Thursday, 19th September 2024

ದುಡಿಯುವ ಕೈಗಳಿಗೆ ಕೆಲಸ ನೆಮ್ಮದಿಯ ಹಾದಿ ಸುಗಮ

ಲೋಕಾರ್ಪಣೆ

ಮುರುಗೇಶ ಆರ್. ನಿರಾಣಿ, ಶಾಸಕರು ಮತ್ತು ಕೈಗಾರಿಕೋದ್ಯಮಿ 

ಸುಮಾರು ಆರು ಸಾವಿರ ಯುವಕರಿಗೆ ಉದ್ಯೋೋಗ ದೊರಕಿದೆ. ಹಾಗೆಯೇ ಕಬ್ಬು ಕಟಾವು ಸಾಗಾಣೆ ಮುಂತಾದ ಹಂಗಾಮಿ ಕೆಲಸಗಳಲ್ಲಿ 75 ಸಾವಿರ ಕಾರ್ಮಿಕರು ದುಡಿಯುತ್ತಾಾರೆ. ನನ್ನ ಹಂಬಲ ಇಲ್ಲಿಗೇ ನಿಂತಿಲ್ಲ. ಎಲ್ಲರಿಗೂ ಉದ್ಯೋೋಗ ಸಿಕ್ಕರೆ ಜಾತಿ ವೈಷಮ್ಯ, ಮೇಲು ಕೀಳು ಯಾವುದೂ ಇರುವುದಿಲ್ಲ. ‘ಉದ್ಯೋೋಗದಿಂದಲೇ ಸಮಾಜದಲ್ಲಿ ನೆಮ್ಮದಿ ಮತ್ತು ಶಾಂತಿ’ ನೆಲೆಸುತ್ತದೆ.

ಕಲೆ, ಕಾವ್ಯ ಮನುಷ್ಯತ್ವವನ್ನು ಉನ್ನತೀಕರಿಸಿದರೆ ಉದ್ಯೋೋಗ ಆರ್ಥಿಕ ಭದ್ರತೆ ಮತ್ತು ನೆಮ್ಮದಿ ನೀಡುತ್ತದೆ. ಆಸಕ್ತಿಿಯ ಕೆಲಸ ಕೂಡ ಆತ್ಮೋೋನ್ನತಿಯ ಧ್ಯಾಾನ. ಆದ್ದರಿಂದಲೇ ಕೆಲಸವೇ ಪೂಜೆ ಕಾಯಕವೇ ಕೈಲಾಸ ಎಂದು ಶರಣರು ಹೇಳಿದ್ದಾಾರೆ. ಇದನ್ನು ಮನಸಾ ನಂಬಿರುವ ನಾನು ‘ಉದ್ಯಮಿಯಾಗು ಉದ್ಯೋೋಗ ನೀಡು’ ಎಂಬ ಧ್ಯೇಯವಾಕ್ಯ ರೂಪಿಸಿರುವೆ. 2008-2013 ರ ಅವಧಿಯ ಐದು ವರ್ಷ ಕರ್ನಾಟಕದ ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಮಂತ್ರಿಿಯಾಗಿದ್ದೆೆ. ನನ್ನ ಸೂಚನೆಯ ಮೇರೆಗೆ ‘ಉದ್ಯಮಿಯಾಗು ಉದ್ಯೋೋಗ ನೀಡು’ ಪರಿಕಲ್ಪನೆಯನ್ನು ಕೈಗಾರಿಕಾ ಇಲಾಖೆ ಘೋಷವಾಕ್ಯವಾಗಿ ಪ್ರಕಟಿಸಿತು. ಯುವಕರಿಗಾಗಿ ಕೆಲಸದ ಕುಶಲತೆಯ ಅಭಿವೃದ್ಧಿಿ ಮಹತ್ವದ ಯೋಜನೆ ಇದೇ ಅವಧಿಯಲ್ಲಿ ಆರಂಭಿಸಿದೆ. ಇದರಿಂದಾಗಿ ಅನೇಕ ಯುವಕರು ಕೈಗಾರಿಕೆಗಳಲ್ಲಿ ಸುಲಭವಾಗಿ ಉದ್ಯೋೋಗ ಪಡೆಯುವಂತಾಗಿದೆ.

ಕೈಗಾರಿಕೆಗಳನ್ನು ಕಟ್ಟುವುದು ಹಾಗೂ ದುಡಿಯುವ ಕೈಗಳಿಗೆ ಕೆಲಸಕೊಡುವುದು ನನಗೆ ಪರಮ ಸಂತೋಷದ ಸಂಗತಿ. ಬಿ.ಇ. (ಸಿವಿಲ್ ಎಂಜಿನಿಯರಿಂಗ್) ಪದವಿ ಪಡೆದ ಮೇಲೆ ನೌಕರಿಗಾಗಿ ಅಲಿಯದೆ ನಾನೇ ಬಾಗಲಕೋಟೆ ಜಿಲ್ಲೆೆಯ ಮುಧೋಳ ನಗರದ ಹೊರವಲಯದಲ್ಲಿ ಒಂದು ಮಿನಿ ಸಕ್ಕರೆ ಕಾರ್ಖಾನೆ ಕಟ್ಟಿಿದೆ. ಹೆಚ್ಚು ಸಿಬ್ಬಂದಿ ಇರಲಿಲ್ಲ. ನಾನು ಹಗಲೂ ರಾತ್ರಿಿ ಅಲ್ಲಿಯೇ ವಾಸ್ತವ್ಯಮಾಡಿ ಕೆಲಸ ಮಾಡುವುದನ್ನು ನೋಡಿ ನನ್ನ ಗೆಳೆಯರು ಹಗಲು ಚೇರ್ಮನ್ ರಾತ್ರಿಿ ವಾಚ್‌ಮನ್ ಎಂದು ಗೇಲಿ ಮಾಡುತ್ತಿಿದ್ದರು.

ನನ್ನ ಉತ್ಸಾಾಹವೇ ನನ್ನ ಬಂಡವಾಳವಾಗಿತ್ತು. ಉದ್ದಿಮೆ ವ್ಯಾಾಪಾರ ಆರಂಭಿಸಲು ಹಣ ಬೇಕು ಎಂದು ಅನೇಕ ಯುವಕರು ಹೇಳುತ್ತಾಾರೆ. ಉತ್ಸಾಾಹವಿದ್ದರೆ ಎಲ್ಲವೂ ಹರಿದು ಬರುತ್ತದೆ ಎಂಬುದು ನಾನು ಕಂಡುಕೊಂಡು ದರ್ಶನ. ಇಂದು ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿ ಕಟ್ಟಿಿದವರಲ್ಲಿ ಬಹಳಷ್ಟು ಜನ ಬಡ ಕುಟುಂಬದಿಂದ ಬಂದವರಾಗಿದ್ದಾಾರೆ. ಅವರು ‘ಛಲದಿಂದ ಮತ್ತು ಕಠಿಣ ಶ್ರಮದಿಂದ ಎದ್ದು ನಿಂತಿದ್ದಾಾರೆ’. ನಮ್ಮ ಯುವಕರಲ್ಲಿಯೂ ಈ ಮನಸ್ಥಿಿತಿ ಗಟ್ಟಿಿಯಾಗಿ ಮೂಡಬೇಕು.

ಸುಮಾರು 18 ವರ್ಷಗಳ ಅವಧಿಯಲ್ಲಿ ಮೂರು ಬೃಹತ್ ಸಕ್ಕರೆ ಕಾರ್ಖಾನೆ ಹಾಗೂ ಒಂದು ಸಿಮೆಂಟ್ ಕಾರ್ಖಾನೆ ಕಟ್ಟಿಿದ್ದೇನೆ. ಸುಮಾರು ಆರು ಸಾವಿರ ಯುವಕರಿಗೆ ಉದ್ಯೋೋಗ ದೊರಕಿದೆ. ಕಬ್ಬು ಕಟಾವು ಸಾಗಾಣೆ ಮುಂತಾದ ಹಂಗಾಮಿ ಕೆಲಸಗಳಲ್ಲಿ 75 ಸಾವಿರ ಕಾರ್ಮಿಕರು ದುಡಿಯುತ್ತಾಾರೆ. ನನ್ನ ಹಂಬಲ ಇಲ್ಲಿಗೇ ನಿಂತಿಲ್ಲ. ಎಲ್ಲರಿಗೂ ಉದ್ಯೋೋಗ ಸಿಕ್ಕರೆ ಜಾತಿ ವೈಷಮ್ಯ, ಮೇಲು ಕೀಳು ಯಾವುದೂ ಇರುವುದಿಲ್ಲ. ‘ಉದ್ಯೋೋಗದಿಂದಲೇ ಸಮಾಜದಲ್ಲಿ ನೆಮ್ಮದಿ ಮತ್ತು ಶಾಂತಿ’ ನೆಲೆಸುತ್ತದೆ.

ಹೀಗಾಗಿ ಬದುಕಿನುದ್ದಕ್ಕೂ ಹೊಸದನ್ನು ಕಟ್ಟುವ ಆಶೆ ಉಳಿಸಿ ಕೊಂಡಿದ್ದೇನೆ. ಉದ್ದಿಮೆಗಳ ಮೂಲಕ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡಬಹುದು. ನಮ್ಮ ಉದ್ದಿಮೆಗಳ ಸಂಯುಕ್ತ ಆಶ್ರಯದಲ್ಲಿ ‘ಎಂಆರ್‌ಎನ್ ಸಮಾಜ ಕಾರ್ಯ ಫೌಂಡೇಶನ್’ ಆರಂಭಿಸಿದ್ದೇನೆ. ಸುಮಾರು 1 ಲಕ್ಷ ಬಡ ಜನರ ಉಚಿತ ಚಿಕಿತ್ಸೆೆ ಮಾಡಿಸಿದ್ದು ಒಂದು ದಾಖಲೆಯಾಗಿದೆ. ಉದ್ದಿಮೆ ರಂಗದಲ್ಲಿ ಹಣದ ಝೇಂಕಾರ ದೊಡ್ಡ ಪ್ರಮಾಣದಲ್ಲಿ ಇದೆ. ಆದರೆ, ಇದರ ವೈಭವ ಲೋಲುಪತೆಯಲ್ಲಿ ಕಳೆದು ಹೋಗದೆ ಜನಪರ ಕೆಲಸಗಳನ್ನು ನಮ್ಮ ಕುಟುಂಬದವರೆಲ್ಲ ಮಾಡುತ್ತಿಿದ್ದಾಾರೆ.

ಮಾರ್ಗ ಯಾವುದರೂ ಸರಿಯೇ ಹಣ ಮಾಡಲು ಹೊರಟವರು ದುಡ್ಡು ಬರುವ ಹೊತ್ತಿಿಗೆ ನೆಮ್ಮದಿ, ಆರೋಗ್ಯ ಬಾಂಧವ್ಯಗಳಿಂದ ಹಿಂದಿರುಗಲಾರದ ಸ್ಥಿಿತಿ ತಲುಪಿರುತ್ತಾಾರೆ. ಪ್ರತಿನಿತ್ಯ ದುರಾಸೆಯ ಪ್ರವಾಹದಲ್ಲಿ ಕೊಚ್ಚಿಿಕೊಂಡು ಹೋಗುತ್ತಿಿರುವವನ ‘ಮಾನಸಿಕ ಕ್ಷೋಭೆಗಳಿಗೆ ಆಸೆಯೇ ದುಖಃದ ಮೂಲವೆಂದ ಬುದ್ಧನ ಪ್ರೇರಣೆ ಚಿಕಿತ್ಸೆೆ’ಯಾಗಿ ಪೊರೆಯಬೇಕಿದೆ. ಗಾಂಧಿ ತತ್ವವಾದ ಸರಳ ಜೀವನದತ್ತ ಮನುಷ್ಯ ಸಂತತಿಯು ಮುಖಮಾಡಿ ಅರಿವಿನ ದಾರಿಯನ್ನು ಹುಡುಕಬೇಕಿದೆ. ಶರಣರು ಪ್ರತಿಪಾದಿಸಿದ ಅಸಂಗ್ರಹ ಮಾದರಿಯನ್ನು ಮರು ಶೋಧಿಸಿಕೊಳ್ಳಬೇಕಾದ ಅಗತ್ಯವೀಗ ಮೊದಲಿಗಿಂತ ಹೆಚ್ಚಾಾಗಿದೆ ಅಂತಹ ಬೆಳಕಿಗೆ ಎದೆಯೋಳಗೆ ಇರುವ ಸಾವಧಾನದ ಕದತೆರೆವಂತಾಗಲಿ ಎಂಬುದು ನನ್ನ ಬಯಕೆ.

ಬಾಗಲಕೋಟೆ ಜಿಲ್ಲೆೆಯ ಬಾದಾಮಿ ತಾಲೂಕು ಕಲ್ಲಾಾಪೂರ ಗ್ರಾಾಮದ ಬಳಿ ಎಂಆರ್‌ಎನ್ ಸಕ್ಕರೆ ಕಾರ್ಖಾನೆ ನಮ್ಮ ಸಂಸ್ಥೆೆಯ ಪರವಾಗಿ ನಿರ್ಮಿಸಲಾಗಿದೆ. ರಾಜ್ಯೋೋತ್ಸವ ದಿನದಂದು ಅಂದರೆ (ನಂವಬರ್ 01 ರ 2019ರಂದು) ಲೋಕಾರ್ಪಣೆಗೊಳ್ಳಲಿದೆ. ಸಕ್ಕರೆ ಕಾರ್ಖಾನೆ ಇಲ್ಲದ್ದಕ್ಕೆೆ ಇಲ್ಲಿಯ ರೈತರು ಗೋಳಾಡುತ್ತಿಿದ್ದರು. ಈ ಕಾರ್ಖಾನೆ ಖಂಡಿತವಾಗಿಯೂ ಅವರಿಗೆ ವರದಾನವಾಗಿದೆ. ನಿಜ ಹೇಳಬೇಕೆಂದರೆ, ಲಾಭ, ನಷ್ಟದ ಲೆಕ್ಕಾಾಚಾರದಿಂದ ದೂರನಿಂತು ರೈತರ ಹಿತ ಹಾಗೂ ಈ ಭಾಗದ ಅಭಿವೃದ್ಧಿಿಯ ಸಂಕಲ್ಪದಿಂದ ಇದನ್ನು ಕಟ್ಟಲಾಗಿದೆ. ಹೀಗೆ ಲಾಭ ನಷ್ಟದಿಂದ ದೂರ ನಿಂತು ಜನಹಿತವನ್ನೇ ಮುಖ್ಯವಾಗಿಟ್ಟುಕೊಂಡು ಮಾಡಿದ ಈ ಕೆಲಸ ನನಗೆ ಅತ್ಯಂತ ನೆಮ್ಮದಿಯನ್ನು ತಂದಿದೆ.

ಈ ಭಾಗದಲ್ಲಿ ಸಂಪೂರ್ಣ ನೀರಾವರಿ ಯೋಜನೆ ಆರಂಭಿಸಿದ್ದು ಮಹತ್ವದ ಸಂಗತಿಯಾಗಿದೆ. ಕಳಸಕೊಪ್ಪ ಕೆರೆ ತುಂಬುವುದು, ಹೆರಕಲ್‌ದ ಏತ ನೀರಾವರಿ ಯೋಜನೆ ರೈತರಿಗೆ ನೆಮ್ಮದಿಯನ್ನು ನೀಡಲಿವೆ. ಬಾದಾಮಿ ತಾಲೂಕಿನ ಕೃಷಿ ಕೂಲಿಕಾರರು ಕೆಲಸ ಹುಡುಕಿಕೊಂಡು ಗೋವಾ ಮುಂಬೈಗಳಿಗೆ ಗುಳೆ ಹೋಗುತ್ತಾಾರೆ. ಇವರಿಗೆ ಇಲ್ಲಿಯೇ ಉದ್ಯೋೋಗ ಒದಗಿಸಿದರೆ ಗುಳೇ ಹೋಗುವುದನ್ನು ಸುಲಭವಾಗಿ ತಡೆಯಬಹುದು. ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಿ ಪಡೆದ ‘ಅಭಿಜಿತ್ ಬ್ಯಾಾನರ್ಜಿ ಮತ್ತು ಎಸ್ತರ್ ಡುಪ್ಲೊೊ ದಂಪತಿ’ ಕೂಡ ಗ್ರಾಾಮೀಣ ಕೂಲಿಕಾರರಿಗೆ ಉದ್ಯೋೋಗ ನೀಡುವ ಬಗ್ಗೆೆ ಮತ್ತು ಹೆಚ್ಚಿಿಗೆ ಸಂಬಳ ಕೊಡುವ ಬಗ್ಗೆೆ ಮಹತ್ವದ ಸಲಹೆಗಳನ್ನು ನೀಡಿದ್ದಾಾರೆ.

ಗ್ರಾಾಮೀಣ ಜನರಿಗೆ ಉದ್ಯೋೋಗ ಕೊಡುವುದರಿಂದ ಗುಳೆ ಹೋಗುವುದನ್ನು ತಪ್ಪಿಿಸಬಹುದು. ಆರ್ಥಿಕವಾಗಿ ಸಬಲೀಕರಣ ಗೊಳಿಸಬಹುದು. ಎಲ್ಲಕ್ಕಿಿಂತ ಮುಖ್ಯವಾಗಿ ಬಡತನ ನಿವಾರಿಸಬಹುದು. ಮತ್ತು ಆತ್ಮಹತ್ಯೆೆಯನ್ನು ತಡೆಯಬಹುದು. ಈ ಹಿನ್ನೆೆಲೆಯಲ್ಲಿ ಉದ್ಯಮಿಗಳನ್ನು ಕಟ್ಟುವ ಉದ್ಯೋೋಗ ಒದಗಿಸುವ ಮನಸಾಕ್ಷಿಯಾಗಿ ಅಭಿಯಾನ ಆರಂಭಿಸಿದ್ದೇನೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಸಂಗೀತ ಕೇಳುವ ಹಾಗೂ ಆಯ್ಕೆೆ ಮಾಡಿದ ಚಲನಚಿತ್ರಗಳನ್ನು ನೋಡುವ ಹವ್ಯಾಾಸವನ್ನು ಬೆಳಸಿಕೊಂಡಿದ್ದೇನೆ. ಕನ್ನಡ ಭಾವಗೀತೆಗಳಿಗೆ ಮನಸ್ಸನ್ನು ಅರಳಿಸುವ ಬಹುದೊಡ್ಡ ಶಕ್ತಿಿಯಿದೆ ಎಂಬುದನ್ನು ನಾನು ಸ್ವ ಅನುಭವದಿಂದ ಅರೆತಿದ್ದೇನೆ.
ದುಡಿಯುವ ಕೈಗಳು ಜಗದ್ಗುರುವಿನ ಪಾದಕ್ಕಿಿಂತ ಶ್ರೇಷ್ಠ ಎನ್ನುವ ಮಾತೊಂದು ಇದೆ. ಇದು ಕಾಯಕದ ಮಹತ್ವವನ್ನು ಸಾರುತ್ತಿಿದೆ. ಎಲ್ಲರಿಗೂ ಉದ್ಯೋೋಗ ಸಿಗುವಂತಾದರೆ, ನೆಮ್ಮದಿಯ ಗೀತೆ ನಾಡಿನ ತುಂಬ ರಿಂಗಣಿಸುವುದು. ಅಂತಲೇ ನಾನು ನನ್ನ ಶಕ್ತಿಿ ಸಾಮರ್ಥ್ಯ, ಸಮಯ, ಸಂಪತ್ತು ಎಲ್ಲವನ್ನು ಉದ್ಯೋೋಗ ಸೃಷ್ಟಿಿಗೆ ಬಳಸಲು ಹಂಬಲಿಸುತ್ತೇನೆ.