Saturday, 14th December 2024

ಲಸಿಕಾ ಕೇಂದ್ರಕ್ಕೆ : ಉಪ ಜಿಲ್ಲಾಧಿಕಾರಿ ಭೇಟಿ 

ಮಾನ್ವಿ :  ತಾಲ್ಲೂಕಿನ ನೀರಮಾನ್ವಿ ಗ್ರಾಮದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ covid 19 ಲಸಿಕೆ ಕೇಂದ್ರವನ್ನು  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ   ಹಮ್ಮಿಕೊಂಡದ ಹಿನ್ನೆಲೆಯಲ್ಲಿ ಲಸಿಕೆ ಕೇಂದ್ರಕ್ಕೆ  ಉಪ ಜಿಲ್ಲಾಧಿಕಾರಿ  (ಎಸಿ)ಕಾಮೇಗೌಡ ಭೇಟಿ ಕೊಟ್ಟು ಪರಿಶೀಲಿಸಿ ಸಾರ್ವಜನಿಕರು  ಸಹಕರಿಸುವಂತೆ ಸಾರ್ವಜನಿಕರು ಎಲ್ಲ ಜನರು ಲಸಿಕೆ ಸ್ವೀಕರಿಸುವಂತೆ ಮನವಿ ಮಾಡಿಕೊಂಡರು…
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಸದಸ್ಯರಾದ ನಾಗಲಕ್ಷ್ಮಿ  ನರಸಿಂಹ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮರಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮಿ ಶ್ರೀನಿವಾಸ್,ಉಪಾಧ್ಯಕ್ಷೆ  ನರಸಿಂಹ,ಲಕ್ಷ್ಮಣ,ಶಾಂತಮ್ಮ, ರಾಜಪ್ಪ,ಸಾಬಮ್ಮ, ದುರ್ಯೋಧನ,ಅಂಚೆ  ಸಿಬ್ಬಂದಿ,ಆಶಾ ಕಾರ್ಯಕರ್ತರು, ಅಂಗನವಾಡಿ ಶಿಕ್ಷಕಿಯರು,ಸೇರಿದಂತೆ ಇತರರು ಉಪಸ್ಥಿತರಿದ್ದರು…