Friday, 20th September 2024

ಕೊಮರೆಪಲ್ಲೆ ಗ್ರಾಮದಲ್ಲಿ 22 ಮಂದಿ ನಿಗೂಢ ಅಸ್ವಸ್ಥ

ಅಮರಾವತಿ: ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ 22 ಮಂದಿ ನಿಗೂಢ ಅಸ್ವಸ್ಥತೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪಶ್ಚಿಮ ಗೋದಾವರಿ ಜಿಲ್ಲೆಯ ದೆಂಡುಲೂರು ಮಂಡಲದ ಕೊಮರೆಪಲ್ಲೆ ಗ್ರಾಮದಲ್ಲಿ 22 ಮಂದಿ ಗುರುವಾರ ರಾತ್ರಿ ನಿಗೂಢ ಅಸ್ವಸ್ಥತೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲರಲ್ಲೂ ಈ ಹಿಂದೆ ಏಲೂರಿನಲ್ಲಿ ಕಾಣಿಸಿಕೊಂಡಿದ್ದ ಅನಾರೋಗ್ಯದ ಲಕ್ಷಣಗಳೇ ಕಾಣಿಸಿವೆ. ಎಲ್ಲ 22 ಮಂದಿಯನ್ನು ಚಿಕಿತ್ಸೆಗೊಳಪಡಿಸಲಾಗಿದ್ದು, ಎಲ್ಲ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

22 ಮಂದಿ ಅಸ್ವಸ್ಥಗೊಂಡ ಸುದ್ದಿ ತಿಳಿಯುತ್ತವೇ ದೆಂಡುಲೂರು ಶಾಸಕ ಅಬ್ಬಯ್ಯ ಚೌದರಿ, ಪಶ್ಚಿಮ ಗೋದಾವರಿ ಜಿಲ್ಲಾಧಿಕಾರಿ ರೇವು ಮುತ್ಯಾಲಪಾಜು, ಡಿಎಂಹೆಒ ಸುನಂದಾ ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಗ್ರಾಮಕ್ಕೆ ಭೇಟಿ ನೀಡಿ ಅಸ್ವಸ್ಥಗೊಂಡವರ ಕುಟುಂಬಸ್ಥರಿಂದ ಮಾಹಿತಿ ಪಡೆದರು. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ವೈದ್ಯಕೀಯ ಕ್ಯಾಂಪ್ ಗಳನ್ನು ಆಯೋಜಿಸಲಾಗಿದೆ.

ಭೀಮಡೋಲ್ ಮಂಡಲದ ಪುಲ್ಲಾ ಗ್ರಾಮದಲ್ಲೂ ಇಂತಹುದೇ ನಿಗೂಢ ಅಸ್ವಸ್ಥತೆ ಪ್ರಕರಣ ದಾಖಲಾಗಿತ್ತು. ಗ್ರಾಮದ 29 ಮಂದಿ ಅಸ್ವಸ್ಥರಾಗಿದ್ದರು. ಈ ಪೈಕಿ 27 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.