ಮುಂಬೈ: ಬಾಲಿವುಡ್ ನಟ ಆಮೀರ್ ಖಾನ್ ಹಾಗೂ ಅವರ ಪತ್ನಿ ಕಿರಣ್ ರಾವ್ ಸುದೀರ್ಘ ದಾಂಪತ್ಯವನ್ನ ಕೊನೆಗೊಳಿಸಿದ್ದಾರೆ. ಜಂಟಿ ಹೇಳಿಕೆಯ ಮೂಲಕ ಈ ದಂಪತಿ ಶನಿವಾರ ತಮ್ಮ ವಿವಾಹ ವಿಚ್ಛೇದನದ ವಿಚಾರವನ್ನ ಬಹಿರಂಗಪಡಿಸಿದೆ.
ನಮ್ಮ ಸಂಬಂಧವು ನಂಬಿಕೆ, ಗೌರವ ಹಾಗೂ ಪ್ರೀತಿಯ ನೆಲೆಗಟ್ಟಿನಲ್ಲಿ ಬೆಳೆದಿದೆ. ಆದರೆ ಇದೀಗ ನಾವು ನಮ್ಮ ಜೀವನದ ಹೊಸ ಅಧ್ಯಾಯವನ್ನ ತೆರೆಯಲು ಹೊರಟಿದ್ದೇವೆ. ನಾವು ಇನ್ಮೇಲೆ ಪತಿ – ಪತ್ನಿಯಲ್ಲ. ಆದರೆ ಪೋಷಕರಾಗಿ ಮುಂದುವರಿಯುತ್ತೇವೆ ಎಂದು ಹೇಳಿದ್ದಾರೆ.
ನಾವು ಇನ್ಮೇಲೆ ಪ್ರತ್ಯೇಕವಾಗಿ ವಾಸಿಸಲಿದ್ದೇವೆ. ಆದರೆ ನಮ್ಮ ಪುತ್ರ ಆಜಾದ್ಗೆ ಪೋಷಕರಾಗಿ ಇರುತ್ತೇವೆ. ಅಲ್ಲದೇ ಸಿನಿಮಾ ಸೇರಿದಂತೆ ವಿವಿಧ ಪ್ರಾಜೆಕ್ಟ್ಗಳಲ್ಲಿ ಜೊತೆಯಾಗಿ ಕೆಲಸ ಮಾಡಲಿದ್ದೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಿಮ್ಮೆಲ್ಲರ ಹಾರೈಕೆ ಹಾಗೂ ಆರ್ಶೀವಾದ ನಮ್ಮ ಮೇಲೆ ಸದಾ ಇರಲಿ. ಈ ವಿಚ್ಚೇದನವು ಯಾವುದರ ಅಂತ್ಯವಲ್ಲ ಆದರೆ ಹೊಸ ಪ್ರಯಾಣದ ಮುನ್ನುಡಿಯಾಗಿದೆ ಎಂದು ಬರೆಯಲಾಗಿದೆ.