ಹೂಸ್ಟನ್ (ಅಮೆರಿಕ): ಭಾರತ ಕ್ರಿಕೆಟ್ ತಂಡದ ಮಾಜಿ ದಿಗ್ಗಜ ಆಟಗಾರ, ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್(Sachin Tendulkar) ಅವರಿಗೆ ಡಲ್ಲಾಸ್ ಕೌಬಾಯ್ಸ(Dallas Cowboys) ಎನ್ಎಫ್ಎಲ್ ಪಂದ್ಯದ(NFL Game) ವೇಳೆ ವಿಶೇಷವಾಗಿ ಗೌರವಿಸಲಾಯಿತು(Tendulkar Honored). ತಂಡದ ಮಾಲಕ ಜೆರ್ರಿ ಜೋನ್ಸ್(Jerry Jones) ಅವರು ತೆಂಡೂಲ್ಕರ್ ಅವರಿಗೆ ತಮ್ಮ ನೆಚ್ಚಿನ 10 ನಂಬರಿನ ತೆಂಡೂಲ್ಕರ್ ಎಂದು ಬರೆದಿರುವ ಜೆರ್ಸಿಯೊಂದನ್ನು ಸ್ಮರಣಿಕೆಯಾಗಿ ನೀಡಲಾಯಿತು.
ರಾಷ್ಟ್ರೀಯ ಕ್ರಿಕೆಟ್ ಲೀಗ್ (ಎನ್ಸಿಎಲ್) ನೊಂದಿಗೆ ತೊಡಗಿಸಿಕೊಂಡಿರುವ ತೆಂಡೂಲ್ಕರ್ ಅವರು ಅಮೆರಿಕದಲ್ಲಿ ಕ್ರಿಕೆಟ್ ಚಟುವಟಿಕೆ ಬೆಳವಣಿಗೆಗೆ ಮಹತ್ತರ ಕೊಡುಗೆ ಸಲ್ಲಿಸುತ್ತಿದ್ದಾರೆ. ಸುನಿಲ್ ಗವಾಸ್ಕರ್, ಜಹೀರ್ ಅಬ್ಬಾಸ್, ವಾಸಿಂ ಅಕ್ರಮ್, ದಿಲೀಪ್ ವೆಂಗ್ಸರ್ಕರ್, ಸರ್ ವಿವಿಯನ್ ರಿಚರ್ಡ್ಸ್, ವೆಂಕಟೇಶ್ ಪ್ರಸಾದ್, ಸನತ್ ಜಯಸೂರ್ಯ, ಮೊಯಿನ್ ಖಾನ್ ಮತ್ತು ಬ್ಲೇರ್ ಫ್ರಾಂಕ್ಲಿನ್ ಅವರಂತಹ ಕ್ರಿಕೆಟ್ ದಂತಕಥೆಗಳನ್ನು ಎನ್ಸಿಎಲ್ ಒಟ್ಟುಗೂಡಿಸುತ್ತದೆ. ಕ್ರಿಕೆಟ್ ಹೀರೊಗಳು ಮುಂದಿನ ಪೀಳಿಗೆಯ ಆಟಗಾರರಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಲಿದ್ದಾರೆ.
ಎನ್ಸಿಎಲ್ನ ಉದ್ಘಾಟನಾ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ತೆಂಡೂಲ್ಕರ್ ಟ್ರೋಫಿ ಪ್ರದಾನ ಮಾಡಲಿದ್ದಾರೆ, ಇದು ಅಮೆರಿಕದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಐತಿಹಾಸಿಕ ಕ್ಷಣವಾಗಲಿದೆ ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ. ಶಾಹಿದ್ ಅಫ್ರಿದಿ, ಸುರೇಶ್ ರೈನಾ, ದಿನೇಶ್ ಕಾರ್ತಿಕ್, ಶಕೀಬ್ ಅಲ್ ಹಸನ್, ರಾಬಿನ್ ಉತ್ತಪ್ಪ, ತಬ್ರೈಜ್ ಶಾಮ್ಸಿ, ಕ್ರಿಸ್ ಲಿನ್, ಏಂಜಲೊ ಮ್ಯಾಥ್ಯೂಸ್, ಕಾಲಿನ್ ಮುನ್ರೊ, ಸ್ಯಾಮ್ ಬಿಲ್ಲಿಂಗ್ಸ್, ಮೊಹಮ್ಮದ್ ನಬಿ ಮತ್ತು ಜಾನ್ಸನ್ ಚಾರ್ಲ್ಸ್ ಸೇರಿದಂತೆ ವಿಶ್ವದಾದ್ಯಂತದ ಖ್ಯಾತ ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ Sachin Tendulkar: ಶಿವಾಜಿ ಪಾರ್ಕ್ನಲ್ಲಿ ನಿರ್ಮಾಣವಾಗಲಿದೆ ಕ್ರಿಕೆಟಿಗ ಸಚಿನ್ ಗುರು ಅಚ್ರೇಕರ್ ಪ್ರತಿಮೆ
ಸಚಿನ್ ಅವರು ‘ಸಚಿನ್ ತೆಂಡೂಲ್ಕರ್ ಫೌಂಡೇಶನ್’ ಎನ್ನುವ ಹೆಸರಿನ ಪ್ರತಿಷ್ಠಾನದ ಮೂಲಕ ಬಡ ಮಕ್ಕಳಿಗೆ ಶಿಕ್ಷಣ, ಕ್ರಿಡೆ ಮತ್ತು ವೈದ್ಯಕೀಯ ನೆರವನ್ನು ನೀಡುತ್ತಿದ್ದಾರೆ. ಸಮಾಜಮುಖಿ ಕಾರ್ಯವನ್ನು ಮಾಡುವ ಮೂಲಕ ಅನೇಕ ಬಡ ಮಕ್ಕಳ ಕನಸನ್ನು ನನಸು ಮಾಡುವ ಕಾರ್ಯ ಮಾಡುತ್ತಿದ್ದಾರೆ. ಈ ಪ್ರತಿಷ್ಠಾನವು ಮಕ್ಕಳಿಗೆ ಸಮಾನ ಅವಕಾಶವನ್ನು ನೀಡಲು ಮತ್ತು ಉತ್ತಮ ಜಗತ್ತನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.