Friday, 10th January 2025

Donald Trump: ಹಶ್‌ ಪ್ರಕರಣದಲ್ಲಿ ತಪ್ಪಿದ ಜೈಲುಶಿಕ್ಷೆ; ಟ್ರಂಪ್‌ಗೆ ಬಿಗ್‌ ರಿಲೀಫ್‌!

ವಾಷಿಂಗ್ಟನ್‌: ನ್ಯೂಯಾರ್ಕ್‌ನಲ್ಲಿ ಹಶ್‌ ಹಣ ವಂಚನೆ (Hush Money Case) ಪ್ರಕರಣದ ತೀರ್ಪು ಹೊರಬಿದ್ದಿದ್ದು, ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಕ್ಲೀನ್‌ ಚಿಟ್‌ ಸಿಕ್ಕಿದೆ. ನವೆಂಬರ್‌ನಲ್ಲಿ ನಡೆದ ಅಮೆರಿಕದ ಅಧ್ಯಕ್ಷೀಯ (America President) ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ (Donald Trump) ಜಯಭೇರಿ ಬಾರಿಸಿದ್ದು, ಜನವರಿ 20ರಂದು 2ನೇ ಬಾರಿಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅದಕ್ಕೂ ಮೊದಲು ಟ್ರಂಪ್‌ ಜೈಲುಪಾಲಾಗುವ ಭೀತಿ ಎದುರಾಗಿತ್ತು. ಆದರೆ ಇಂದಿನ ಕೋರ್ಟ್‌ ತೀರ್ಪಿನಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ.

ಏನಿದು ಅಕ್ರಮ ಹಣ ವರ್ಗಾವಣೆ ಪ್ರಕರಣ ?

ನೀಲಿ ಚಿತ್ರ ತಾರೆ ಸ್ಟೊರ್ಮಿ ಡೇನಿಯಲ್ಸ್‌ ಜತೆ ಟ್ರಂಪ್‌ ಲೈಂಗಿಕ ಸಂಬಂಧ ಹೊಂದಿದ್ದು, ಅದನ್ನು ಮುಚ್ಚಿಹಾಕಲು 2016ರ ಚುನಾವಣಾ ಪ್ರಚಾರದ ಸಮಯದಲ್ಲಿ ಟ್ರಂಪ್‌ ತಮ್ಮ ವಕೀಲ ಮೈಕೆಲ್ ಕೋಹೆನ್ ಅವರಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದರು ಎನ್ನುವ ಆರೋಪವಿದೆ. ಇದೀಗ ಆ ಪ್ರಕರಣದ ವಿಚಾರಣೆ ಮುಗಿದಿದ್ದು, ತೀರ್ಪು ಪ್ರಕಟವಾಗಲಿದೆ.

ಟ್ರಂಪ್ ಅವರು ತಮ್ಮ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಈ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದಾರೆ ಮತ್ತು ತಪ್ಪಿತಸ್ಥರಲ್ಲ ಎಂದಿದ್ದರು. ಅಲ್ಲದೇ ಈ ಪ್ರಕರಣವು ಅವರ 2024ರ ಅಧ್ಯಕ್ಷೀಯ ಪ್ರಚಾರವನ್ನು ಹಾನಿ ಮಾಡುವ ಪ್ರಯತ್ನವಾಗಿದೆ ಎಂದು ಅವರು ಹೇಳಿದ್ದರು. ಇನ್ನು ಶುಕ್ರವಾರ, ಟ್ರಂಪ್ ವಕ್ತಾರರು ನ್ಯಾಯಾಧೀಶ ಮಾರ್ಚೆನ್ ಅವರ ಶಿಕ್ಷೆಯ ಆದೇಶವನ್ನು ಟೀಕಿಸಿದ್ದಾರೆ.

ಪ್ರಕರಣದ ವಿರುದ್ಧ ಇತ್ತೀಚಿನ ಹೇಳಿಕೆಯಲ್ಲಿ ಟ್ರಂಪ್ ಇದು ತನ್ನ ಅಧ್ಯಕ್ಷ ಸ್ಥಾನದ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಆಡಳಿತದ ಸಾಮರ್ಥ್ಯಕ್ಕೆ ಅಡ್ಡಿಯಾಗುತ್ತದೆ ಎಂದು ವಾದಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಟ್ರಂಪ್‌ ಅವರು ಅಳವಡಿಸಿಕೊಳ್ಳಬಹುದಾದ ಹಲವಾರು ಕ್ರಮಗಳ ಬಗ್ಗೆ ಸಲಹೆ ನೀಡಲಾಗಿದೆ ಎಂದು ನ್ಯಾಯಮೂರ್ತಿ ಮಾರ್ಚೆನ್ ಹೇಳಿದ್ದಾರೆ . ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವಾಗ ಕ್ರಿಮಿನಲ್ ಪ್ರಕರಣದಿಂದ ವಿಚಲಿತರಾಗುವ ಬಗ್ಗೆ ಟ್ರಂಪ್ ಅವರ ಕಳವಳವನ್ನು ಇದು ಸರಾಗಗೊಳಿಸಬಹುದು.

ಈ ಸುದ್ದಿಯನ್ನೂ ಓದಿ: US Presidential Election 2024: ಪ್ರಚಂಡ ಗೆಲುವಿನತ್ತ ಡೊನಾಲ್ಡ್‌ ಟ್ರಂಪ್‌; ಎರಡನೇ ಬಾರಿ ಅಧ್ಯಕ್ಷ ಪಟ್ಟ ಫಿಕ್ಸ್‌!

Leave a Reply

Your email address will not be published. Required fields are marked *