Tuesday, 3rd December 2024

iOS 18 features: ಐಒಎಸ್‌ 18 ಹೊಸ ಫೀಚರ್‌ಗಳು ಇಲ್ಲಿವೆ ನೋಡಿ! ಐಪೋನ್‌ ಬಳಕೆದಾರರಿಗೆ ಹಬ್ಬ!

ios 18

ಬೆಂಗಳೂರು: ಆಪಲ್‌ ಐಪೋನ್‌ಗಳ (Apple iPhone) ಆಪರೇಟಿಂಗ್‌ ಸಾಫ್ಟ್‌ವೇರ್‌ನ ಹೊಸ ಆವೃತ್ತಿ iOS 18 ಬಿಡುಗಡೆಯಾಗಿದೆ. ನಿಬ್ಬೆರಗುಗೊಳಿಸುವ ಹೊಸ ಫೀಚರ್‌ಗಳು (iOS 18 features) ಈ ಆವೃತ್ತಿಯಲ್ಲಿವೆ.

ಇದರ ಅಪ್‌ಡೇಟ್ ಅನ್ನು ಆಪಲ್‌ನ WWDC ಈವೆಂಟ್‌ನಲ್ಲಿ ಅಧಿಕೃತವಾಗಿ ಘೋಷಿಸಲಾಯಿತು. ಈಗ iPhone 16 ಬಿಡುಗಡೆಯಲ್ಲಿ, ಕಂಪನಿಯು ಅತ್ಯಾಕರ್ಷಕ ಹೊಸ ವೈಶಿಷ್ಟ್ಯಗಳ ಒಂದು ಶ್ರೇಣಿಯೊಂದಿಗೆ ಹೊಸ ಸಾಫ್ಟ್‌ವೇರ್ ಅಪ್‌ಡೇಟ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. AI ಅಪ್‌ಗ್ರೇಡ್‌ಗಳು, ಕಸ್ಟಮೈಸೇಷನ್‌ ವೈಶಿಷ್ಟ್ಯಗಳು, ಹೊಸ ವಿನ್ಯಾಸ ಮತ್ತು ಹೆಚ್ಚಿನ ಫೀಚರ್‌ಗಳೊಂದಿಗೆ iPhone ಬಳಕೆದಾರರಿಗೆ iOS 18 ಲಭ್ಯವಿದೆ.

ಐಒಎಸ್ 18 ಅಪ್‌ಡೇಟ್ ಲಭ್ಯವಿರುವ ಫೋನ್‌ಗಳೆಂದರೆ ಐಫೋನ್ 16 ಸರಣಿಗಳು, iPhone 15 ಸರಣಿಗಳು, iPhone 14 ಸರಣಿಗಳು, iPhone 13 ಸರಣಿಗಳು, iPhone 12 ಸರಣಿಗಳು, iPhone 11 ಸರಣಿಗಳು, iPhone XS, iPhone XS Max, iPhone XR ಮತ್ತು iPhone SE (ಎರಡನೇ ತಲೆಮಾರಿನ ಅಥವಾ ನಂತರದ).

  1. ಮೆಸೇಜ್‌ಗಳನ್ನು ಶೆಡ್ಯೂಲ್‌ ಮಾಡಬಹುದು

ಐಒಎಸ್ 18 ರಲ್ಲಿ ಪರಿಚಯಿಸಲಾದ ಹೊಸ ವೈಶಿಷ್ಟ್ಯ ಎಂದರೆ, ನಿರ್ದಿಷ್ಟ ಸಮಯದಲ್ಲಿ ಸಂದೇಶಗಳನ್ನು ಕಳುಹಿಸುವಂತೆ ಶೆಡ್ಯೂಲ್‌ ಮಾಡಬಹುದು. ಅಂದರೆ ನಾಳೆ ಬೆಳಗ್ಗೆ ಮೆಸೇಜ್‌ ಸೆಂಡ್‌ ಆಗುವಂತೆ ಇಂದೇ ನಿಗದಿಪಡಿಸಬಹುದು.‌

  1. ಸ್ಯಾಟಲೈಟ್‌ ಮೂಲಕ ಸಂದೇಶ

iOS 18 ಸ್ಯಾಟಲೈಟ್‌ ಸಂದೇಶ ಕಳುಹಿಸುವಿಕೆಯನ್ನು ಪರಿಚಯಿಸಿದೆ. ಸೆಲ್ಯುಲಾರ್ ಅಥವಾ ವೈ-ಫೈ ಅಗತ್ಯವಿಲ್ಲದೇ iMessage ಅಥವಾ SMS ಮೂಲಕ ಸಂಪರ್ಕದಲ್ಲಿರಬಹುದು.

  1. ಮರುಹೊಂದಿಸಿ ಮತ್ತು ಮರುಗಾತ್ರಗೊಳಿಸಿ

ನಿಮ್ಮ ಕಂಟ್ರೋಲ್‌ ಲೇಔಟ್‌ ಅನ್ನು ಕಸ್ಟಮೈಸ್ ಮಾಡಲು, ವೈಯಕ್ತಿಕ ನಿಯಂತ್ರಣಗಳನ್ನು ಮರುಗಾತ್ರಗೊಳಿಸಲು ಮತ್ತು ಸ್ವೈಪ್‌ನೊಂದಿಗೆ ಸುಲಭವಾಗಿ ಪ್ರವೇಶಿಸಲು ಕಸ್ಟಮೈಸ್‌ ಮಾಡಿದ ಗುಂಪುಗಳನ್ನು ರಚಿಸಲು iOS 18 ನಿಮಗೆ ಅನುವು ಮಾಡಿಕೊಡುತ್ತದೆ.

  1. ಮರುವಿನ್ಯಾಸಗೊಳಿಸಲಾದ ಫೋಟೋ ಅಪ್ಲಿಕೇಶನ್

iOS 18 ರಲ್ಲಿ ಮರುವಿನ್ಯಾಸಗೊಳಿಸಲಾದ ಫೋಟೋಗಳ ಅಪ್ಲಿಕೇಶನ್ ಇದೆ. ಇದು ನಿಮ್ಮ ಲೈಬ್ರರಿಯನ್ನು ವ್ಯವಸ್ಥಿತವಾಗಿರಿಸುತ್ತದೆ ಮತ್ತು ಫೋಟೋಗಳನ್ನು ತ್ವರಿತವಾಗಿ ಹುಡುಕಲು ಸುಲಭಗೊಳಿಸುತ್ತದೆ. ಹೊಸ ವಿನ್ಯಾಸದೊಂದಿಗೆ ನೀವು ಎಲ್ಲವನ್ನೂ ಸುಲಭವಾಗಿ ಪ್ರವೇಶಿಸಬಹುದು. ನಿಮ್ಮ ನೆನಪುಗಳನ್ನು ಆನಂದಿಸಲು ಹೆಚ್ಚಿನ ಸಮಯವನ್ನು ಕಳೆಯಬಹುದು.

  1. ಆಪಲ್ ‘ಜೆನ್ಮೋಜಿ’

Apple ನ ‘Genmoji’ ವೈಶಿಷ್ಟ್ಯವು AI ತಂತ್ರಜ್ಞಾನವನ್ನು ಬಳಸಿಕೊಂಡು ನಿಮ್ಮ ಸಾಧನದಲ್ಲಿ ನೇರವಾಗಿ ಕಸ್ಟಮೈಸ್‌ ಮಾಡಿದ ಎಮೋಜಿಗಳನ್ನು ರಚಿಸಲು ಅನುಮತಿಸುತ್ತದೆ. ನಿಮ್ಮ ಶೈಲಿಯನ್ನು ಪ್ರತಿಬಿಂಬಿಸುವ ಅನನ್ಯ ಎಮೋಜಿಗಳನ್ನು ರಚಿಸಲು ವೈಶಿಷ್ಟ್ಯಗಳು ಮತ್ತು ವಿನ್ಯಾಸಗಳನ್ನು ಕಸ್ಟಮೈಸ್ ಮಾಡಬಹುದು.

  1. ಅನಗತ್ಯವಾದುವನ್ನು ಸ್ವಚ್ಛಗೊಳಿಸಿ

ಕ್ಲಿಕ್ ಮಾಡಿದ ಫೋಟೋಗಳಲ್ಲಿ ಹಿನ್ನೆಲೆಯಲ್ಲಿ ಅನಗತ್ಯವಾಗಿ ಬಂದಿರುವ ಸಂಗತಿಗಳನ್ನು ತೆಗೆದುಹಾಕುವ ಸೌಲಭ್ಯವನ್ನು ಸುಲಭವಾಗಿ ಇದರಲ್ಲಿ ಕೊಡಲಾಗಿದೆ. ಈ ಮೂಲಕ ಈ ಗ್ಯಾಜೆಟ್‌ ನಿಮ್ಮ ಚಿತ್ರವನ್ನು ಹೆಚ್ಚು ಕೇಂದ್ರೀಕರಿಸುತ್ತದೆ.

  1. iOS 18ನಲ್ಲಿ ನೋಟ್ಸ್‌ ಅಪ್ಲಿಕೇಶನ್

iOS 18ನಲ್ಲಿನ ನೋಟ್ಸ್‌ ಅಪ್ಲಿಕೇಶನ್ ಸ್ಮಾರ್ಟ್ ಫೋಲ್ಡರ್‌ಗಳು, ಉತ್ತಮ ಹುಡುಕಾಟ ಮತ್ತು ತಡೆರಹಿತ ಸಿಂಕ್ ಮಾಡುವಿಕೆಯೊಂದಿಗೆ ಸುಧಾರಿತ ವ್ಯವಸ್ಥೆಯನ್ನು ನೀಡುತ್ತದೆ. ಇದು ನೋಟ್ಸ್‌ಗಳನ್ನು ನಿರ್ವಹಿಸಲು, ಸಂಪಾದಿಸಲು ಮತ್ತು ಹಂಚಿಕೊಳ್ಳಲು ಸುಲಭಗೊಳಿಸುತ್ತದೆ.

  1. ಸಿರಿಯಲ್ಲಿ ಗ್ಲೋ ಅಪ್ ವೈಶಿಷ್ಟ್ಯ
    ಇತ್ತೀಚಿನ ಅಪ್‌ಡೇಟ್‌ನಲ್ಲಿ, ಸಿರಿ ಹೆಚ್ಚು ಗ್ಲೋ ಆಗುವ ಮೂಲಕ ಸಕ್ರಿಯ ಮತ್ತು ದೃಷ್ಟಿಗೆ ಆಕರ್ಷಕವಾದ ಅನುಭವವನ್ನು ನೀಡುತ್ತದೆ. ಈ ಹೊಳೆಯುವ ಪರಿಣಾಮ ಪರಸ್ಪರ ಸ್ಪಂದನವನ್ನು ಹೆಚ್ಚಿಸುತ್ತದೆ. ಸಿರಿ ಯಾವಾಗ ಆಕ್ಟಿವ್‌ ಆಗಿದೆ ಎಂದು ತಿಳಿಯುವುದು ಸುಲಭವಾಗುತ್ತದೆ.
  2. ನಿಮ್ಮ ಐಫೋನ್ ಮೂಲಕ ಪಾವತಿಸಿ
    ಇದು ನಿಮ್ಮ ಚಿತ್ರಗಳು ಮತ್ತು ವೀಡಿಯೊಗಳನ್ನು ಏರ್‌ಡ್ರಾಪ್ ಮಾಡುವ ಥರದ್ದೇ ಹೊಸ ವೈಶಿಷ್ಟ್ಯ. ಫೋಟೋ ಕಳಿಸಿದಂತೆಯೇ ಫೋನ್‌ನಿಂದ ಫೋನ್‌ಗೆ ಹಣ ಪಾವತಿಸಬಹುದು. ಎರಡೂ ಸಾಧನಗಳನ್ನು ಸಂಪರ್ಕಿಸಿದರಾಯಿತು.
    ·
  3. ಫೇಸ್ ಐಡಿಯೊಂದಿಗೆ ಅಪ್ಲಿಕೇಶನ್ ಬ್ಲಾಕ್‌ ಮಾಡುವುದು
    iOS 18 ಫೇಸ್ ಐಡಿಯೊಂದಿಗೆ ಅಪ್ಲಿಕೇಶನ್ ಬ್ಲಾಕ್‌ ಮಾಡುವಿಕೆಯನ್ನು ಪರಿಚಯಿಸಿದೆ. ಇದು ಬಯೋಮೆಟ್ರಿಕ್ ದೃಢೀಕರಣದೊಂದಿಗೆ ನಿರ್ದಿಷ್ಟ ಅಪ್ಲಿಕೇಶನ್‌ಗಳನ್ನು ಸುರಕ್ಷಿತಗೊಳಿಸಲು ನಿಮಗೆ ಅನುಮತಿಸುತ್ತದೆ. ಈ ವೈಶಿಷ್ಟ್ಯದಿಂದ, ಅಧಿಕೃತ ಬಳಕೆದಾರರು ಮಾತ್ರ ಸಂರಕ್ಷಿತ ಅಪ್ಲಿಕೇಶನ್‌ಗಳನ್ನು ಪ್ರವೇಶಿಸಲು ಸಾಧ್ಯ.

ಇದನ್ನೂ ಓದಿ: Apple iPhone: ಮಂಗಳೂರಿನಲ್ಲೊಂದು ವಿಚಿತ್ರ ಪ್ರತಿಭಟನೆ, ಆ್ಯಪಲ್‌ ಐಪೋನ್‌ ವಿರುದ್ಧ ಬೀದಿಗಿಳಿದ ಗ್ರಾಹಕರು