Saturday, 23rd November 2024

ವಿಶ್ವದ ಟಾಪ್ 20 ಶ್ರೀಮಂತರ ಪಟ್ಟಿ: ಹೊರ ಬಿದ್ದ ಅದಾನಿ

ನವದೆಹಲಿ: ದೇಶದ ಎರಡನೇ ಅತಿದೊಡ್ಡ ಶ್ರೀಮಂತ ಎಂಬ ಹೆಗ್ಗಳಿಕೆಗೆ ಕಾರಣವಾಗಿದ್ದ ಗೌತಮ್ ಅದಾನಿ ಅವರು ಬರೋಬ್ಬರಿ 18.8 ಬಿಲಿಯನ್ ಡಾಲರ್ ಕಳೆದುಕೊಂಡಿದ್ದು ವರದಿಯಾಗಿದೆ.

ಗೌತಮ್ ಅದಾನಿ ಕೇವಲ 20 ದಿನಗಳ ಅವಧಿಯಲ್ಲಿ ವಿಶ್ವದ ಟಾಪ್ 20 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಸದ್ಯ 22 ಸ್ಥಾನವನ್ನ ತಲುಪಿದ್ದಾರೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್‌ ಸೂಚ್ಯಂಕ ವರದಿ ತಿಳಿಸಿದೆ. ಅದಾನಿ ಗ್ರೂಪ್ ಷೇರುಗಳು ಜೂನ್ 14ರಿಂದ ಕುಸಿತಕ್ಕೆ ಒಳಗಾಗಿದೆ. ಆದರೆ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಕಂಪನಿ ಷೇರುಗಳು 700 ಮಿಲಿಯನ್ ಡಾಲರ್ ಏರಿಕೆಗೊಂಡಿವೆ.

ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ, ಅದಾನಿಯಲ್ಲಿ ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (ಎನ್‌ಎಸ್‌ಡಿಎಲ್) ನಲ್ಲಿ 43,500 ಕೋಟಿ ರೂ. ಹೂಡಿಕೆಯಾಗಿದ್ದು, ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಪ್ರಕಾರ ಮಾಲೀಕತ್ವದ ವಿವರಗಳನ್ನು ಬಹಿರಂಗ ಪಡಿಸದ ಕಾರಣ ಖಾತೆ ಗಳನ್ನು ಸ್ಥಗಿತವಾಗಿದೆ ಎಂದು ವರದಿ ಹರಿದಾಡಿತ್ತು. ಪರಿಣಾಮ ಷೇರುಗಳು ಭಾರೀ ಕುಸಿತ ಕಂಡಿದ್ದವು.

ಅದಾನಿಯ ಸಂಪತ್ತು ಶುಕ್ರವಾರ 56.1 ಬಿಲಿಯನ್ ಆಗಿದ್ದು, ಜೂನ್ 14 ರ ಆರಂಭದಲ್ಲಿ 74.9 ಬಿಲಿಯನ್ ಡಾಲರ್‌ನಷ್ಟಿತ್ತು.