ಬೆಳಗಾವಿ: ಬೆಳಗಾವಿ (Belagavi news) ಜಿಲ್ಲೆಯ ತಹಶೀಲ್ದಾರ್ ಕಚೇರಿಯೊಂದರಲ್ಲಿ ರುದ್ರಣ್ಣ ಎಂಬ ಅಧಿಕಾರಿ ನೇಣು (Rudranna Self Harming) ಹಾಕಿಕೊಂಡ ಪ್ರಕರಣದ ತನಿಖಾ ಜವಾಬ್ದಾರಿಯನ್ನು ಪೊಲೀಸ್ ಆಯುಕ್ತರು ಎಸಿಪಿಗೆ ವಹಿಸಿದ್ದಾರೆ. ಪ್ರಕರಣದ ಹಿನ್ನೆಲೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbaalkar) ಮತ್ತಿತರರ ಹೆಸರು ಕೇಳಿಬಂದಿರುವುದು, ತನಿಖೆ (Crime news) ಇನ್ನಷ್ಟು ಗಂಭೀರತೆ ಪಡೆದುಕೊಂಡಿದೆ.
ಮೃತ ಅಧಿಕಾರಿಯ ಮೊಬೈಲ್ ಪತ್ತೆ ಮಾಡಲಾಗಿದೆ. ಒಂದು ದಿನದ ಹಿಂದಷ್ಟೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಮೂವರ ವಿರುದ್ಧ ಇಲ್ಲಿನ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಪಿಎ ಗಳನ್ನು ಬಿಟ್ಟು ಅಧಿಕಾರಿಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ನೀಡುವಂತೆ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.
ಮೃತ ಅಧಿಕಾರಿ ಡೆತ್ ನೋಟ್ ಬರೆದಿಟ್ಟು ಸಾವಿಗೀಡಾಗಿದ್ದರು. ಗ್ರೂಪ್‌ನಲ್ಲಿ ವಾಟ್ಸಾಪ್ ಸಂದೇಶ ಹಾಕಿ ತಡರಾತ್ರಿ ಅಧಿಕಾರಿ ರುದ್ರಣ್ಣ ಅವರು ಸಾವಿಗೆ ಶರಣಾಗಿದ್ದರು. ಡೆತ್‌ನೋಟ್ ವಶಕ್ಕೆ ಪಡೆದಿದ್ದ ಪೊಲೀಸರಿಗೆ ಮೃತ ಅಧಿಕಾರಿಯ ಮೊಬೈಲ್ ಫೋನ್ ಸಿಕ್ಕಿರಲಿಲ್ಲ. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಆಯುಕ್ತರು ಕೇಸಿನ ತನಿಖೆಯನ್ನು ಎಸಿಪಿಗೆ ವಹಿಸಿದ್ದಾರೆ. ಇದರಿಂದ ತನಿಖೆಗೆ ಮತ್ತಷ್ಟು ಚುರುಕುಗೊಳ್ಳುತ್ತಿದೆ. ಇದರಿಂದ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅವರ ಆಪ್ತ ಸೋಮುಗೆ ಸಂಕಷ್ಟ ಹತ್ತಿರವಾಗುತ್ತಿದೆ.
ಇಂದು ಶುಕ್ರವಾರ (ನವೆಂಬರ್ 8) ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಸದ್ಯ ಆರೋಪಿಗಳನ್ನು ಬಂಧಿಸಲು ಪೊಲೀಸರು ತಂಡಗಳನ್ನು ರಚನೆ ಮಾಡಿದ್ದಾರೆ ಎನ್ನಲಾಗಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪಿಎ ಬಿಟ್ಟು ನೀಡುತ್ತಿರುವ ಕಿರುಕುಳ ಸಹಿಸಲಾಗದೇ ಅಧಿಕಾರಿಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಎಫ್‌ಐಆರ್ ಆದರೂ ಈವರೆಗೆ ಒಬ್ಬರನ್ನೂ ಬಂಧಿಸಿಲ್ಲ. ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿಲ್ಲ ಎಂದು ಬಿಜೆಪಿ ವಿಧಾನಸಭೆ ವಿರೋಧಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಆರೋಪಿಸಿದ್ದಾರೆ.
ಕಚೇರಿ ನೌಕರರ ವಾಟ್ಸಾಪ್ ಗ್ರೂಪ್‌ನಲ್ಲಿ ಸೋಮವಾರ ತಡರಾತ್ರಿ ಸಂದೇಶ ಹಾಕಿ ತಹಶೀಲ್ದಾರ್ ಕೂರುವ ಕೊಠಡಿಯಲ್ಲಿ ರುದ್ರಣ್ಣ ನೇಣಿಗೆ ಕೊರಳೊಡ್ಡಿದ್ದರು. ಕಚೇರಿ ಅನ್ಯಾಯ ಸರಿ ಮಾಡಬೇಕು ಎಂದು ಮೂವರ ಹೆಸರನ್ನು ಉಲ್ಲೇಖಿಸಿದ್ದರು. ತಹಶೀಲ್ದಾರ್ ಸೇರಿದಂತೆ ಸಚಿವರ ಆಪ್ತರಿಂದಲೂ ಕಿರುಕುಳಕ್ಕೆ ಒಳಗಾಗಿರುವುದಾಗಿ ಬರೆದಿದ್ದರು.
ಇದನ್ನೂ ಓದಿ: Lakshmi Hebbalkar: ತಹಸೀಲ್ದಾರ್ ಕಚೇರಿ ಸಿಬ್ಬಂದಿ ಆತ್ಮಹತ್ಯೆ ಪ್ರಕರಣ; ನಿಷ್ಪಕ್ಷಪಾತ ತನಿಖೆ ಆಗಲಿ ಎಂದ ಹೆಬ್ಬಾಳ್ಕರ್