Thursday, 19th September 2024

ಒಂದೇ ನಿಮಿಷದಲ್ಲಿ ಎರಡು ಗೋಲು: ಹೈದರಾಬಾದ್ ಎಫ್‌ಸಿಗೆ ರೋಚಕ ಜಯ

ಪಣಜಿ: ಕೊನೆ ಹಂತದಲ್ಲಿ ಒಂದೇ ನಿಮಿಷದಲ್ಲಿ ಎರಡು ಗೋಲುಗಳನ್ನು ದಾಖಲಿಸಿ ಅಮೋಘ ಪ್ರದರ್ಶನ ನೀಡಿದ ಅರಿಡಾನೆ ಸಂಟಾನ ಸಾಹಸದಿಂದ ಹೈದರಾಬಾದ್ ಎಫ್‌ಸಿ ಈಸ್ಟ್ ಬೆಂಗಾಳ ಎಫ್‌ಸಿ ವಿರುದ್ಧ ಇಂಡಿಯನ್ ಸೂಪರ್ ಲೀಗ್ನಲ್ಲಿ 3-2 ಗೋಲುಗಳ ಅಂತರದಿಂದ ರೋಚಕ ಜಯ ದಾಖಲಿಸಿತು.

ತಿಲಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸಂಟಾನ 56ನೇ ನಿಮಿಷದಲ್ಲಿ ಎರಡು ಗೋಲು ಗಳಿಸಿದರೆ, ಹಾಲಿ ಚರಣ್ ನರ್ಝರಿ 68ನೇ ನಿಮಿಷದಲ್ಲಿ ಗೋಲು ಗಳಿಸುವುದರೊಂದಿಗೆ ಹೈದರಾಬಾದ್ ಗೆಲುವು ಖಚಿತಪಡಿಸಿದರು. ಹೈದರಾಬಾದ್ ಈ ಋತುವಿನಲ್ಲಿ ಎರಡನೇ ಜಯ ದಾಖಲಿಸಿತು. ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿತು.

ಮತ್ತೊಂದೆಡೆ ಬಂಗಾಳ ತಂಡ 11 ತಂಡಗಳಿರುವ ಟೂರ್ನಿಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈಸ್ಟ್ ಬಂಗಾಳದ ಪರ ಜಾಕಸ್ ಮಘೋಮಾ ಅವಳಿ ಗೋಲು ಗಳಿಸಿದರೂ ತಂಡಕ್ಕೆ ಗೆಲುವು ಒಲಿಯಲಿಲ್ಲ.