ದೇವೆ. ಹಿಂದೂ ಹೆಣ್ಣು ಮಕ್ಕಳು ಇಂತಹ ಜಾಹೀರಾತುಗಳನ್ನು ನೋಡಿ ಮರುಳಾಗಬಾರದು, ಜಾಹೀರಾತಿನಲ್ಲಿ ತೋರಿಸಿರು ವಂತೆ ಹಿಂದೂ ಹೆಣ್ಣು ಮಗಳು ಮುಸ್ಲಿಂ ಹುಡುಗನನ್ನು ಮದುವೆಯಾದರೆ ಅವಳ ಗಂಡನ ಮನೆ ಎಂದೂ ಸಹ ಸ್ವರ್ಗವಾಗುವು ದಿಲ್ಲ. ಸಾವಿರದಲ್ಲಿ ಒಬ್ಬ ಹೆಣ್ಣು ಮಗಳ ಜೀವನ ಸರಿಹೋಗಿರುವ ಉದಾಹರಣೆ ಯಿರಬಹುದೇ ಹೊರತು ಉಳಿದದೆಲ್ಲವೂ ನರಕ. ಹುಚ್ಚರಾಗಿ ಬೀದಿ ಬೀದಿ ಅಲೆಯುತ್ತಿರುವ ಹಲವು ಹೆಣ್ಣು ಮಕ್ಕಳು ನಮ್ಮ ಕಣ್ಣು ಮುಂದೆಯಿದ್ದಾರೆ, ಕಾಟ ತಡೆಯಲಾರದೆ ನಡು ಬೀದಿಯಲ್ಲಿ ಬೆಂಕಿ ಹಚ್ಚಿಕೊಂಡಂತಹ ಹೆಣ್ಣು ಮಕ್ಕಳಿದ್ದಾರೆ, ಅಂತಹವರನ್ನು ನೋಡಿಯಾದರೂ ಹಿಂದೂ ಹೆಣ್ಣು ಮಕ್ಕಳು ಲವ್ ಜಿಹಾದ್ ಎಂಬ ಪಾಶಕ್ಕೆ ಬೀಳಬಾರದು.
ಜಾತ್ಯತೀತತೆಯ ಹೆಸರಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಬಹುದೊಡ್ಡ ಹಗರಣವಿದು. ನಾವು ಮಾಡಿದ ತಪ್ಪುಗಳಿಗೆ ಪೋಷಕರು ಎಂದೂ ಸಹ ಜವಾಬ್ದಾರರಲ್ಲ, ಮದುವೆಯ ಮುಂದಿನ ದಿನಗಳಲ್ಲಿ ನಡೆಯುವ ಅನಾಹುತಗಳಿಗೆ ಅವರನ್ನು ಹೊಣೆಗಾರಿಕೆ ಮಾಡಲಾಗುವುದಿಲ್ಲ. ಪ್ರೀತಿ ಮಾಡುವಾಗ ಪ್ರಿಯಕರನು ಹೇಳುವ ಸುಳ್ಳು ಮಾತುಗಳು ಹಿತವಾಗಿ ಕಾಣುತ್ತದೆ, ಕೇವಲ ಅವನ ಅಂದ ಚಂದವನ್ನು ನೋಡಿ ಮರುಳಾದರೆ ನರಕವು ಕಟ್ಟಿಟ್ಟ ಬುತ್ತಿ. ಲವ್ ಜಿಹಾದ್ ಸರಿಯೆಂದು ಬಿಂಬಿಸುವ ಇಂತಹ ಪ್ರಚಾರ ದ ಜಾಹೀರಾತುಗಳಿಗೆ ಮರುಳಾಗದೆ ನಮ್ಮ ಧರ್ಮವನ್ನು ನಾವು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರಬೇಕು.