Thursday, 19th September 2024

World Chocolate Day 2024: ಇಂದು ಅಂತಾರಾಷ್ಟ್ರೀಯ ಚಾಕೊಲೇಟ್ ದಿನ; ಏನಿದರ ವಿಶೇಷ?

World Chocolate Day 2024

ಚಾಕೊಲೇಟ್ (World Chocolate Day 2024) ಎಂದರೆ ಯಾರಿಗೆ ಇಷ್ಟವಿಲ್ಲ? ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಚಾಕೊಲೇಟ್ (Chocolate) ಮೆಲ್ಲಲು ಇಷ್ಟಪಡುತ್ತಾರೆ. ಹಸಿವಾದಾಗ, ಸಮಯ ಕಳೆಯಲು, ಸ್ನೇಹಿತರೊಂದಿಗೆ ಹಂಚಿಕೊಳ್ಳಲು… ಹೀಗೆ ತಿನ್ನಲು ತರಹೇವಾರಿ ಚಾಕೊಲೇಟ್‌ಗಳು ಲಭ್ಯವಿದೆ. ಡಾರ್ಕ್, ಮಿಲ್ಕ್, ಕ್ರೀಮ್, ಶುಗರ್ ಫ್ರೀ, ವೈಟ್, ಸಸ್ಯಾಹಾರಿ ಹೀಗೆ ಅವರವರ ಅಭಿರುಚಿಗೆ ತಕ್ಕಂತೆ ಕೆಲವು ಚಾಕಲೇಟ್‌ಗಳು ಇಷ್ಟವಾಗುತ್ತದೆ.

ಚಾಕೊಲೇಟ್ ಪ್ರಿಯರನ್ನು ಉತ್ತೇಜಿಸುವ ಸಲುವಾಗಿಯೇ ವಿಶ್ವದಾದ್ಯಂತ ಸೆಪ್ಟೆಂಬರ್ 13ರಂದು ಚಾಕೊಲೇಟ್ ದಿನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಚಾಕೊಲೇಟ್ ದಿನವು ಒಳ್ಳೆಯತನಕ್ಕೆ ಮೀಸಲಾಗಿರುವ ಕಾರ್ಯಕ್ರಮವಾಗಿದೆ. ಎಲ್ಲರೂ ಜೊತೆ ಬೆರೆಯಲು, ಪ್ರಶಂಸಿಸಿಕೊಳ್ಳಲು, ಪ್ರೀತಿಯನ್ನು ಹಂಚಲು ಈ ದಿನ ಮೀಸಲಾಗಿದೆ.

ವಿವಿಧ ಬಳಕೆ ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಹಲವಾರು ವಿಧದ ಚಾಕೊಲೇಟ್‌ಗಳು ಇಂದು ಲಭ್ಯವಿದೆ. ಪ್ರತಿಯೊಂದು ವಿಧದ ಚಾಕೊಲೇಟ್ ಕೂಡ ವಿಶಿಷ್ಟವಾದ ಸುವಾಸನೆ ಮತ್ತು ಗುಣಲಕ್ಷಣಗಳನ್ನು ಹೊಂದಿದೆ.

World Chocolate Day 2024

ಅಂತಾರಾಷ್ಟ್ರೀಯ ಚಾಕೊಲೇಟ್ ದಿನದ ಮಹತ್ವ ಏನು?

ಅಂತಾರಾಷ್ಟ್ರೀಯ ಚಾಕೊಲೇಟ್ ದಿನವು ಸೆಪ್ಟೆಂಬರ್ 13ರಂದು ವಿಶ್ವದ ವಿವಿಧ ದೇಶಗಳಲ್ಲಿ ಆಚರಿಸಲಾಗುತ್ತದೆ. ಇದು ಹೆರ್ಷೆ ಚಾಕೊಲೇಟ್ ಕಂಪನಿಯ ಸಂಸ್ಥಾಪಕ ಮಿಲ್ಟನ್ ಎಸ್. ಹೆರ್ಷೆ ಅವರ ಜನ್ಮದಿನವಾಗಿದೆ.

ವಿಭಿನ್ನ ವಸ್ತುಗಳನ್ನು ಬಳಸಿಕೊಂಡು ತಯಾರಿಸುವ ಚಾಕೊಲೇಟ್ ವಿನೂತನ ಪಾಕಶಾಲೆಯ ಪ್ರಯೋಗ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುತ್ತದೆ. ಅಂತಾರಾಷ್ಟ್ರೀಯ ಚಾಕೊಲೇಟ್ ದಿನದಂದು ಜನರು ಸಾಮಾನ್ಯವಾಗಿ ಹೊಸ ಪಾಕವಿಧಾನಗಳನ್ನು ಪ್ರಯತ್ನಿಸುತ್ತಾರೆ. ಅನೇಕರು ಚಾಕೊಲೇಟ್ ಪ್ರದರ್ಶನ, ಮಾರಾಟ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.

ಯಾವಾಗ ಮೊದಲು ಆಚರಣೆ?

ವಿಶ್ವ ಚಾಕೊಲೇಟ್ ದಿನವನ್ನು ಮೊದಲ ಬಾರಿಗೆ 1550ರಲ್ಲಿ ಯುರೋಪ್ ರಾಷ್ಟ್ರಗಳಲ್ಲಿ ಆಚರಿಸಲಾಯಿತು. ಇದು ಅದರ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಆರಂಭದಲ್ಲಿ ಈ ದಿನವನ್ನು ಜುಲೈ 7ರಂದು ಆಚರಿಸಲಾಗುತ್ತಿತ್ತು. ಆದರೆ ಈಗ ಹೆರ್ಷೆ ಚಾಕೊಲೇಟ್ ಕಂಪನಿಯ ಸಂಸ್ಥಾಪಕ ಮಿಲ್ಟನ್ ಎಸ್. ಹೆರ್ಷೆ ಅವರ ಜನ್ಮವನ್ನು ಗೌರವಿಸಿ ಸೆಪ್ಟೆಂಬರ್ 13ರಂದು ಆಚರಿಸಲಾಗುತ್ತಿದೆ.

World Chocolate Day 2024

ವಿಶ್ವ ಚಾಕೊಲೇಟ್ ದಿನದ ಇತಿಹಾಸ

ಕೋಕೋ ಬೀನ್‌ನಿಂದ ಹುಟ್ಟಿಕೊಂಡ ಚಾಕೊಲೇಟ್ ಪ್ರಾಚೀನ ಮೆಸೊಅಮೆರಿಕನ್ ಸಂಸ್ಕೃತಿಗಳ ಹಿಂದಿನ ಶ್ರೀಮಂತ ಇತಿಹಾಸವನ್ನು ಹೊಂದಿದೆ.

ವಿಶ್ವ ಚಾಕೊಲೇಟ್ ದಿನದ ಇತಿಹಾಸವು 16 ನೇ ಶತಮಾನದಷ್ಟು ಹಿಂದಿನದು. ಸ್ಪ್ಯಾನಿಷ್ ಸಂಶೋಧಕರು ಮೊದಲು ಅಮೆರಿಕಾದಿಂದ ಯುರೋಪ್ ಗೆ ಚಾಕೊಲೇಟ್ ತಂದರು. ಮೂಲತಃ ಕಹಿ ಪಾನೀಯವಾಗಿ ಆರಂಭಗೊಂಡ ಚಾಕೊಲೇಟ್ ಸಕ್ಕರೆ ಮತ್ತು ಹಾಲಿನ ಸೇರ್ಪಡೆಯ ಮೂಲಕ ಇಂದು ನಮಗೆ ತಿಳಿದಿರುವ ಸಿಹಿ ಮಿಠಾಯಿಯಾಗಿ ವಿಕಸನಗೊಂಡಿತು. 19 ನೇ ಶತಮಾನದ ವೇಳೆಗೆ ಚಾಕೊಲೇಟ್ ಯುರೋಪ್ ನಲ್ಲಿ ಜನಪ್ರಿಯ ಸಿಹಿ ಖಾದ್ಯವಾಯಿತು.

ವಿಶ್ವ ಚಾಕೊಲೇಟ್ ದಿನವು ಚಾಕೊಲೇಟ್ ಪ್ರಿಯರಿಗೆ ಮಾತ್ರವಲ್ಲದೆ ಚಾಕೊಲೇಟ್‌ನ ಸಾಂಸ್ಕೃತಿಕ ಮತ್ತು ಆರ್ಥಿಕವಾಗಿಯೂ ಮಹತ್ವದ್ದಾಗಿದೆ. ಈ ದಿನವು ಚಾಕೊಲೇಟ್‌ನ ಶ್ರೀಮಂತ ಇತಿಹಾಸ, ಅದರ ವೈವಿಧ್ಯಮಯ ಬಳಕೆಗಳು ಮತ್ತು ವಿಶ್ವಾದ್ಯಂತ ಪಾಕಶಾಲೆಯ ಸಂಪ್ರದಾಯಗಳಲ್ಲಿ ಅದರ ಪಾತ್ರವನ್ನು ಆಚರಿಸುತ್ತದೆ.

http://Bad Cholesterol: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‍ ಹೆಚ್ಚಾಗಿದೆಯಾ? ಚಿಂತೆ ಬೇಡ ಈ 5 ಬೀಜಗಳನ್ನು ಸೇವಿಸಿ…

World Chocolate Day 2024

ಚಾಕೊಲೇಟ್ ಕುರಿತ ಕುತೂಹಲಕಾರಿ ಸಂಗತಿಗಳಿವು

ಚಾಕೊಲೇಟ್‌ನ ಆಕರ್ಷಣೆಯನ್ನು ಹೆಚ್ಚಿಸುವ ಮತ್ತು ಎಲ್ಲೆಡೆ ಚಾಕೊಲೇಟ್ ಪ್ರಿಯರಿಗೆ ಇನ್ನಷ್ಟು ಆನಂದದಾಯಕವಾಗಿಸುವ ಕೆಲವು ಕುತೂಹಲಕಾರಿ ಮತ್ತು ಆಕರ್ಷಕ ಸಂಗತಿಗಳು ಇಲ್ಲಿವೆ.

  1. ಡಾರ್ಕ್ ಚಾಕೊಲೇಟ್ ಗಳು ಹೃದಯದ ಆರೋಗ್ಯ, ಮೆದುಳಿನ ಕ್ಷಮತೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಕಬ್ಬಿಣ, ಮೆಗ್ನೀಸಿಯಮ್ ಮತ್ತು ಫೈಬರ್‌ನ ಮೂಲವಾಗಿದೆ.
  2. ಅನೇಕ ಚಾಕೊಲೇಟ್ ಬ್ರ್ಯಾಂಡ್ ಗಳು ಸಸ್ಯಾಹಾರಿ ಚಾಕೊಲೇಟ್ ಗಳನ್ನೇ ತಯಾರಿಸುತ್ತದೆ. ಈ ಚಾಕೊಲೇಟ್‌ಗಳನ್ನು ಬಾದಾಮಿ ಹಾಲು, ತೆಂಗಿನ ಹಾಲು ಮತ್ತು ಸೋಯಾಗಳಂತಹ ಪದಾರ್ಥಗಳನ್ನು ಸೇರಿಸಿ ಮಾಡಲಾಗುತ್ತದೆ.
  3. ಪುರಾತನ ಮೆಸೊಅಮೆರಿಕನ್ ನಾಗರಿಕತೆಗಳಲ್ಲಿ ಕೋಕೋ ಬೀನ್ಸ್ ಎಷ್ಟು ಮೌಲ್ಯಯುತವಾಗಿತ್ತು ಎಂದರೆ ಅವುಗಳನ್ನು ಕರೆನ್ಸಿಯಾಗಿ ಬಳಸಲಾಗುತ್ತಿತ್ತು.
  4. ಚಾಕೊಲೇಟ್ ದೇಹದ ಉಷ್ಣಾಂಶದಲ್ಲಿ ಕರಗುತ್ತದೆ. ಈ ವಿಶಿಷ್ಟ ಗುಣವು ಚಾಕೊಲೇಟ್‌ನಲ್ಲಿರುವ ಕೋಕೋ ಬೆಣ್ಣೆಯಿಂದಾಗಿದೆ.
  5. ವಿಶ್ವದ ಅತಿದೊಡ್ಡ ಚಾಕೊಲೇಟ್ ಬಾರ್ ಅನ್ನು 2011 ರಲ್ಲಿ ಯುಕೆಯಲ್ಲಿ ತಯಾರಿಸಲಾಗಿತ್ತು. ಇದು 12,770 ಪೌಂಡ್‌ ಅಂದರೆ ಸರಿಸುಮಾರು 5,792 ಕಿಲೋ ಗ್ರಾಂಗಳಾಗಿತ್ತು.