Thursday, 24th October 2024

‌Roopa Gururaj Column: ಹೆತ್ತವರ ಆಶೀರ್ವಾದ ಮಕ್ಕಳಿಗೆ ಶ್ರೀರಕ್ಷೆ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಒಮ್ಮೆ ಅಪ್ಪ ಮತ್ತು ಅವರ ಹರೆಯದ ಮಗ ಸಮುದ್ರಯಾನ ಮಾಡುತ್ತಾ ಇದ್ದರು. ದೋಣಿ ಮುಳುಗೋ ಪರಿಸ್ಥಿತಿ ಬಂತು ಹಾಗೂ ಹೀಗೂ ಒಂದು ಸಣ್ಣ ದ್ವೀಪ ತಲುಪುತ್ತಾರೆ. ಈ ಪರಿಸ್ಥಿತಿಯಲ್ಲಿ ದೇವರೇ ನಮ್ಮನ್ನು ಕಾಪಾಡಬೇಕು ಎಂದು ತಂದೆ ಧೈರ್ಯ ತಂದುಕೊಳ್ಳುತ್ತಾ ಮಗನಿಗೆ, ‘ನೀನು ಇಲ್ಲೇ ಎಲ್ಲಾದರೂ ಕುಳಿತುಕೊಂಡು ದೇವರ ಪ್ರಾರ್ಥನೆ ಮಾಡು, ನಾನು ಕೂಡ ಪ್ರಾರ್ಥನೆ ಮಾಡ್ತೀನಿ’ ಅಂದರು.

ಮಗ ದ್ವೀಪದ ಸುತ್ತ ನೋಡಿದ ಅಲ್ಲಿ ನರಪಿಳ್ಳೆ ಇರಲಿ, ಒಂದು ಪ್ರಾಣಿ, ಪಕ್ಷಿಯೂ ಕಾಣಲಿಲ್ಲ. ಅವನಿಗೆ ಹಸಿವಾಗು ತ್ತಿತ್ತು. ಕಣ್ಣು ಮುಚ್ಚಿ ಕೈಮುಗಿದು ಆಕಾಶ ನೋಡುತ್ತಾ, ‘ಭಗವಂತ ತಿನ್ನೋದಿಕ್ಕೆ ಒಂದೆರಡು ಹಣ್ಣುಗಳನ್ನಾದರೂ ಕೊಡು’ ಎಂದು ಪ್ರಾರ್ಥಿಸಿ ಕಣ್ಣು ಬಿಟ್ಟು ನೋಡುತ್ತಾನೆ. ಏನಾಶ್ಚರ್ಯ ಅವನ ಮುಂದೆ ದೊಡ್ಡ ಹಣ್ಣಿನ ಮರ ಕಂಡಿತು. ಹಣ್ಣು ಕಿತ್ತುಕೊಂಡು ತಿಂದ ಸ್ವಲ್ಪ ಸಮಾಧಾನವಾಯಿತು. ಮತ್ತೆ ಕೈ ಮುಗಿದು ಆಕಾಶದತ್ತ ನೋಡಿ, ‘ದೇವಾ ಚಳಿ ಆಗ್ತಾ ಇದೆ. ನನಗೊಂದು ಮಲಗೋದಕ್ಕೆ ಗುಡಿಸಲಾದರು ಕೊಡು’ ಎಂದ.

ಕಣ್ಣು ಬಿಟ್ಟ ನೋಡಿದರೆ ಅಚ್ಚುಕಟ್ಟಾದ ಗುಡಿಸಲು ಕಂಡಿತು. ಅವನ ಆನಂದಕ್ಕೆ ಸಾಟಿಯೇ ಇಲ್ಲ. ಈಗ ಆ ಹುಡುಗನಿಗೆ, ‘ನನ್ನ ಜತೆ ಒಬ್ಬ ಹುಡುಗಿ ಇದ್ದರೆ ಎಷ್ಟು ಚೆನ್ನಾಗಿರುತ್ತೆ’ ಅಂತ ಅನ್ನಿಸಿತ್ತು. ಮತ್ತೆ ಆಕಾಶದತ್ತ ನೋಡಿ ‘ಹೇ ಭಗವಂತ ಒಳಗಿರಲು ಗುಡಿಸಲು ಕೊಟ್ಟೆ. ಒಂದು ಸುಂದರವಾದ ಗೆಳತಿಯನ್ನು ಕೊಡು’ ಎಂದ, ಇದೇನು ಆಶ್ಚರ್ಯ ಎನ್ನುವಂತೆ, ಸುಂದರವಾದ ಹುಡುಗಿಯೂ ಬಂದಳು.

ಅವನಿಗೆ ಖುಷಿಯಾಯಿತು. ಮತ್ತೆ ಕಣ್ಣು ಮುಚ್ಚಿ, ‘ಭಗವಂತ ಇಷ್ಟೆಲ್ಲ ಕೊಟ್ಟಿರುವೆ ಒಂದು ಪುಟ್ಟ ದೋಣಿಯನ್ನು ಕೊಟ್ಟು ಬಿಡು, ನನ್ನ ಹೆಂಡತಿ ಜತೆ ನಮ್ಮ ಊರು ಸೇರಿಕೊಳ್ಳುತ್ತೇನೆ’ ಎಂದ. ಹೀಗಂದಿz ತಡ ನೋಡುತ್ತಾನೆ,
ಗಟ್ಟಿಮುಟ್ಟಾದ ಪುಟ್ಟ ದೋಣಿ ಕಂಡಿತು. ಸರಿ, ಹೆಂಡತಿಯನ್ನು ಕರೆದುಕೊಂಡು ದೋಣಿಯಲ್ಲಿ ಹೊರಡಲು ತಯಾರಾದ ಆಗ ಒಂದು ಧ್ವನಿ ಕೇಳಿಸಿತು. ‘ಏನಪ್ಪಾ ಎಲ್ಲಾ ನಿನಗೆ ಸಿಕ್ಕಿತು. ನಿನ್ನ ತಂದೆಯನ್ನೇ ಬಿಟ್ಟು ಹೊರಟೆಯಾ?’ ಎಂದು.

ಮಗ ಹೇಳಿದ, ‘ನಮ್ಮಪ್ಪ ಪ್ರಾರ್ಥನೆ ಮಾಡಲು ನನಗೆ ಹೇಳಿದ. ಅವನೇನು ಮಾಡಲೇ ಇಲ್ಲ. ಇವೆ ನನ್ನ ಪ್ರಾರ್ಥನೆಯ ಪುಣ್ಯದಿಂದ ಬಂದಿ ದ್ದು. ಇದರಲ್ಲಿ ನಮ್ಮ ಅಪ್ಪನ ಪುಣ್ಯ ಏನೂ ಇಲ್ಲ. ದೇವರು ನನ್ನ ಪ್ರಾರ್ಥನೆಯನ್ನು ಮಾತ್ರ ಕೇಳಿದ್ದು’ ಎಂದನು. ಅಶರೀರವಾಣಿ ನುಡಿಯಿತು. ‘ನಿನ್ನ ತಂದೆ ಪ್ರಾರ್ಥನೆ ಮಾಡಿ, ದೇವರನ್ನು ಕೇಳಿದ್ದು ಏನೆಂದು ನಿನಗೆ ಗೊತ್ತಾ? ಅವರು, ಭಗವಂತ, ನನ್ನ ಮಗ ಕೇಳಿzಲ್ಲವನ್ನೂ ಕೊಡು ಎಂದು ಪ್ರಾರ್ಥನೆ ಮಾಡಿದ್ದರು.’

ಪ್ರತಿಯೊಬ್ಬ ತಂದೆ ತಾಯಿ, ತಮಗಿಲ್ಲದಿದ್ದರೂ ಪರವಾಗಿಲ್ಲ, ನಮ್ಮ ಮಕ್ಕಳು ಚೆನ್ನಾಗಿರಲಿ ಎಂದು ಆಸೆ ಪಡುತ್ತಾರೆ ಎಂಬುದು ಇದರ ತಾತ್ಪರ್ಯ. ಕತೆ ಕಾಲ್ಪನಿಕವಾದರು ನಮ್ಮ ನಿಜ ಜೀವನಕ್ಕೆ ಹಿಡಿದ ಕೈಗನ್ನಡಿ ಎಂದು ಅನಿಸುವುದಿಲ್ಲವೇ. ನಾವು ಬೆಳೆದು ದೊಡ್ಡವರಾಗಿ ಬದುಕಿನಲ್ಲಿ ನಮ್ಮ ಕಾಲ ಮೇಲೆ ನಾವು ನಿಂತುಕೊಳ್ಳು ವವರೆಗೂ ತಂದೆ ತಾಯಿಗಳ ನಿರಂತರ ಶ್ರಮವಿರುತ್ತದೆ. ಆದರೆ ಒಮ್ಮೆ ನಾವು ಹಣ ದುಡಿಯುವಂತಾಗಿ ಬಿಟ್ಟರೆ ನನ್ನದೇ ಮರ್ಜಿ ನನ್ನದೇ ಜೀವನ, ಎಂದು ಅಹಂಕಾರದಿಂದ ಬದುಕಲು ಆರಂಭಿಸುತ್ತೇವೆ.

ನಾನು ಇಷ್ಟ ಪಟ್ಟವರನ್ನೇ ಮದುವೆಯಾಗುವುದು, ಇದು ನನ್ನ ಜೀವನ, ನನ್ನ ತಂದೆ ತಾಯಿಗಳಿಗೂ ನನಗೂ ಸಂಬಂಧವಿಲ್ಲ ಎನ್ನುವ ಮಟ್ಟಿಗೆ ಸ್ವಾರ್ಥಕ್ಕಾಗಿ ಅವರು ಮಾಡಿzಲ್ಲವನ್ನು ಮರೆತು ಬದುಕು ನಡೆಸಿಕೊಂಡು ಹೋಗಲು ಸಿದ್ದರಾಗಿ ಬಿಡುತ್ತೇವೆ. ಒಮ್ಮೆ ಹಿಂತಿರುಗಿ ನೋಡಿದಾಗ ನಮ್ಮ ಜೀವನ ನಮ್ಮದಲ್ಲ, ತಂದೆ-ತಾಯಿ ಕೊಟ್ಟ ಭಿಕ್ಷೆ ಎಂದು ಅರಿವಾಗುತ್ತದೆ. ತಂದೆ ತಾಯಿಗಳನ್ನು ಎಂದಿಗೂ ಉಪೇಕ್ಷಿಸಬೇಡಿ. ಇದರಿಂದ ಖಂಡಿತ ಒಳ್ಳೆಯ ದಾಗುವುದಿಲ್ಲ.

ಇದನ್ನೂ ಓದಿ: Roopa Gururaj Column: ಒಳಿತನ್ನು ಮಾಡಿದರೆ ಒಳ್ಳೆಯದೇ ಆಗುತ್ತದೆ