Friday, 20th September 2024

ರಾಜ್ಯದ ಪ್ರಗತಿಗೆ ಹೊಸ ಮುಖ್ಯಮಂತ್ರಿ ಗಮನ ಹರಿಸಲಿ

ರಾಜ್ಯದ ೩೦ ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ಕಳೆದ ಕೆಲವು ತಿಂಗಳಿನಿಂದ ನಡೆಯುತ್ತಿದ್ದ ರಾಜಕೀಯ ಕಸರತ್ತು ಇದರೊಂದಿಗೆ ಕೊನೆಗೊಂಡಿದೆ.

ಮುಖ್ಯಮಂತ್ರಿ ಹುದ್ದೆಗೆ ಹಲವಾರು ಹೆಸರುಗಳು ಕೇಳಿಬಂದಿದ್ದವು. ಲಾಬಿ, ಪ್ರಯತ್ನಗಳು ಸತತವಾಗಿ ನಡೆಯು ತ್ತಿದ್ದರೂ ಅನಿರೀಕ್ಷಿತವಾಗಿ ಬೊಮ್ಮಾಯಿ ಆಯ್ಕೆ ಯಾಗಿದ್ದಾರೆ. ತಾವು ಈ ಹುದ್ದೆಗಾಗಿ ದೆಹಲಿಗೆ ಹೋಗಿ ಎಂದೂ ಲಾಬಿ ಮಾಡಿಲ್ಲ ಎಂದು ಬಸವರಾಜ ಬೊಮ್ಮಾಯಿ ಅವರೇ ಹೇಳಿದ್ದಾರೆ. ಆದರೆ ಯಡಿಯುರಪ್ಪ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ನೇಮಕ ಮಾಡಿರುವುದರಿಂದ ಏನು ಸಾಽಸಿದಂತಾಯಿತು ಎಂದು ಕೇಳುವವರೂ ಇದ್ದಾರೆ. ನಾವು ಒಂದು ಮಾತನ್ನು ಗಮನದಲ್ಲಿ ಇಟ್ಟುಕೊಳ್ಳಬೆಕು. ಅದೇನೆಂದರೆ, ಯಾರೇ ಮುಖ್ಯಮಂತ್ರಿ ಆದರೂ ಸಹ ಯಡಿಯೂರಪ್ಪನವರನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ. ಏಕೆಂದರೆ ಬಿಎಸ್‌ವೈ ಅವರು ಈಗಲೂ ಜನನಾಯಕರು. ಅಪಾರ ಬೆಂಬಲ, ಪ್ರಭಾವ ಉಳ್ಳವರು.

ಅವರನ್ನು ಕಡೆಗಣಿಸುವುದು ಸಾಧ್ಯವೇ ಇಲ್ಲ. ಯಾರೇ ಆದರೂ ಅವರ ಮಾರ್ಗದರ್ಶನ ಬೇಕೇ ಬೇಕು. ಈಗ ಬಸವ ರಾಜ ಬೊಮ್ಮಾಯಿ ಆಯ್ಕೆಯಿಂದ ಲಿಂಗಾಯತರಿಗೂ ಸಮಾಧಾನ ಆಗುತ್ತದೆ. ಇದು ಮಾತ್ರವಲ್ಲದೆ ಇತರ ಕಾರಣ ಗಳಿಂದಲೂ ಬೊಮ್ಮಾಯಿ ಆಯ್ಕೆ ಸ್ವಾಗತಾರ್ಹ. ಎಸ್ ಆರ್ ಬೊಮ್ಮಾಯಿ ಅವರ ಮಗನಾಗಿರುವುದರಿಂದ ಅವರು ಮೊದಲಿನಿಂದಲೂ ರಾಜಕೀಯ ಬೆಳವಣಿಗೆಗಳನ್ನು ನೋಡಿಕೊಂಡೇ ಬೆಳೆ ದವರಾಗಿದ್ದಾರೆ.

ರಾಜಕಿಯ ಪಟ್ಟುಗಳನ್ನೂ ಕಲಿತಿದ್ದಾರೆ. ಜತೆಗೆ ಸಚಿವರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಅನುಭವವಿದೆ. ಎಲ್ಲ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಒಡನಾಟವಿದೆ. ಎಲ್ಲರನ್ನೂ ಜತೆಯಲ್ಲಿ ಕರೆದುಕೊಂಡು ಹೋಗುವ ಜಾಣ್ಮೆ, ತಾಳ್ಮೆ. ಮುತ್ಸದ್ದಿತನ ಇದೆ. ನೀರಾವರಿ ಮೊದಲಾದ ವಿಷಯಗಳಲ್ಲಿ ಪರಿಣತಿ ಇದೆ. ಸರಳ,ಸಜ್ಜನ,ಸಭ್ಯ ರಾಜಕಾರಣಿ ಎಂಬ ಹೆಸರಿದೆ. ಕಾರ್ಯನಿರ್ವಹಿಸುವ ಚಾಕಚಕ್ಯತೆ ಇರುವುದು ಇವರ ವೈಶಿಷ್ಟ್ಯ. ಆರ್ಥಿಕ ಪರಿಸ್ಥಿತಿಯೂ ಸುಭದ್ರವಾಗಿಲ್ಲ. ಈ ಎಲ್ಲ ಸಮಸ್ಯೆ, ಸವಾಲುಗಳನ್ನು ಎದುರಿಸುವತ್ತ ಬೊಮ್ಮಾಯಿ ಗಮನ ಹರಿಸಬೇಕಿದೆ. ಈ ಹೊಸ ಮುಖ್ಯಮಂತ್ರಿಯವರು ಜನರ, ಪಕ್ಷದ ಆಶೋತ್ತರಗಳು ಮತ್ತು
ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸಿ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯಲಿ ಎಂದು ಹಾರೈಸೋಣ.