Thursday, 19th September 2024

ಜಯಂತಿ, ಜನಾಭಿಪ್ರಾಯ: ಇರಲಿ ನೀತಿ

‘ರಜವೇ ಮಜ’ ಎಂಬ ಮನೋಭಾವ ಇಟ್ಟುಕೊಂಡಿರುವ ನಮ್ಮ ಬಹುತೇಕ (ಹೊಸ ವರ್ಷದ ಕ್ಯಾಲೆಂಡರ್ ಬಂದರೆ ಮೊದಲು ನೋಡುವುದು ಆ ವರ್ಷ ರಜಾ ಎಷ್ಟ ಸಿಗುತ್ತದೆ ಎಂದು) ಜನರು ರಜಾವನ್ನು ಹೇಗೆ ‘ಅಪ್ಪಿ’ಕೊಳ್ಳುತ್ತಾರೆ ಎಂದರೆ ಅದು ‘ಅಪ್ಪಿಕೋ ಚಳವಳಿ’ಗಿಂತ ತೀವ್ರವಾಗಿರುತ್ತೆ.

ಐದು ದಶಗಳ ಹಿಂದೆ ಸರಕಾರದ ವತಿಯಿಂದ ಯಾವುದೇ ಜಯಂತಿಯನ್ನು ಆಚರಿಸುತ್ತಿಿರಲಿಲ್ಲ, ಗಾಂಧಿ ಜಯಂತಿ ಹೊರತಾಗಿ. ಮಹಾತ್ಮ ಗಾಂಧಿ ‘ಭೂಮಿಗೆ ಬಂದ ಭಗವಂತ’ ಎಂಬ ಭಾವನೆ ಆ ಕಾಲದ ಭಾರತೀಯರ ಮನದಲ್ಲಿದ್ದರೆ ಅತಿಶಯೋಕ್ತಿಿಯೇನಲ್ಲ ಎಂದೂ ಹೇಳಬಹುದು. ಗಾಂಧೀಜಿಯ ಅಹಿಂಸಾತ್ಮಕ ಹೋರಾಟ ದೇಶ ಹಾಗೂ ವಿದೇಶದ ಹಲವು ಮುಖಂಡರಿಗ ಸ್ಫೂತಿಯೂ ಆಗಿತ್ತು. ಹಾಗಾಗಿ ಅವರ ಹೆಸರಿನಲ್ಲಿ ಜಯಂತಿ ಮಾಡುವುದು ಶ್ರೀಯುತರಿಗೆ ಸಲ್ಲಿಸುವ ಗೌರವವೂ ಆಗಿತ್ತು. 70ರ ದಶಕದ ಕೊನೆ ಹಾಗೂ ನಂತರದ ವರುಷಗಳಲ್ಲಿ ರಾಜ್ಯವನ್ನು ದೃಷ್ಟಿಿಯಲ್ಲಿಟ್ಟುಕೊಂಡು ನೋಡುವುದಾದರೆ ಸರಕಾರದಿಂದ ನಡೆಸುವ ನಾನಾ ಜಯಂತಿ ಆಚರಣೆ, ಪ್ರಮುಖವಾಗಿ ರಾಜಕೀಯ ಧುರೀಣರು ‘ಚಿನ್ನದ ಮೊಟ್ಟೆೆ’ಯಂತೆ ಭಾವಿಸತೊಡಗಿದರು ಎಂದು ವಿಶ್ಲೇಷಿಸಲಾಗುತ್ತದೆ.

ಪರಿಣಾಮವಾಗಿ ಜಯಂತಿ ಆಚರಣೆಗಳ ಸಂಖ್ಯೆೆ ಏರತೊಡಗಿತು. ‘ರಜವೇ ಮಜ’ ಎಂಬ ಮನೋಭಾವ ಇಟ್ಟುಕೊಂಡಿರುವ ನಮ್ಮ ಬಹುತೇಕ (ಹೊಸ ವರ್ಷದ ಕ್ಯಾಾಲೆಂಡರ್ ಬಂದರೆ ಮೊದಲು ನೋಡುವುದು ಆ ವರ್ಷ ರಜಾ ಎಷ್ಟು ಸಿಗುತ್ತದೆ ಎಂದು) ಜನರು ರಜಾವನ್ನು ಹೇಗೆ ‘ಅಪ್ಪಿಿ’ಕೊಳ್ಳುತ್ತಾಾರೆ ಎಂದರೆ ಅದು ‘ಅಪ್ಪಿಿಕೋ ಚಳವಳಿ’ಗಿಂತ ತೀವ್ರವಾಗಿರುತ್ತೆೆ. ಸಾಮಾನ್ಯವಾಗಿ ನಮ್ಮಲ್ಲಿ ರಜೆಗಳು ಹೆಚ್ಚಿಿರುವುದರಿಂದ ಆಗಾಗ್ಗೆೆ ಜಪಾನ್ ದೇಶವನ್ನು ಉದಾಹರಣೆಯಾಗಿ ನೀಡಲಾಗುತ್ತೆೆ. ಅಲ್ಲಿ ಗಣ್ಯರು ನಿಧನರಾದರೆ ರಜೆ ನೀಡುವುದಿಲ್ಲ. ಬದಲಿಗೆ ಶೋಕಸೂಚವಾಗಿ ಕೈಗೆ ಕಪ್ಪುುಪಟ್ಟಿಿಯನ್ನು ಕಟ್ಟಿಿಕೊಂಡು ಆ ದಿನ ಒಂದು ತಾಸು ಹೆಚ್ಚಾಾಗಿ ದುಡಿಯುತ್ತಾಾರೆ ಎಂಬುದಾಗಿ. ಇದು ಒತ್ತಟ್ಟಿಿಗಿರಲಿ ವಿದೇಶಿ ಸಂಸ್ಕೃತಿಗೆ ನಾವು ಮಾರುಹೋಗುತ್ತೇವೆ ಹೊರತು ಅವರ ಸಕಾರಾತ್ಮಕ ಧೋರಣೆಗಲ್ಲ. ಇತ್ತೀಚೆಗೆ ‘ಮಾಜಿ ಸಚಿವ ಸಿ.ಎಂ.ಇಬ್ರಾಾಹಿಂ’ ಕಾರ್ಯಕ್ರಮವೊಂದರಲ್ಲಿ, ಸರಕಾರ ಟಿಪ್ಪುು ಜಯಂತಿ ಆಚರಿಸುವ ಆಗತ್ಯವಿಲ್ಲ. ನಮ್ಮ ಜನಾಂಗದಲ್ಲಿ ಜಯಂತಿ ಆಚರಣೆ ಇಲ್ಲ ಎಂದು ಹೇಳಿದ್ದಾಾರೆ.

ಇಬ್ರಾಹಿಂ ಯಾವಾಗ ಏನು ಮಾತನಾಡಬೇಕೊ ಆಗ ಮೌನವಾಗಿದ್ದು, ಯಾವಾಗಲೋ ಮಾತನಾಡುತ್ತಾಾರೆ ಎಂಬ ಟೀಕೆಗಳು ಇಲ್ಲದಿಲ್ಲ. ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಿಯಾಗಿದ್ದ ಸಮಯದಲ್ಲಿ, ಟಿಪ್ಪುು ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸಲಾಗುವುದು ಎಂದು ಹೇಳಿದರಲ್ಲದೆ ಆಚರಣೆಗೂ ತಂದರು. ಆಗ ಇದಕ್ಕೆೆ ಪ್ರತಿರೋಧ ವ್ಯಕ್ತವಾಗಿದ್ದು, ಹಲವು ಕಹಿಪ್ರಸಂಗ ನಡೆದಿದ್ದು ಉಂಟು. ಸಿಎಂ ಇಬ್ರಾಾಹಿಂ ಈಗ ಪ್ರಸ್ತಾಾಪಿಸಿದ ವಿಷಯನ್ನು ಆಗ ಯಾಕೆ ಹೇಳಲಿಲ್ಲ ಎಂದು ಪ್ರಶ್ನಿಿಸುವವರೂ ಸಾಕಷ್ಟು ಸಂಖ್ಯೆೆಯಲ್ಲೇ ಇದ್ದಾಾರೆ. ಸ್ವಾಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ, ರಾಜ್ಯೋೋತ್ಸವ ಹಾಗೂ ಗಣರಾಜ್ಯೋೋತ್ಸವನ್ನು ಸರಕಾರ ಆಚರಿಸಬೇಕು. ಮಿಕ್ಕ ಜಯಂತಿಗಳನ್ನು ಆಯಾ ಸಮುದಾಯಗಳು, ಸಂಘ-ಸಂಸ್ಥೆೆಗಳು ಆಚರಿಸಿದರೆ ‘ಇದು’ ಮಾದರಿಯಾಗುತ್ತದೆ ಎಂಬ ಅಭಿಪ್ರಾಾಯವೂ ಇದೆ. ಇದಕ್ಕೆೆ ಜನಾಭಿಪ್ರಾಾಯ ಮುಖ್ಯಅಲ್ಲವೇ?

ಸರಕಾರಿ ನೌಕರರ ಸೇವಾ ನಿಯಮ ಕುರಿತು ಸಮಿತಿಯೊಂದು ರಜೆ ಕಡಿತದ ಶಿಫಾರಸು ಮಾಡಿತ್ತು. ಆದರೆ, ಸೌಲಭ್ಯ ಕುರಿತ ಶಿಫಾರಸನ್ನು ಒಪ್ಪಿಿಕೊಂಡು ಈ ವಿವಾದಾತ್ಮಕವಾದುದನ್ನು ಸರಕಾರ ಕೈಬಿಟ್ಟಿಿತು. ಜೇನುಗೂಡಿಗೆ ಕೈಹಾಕುವುದೇಕೆ ಎಂಬ ಮನೋಭಾವ ಇದಕ್ಕೆೆ ಕಾರಣ. ಇಂಥ ದಿಟ್ಟ ನಿರ್ಧಾರಗಳು ಜಾರಿಗೆ ಬರಬೇಕೆಂದರೆ ಮನಸ್ಥಿಿತಿ ಬದಲಾಗಬೇಕು, ಇಚ್ಛಾಾಶಕ್ತಿಿ ಬೇಕು.

Leave a Reply

Your email address will not be published. Required fields are marked *