Friday, 20th September 2024

ನಳಂದ ವೈಭವ ಮರುಕಳಿಸಲಿ

ಅಭಿಮತ

ರಾಸುಮ ಭಟ್

ನಳಂದ ಪ್ರಾಂತ್ಯವು ಭಾರತದ ರಾಜ್ಯ ಬಿಹಾರದ ರಾಜಧಾನಿಯಾದ ಪಾಟ್ನಾದ ಆಗ್ನೇಯ ಭಾಗದಲ್ಲಿ ಸುಮಾರು ೫೫ ಮೈಲು ದೂರದಲ್ಲಿದೆ. ಇಲ್ಲಿ ಪ್ರಖ್ಯಾತ ನಳಂದ ವಿಶ್ವವಿದ್ಯಾಲಯವು ಕ್ರಿ.ಶ. ೪೨೭ ರಿಂದ ೧೧೯೭ ವರೆಗೆ ವಿಶ್ವದ ಪ್ರಮುಖ ವ್ಯಾಸಂಗ ಕೇಂದ್ರ ವಾಗಿತ್ತು. ಇದು ಇತಿಹಾಸದಲ್ಲಿ ನಮೂದಿತ ವಾದ ಮೊದಲ ಅತಿ ಶ್ರೇಷ್ಠವಾದ ವಿಶ್ವವಿದ್ಯಾಲಯ ಎಂದು ಕರೆಯಲ್ಪಟ್ಟಿದೆ.

ನಳಂದ ವಿಶ್ವವಿದ್ಯಾಲಯದ ಇತಿಹಾಸವನ್ನು ಗಮನಿಸುವುದಾದರೆ ಇದು ಗುಪ್ತ ಸಾಮ್ರಾಟ ಕುಮಾರಗುಪ್ತನ ಕಾಲದಲ್ಲಿ ಸ್ಥಾಪಿತವಾಯಿತೆಂದು ಐತಿಹಾ ಸಿಕ ಅಧ್ಯಯನವು ತಿಳಿಸುತ್ತದೆ.ಆ ಸ್ಥಳದಲ್ಲಿ ಅವರ ಒಂದು ಮುದ್ರೆಯು ದೊರೆತಿದ್ದರಿಂದ ಪ್ರeವರ್ಮ ಮತ್ತು ಜುವಾಂಗ್‌ಜುಂಗ್ ಇಬ್ಬರೂ ಅವನನ್ನೇ ಇದರ ಸ್ಥಾಪಕನೆಂದು ಉಲ್ಲೇಖಿಸಿದ್ದಾರೆ. ಇತಿಹಾಸಜ್ಞ ಸುಕುಮಾರ್ ದತ್ತರ ಪ್ರಕಾರ ನಳಂದ ವಿಶ್ವವಿದ್ಯಾಲಯದ ಚರಿತ್ರೆಯು ಗುಪ್ತರ ವಂಶಪಾ ರಂಪರ್ಯದ ಪ್ರಗತಿಪರ ಸಾಂಸ್ಕೃತಿಕ ಸಂಪ್ರದಾಯದ ಮೇಲೆ ಪ್ರಭಾವ ಬೀರಿದ ಆರರಿಂದ ಒಂಬತ್ತನೆಯ ಶತಮಾನದವರೆಗೆ ಇದರ ಬೆಳವಣಿಗೆ, ಅಭಿ ವೃದ್ಧಿ ಮತ್ತು ಸೌಕರ್ಯಕ್ಕೆ ಗುಪ್ತರು ಸಹಕರಿಸಿದರು.

ಪ್ರಖ್ಯಾತ ಚೀನಿ ಯಾತ್ರಿಕ, ಇತಿಹಾಸಕಾರ ಹ್ಯೂಯೆನ್ ತ್ಸಾಂಗ್ ಕ್ರಿ.ಶ. ೬೨೯-೬೪೫ ಐದು ವರ್ಷ ನಳಂದದಲ್ಲಿ ವಿದ್ಯಾರ್ಥಿಯಾಗಿದ್ದ. ನಳಂದ ವಿಶ್ವವಿದ್ಯಾ ಲಯವು ಉತ್ತುಂಗ ಸ್ಥಿತಿಯಲ್ಲಿzಗ ಸುಮಾರು ೧೦,೦೦೦ ವಿದ್ಯಾರ್ಥಿ ಗಳನ್ನು ಮತ್ತು ೨,೦೦೦ ಅಧ್ಯಾಪಕರನ್ನು ಒಳಗೊಂಡಿತ್ತು ಹಾಗೂ ೯೦ ಲಕ್ಷಕ್ಕೂ
ಹೆಚ್ಚು ಅಮೂಲ್ಯ ಹಸ್ತಪ್ರತಿಗಳನ್ನು ಹೊಂದಿತ್ತು ಎಂದೂ ಇತಿಹಾಸದಲ್ಲಿ ದಾಖಲಾಗಿದೆ.೧೧೯೩ರಲ್ಲಿ ನಳಂದ ವಿಶ್ವವಿದ್ಯಾಲಯವು ಬಖ್ತಿಯಾರ್ ಖಿಲ್ಜಿಯ ದಾಳಿಯಿಂದ ಸಂಪೂರ್ಣವಾಗಿ ನಾಶವಾಯಿತು.

ಪ್ರಸ್ತುತ ಬಿಹಾರದ ರಾಜ್ ಗೀರ್‌ನಲ್ಲಿ ಹೊಸದಾಗಿ ೧೭ ರಾಷ್ಟ್ರಗಳಾದ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಭೂತಾನ್, ಬ್ರೂನಿ, ಕಾಂಬೋಡಿಯಾ, ಚೀನಾ, ಇಂಡೋನೇಷಿಯಾ, ಲಾವೋಸ್, ಮಾರಿಷಸ್, ಮ್ಯಾನ್ಮಾರ್, ನ್ಯೂಜಿಲೆಂಡ್, ಪೋರ್ಚುಗಲ, ಸಿಂಗಾಪುರ, ದ.ಕೊರಿಯಾ, ಶ್ರೀಲಂಕಾ, ಥಾಯ್ಲೆಂಡ್ ಮತ್ತು ವಿಯೆಟ್ನಾಂ ಸಹಭಾಗಿತ್ವದಲ್ಲಿ ೪೫೫ ಎಕರೆ ಸ್ಥಳದಲ್ಲಿ ೧೭೪೯ ಕೋಟಿ ರು. ವೆಚ್ಚದಲ್ಲಿ ೪೦ ತರಗತಿ ಕೊಠಡಿಗಳೊಂದಿಗೆ ಎರಡು ಶೈಕ್ಷಣಿಕ ಬ್ಲಾಕ್‌ಗಳು ಸೇರಿ
ಒಟ್ಟು ೧,೯೦೦ ಆಸನ ಸಾಮರ್ಥ್ಯ ವಿರುವ ಮತ್ತು ತಲಾ ೩೦೦ ಆಸನಗಳ ಸಾಮರ್ಥ್ಯದ ೨ ಸಭಾಂಗಣಗಳನ್ನು ಹೊಂದಿದ್ದು, ಸುಮಾರು ೫೫೦ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೊಂದಿರುವ ಹಾಸ್ಟೆಲ್‌ನ್ನು ಸಹ ಹೊಂದಿರುವ, ನೂತನ ನಳಂದ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಕೇಂದ್ರ ೨೦೦೦ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸುವ ಆಂಫಿಥಿಯೇಟರ್, ಅಧ್ಯಾಪಕರ ಕ್ಲಬ್ ಮತ್ತು ಕ್ರೀಡಾ ಸಂಕೀರ್ಣ ಸೇರಿದಂತೆ ಹಲವಾರು ಇತರ ಸೌಲಭ್ಯಗಳನ್ನು ಹೊಂದಿದೆ.

ಜೊತೆಗೆ ಸೌರ ಸ್ಥಾವರ, ನೀರಿನ ಸಂಸ್ಕರಣಾ ಘಟಕಗಳು, ತ್ಯಾಜ್ಯ ನೀರು ಮರುಬಳಕೆ ಘಟಕ, ೧೦೦ ಎಕರೆ ಜಲಮೂಲವನ್ನೂ ಹೊಂದಿರುವ ನಳಂದ ವಿಶ್ವವಿದ್ಯಾಲಯ ಮತ್ತೊಮ್ಮೆ ಜಗತ್ತಿನಲ್ಲಿ ತನ್ನ ಛಾಪು ಮೂಡಿಸಲೆಂದೂ ಅಶಿಸೋಣ.

(ಲೇಖಕರು: ಸಂಶೋಧನಾ ವಿದ್ಯಾರ್ಥಿ)