Wednesday, 11th December 2024

ವನಿತೆಯರ ಟಿ20 ಚಾಲೆಂಜ್: ವೆಲಾಸಿಟಿ ಮತ್ತು ಸೂಪರ್ ನೋವಾಸ್ ತಂಡದ ಸೆಣಸಾಟ ಇಂದು

ಶಾರ್ಜಾ: ವನಿತೆಯರ ಟಿ20 ಚಾಲೆಂಜ್‌ನ ಮೊದಲ ಪಂದ್ಯ  ಬುಧವಾರ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಮಿಥಾಲಿ ರಾಜ್ ನಾಯಕತ್ವದ ವೆಲಾಸಿಟಿ ಮತ್ತು ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಸೂಪರ್ ನೋವಾಸ್ ತಂಡಗಳು ಸೆಣಸಾಡಲಿವೆ.

ಶಾರ್ಜಾ ಮೈದಾನದಲ್ಲಿ ಹಿಂದಿನ ಐದು ಐಪಿಎಲ್ ಪಂದ್ಯಗಳನ್ನು ಗಮನಿಸಿದ ಪ್ರಕಾರ ಸರಾಸರಿ ರನ್ 147 ಬರುವ ಸಾಧ್ಯತೆಯಿದೆ.

ವೆಲಾಸಿಟಿ ಸಂಭಾವ್ಯ ತಂಡ: ಶಫಾಲಿ ವರ್ಮಾ, ಡೇನಿಯಲ್ ವ್ಯಾಟ್, ಮಿಥಾಲಿ ರಾಜ್ (ಸಿ), ಸೂನೆ ಲೂಸ್, ವೇದಾ ಕೃಷ್ಣಮೂರ್ತಿ, ದೇವಿಕಾ ವೈದ್ಯ, ಸುಷ್ಮಾ ವರ್ಮಾ (ವಿಕೆ), ಶಿಖಾ ಪಾಂಡೆ, ಜಹನಾರಾ ಆಲಂ, ಲೇ ಕಾಸ್ಪೆರೆಕ್, ಏಕ್ತಾ ಬಿಶ್ತ್.

ಸೂಪರ್ ನೋವಾಸ್ ಸಂಭಾವ್ಯ ತಂಡ: ಚಮರಿ ಅಥಾಪಟು, ಪ್ರಿಯಾ ಪೂನಿಯಾ, ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ಸಿ), ಶಶಿಕಲಾ ಸಿರಿವರ್ಧನೆ, ಅನುಜಾ ಪಾಟೀಲ್, ತಾನಿಯಾ ಭಾಟಿಯಾ (ವಿಕೆ), ರಾಧಾ ಯಾದವ್, ಶಕೇರಾ ಸಲ್ಮನ್, ಪೂನಮ್ ಯಾದವ್, ಅಯೋಬಂಗಾ ಖಕಾ.