Wednesday, 25th December 2024

Shiva Rajkumar: ತಿರುಪತಿ ತಿಮ್ಮಪ್ಪನಿಗೆ ಮುಡಿ ಸಮರ್ಪಿಸಿದ ಶಿವಣ್ಣ- ಗೀತಾ

shiva rajkumar

ಬೆಂಗಳೂರು: ಹ್ಯಾಟ್ರಿಕ್‌ ಹೀರೋ ಶಿವರಾಜ್​ಕುಮಾರ್ (Shiva Rajkumar) ಹಾಗೂ ಪತ್ನಿ ಗೀತಾ ಅವರು ತಿರುಪತಿಗೆ (Tirupati Temple) ತೆರಳಿ ತಿಮ್ಮಪ್ಪನ (Tirupati Timmappa) ದರ್ಶನ ಮಾಡಿದ್ದಾರೆ. ಇಡೀ ಕುಟುಂಬದ ಜೊತೆ ಶ್ರೀನಿವಾಸನ ಸನ್ನಿಧಿಗೆ ತೆರಳಿರುವ ಅವರು ಅಲ್ಲಿ ಮುಡಿ ಕೊಟ್ಟಿದ್ದಾರೆ.

ಶಿವಣ್ಣ ಜೊತೆಗೆ ಗೀತಾ ಶಿವರಾಜ್​ಕುಮಾರ್ ಮತ್ತಿತರರು ಕೂಡ ಮುಡಿ ನೀಡಿದ್ದು, ಈ ಸಂದರ್ಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಶಿವಣ್ಣ ಸದ್ಯದಲ್ಲೇ ತಮ್ಮ ಅನಾರೋಗ್ಯದ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ ಎನ್ನಲಾಗಿದ್ದು, ಅದಕ್ಕೂ ಮುನ್ನ ತಿರುಪತಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ.

ಶಿವಣ್ಣನ ನಟನೆಯ ‘ಭೈರತಿ ರಣಗಲ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದ್ದು, ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ ಅವರು ನಟಿಸಿರೋ ‘45’ ಚಿತ್ರದ ಶೂಟಿಂಗ್ ಕೂಡ ಪೂರ್ಣಗೊಂಡಿದ್ದು, ಈ ಸಿನಿಮಾ ಕೂಡ ಶೀಘ್ರವೇ ರಿಲೀಸ್ ಆಗುವ ಸಾಧ್ಯತೆ ಇದೆ. ಬೇರೆ ಹಲವಾರು ಪ್ರಾಜೆಕ್ಟ್‌ಗಳು ಲೈನ್‌ನಲ್ಲಿದ್ದು, ಇವುಗಳ ಶೂಟಿಂಗ್‌ ಆರಂಭವಾಗಿಲ್ಲ.

ಶಿವರಾಜ್​ಕುಮಾರ್ ಈಗಾಗಲೇ ತಮಗಿರುವ ಹಲವು ಸಿನಿಮಾ ಕಮಿಟ್​​ಮೆಂಟ್​ಗಳನ್ನು ಪೂರ್ಣಗೊಳಿಸಿದ್ದಾರೆ. ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ವಿದೇಶಕ್ಕೆ ತೆರಳುವ ಮುನ್ನ ಕೆಲವು ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ. ಇನ್ನು ಕೆಲವು ಸಿನಿಮಾ ಕೆಲಸಗಳನ್ನು ಮುಂದಕ್ಕೆ ಹಾಕಿದ್ದಾರೆ.

ಶಿವಣ್ಣ ತಮ್ಮನ್ನು ಬಾಧಿಸುತ್ತಿರುವ ಅನಾರೋಗ್ಯ ಏನು ಎಂಬುದನ್ನು ರಿವೀಲ್‌ ಮಾಡಿಲ್ಲ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದರು. ಚಿಕಿತ್ಸೆಗೆ ಅಮೆರಿಕಕ್ಕೆ ತೆರಳಬೇಕಿದೆ ಎಂದಿದ್ದರು. ಚಿಕಿತ್ಸೆಯಲ್ಲಿ ನಾಲ್ಕಾರು ಸಿಟ್ಟಿಂಗ್‌ ಇವೆ ಎಂದು ತಿಳಿಸಿದ್ದರು. ಈ ಚಿಕಿತ್ಸೆ ತುಸು ದೀರ್ಘಾವಧಿ ತೆಗೆದುಕೊಳ್ಳುವ ಸಾಧ್ಯತೆಗಳಿದ್ದು, ಇದರ ನಡುವೆ ಅವರು ಯಾವುದೇ ಸಿನಿಮಾ ಶೂಟಿಂಗ್‌ ನಡೆಸದೆ ವಿಶ್ರಾಂತಿ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ಹೀಗಾಗಿ ಶಿವರಾಜ್​ಕುಮಾರ್ ಅವರು ಕೆಲವು ತಿಂಗಳು ನಟನೆಯಿಂದ ದೂರ ಇರುವ ನಿರ್ಧಾರಕ್ಕೆ ಬಂದಿದ್ದು, ಚಿಕಿತ್ಸೆ ಹಾಗೂ ಸಂಪೂರ್ಣ ಚೇತರಿಕೆಯ ಬಳಿಕ ಮರಳಿ ನಟನೆಯತ್ತ ಗಮನ ಹರಿಸಲಿದ್ದಾರೆ ಎಂದು ಗೊತ್ತಾಗಿದೆ.

ಇದನ್ನೂ ಓದಿ: Shiva Rajkumar: ಶಿವರಾಜ್‌ ಕುಮಾರ್‌ ಕಾಲಿಗೆ ನಮಸ್ಕರಿಸಿದ ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ಬಚ್ಚನ್‌