Saturday, 23rd November 2024

ಇಸ್ರೇಲ್‌ ರಾಯಭಾರ ಕಚೇರಿ ಸಮೀಪ ಸ್ಫೋಟ ಪ್ರಕರಣ: ಆಗತುಂಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನವದೆಹಲಿ: ಇಸ್ರೇಲ್‌ ರಾಯಭಾರ ಕಚೇರಿ ಸಮೀಪ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಕ್ಯಾಬ್‌ನಿಂದ ಇಳಿದಿ ರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ವರದಿಯಾಗಿದೆ.

ಸ್ಫೋಟದ ಬಳಿಕ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಈ ಸ್ಫೋಟವು ಯಾವುದೋ ದೊಡ್ಡ ಸಂಚಿನ ಭಾಗವಾಗಿರುವ ಸಾಧ್ಯತೆ ಯೂ ಇದೆ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

‘ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್ ಬಳಸಿರುವ ಬಗ್ಗೆ ವಿಧಿವಿಜ್ಞಾನ ತಜ್ಞರ ತಂಡಕ್ಕೆ ಪುರಾವೆ ದೊರೆತಿದೆ. ಸಂಚುಕೋರರು ಆರ್‌ಡಿಎಕ್ಸ್‌ ಬಳಸಿದ್ದಲ್ಲಿ ಪರಿಣಾಮ ತೀವ್ರವಾಗಿರುತ್ತಿತ್ತು’ ಎಂದು ಮೂಲಗಳು ಹೇಳಿವೆ. ಘಟನಾ ಸ್ಥಳದ ಸಮೀಪದ ಮರ ವೊಂದರ ಹಿಂದೆ ಕ್ಯಾಮರಾ ಒಂದನ್ನು ಅಡಗಿಸಿಟ್ಟಿರುವುದೂ ಪೊಲೀಸರ ಗಮನಕ್ಕೆ ಬಂದಿದೆ.

ಅರ್ಧ ಸುಟ್ಟ ಗುಲಾಬಿ ಬಣ್ಣದ ಸ್ಕಾರ್ಫ್‌ ಮತ್ತು ಇಸ್ರೇಲ್ ರಾಯಭಾರಿಗೆ ಸಂಬಂಧಿಸಿದ ಕವರ್ ಬಿದ್ದಿರುವ ಸಿಸಿಟಿವಿ ದೃಶ್ಯಾವಳಿ ಯೂ ಪೊಲೀಸರಿಗೆ ದೊರೆತಿದೆ.