ಬಾಗೇಪಲ್ಲಿ: ಇದೇ ತಿಂಗಳ ೨೯ ಶುಕ್ರವಾರ ರಂದು ಪಟ್ಟಣದ ದ್ವಾರಕ ಪಾರ್ಟಿಹಾಲ್ನಲ್ಲಿ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಅದ್ದೂರಿಯಾಗಿ ನಡೆಸಲಾಗುವುದು ಎಂದು ಜನಾಂಗದ ಮುಖಂಡರು ಹಾಗೂ ಮಾಜಿ ತಾಲ್ಲೂಕು ಅಧ್ಯಕ್ಷರಾದ ಶಿವಪ್ಪ ತಿಳಿಸಿದರು.
ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಬುಧವಾರ ಓಬವ್ವ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಬಾಗೇಪಲ್ಲಿ ಪಟ್ಟಣದಲ್ಲಿ ಶುಕ್ರವಾರ ನಡೆಯುವ ಓಬವ್ವ ಜಯಂತಿ ಅಂಗವಾಗಿ ೧೦:೩೦ಕ್ಕೆ ಗೂಳೂರು ವೃತ್ತದಿಂದ ಮೆರವಣಿಗೆ ಹಮ್ಮಿಕೊಳ್ಳ ಲಾಗಿದೆ. ಇದು ಪುರಸಭೆ ವರೆಗೆ ಸಾಗುತ್ತದೆ. ತದನಂತರ ಜನಾಂಗದ ಗಣ್ಯರಿಂದ ದ್ವಾರಕ ಪಾರ್ಟಿ ಹಾಲ್ ನಲ್ಲಿ ವೇದಿಕೆ ಕಾರ್ಯಕ್ರಮ ಇರುತ್ತದೆ ಒನಕೆ ಓಬವ್ವ ಜಯಂತಿಗೆ ಛಲವಾದಿ ಜನಾಂಗದವರೆಲ್ಲಾ ಸೇರಿ ಕೈಜೋಡಿಸಿ ಊರಿನ ಹಬ್ಬದ ರೀತಿಯಲ್ಲಿ ಆಚರಿಸಿ ಒನಕೆ ಓಬವ್ವಳ ಸಾಹಸ, ದಿಟ್ಟತನವನ್ನು ಮುಂದಿನ ಪೀಳಿಗೆಗೆ ಪರಿಚಯಿಸೋಣ ಎಂದರು.
ಪುಷ್ಪಾಲಂಕೃತ ಸಾರೋಟಿನಲ್ಲಿ ಓಬವ್ವಳ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳ ಮೆರವಣಿಗೆ ಇರುತ್ತದೆ. ಛಲವಾದಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಯಂತಿಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ವಿ.ರಮೇಶ್ ಮಾತನಾಡಿ ಒಬವ್ವಳ ಜಯಂತಿ ಮೂಲಕ ಛಲವಾದಿ ಜನಾಂಗದವರು ಒಂದೆಡೆ ಸೇರಿ ಸಂಘಟನೆಯಾಗೋಣ. ಇದರಿಂದ ಮುಂದಿನ ಪೀಳಿಗೆಗೆ ನಮ್ಮ ಜನಾಂಗದ ಚರಿತ್ರೆ ಪರಂಪರೆಯನ್ನು ತಿಳಿಸಿಕೊಡುವ ಅಗತ್ಯವಿದೆ ಎಂದು ಸಲಹೆ ನೀಡಿದರು
ಈ ಸಂದರ್ಭದಲ್ಲಿ ರಮೇಶ, ಟಿ.ರಾಮಪ್ಪ, ಆನಂದ್ ,ನರಸಿಂಹಮೂರ್ತಿ ಹಾಗೂ ಛಲವಾದಿ ಜನಾಂಗದ ಗಣ್ಯರು ಹಾಜರಿದ್ದರು.
ಇದನ್ನೂ ಓದಿ: Chikkaballapur News