Friday, 20th September 2024

ಸೆನ್ಸೆಕ್ಸ್ 470.40 ಪಾಯಿಂಟ್ ಕುಸಿತ, ನಿಫ್ಟಿ 152.40 ಪಾಯಿಂಟ್ ಇಳಿಕೆ

ಮುಂಬೈ: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸೋಮವಾರ ಇಳಿಕೆ ಕಂಡಿದೆ.

ಸೆನ್ಸೆಕ್ಸ್ 470.40 ಪಾಯಿಂಟ್ ಕುಸಿದು, 48,564.27 ಪಾಯಿಂಟ್ ಗಳೊಂದಿಗೆ ದಿನದ ವಹಿವಾಟು ಮುಗಿಸಿದೆ. ಇನ್ನು ನಿಫ್ಟಿ 152.40 ಪಾಯಿಂಟ್ ಇಳಿಕೆ ಕಂಡು, 14,281.30 ಪಾಯಿಂಟ್ ನೊಂದಿಗೆ ವ್ಯವಹಾರ ಮುಗಿಸಿದೆ.

900 ಕಂಪೆನಿ ಷೇರುಗಳು ಏರಿಕೆ ಕಂಡಿದ್ದರೆ, 2074 ಕಂಪೆನಿ ಷೇರುಗಳು ಕುಸಿತ ಕಂಡಿವೆ. 144 ಕಂಪೆನಿ ಷೇರು ಗಳಲ್ಲಿ ಬದಲಾವಣೆ ಆಗಿಲ್ಲ. ಎಲ್ಲ ವಲಯದ ಷೇರುಗಳು ಇಳಿಕೆ ಕಂಡವು. ಆ ಪೈಕಿ ಅತಿ ಹೆಚ್ಚು ಪ್ರಮಾಣದ, ಅಂದರೆ 4% ಕುಸಿತ ಕಂಡಿದ್ದು ಲೋಹದ ಸೂಚ್ಯಂಕ. ವಾಹನ, ಪಿಎಸ್ ಯು ಬ್ಯಾಂಕ್ ಮತ್ತು ಫಾರ್ಮಾ ಸೂಚ್ಯಂಕಗಳು ತಲಾ 2 ಪರ್ಸೆಂಟ್ ಇಳಿದವು.