Thursday, 19th September 2024

ಕ್ಯಾಲಿಫೋರ್ನಿಯಾ- ನೆವಾಡ ಗಡಿಯಲ್ಲಿ 5.9 ತೀವ್ರತೆಯ ಭೂಕಂಪ

ಸ್ಯಾನ್‌ಫ್ರಾನ್ಸಿಸ್ಕೊ : ಕ್ಯಾಲಿಫೋರ್ನಿಯಾ- ನೆವಾಡ ಗಡಿಯಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿ ಸಿದೆ. ಸ್ಯಾನ್‌ಫ್ರಾನ್ಸಿಸ್ಕೊದ ಪೂರ್ವಕ್ಕೆ 250 ಮೈಲು ದೂರದಲ್ಲಿ ಲೇಕ್ ಥಾಹೊಯ್ ದಕ್ಷಿಣದಲ್ಲಿ ಭೂಕಂಪ ಸಂಭವಿಸಿದೆ. ಇದರ ಕೇಂದ್ರ ಬಿಂದು ನೆವಾಡದ ಸ್ಮಿತ್ ಕಣಿವೆಯ ನೈರುತ್ಯಕ್ಕೆ 20 ಮೈಲು ದೂರದಲ್ಲಿತ್ತು. ಈ ಭೂಕಂಪದ ಬಳಿಕ ಹಲವು ಲಘುಕಂಪನಗಳು ಸಂಭವಿಸಿದ್ದು, 4.6ರಷ್ಟು ತೀವ್ರತೆ ಹೊಂದಿತ್ತು ಎಂದು ವರದಿಯಾಗಿದೆ.

ವಾಕೆರ್‌ನಲ್ಲಿ ಬರ್ಗರ್ ರೆಸ್ಟೋರೆಂಟ್ ನಡೆಸುತ್ತಿರುವ ಸಲ್ಲಿ ರೋಸನ್, ನಾವು ಮನೆಯಿಂದ ಹೊರಗೆ ರೆಸ್ಟೋರೆಂಟ್‌ಗೆ ಓಡಿದೆವು. ಏಕೆಂದರೆ ಅಡುಗೆ ಅನಿಲವನ್ನು ಮೊದಲು ನಾವು ಆಫ್ ಮಾಡಬೇ ಕಿತ್ತು” ಎಂದು ಅನುಭವ ಹಂಚಿಕೊಂಡರು.

ಲೇಕ್ ತಹೋಯ್ ಸುತ್ತಮುತ್ತಲ ಜನತೆಗೆ ಮಾತ್ರವಲ್ಲದೇ ದೂರದ ಫ್ರೆನ್ಸೊ, ಕ್ಯಾಲಿಫೋರ್ನಿಯಾದಲ್ಲೂ ಭೂಕಂಪದ ಅನುಭವವಾಗಿದೆ. 6 ಮೈಲು ಆಳದಲ್ಲಿ ಈ ಕಂಪನ ಸಂಭವಿಸಿದೆ. ಉತ್ತರ ಸೆರ್ರಾ ನವಾಡದ ಮುಖ್ಯ ರಸ್ತೆ (ಯುಎಸ್ 395)ಯಲ್ಲಿ ಬಂಡೆಕಲ್ಲುಗಳು ಉರುಳಿರುವುದರಿಂದ ರಸ್ತೆ ಮುಚ್ಚಲಾಗಿದೆ ಎಂದು ಸಾರಿಗೆ ಇಲಾಖೆ ಹೇಳಿದೆ.