Thursday, 19th September 2024

ಸಾರ್ವಭೌಮನೇ ಆಗಬೇಕಿಲ್ಲ!

ನಮ್ಮ ಕನ್ನಡಿಗರು ಖಂಡಿತಾ ಪತ್ರಿಕೆಗಳನ್ನು ಓದುತ್ತಾರೆ. ಅದು ಸುದ್ದಿಗಾಗಿ ಮಾತ್ರ. ಆದರೆ, ಬುದ್ಧಿಗಾಗಿಯೂ ಕನ್ನಡವನ್ನು ಓದಬೇಕಾದ ಅವಶ್ಯಕತೆ ಇದ್ದೇ ಇದೆ. ಮಕ್ಕಳಿಗೆ ಮನೆಯಲ್ಲಿ ಕನ್ನಡ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಇಂದು ಪೋಷಕರು ಅಳವಡಿಸಬೇಕು ಎಂಬುದು ಚಿಂತನೆ ಬರಲಿ.

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ಮಾತು ಖಂಡಿತವಾಗಿ ನಿಜ. ಆದರೆ, ಆ ಕನ್ನಡಿಗ ಕನ್ನಡತನವನ್ನು ಅಸ್ಮಿಿತೆಯಾಗಿ ಬೆಳೆಸಿಕೊಂಡು ಹೋದರಷ್ಟೇ ಆತ ಸಾರ್ವಭೌಮನೆಂದು ಕರೆಸಿಕೊಳ್ಳಲು ಯೋಗ್ಯವಾಗಿರುತ್ತಾಾನೆ. ಇಲ್ಲದಿದ್ದರೆ ಆತ ಸಾರ್ವಭೌಮ ಹೇಗಾಗುತ್ತಾಾನೆ, ಎಂಬುದರ ಪ್ರಶ್ನೆೆಯಾಗಿ ಉಳಿಯುತ್ತೇ, ಹಾಗೆಯೇ ಅಸಲಿಗೆ ಕನ್ನಡಿಗ ಹೇಗಾಗುತ್ತಾಾನೆ? ಉಳುವವನೇ ಭೂಮಿಯ ಒಡೆಯ ಎನ್ನುವಂತೆ ಕನ್ನಡ ಭಾಷೆಯನ್ನು ಸಂಸ್ಕೃತಿಯನ್ನು ತಾನೇ ಅನುಷ್ಠಾಾನಕ್ಕೆೆ ತರದೆ ತನ್ನ ವಂಶಸ್ಥರಿಗೆ ಅದನ್ನು ಹಂಚದೆ ಹೋದರೆ ಕನ್ನಡ ಹೇಗೆ ತಾನೆ ಬೆಳೆಯಲು ಸಾಧ್ಯವಿದೆ. ತಾನು ಗದ್ದೆೆಗಿಳಿದು ಉತ್ತಿಿ ಬಿತ್ತಿಿ ಯಾವುದೇ ಫಸಲನ್ನು ಕಾಣದಿದ್ದರೆ ಆತ ಒಡೆಯ ಆಗಲು ಹೇಗೆ ಸಾಧ್ಯ? ಇದು ಹೇಗಿರುತ್ತದೆ ಎಂದರೆ ಮನೆಯನ್ನು ದಾನವಾಗಿ ಪಡೆದು ಅದನ್ನು ಬೇರೆಯವರಿಗೆ ಬಾಡಿಗೆಗೆ ನೀಡಿ ತಾನು ಮನೆಯ ಒಡೆಯ ಎಂಬಂತೆ ಅಲ್ಲವೇ? ಕೊಟ್ಟ ಹೆಣ್ಣು ಕುಲಕ್ಕೆೆ ಹೊರಗೆ ಎನ್ನುತ್ತದೆ ನಮ್ಮ ಜನಪದ ನೀತಿ ಇದೆ. ಅಂದರೆ ಹುಟ್ಟಿಿ ಬೆಳೆದು ನಲಿದಾಡಿ ನಮ್ಮನ್ನು ಸಂತೊಷ ಪಡಿಸಿ ಮನೆಯನ್ನು ಬೆಳಗಿ ಮನೆಯ ಐಶ್ವರ್ಯ ಎಂಬ ಭಾವನೆ ಮೂಡಿಸುವ ಹೆಣ್ಣುಮಗಳನ್ನು ಧಾರೆ ಎರೆದು ಮದುವೆ ಮಾಡಿ ಕಳಿಸಿದ ದಿನದಿಂದಲೇ ಆಕೆಯನ್ನು ಕುಲದ ಹೊರಗೆ ಎಂದು ಮರೆತು ಬಿಡುವುದು ಒಂದು ತಾತ್ವಿಿಕ ಸಿದ್ಧಾಾಂತವಾಗಿದೆ.

ಹೀಗಿರುವಾಗ ಕನ್ನಡಿಗರೇ ಆಸ್ಥೆೆಯಿಂದ ಕನ್ನಡ ಮಾತನಾಡುವುದನ್ನು ಓದುವುದನ್ನು ಬರೆಯುವುದನ್ನ ಕಲಿಯದಿದ್ದರೆ ಹೇಗೆ. ಯಾವ ಭಾಷೆ ಆಡು ಭಾಷೆಯಾಗಿ ಲಿಪಿಯಾಗಿ ಹರಿಯುವುದೋ ಆ ಭಾಷೆಗೆ ಎಂದೂ ಸಾವು ಇಲ್ಲ ಎಂಬ ಮಾತು ಅಕ್ಷರಶಃ ಸತ್ಯ. ನಮ್ಮ ಕನ್ನಡಿಗರು ಖಂಡಿತಾ ಪತ್ರಿಿಕೆಗಳನ್ನು ಓದುತ್ತಾಾರೆ. ಅದು ಸುದ್ದಿಗಾಗಿ ಮಾತ್ರ. ಆದರೆ, ಬುದ್ಧಿಿಗಾಗಿಯೂ ಕನ್ನಡವನ್ನು ಓದಬೇಕಾದ ಅವಶ್ಯಕತೆ ಇದ್ದೇ ಇದೆ. ಮಕ್ಕಳಿಗೆ ಮನೆಯಲ್ಲಿ ಕನ್ನಡ ಪತ್ರಿಿಕೆಗಳನ್ನು ಓದುವ ಹವ್ಯಾಾಸವನ್ನು ಇಂದು ಪೋಷಕರು ಅಳವಡಿಸಬೇಕು. ಆ ದಿನದ ಪತ್ರಿಿಕೆಯಲ್ಲಿನ ನಾನಾ ಮುಖ್ಯಾಾಂಶಗಳನ್ನು ಓದಿ ಹೇಳಲು ತಂದೆ-ತಾಯಂದಿರು ಮಕ್ಕಳಿಗೆ ಆದೇಶಿಸಬೇಕು. ಇಂದು ಕನ್ನಡವನ್ನು ಆಂಗ್ಲ ಮಾಧ್ಯಮ ಶಾಲೆಗಳು ಒಂದು ಭಾಷೆಯನ್ನಾಾಗಿ ಮಾತ್ರ ಕಲಿಸುತ್ತದೆ. ಆದರೆ, ಅಂತಹ ಮಕ್ಕಳು ಪತ್ರಿಿಕೆಗಳನ್ನು ಓದಿದರೆ ದಿನವೊಂದಕ್ಕೆೆ ಹತ್ತು ಇಪ್ಪತ್ತು ಕನ್ನಡ ಪದಗಳ ಪರಿಚಯವಾಗುತ್ತದೆ. ನಾವುಗಳು ಮಾತನಾಡುವುದಕ್ಕಿಿಂತ ಹೆಚ್ಚಾಾಗಿ ನಮ್ಮ ಮಕ್ಕಳು ಕನ್ನಡ ಪದ ಪುಂಜಗಳನ್ನು ಬಳಸಿ ಮಾತನಾಡಿದರೆ ಅದರ ಮಜವೇ ಬೇರೆಯಲ್ಲವೇ? ಮಕ್ಕಳು ಕನ್ನಡದ ಜ್ಞಾಾನಾರ್ಜನೆಗೆ ದೊಡ್ಡದೊಡ್ಡ ಮಹಾನ್ ಗ್ರಂಥಗಳನ್ನು ಓದಲೇ ಬೇಕೆಂದಿಲ್ಲ. ಕನಿಷ್ಠ ಪತ್ರಿಿಕೆಗಳನ್ನು ಪುಸ್ತಕಗಳನ್ನು ಓದಿ ಜೀರ್ಣಿಸಿಕೊಂಡರಷ್ಟೇ ಸಾಕು ಆತ ಮುಂದೆ ಖಂಡಿತ ಸಾರ್ವಭೌಮನಾಗುತ್ತಾಾನೆ ಎಂಬುದು ಪ್ರತಿಯೊಬ್ಬರ ಆಶಯವಾಗಲಿ.

Leave a Reply

Your email address will not be published. Required fields are marked *