Friday, 20th September 2024

ಸಂವಿಧಾನ ಪರಾಮರ್ಶೆಗಿದು ಅತ್ಯಂತ ಸೂಕ್ತಕಾಲ

ಅಭಿವ್ಯಕ್ತಿ

ಟಿ.ದೇವಿದಾಸ್

ಭಾರತೀಯ ಸಂವಿಧಾನವು ಭಾರತದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟ ಪಡಿಸುತ್ತದೆ. 22 ಭಾಗಗಳಲ್ಲಿ 10 (ಆಮೇಲೆ 12) ಅನುಚ್ಛೇದಗಳ, 444 ವಿಧಿಗಳ ವ್ಯಾಪ್ತಿಯೊಂದಿಗೆ ನಮ್ಮ ಸಂವಿಧಾನವು ಪ್ರಜಾಪ್ರಭುತ್ವ, ಸಮಾಜ ವಾದ, ಜಾತ್ಯತೀತತೆ, ರಾಷ್ಟ್ರೀಯ ಸಮಗ್ರತೆ – ಈ ಗುರಿಗಳನ್ನು ಹೊಂದಿರುತ್ತದೆ.

ಬ್ರಿಟನ್, ಅಮೆರಿಕ ಸಂಯುಕ್ತ ಸಂಸ್ಥಾನ, ಐರ್ಲೆಂಡ್, ಫ್ರಾನ್ಸ್, ಕೆನಡಾ, ಆಸ್ಟ್ರೇಲಿಯಾ, ಸೋವಿಯತ್ ಒಕ್ಕೂಟ, ಜಪಾನ್,
ಜರ್ಮನಿ – ಈ ದೇಶಗಳ ಸಂವಿಧಾನಗಳ ತತ್ತ್ವಗಳಿಗೆ ಋಣಿಯಾಗಿ ರಚನೆ ಯಾದ ನಮ್ಮ ಸಂವಿಧಾನದ ಬಗೆಗಿನ ಚರ್ಚೆ – ವಿಚರ್ಚೆ- ಜಿಜ್ಞಾಸೆಗಳು – ಆಕ್ಷೇಪಗಳು ಹಾಗೂ ಪರಾಮರ್ಶೆಗಳು ಈ ರಾಷ್ಟ್ರದಲ್ಲಿ ಲಾಗಾಯ್ತಿನಿಂದಲೂ ಇದೆ.

ಆರೋಪ ಪ್ರತ್ಯಾರೋಪಗಳು ಗೊಂದಲ ವಾಗಿ ತಾರಕಕ್ಕೇರಿ ಆ ವಿಚಾರಗಳು ಅಲ್ಲಿಗಲ್ಲಿಗೆ ಪರ್ಯವ ಸಾನವಾಗುತ್ತಲೇ ಸಾಗಿ
ಬರುತ್ತಿದೆ. 2000ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಸರಕಾರ ಸಂವಿಧಾನದ ಪರಾಮರ್ಶೆಗೆ ಮುಂದಾಗಿತ್ತು. ಆಗ
ದೇಶವ್ಯಾಪಿ ಅವರ ಸರಕಾರದ ವಿರುದ್ಧ ಅರೋಪಗಳು ಸಂಚಲನ ಗೊಂಡಿದ್ದವು. ಎಡಪಂಥೀಯ ಮತ್ತು ಇತರ ರಾಜಕೀಯ, ರಾಜಕೀಯೇತರ ವ್ಯಕ್ತಿಗಳು, ಚಿಂತಕರು, ಸಂಘಟನೆಗಳು ಕೇಂದ್ರ ಸರಕಾರದ ವಿರುದ್ಧ ಸಮರ ಸಾರಿದಂತೆ ವ್ಯವಹರಿಸಿದ್ದವು.

ಟೀಕಿಸಿದ್ದವು. ಆರೋಪಿಸಿದ್ದವು. ಏಕರೂಪ ನಾಗರಿಕ ಸಂಹಿತೆ, ಹಿಂದೂ ರಾಷ್ಟ್ರೀಯತೆ, ಸೆಕ್ಯುಲರ್ ಕುರಿತಾದ ವಿಚಾರಗಳಲ್ಲಿ ಸಂವಿಧಾನ ಪರಾಮರ್ಶೆ ಆಗಬೇಕಿರುವುದು ಸಮಕಾಲೀನ ಭಾರತದ ತುರ್ತಿನ ಅಗತ್ಯ ವಾಗಿದೆ. ಸಂವಿಧಾನದ ಮೂಲಭೂತ ವಿನ್ಯಾಸ ಮಜಭೂತವಾಗಿದ್ದರೂ ಎಲ್ಲಕ್ಕಿಂತಲೂ ಪ್ರಧಾನವಾಗಿ ದೇಶವನ್ನು ಕಾಡುತ್ತಿರುವುದು ವಿವಿಧ ವಿಭಿನ್ನ ಸ್ವರೂಪದ ಮುಸ್ಲಿಂ ಭಯೋತ್ಪಾದನೆ, ಮತಾಂತರ. ಇತರ ಮತ – ಧರ್ಮಗಳಿಗೆ ಅನ್ವಯವಾಗುವಂಥ ನಾಗರಿಕ ಸಂಹಿತೆಗಳು ಮುಸ್ಲಿಮರಿಗೂ ಅನ್ವಯವಾಗಬೇಕು.

1947ರಿಂದಲೂ ಎರಡು ಪ್ರಧಾನ ವಾದ ಪಂಥಗಳ ನಡುವೆ ಸಂಘರ್ಷ ರಾಷ್ಟ್ರದಲ್ಲಿ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಇದು ಎಲ್ಲರಿಗೂ ಗೊತ್ತಿರುವ ಬಹಿರಂಗದ ಸೀಕ್ರೆಟ್!. ಅವುಗಳನ್ನೇ ನೆಚ್ಚಿಕೊಂಡ ರಾಜಕೀಯ ಪಕ್ಷಗಳು ಬಲವಾಗಿ ನಿಂತುಕೊಂಡಿದೆ. ಅದರಲ್ಲೂ ಕೇವಲ ಮುಸ್ಲಿಂ ತುಷ್ಟೀಕರಣವೆಂಬುದು ಸ್ವಾತಂತ್ರ್ಯಪೂರ್ವದಿಂದಲೂ ನಡೆದೇ ಇದೆ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಈ ರಾಷ್ಟ್ರದಲ್ಲಿ ಮುಸ್ಲಿಮರ ಒಟ್ಟೂ ಜನಸಂಖ್ಯೆಯ ಪ್ರಮಾಣಕ್ಕೂ ಈಗಿರುವ ಮುಸ್ಲಿಮರ ಒಟ್ಟೂ ಪ್ರಮಾಣಕ್ಕೂ ವಿಪರೀತವೆನ್ನುವಂಥ ಅಗಾಧ ಪ್ರಮಾಣದ ವ್ಯತ್ಯಾಸವಿದೆ. ಇದೇ ಪ್ರಮಾಣದಲ್ಲಿ ಅವರ ಸಂಖ್ಯೆ ಏರುಗತಿಯಲ್ಲಿದ್ದರೆ ಕೇವಲ  ಐದಾರು ವರ್ಷಗಳಲ್ಲಿ ಇದು ಮುಸ್ಲಿಂ ಧರ್ಮಧಾರಿತ ರಾಷ್ಟ್ರವಾಗುವುದರಲ್ಲಿ ಸಂಶಯವೇ ಇಲ್ಲ. ಇದರ ಸೂಚನೆಗಳು
ಈಗಾಗಲೇ ಗೋಚರವಾಗುತ್ತಿವೆ.

ಜಗತ್ತಿನ ಅತ್ಯಂತ ದೊಡ್ಡ ಸಂವಿಧಾನ ಮತ್ತು ಪ್ರಜಾಪ್ರಭುತ್ವ ನಮ್ಮದು ಎಂದು ಹುಯಿಲಿಡುವ ನಾವು ಅಂಥ ಮಹತ್
ಸಂವಿಧಾನವನ್ನೇ ಬೇಕು ಬೇಕಾದಾಗಲೆಲ್ಲ ಕೇವಲ 67 ವರ್ಷಗಳಲ್ಲಿ ಸುಮಾರು 110 ತಿದ್ದುಪಡಿ ಮಾಡಿದ ಸಾಹಸಿಗಳಾಗಿದ್ದೇವೆ. ಹಾಗಾದರೆ ಅಂದುಕೊಂಡ ಗುರಿಯನ್ನು ಸಂವಿಧಾನದಿಂದ ಸಾಧಿಸಲಾಗಿಲ್ಲವೇ? ರಾಷ್ಟ್ರೀಯ ಹಿತಾಸಕ್ತಿಗಳನ್ನು ನಾವೇ ರಚಿಸಿಕೊಂಡ ಸಂವಿಧಾನದಿಂದ ಕಾಪಾಡಿಕೊಂಡಿಲ್ಲವೇ? ದೇಶದ ಪ್ರಜೆಗಳಲ್ಲಿ ರಾಷ್ಟ್ರೀಯತೆಯ ಪ್ರಜ್ಞೆಯನ್ನು ಬಲಪಡಿಸಲು ಸೋತಿದ್ದೇವೆಯೇ? ಭಾರತೀಯತೆಯನ್ನು ಉದ್ದೀಪಿಸಲಿಲ್ಲವೇ? ಅನೇಕತೆಯಲ್ಲೂ ಏಕತೆಯನ್ನು ಬೆಳೆಸಿಲ್ಲವೇ? ಇಷ್ಟು ದೊಡ್ಡ ಸಂವಿಧಾನ ಹೊಂದಿಯೂ ನಿರಂತರತೆಗೆ ಮತ್ತು ಸ್ಥಿರತೆಗೆ ಭರಪೂರ ಒತ್ತುಕೊಡಲಾಗಲಿಲ್ಲವೇ? ಸಂವಿಧಾನದ ಮೂಲ ರಚನೆಯೇ ಬದಲಾಗಬೇಕೆಂಬ ಮಾತುಗಳು ಮೊದಲಿ ನಿಂದಲೂ ಕೇಳಿ ಬರುತ್ತಲೇ ಇದೆ.

ಸಂಸದೀಯ ವ್ಯವಸ್ಥೆಯ ಬದಲಾಗಿ ಅಧ್ಯಕ್ಷೀಯ ವ್ಯವಸ್ಥೆ ಹೆಚ್ಚು ಸ್ಥಿರತೆಯನ್ನು ಕೊಡಬಲ್ಲುದೇ ಎಂಬ ಜಿಜ್ಞಾಸೆಯೂ ನಡೆದುಹೋಗಿದೆ. ಸಂವಿಧಾನ ನಿರೂಪಿಸುವ ಧರ್ಮ ನಿರಪೇಕ್ಷತೆಯು ಸರಿಯಾಗಿಯೇ ಇದ್ದರೂ ಭಾರತದ ಸತ್ತ್ವ, ಪರಂಪರೆ, ಮೌಲ್ಯ, ವಿಲಕ್ಷಣತೆ – ಅಗತ್ಯಗಳಿಗೆ ಸ್ಪಂದಿಸುವಲ್ಲಿ ನಮ್ಮ ಆಡಳಿತ ವ್ಯವಸ್ಥೆಯಲ್ಲಿಯೇ ಲೋಪದೋಷ ಗಳಾಗುವುದಕ್ಕೆ ಅವಕಾಶವಿದೆ. ಭಾರತೀಯ ಸಂಸ್ಕೃತಿಯು ಹಲವು ಸಂಸ್ಕೃತಿಯ ಸಮ್ಮಿಲನವಾಗಿದ್ದರೂ ಅದ್ವಿತೀಯ ಸಾಂಸ್ಕೃತಿಕ ಏಕತೆಯನ್ನು
ಮೂರ್ತಗೊಳಿಸುವಂಥ ಕಾರ್ಯವನ್ನು ಸಂವಿಧಾನ ಮಾಡಬೇಕಾಗಿತ್ತು.

ಜಾತಿ, ಧರ್ಮ, ಮತಾತೀತ ಏಕರೂಪದ ನಾಗರಿಕ ಸಂಹಿತೆಯನ್ನು ಸಂವಿಧಾನದಲ್ಲಿ ಒಳಗೊಳ್ಳಿಸಬೇಕಾಗಿತ್ತು. ಪ್ರತಿಯೊಂದರ ಅನನ್ಯತೆ, ಅಸ್ಮಿತೆ ಮುಖ್ಯವಾಹಿನಿಗೆ ಬಂದರೂ ಸಮಾನತೆಯೇ ಪ್ರಧಾನವಾಗಿರಬೇಕಿತ್ತು. ರಾಷ್ಟ್ರೀಯತೆಯ ವಿಷಯದಲ್ಲಿ ಯಾವುದೇ ಬಗೆಯ ಅಪಸೊಲ್ಲುಗಳಿಗೆ ಆಸ್ಪದವಿಲ್ಲದಂತೆ ಪರಾಮರ್ಶೆಯಾಗಬೇಕಿತ್ತು. ಇವೆಲ್ಲ ಆಗಿಲ್ಲವೆಂದು ಭಾವಿಸುವ ಅಗತ್ಯ
ವಂತೂ ಖಂಡಿತವಾಗಿಯೂ ಇಲ್ಲ. ಆದರೆ ಉದ್ದೇಶಿತ ಗುರಿ ಸಾಧನೆಯಾಗಲಿಲ್ಲ ಎಂಬುದು ಮಾತ್ರ ಕಣ್ಣಮುಂದಿನ ಸತ್ಯ!

ಮುಖ್ಯವಾಗಿ, ದೇಶೀಯತೆ, ರಾಷ್ಟ್ರೀಯತೆಗೆ ಅಗ್ರಮನ್ನಣೆ ಸಿಗಬೇಕು. ಸಾಂಸ್ಕೃತಿಕ ಅರಿವಿನೊಂದಿಗೆ ಸಮಷ್ಟಿಯ ಚಿಂತನೆಯಲ್ಲಿ ಕೂಡಿ ಬದುಕುವಂಥ ಪರಾಮರ್ಶೆ ಸಂವಿಧಾನದಲ್ಲಿ ಆಗಬೇಕಿದೆ. ಇಂಡಿಯಾ ಬೇರೆ, ಹಿಂದೂಸ್ಥಾನ ಬೇರೆ ಎಂಬ ಸುಳ್ಳುಕಲ್ಪನೆ ನಾಶವಾಗಬೇಕು. ನಮ್ಮ ಸಾಂಸ್ಕೃತಿಕ ಮೂಲದ ಅಂಶಗಳು ರಾಷ್ಟ್ರದ ಪ್ರಗತಿಗೆ ಎರವಾಗಬೇಕು.

ರಾಷ್ಟ್ರವಿದ್ದರೆ ನಾವು; ನಾವಿದ್ದರೆ ರಾಷ್ಟ್ರ ಎಂಬ ತಳಹದಿಯಲ್ಲಿ ತಿದ್ದುಪಡಿ ಆಗಬೇಕಿದೆ. ಅತ್ಯಂತ ಸಂತೋಷದ ಸಂಗತಿ
ಯೇನೆಂದರೆ, ಎಪ್ಪತ್ತು ವರ್ಷಗಳಿಂದ ದೇಶವನ್ನು ಹಿಂಜಿಹಿಪ್ಪೆ ಮಾಡಿದ ಕಾಶ್ಮೀರದ ಸ್ವಾಯತ್ತತೆಯ 370ನೆಯ ವಿಧಿ
ರದ್ದಾದದ್ದು. ಪ್ರತ್ಯೇಕತಾವಾದಿಗಳಿಂದ ಕಾಶ್ಮೀರದ ಹಾಗೂ ರಾಷ್ಟ್ರದ ಜನತೆ ಅನುಭವಿಸಿದ ಕಷ್ಟಕ್ಕೆೆ ಸಮರ್ಪಕವಾದ ಅಂತ್ಯ
ಅತ್ಯಂತ ಸಮಂಜಸವಾಗಿ ನಡೆದು ಹೋದದ್ದು ಸ್ವಾತಂತ್ರ್ಯಾ ನಂತರದ ಮಹತ್ವದ ಮೈಲಿಗಲ್ಲು. ಅದೇ ರೀತಿ ಜಾತ್ಯತೀತ ತೆಯನ್ನೇ ಫ್ಯಾಷನ್ ಎಂದುಕೊಂಡು ದೇಶವಾಳಿ, ಹದತಪ್ಪಿಸಿದ ನೆಹರೂ ಪ್ರಣೀತ ಪ್ರಭೃತಿಗಳ ಸೆಕ್ಯುಲರಿಸಂಗೆ ತಿಲಾಂಜಲಿಯನ್ನು ತುರ್ತಾಗಿ ಬಿಡಬೇಕಾಗಿದೆ.

ಭಾರತದ ಅಸ್ಮಿತೆಯನ್ನು ಭಾರತೀಯತೆಯ ನೆಲೆಯಲ್ಲಿ ಗುರುತಿಸುವುದಾದರೆ ಯಾವುದು ಭಾರತೀಯತೆ ಎಂಬ ಪ್ರಶ್ನೆ
ಉದ್ಭವವಾಗುತ್ತದೆ. ಬಹುಸಂಖ್ಯಾತ ಹಿಂದೂಗಳಿರುವ ಈ ಭಾರತವನ್ನು ಹಿಂದೂಗಳ ದೇಶ ಎಂದು ಗುರುತಿಸಿದರೆ, ಅಲ್ಪಸಂಖ್ಯಾತರು ಇಲ್ಲಿದ್ದಾರೆಂದ ಮಾತ್ರಕ್ಕೆ ಭಾರತೀಯತೆಯನ್ನು ಹೊಂದಿರಲೇಬೇಕು. ಆದರೆ, ಅಲ್ಪಸಂಖ್ಯಾತರು ತಮ್ಮ
ಧರ್ಮದ ನಿಯಮಗಳನ್ನು ಅತ್ಯಂತ ಕಾಠಿಣ್ಯವಾಗಿ ಅನುಸರಿಸುವಾಗ ಪ್ರತಿಯೊಂದರ ಅಸ್ತಿತ್ವಕ್ಕೆ ಪ್ರತ್ಯೇಕವಾದ ವಿನ್ಯಾಸಗಳು ಹುಟ್ಟಿಕೊಳ್ಳುತ್ತವೆ. ಧರ್ಮದ ಸಂವಿಧಾನವನ್ನೇ ಆತ್ಯಂತಿಕವೆಂದು ಭಾವಿಸುವ ಮುಸ್ಲಿಮರ, ಈ ದೇಶದ ಸಂವಿಧಾನದ ಅನುಸರಣೆ ಪದೇ ಪದೇ ಪ್ರಶ್ನೆಯಾಗುತ್ತದೆ.

ಧರ್ಮದ ಸಂವಿಧಾನವನ್ನೇ ನೆಚ್ಚಿಕೊಂಡು, ಆತ್ಯಂತಿಕವಾದ ನಿಲುವನ್ನು ಸ್ವೀಕರಿಸುವ ಮುಸ್ಲಿಮರು ಈ ರಾಷ್ಟ್ರದ ಸಂವಿಧಾನಕ್ಕೆ ಬದ್ಧರಾಗಿರಲೇಬೇಕು ಎಂಬುದನ್ನು ಅವರಿಗೆ ಅರ್ಥಮಾಡಿಸಲು ಸಂವಿಧಾನದ ಮೂಲಕವೇ ಸಾಧ್ಯವಾಗುವಂತೆ ಸಂವಿಧಾನ ಪರಾಮರ್ಶೆಯಾಗ ಬೇಕಿದೆ. ಈ ಅರಿವು ಅವರಲ್ಲಿ ಅಷ್ಟು ಸಹಜವಾಗಿ ಕಾಣಿಸದೇ ಇರುವುದರಿಂದ ಏಕತೆಯೆಂಬುದು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇನ್ನೂ ಆಳದಲ್ಲೇ ಇದೆ. ಆ ಸಮುದಾಯದ ವೋಟಿಗಾಗಿ ಅಲ್ಪಸಂಖ್ಯಾತರೆಂದು ಅವರನ್ನು ಯಾವ ನೆಲೆಯಲ್ಲೂ ಸಹಿಸಿಕೊಂಡು ಬರುತ್ತಿರುವುದು ಇತರರಿಗೆ ದೊಡ್ಡ ಅನ್ಯಾಯವಾಗಿದೆ.

ಇದು ಸಾರ್ವಭೌಮತ್ವದ ಪ್ರಶ್ನೆ. ದಿನಗಳೆದಂತೆ ಅವರ ಜನಸಂಖ್ಯೆೆ ಏರುತ್ತಿರುವುದು, ಸರಕಾರಗಳು ಅವರಿಗೇ ಅಂತ ಕೊಡ ಮಾಡುವ ಸವಲತ್ತು ಸೌಲಭ್ಯಗಳು ಇತರರಲ್ಲಿ ಅಸಹನೆಯನ್ನು ಹೆಚ್ಚಿಸುತ್ತಿದೆ. ಅವರನ್ನು ಹಾಗೆ ಓಲೈಸುವುದು ಕೂಡ ಪಕ್ಷ ರಾಜಕೀಯದ (ವೋಟಿಗಾಗಿ) ನೆಲೆಯಲ್ಲಿ ಅಧಿಕಾರ ಹಿಡಿಯುವುದು ಅನುಕೂಲಕರವಾಗುತ್ತದೆ ಎಂದು ಮೊದಲಿಂದಲೂ  ಅವರನ್ನು  ಕೆಲವು ರಾಜಕೀಯ ಪಕ್ಷಗಳು ಜಾತ್ಯತೀತ ಸಿದ್ಧಾಂತ ದಡಿಯಲ್ಲಿ ತಮಗೆ ಅನುಕೂಲವಾಗುವಂತೆ ಅವರೇನೇ ಮಾಡಿ ದರೂ ಒಪ್ಪುತ್ತ ಬಂದಿರುವುದರಿಂದ ರಾಷ್ಟ್ರದಲ್ಲಿ ಏಕತೆಯೆಂಬುದು ಕಗ್ಗಂಟಾಗಿಯೇ ಇದೆ. ಅದು ಎಷ್ಟೆೆಂದರೆ, ಅಂತಾ ರಾಷ್ಟ್ರೀಯ ಸಮಸ್ಯೆೆಗಿಂತಲೂ ದೊಡ್ಡದಾಗಿ ಕಾಡುತ್ತಿದೆ. ನಮ್ಮೊಂದಿಗೆ ಹಲ್ಲು ಮಸೆಯುವ, ಕಿಡಿಕಾರುವ, ಶತ್ರುವಾದ ಚೀನಾ,
ಪಾಕಿಸ್ತಾನವನ್ನು ಬೆಂಬಲಿಸಿ, ಅವರ ಪರ ದನಿಯೆತ್ತುವವರೂ ಈ ದೇಶದಲ್ಲಿ ಇದ್ದಾರೆ!

ಇವರೆಲ್ಲರೂ ಭಯೋತ್ಪಾದಕರೇ! ಇಲ್ಲಿಯ ಬಹುಪಾಲು ಮುಸ್ಲಿಮರು ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳು ತ್ತಾರೆಂಬುದು ಈಗ ಬಯಲಾದ ಸತ್ಯ. ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಂಡು ರಾಷ್ಟ್ರಹಿತದ ಸಮರಸತೆಯಲ್ಲಿ ಬದುಕು ವುದು ನಮಗೆ ಈ ರಾಷ್ಟ್ರದಲ್ಲಿ ಸಾಧ್ಯ ವಾಗುವುದಿಲ್ಲ ಎಂದಾದರೆ ಅಲ್ಪಸಂಖ್ಯಾತರಾದ ಮುಸ್ಲಿಂ ಬಾಂಧವರು ರಾಷ್ಟ್ರೀಯ ಮುಖ್ಯವಾಹಿನಿಗೆ ಬಂದ ಹೊರತು ಅವರಿಗೂ ನಮಗೂ ಉಳಿಗಾಲವಿಲ್ಲ. ಎಲ್ಲಾ ಸಮಸ್ಯೆಗಳ ಮೂಲವಿರುವುದೇ ಪಾಕಿಸ್ತಾನದ ಸೃಷ್ಟಿಯಲ್ಲಿ. ಕಾಶ್ಮೀರ ಸಮಸ್ಯೆ ಹುಟ್ಟಬಾರದಿತ್ತು.

ಹುಟ್ಟಿ ಅದೂ ಮತ್ತೊಂದು ಪಾಕಿಸ್ತಾನವಾಗಿ ಕಾಡಿ ಈಗ ತಹಬಂದಿಗೇನೋ ಬಂದಿದೆ. ಆದರೂ ಪ್ರತ್ಯೇಕತೆಯ ಹೊಗೆ ಕೆಲವರ ಮನದಲ್ಲಿದೆ. ಅಸ್ಸಾಂ, ಮಿಝೋರಾಂ, ತ್ರಿಪುರಗಳನ್ನು ಕಮ್ಯೂನಿಸ್ಟರು, ಕ್ರೈಸ್ತರು ಭಾರತದಿಂದ ಬೇರ್ಪಡಿಸಲು ಪ್ರಯತ್ನಿಸು ತ್ತಿರುವುದು ಗೊತ್ತೇ ಇದೆ. ಇವುಗಳಿಗೆಲ್ಲ ಕಾಂಗ್ರೆಸ್ಸೇ ಕಾರಣವೆಂದರೆ ಸಿಟ್ಟು ಬರುತ್ತದೆ. ಪ್ರಜಾಪ್ರಭುತ್ವ ರಾಷ್ಟ್ರವಾದರೂ ಪಶ್ಚಿಮ ಬಂಗಾಳ, ಕೇರಳದಲ್ಲಿ ಕಮ್ಯುನಿಸ್ಟ್‌ ಪಕ್ಷಗಳು ಗೆದ್ದು ಸರಕಾರವನ್ನು ನಡೆಸುತ್ತವೆ.

ಯೋಚಿಸಿ ನೋಡಿ: ಕಮ್ಯುನಿಸ್ಟ್‌ ದೇಶದಲ್ಲಿ ಪ್ರಜಾಪ್ರಭುತ್ವದ ಸರಕಾರವನ್ನು ನಡೆಸುವುದು ಸಾಧ್ಯವೇ? ಆದರೆ ಭಾರತದಲ್ಲಿ
ಎಲ್ಲವೂ ಸಾಧ್ಯವಿದೆ. ಬಹುಸಂಖ್ಯಾ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನ ಅಲ್ಪಸಂಖ್ಯಾತರಿಂದಾಗುತ್ತದೆ.
ಪ್ರತಿಯಾಗಿ ಬಹುಸಂಖ್ಯಾತ ರಿಂದಲೂ ನಡೆಯುತ್ತದೆ. ಹೀಗಾದರೆ ಏಕತೆ ಹೇಗೆ ಸಾಧ್ಯ? ಮುಖ್ಯವಾಹಿನಿಯಲ್ಲಿ ಹಿಂದೂ ಸಂಸ್ಕೃತಿಯ ಬೇರೆ ಬೇರೆ ಶಾಖೆಗಳಾಗಿ ಭಾರತದ ಅಸ್ತಿತ್ವವಿದ್ದರೂ ಬಹುಸಂಸ್ಕೃತಿಯಲ್ಲೂ ಏಕಸಂಸ್ಕೃತಿಯನ್ನು ಮೆರೆಯ ಬೇಕು. ರಾಷ್ಟ್ರೀಯ ಏಕತೆಯ ವಿಚಾರದಲ್ಲಿ ಎಡಪಂಥೀಯ ಹಿನ್ನೆಲೆಯುಳ್ಳ ರಾಜಕೀಯ ಪಕ್ಷಗಳು ಅಧಿಕಾರದಲ್ಲಿರುವಾಗ ಯಾವ ಕ್ರಮಕ್ಕೂ ಮುಂದಾಗದೆ ನುಣುಚಿಕೊಳ್ಳುವ ಕೌಶಲವನ್ನು ಮೆರೆದಿರುವುದರಿಂದ ಸುಳ್ಳು ಸೆಕ್ಯುಲರಿಸಂ, ವೋಟು ಬ್ಯಾಂಕು ರಾಜಕಾರಣ, ದೇಶದ್ರೋಹಿಗಳ ತುಷ್ಟೀ ಕರಣಗಳ ಅಂಧನೀತಿಯಿಂದ ಈ ಹೊತ್ತಿನವರೆಗೂ ರಾಷ್ಟ್ರದ ಸಮಗ್ರತೆಯಲ್ಲಿ ಬಿಡಿಸ ಲಾರದ ಕಗ್ಗಂಟೊಂದು ಹಾಕಿಕೊಂಡಿದೆ.

ಈ ಮಾತು ಪಕ್ಷಾತೀತವಾದರೂ ಕೆಲವು ಪಕ್ಷಗಳು ಮಾತ್ರ ಈ ಕಗ್ಗಂಟಿಗೆ ಪ್ರಧಾನ ಪಾತ್ರ ವಹಿಸಲೇಬೇಕು. ಅವು ಯಾವುದೆಂಬುದು ನಿಮಗೆ ಬಿಟ್ಟ ವಿಚಾರ. ನಮ್ಮದು ಸಾಂಸ್ಕೃತಿಕ ರಾಷ್ಟ್ರದ ಕಲ್ಪನೆಯಾಗಿದೆ. ಹಿಂದೂಧರ್ಮ ಇತರ ಮತಗಳಂತೆ ಅಲ್ಲ. ಭಾರತೀಯ ಶ್ರದ್ಧೆಯ ಆಳದಲ್ಲಿ ಹಿಂದೂಗಳು ಸಹಕಾರಾತ್ಮಕ ಜೀವನ ಮೌಲ್ಯಗಳನ್ನು ಇಟ್ಟುಕೊಂಡು ಬದುಕುವವರು. ನಮ್ಮದು ಸ್ಪರ್ಧಾತ್ಮಕ ಬದುಕಲ್ಲ. ಭ್ರಮೆಯ ಬದುಕಲ್ಲ. ಇದು ಯಾರಿಗೂ ಮಾರಕವಾಗಿಲ್ಲ; ಆಗುವುದೂ ಇಲ್ಲ. ಆಕ್ರಮಣ
ವಾಗಿಲ್ಲ; ಆಗುವುದೂ ಇಲ್ಲ ಸಂವಿಧಾನದಲ್ಲಿ ಭಾರತೀಯ ಮೂಲದ ಚಿಂತನೆಗಳಿಗಿಂತ ಪಶ್ಚಿಮದ ಚಿಂತನೆಗಳೇ ಇವೆ. ಇವು
ರಾಷ್ಟ್ರದ ಪ್ರಗತಿಗೆ ಅಡಚಣೆಯಾಗಿ ನಿಂತಿವೆ ಎಂದು ಖ್ಯಾತ ಚಿಂತಕರಾದ ಎಸ್.ಗುರುಮೂರ್ತಿ ಹೇಳುತ್ತಾರೆ. ಸುಮಾರು
ಇಪ್ಪತ್ತು ಘನದೋಷಗಳನ್ನು ಅವರು ಉಲ್ಲೇಖಿಸುತ್ತಾರೆ. ತಾನೇ ರಚಿಸಿದ ಸಂವಿಧಾನದ ಬಗ್ಗೆ ಅಂಬೇಡ್ಕರ್ ಹೇಳಿದ ಒಂದು
ಮಾತಿದು: ಈಗಿರುವ ನಮ್ಮ ರಾಜ್ಯಾಂಗ ನಾನು ಸಿದ್ಧಪಡಿಸಿದ್ದು ಯಾರಿಗೂ ತೃಪ್ತಿಯನ್ನು ತಂದಿಲ್ಲ.

ಇದನ್ನು ಸುಡುವುದಕ್ಕೆ ಅವಕಾಶವಿದ್ದರೆ ನಾನೇ ಮೊದಲು ಬಂದು ಸುಡುತ್ತೇನೆ. ವರ್ತಮಾನದ ಭಾರತಕ್ಕೆ ಜಾತಿ, ಮತ, ಧರ್ಮ, ಪಂಥಗಳ ಮೇಲಾಟ ಬೇಕಿಲ್ಲ. ವೈಚಾರಿಕ ಭಿನ್ನತೆಗಳಲ್ಲಿಯೂ ಕನಿಷ್ಟ ನಾಗರಿಕ ಜೀವನ ಮಟ್ಟವನ್ನು ಎಲ್ಲರೂ ಮನುಷ್ಯರೆಂಬ
ನೆಲೆಯಲ್ಲಿ ತಾರತಮ್ಯ ರಹಿತವಾಗಿ ಪಡೆಯುವುದಕ್ಕೆ ಸರಕಾರ ಮುತುವರ್ಜಿ ವಹಿಸಬೇಕು.

ಮೂಲ ಸಂವಿಧಾನದ ಕರಡಿನಲ್ಲಿ ಇಲ್ಲದ ಪ್ರಸ್ತಾವನೆಯಲ್ಲಿ ಸೆಕ್ಯುಲರ್ ಸ್ಪರ್ಶವಿದೆ. ಆದರೆ, ರಾಷ್ಟ್ರಾದ್ಯಂತ ಊರಿಗೊಂದು
ಜಾತಿ ಉಪಜಾತಿಗಳು ಹುಟ್ಟಿಕೊಂಡಿವೆ. ಶಿಕ್ಷಣ, ಸರಕಾರಿ ಮತ್ತು ಉದ್ಯೋಗ ಮತ್ತು ಸಾರ್ವಜನಿಕ ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಜಾತಿಯನ್ನು ಆಧರಿಸಿ ಈ ರಾಷ್ಟ್ರ ವ್ಯವಹರಿಸುತ್ತದೆ. ಜಾತಿ ಬದಲಿಗೆ ಮೆರಿಟ್ ಮತ್ತು ಆದಾಯವನ್ನು ಆಧರಿಸಿ ವ್ಯವಹರಿಸುವಂಥ ಗುರುತರ ಬದಲಾವಣೆಯಾಗಬೇಕು. ದೇಶದಲ್ಲಿ ಯಾವುದೇ ಒಂದು ಒಳ್ಳೆಯ ಕೆಲಸವನ್ನು ಮಾಡಲು ಮುಂದಾದರೆ ಅದರಲ್ಲಿ
ಏನೋ ದುರುದ್ದೇಶವಿದೆ ಎಂದು ನೋಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗಿದೆ ಎಂದು ನ್ಯಾ.ರಾಮಜೋಯಿಸರು 2000ರಲ್ಲಿ
ಮಾನ್ಯ ವಾಜಪೇಯಿ ಯವರ ಸರಕಾರ ‘ಸಂವಿಧಾನದ ಪರಾಮರ್ಶೆ’ ಗೆ ಮುಂದಾದಾಗ ಆಡಿದ್ದರು.

1950ರಲ್ಲಿ ಸಿದ್ಧವಾದ ಸಂವಿಧಾನವನ್ನು ಕಾಲಕ್ಕನುಸರಿಸಿ ತಿದ್ದುಪಡಿ ಅಥವಾ ಪರಾಮರ್ಶೆ ಮಾಡಬಾರದೆಂಬುದು ಸಮಂಜಸ ವಲ್ಲ. ಅತೀ ಮೂರ್ಖತನದ ಮಾತದು. ತಲೆಯಿದ್ದವರು ಆಡುವ ಮಾತದಲ್ಲ. ವರ್ತಮಾನದ ಸಮಸ್ಯೆಗಳಿಗೆ ಮೂಲ ಕಾರಣ ವನ್ನು ಹುಡುಕುತ್ತಾ ಹೋದರೆ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯ ನಾಯಕರಲ್ಲಿ ಕಾಣುವ ವೈಚಾರಿಕ ಭಿನ್ನತೆ ಗಳು, ಸ್ವಾತಂತ್ರ್ಯ ಪ್ರಾಪ್ತಿಯೊಂದಿಗೆ ಪ್ರಾಪ್ತವಾದ ದೇಶ ವಿಭಜನೆ, ಪಾಕಿಸ್ತಾನದೊಂದಿಗಿನ ಯುದ್ಧ, ತದನಂತರದ ರಾಜಕೀಯ ಬೆಳವಣಿಗೆಗಳು. ಅವು ಸೃಷ್ಟಿಸಿದ ಅವಾಂತರ ಗಳು. ಇವನ್ನೆಲ್ಲ ಸರಿಪಡಿಸೋದು ಹೇಗೆ ಸಾಧ್ಯ?’ ‘ಎಡ’ ಮತ್ತು ‘ಬಲ’ಗಳ ಘರ್ಷಣೆಯ ಮಧ್ಯೆ ರಾಷ್ಟ್ರದ ಏಕತೆಯ ಬಲ ಕುಸಿಯುತ್ತಿದೆ. ಮುಖ್ಯವಾಗಿ ವಸತಿ, ಶಿಕ್ಷಣ, ಉದ್ಯೋಗ, ಸಾಮಾಜಿಕ ಸಾಮರಸ್ಯ,
ಧರ್ಮಾ ಚರಣೆಗಳು, ನಂಬಿಕೆಗಳು, ರಾಷ್ಟ್ರಹಿತ – ರಾಷ್ಟ್ರಕ್ಷೇಮ – ರಾಷ್ಟ್ರಪ್ರೇಮ, ಏಕತೆಗೆ ಸಂಬಂಧಿಸಿ ಒಮ್ಮೆ ಸಂವಿಧಾನದ
ಪರಾಮರ್ಶೆಯಾಗುವುದರ ಮೂಲಕ ಭಾರತದ ಅಸ್ಮಿತೆಯನ್ನು ಹೊಸ ಅರಿವಿನಲ್ಲಿ ಗುರುತಿಸಿಕೊಳ್ಳಬೇಕಾಗಿದೆ. ಅದಕ್ಕೀಗ
ಸೂಕ್ತವಾದ ಕಾಲ ಸನ್ನಿಹಿತವಾಗಿದೆ.