Thursday, 19th September 2024

ಸಿಡಿಯೋ ಮತ್ತೊಂದು ಒಟ್ಟಿನಲ್ಲಿ ಸುದ್ದಿಯಲ್ಲಿದ್ದರಾಯಿತು.

ಚರ್ಚೆ

ರಾಂ ಎಲ್ಲಂಗಳ, ಮಂಗಳೂರು 

‘ಬಿಜೆಪಿಯಿಂದ ಸಿಡಿ ಬಿಡುಗಡೆ’ ಸುದ್ದಿ ಕೇಳಿ ಸಂಭ್ರಮಿಸಬೇಕಿಲ್ಲ. ಖುಷಿ ಪಡಬೇಕಿಲ್ಲ. ಯಾಕೆಂದರೆ ಇದು ಯಾವುದೇ ಸಿನಿಮಾ ಹಾಡುಗಳ ಸಿಡಿಯಲ್ಲ. ಆಲ್ಬಂ ಸಾಂಗ್‌ಸ್‌ ಸಿಡಿಯಲ್ಲ. ಇದೇನಿದ್ದರೂ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಣ ವಹಿವಾಟು. ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಕೆಸರೆರಚಲು ಕಾಂಗ್ರೆೆಸ್ ಹೊರತಂದ ಧ್ವನಿಸುರುಳಿಗೆ ಪ್ರತಿಯಾಗಿ ಬಿಜೆಪಿ ಕೊಟ್ಟ ಇದಿರೇಟು!

ಅನರ್ಹ ಶಾಸಕರ ಪ್ರಕರಣಕ್ಕೆೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇನ್ನೇನು ತೀರ್ಪು ನೀಡಲಿರುವ ಮುನ್ನ ಕಾಂಗ್ರೆೆಸ್ ಅನರ್ಹ ಶಾಸಕರ ಬಗ್ಗೆೆ ಬಿ.ಎಸ್.ಯಡಿಯೂರಪ್ಪನವರು ಮಾತನಾಡಿದ್ದೆೆನ್ನಲಾಗುವ ಸಿಡಿ ಬಿಡುಗಡೆ ಮಾಡಿತು. ಪ್ರತಿಯಾಗಿ ಬಿಜೆಪಿ ಕೂಡಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಧರ್ಮಸ್ಥಳದ ಶಾಂತಿವನದಲ್ಲಿ ಮಾತನಾಡಿದ್ದೆೆನ್ನಲಾದ ಸಿಡಿಯೊಂದನ್ನು ಬಿಡುಗಡೆ ಮಾಡಿತು. ಮೈತ್ರಿ ಸರಕಾರ ಪತನವಾಗುವುದಾಗಿ ಅಂದವರು ಹೇಳಿದ್ದರೆನ್ನಲಾಗಿದೆ.

ಸತ್ಯವೋ ಸುಳ್ಳೋೋ ಗೊತ್ತಿಲ್ಲ. ಸತ್ಯಾಾಸತ್ಯತೆಯ ಶೋಧನೆಯೂ ಯಾರಿಗೂ ಬೇಕಾಗಿದ್ದಂತಿಲ್ಲ. ಸುಪ್ರೀಂ ಕೋರ್ಟ್ ಆ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದಲ್ಲಿ ಅನರ್ಹ ಶಾಸಕರ ಭವಿಷ್ಯ ಅತಂತ್ರವಾಗಬಹುದು. ಹಾಗಾದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವೂ ಅಲ್ಲಾಾಡಬಹುದು ಇಲ್ಲವೇ ಪತನವಾಗಬಹುದು ಎಂಬುದು ಕಾಂಗ್ರೆೆಸ್ ಲೆಕ್ಕಾಾಚಾರ.

ಆಡಳಿತ ಪಕ್ಷಕ್ಕಿಿರಲಿ ಪ್ರತಿಪಕ್ಷಕ್ಕಿಿರಲಿ ಪರಸ್ಪರ ಕಾಲೆಳೆಯುವುದು ಮುಖ್ಯವೇ ಹೊರತು ಸತ್ಯ ಶೋಧನೆ ಮುಖ್ಯವಾಗಿರುವಂತೆ ತೋರುವುದಿಲ್ಲ. ಒಂದಷ್ಟು ಸದ್ದು ಮಾಡಿ ಸುದ್ದಿಯಲ್ಲಿದ್ದರಾಯಿತು. ಇಷ್ಟಕ್ಕೆೆ ‘ಬೊಫೋರ್ಸ್ ಹಗರಣ’, ‘ರಫೇಲ್ ಹಗರಣ’ಗಳು ಬೇಕಿಲ್ಲ. ಅವರಿವರ ಅಸಂಬದ್ಧ ಹೇಳಿಕೆಗಳೂ ಸಾಕು. ಸದ್ಯ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಿ ಹೇಳಿದರೆನ್ನಲಾಗುವ ಹೇಳಿಕೆಗಳ ಸಿಡಿಗಳು ಸದ್ದು ಮಾಡುತ್ತಿಿವೆ. ಇನ್ನೇನೂ ಬೇಡ. ಒಂದಷ್ಟು ದಿನ ಕೆಸರೆರೆಚಾಟಕ್ಕೆೆ ಸಾಕು. ಸದ್ಯ ಅಧಿವೇಶನ ನಡೆಯುತ್ತಿಿಲ್ಲ. ನಡೆಯುತ್ತಿಿದ್ದಲ್ಲಿ ಕಲಾಪವನ್ನು ನುಂಗಿ ನೊಣೆಯಲು ಇಷ್ಟೇ ಸಾಕಿತ್ತು.

ಸ್ವಲ್ಪ ಫ್ಲಾಾಶ್ ಬ್ಯಾಾಕಿಗೆ ಹೋಗೋಣ. ಇಂದು ಸಿಡಿ ಸದ್ದು ಮಾಡಿದಂತೆ ಅಂದೊಮ್ಮೆೆ ಡೈರಿ ಸದ್ದು ಮಾಡಿತ್ತು. ಕಾಂಗ್ರೆೆಸ್ ಎಂಎಲ್‌ಸಿಯಾಗಿದ್ದ ಗೋವಿಂದರಾಜು ಮನೆಯ ಬೆಡ್‌ರೂಮಿನಲ್ಲಿ ಸಿಕ್ಕಿಿತೆನ್ನಲಾದ ಡೈರಿಯಲ್ಲಿ ಕಾಂಗ್ರೆೆಸ್ ಹೈಕಮಾಂಡ್‌ಗೆ ಕಪ್ಪ ಕೊಟ್ಟ ಅನೇಕ ಕಾಂಗ್ರೆೆಸಿಗರ ಹೆಸರಿತ್ತೆೆಂದು ಬಿಜೆಪಿ ಆರೋಪಿಸಿತ್ತು. ಆದರೆ, ಕಾಂಗ್ರೆೆಸ್ ಆ ಅರೋಪವನ್ನು ನಿರಾಕರಿಸಿತ್ತು. ಪ್ರತಿಯಾಗಿ ಬಿಜೆಪಿಯ ಲೆಹರ್ ಸಿಂಗ್‌ಗೆ ಸೇರಿದ ಡೈರಿಯನ್ನು ಹುಡುಕಿ ಹೊರತೆಗೆದು 390.80 ಕೋಟಿ ರು. ಕಪ್ಪಕೊಟ್ಟ ವಿಷಯ ಹೊರಹಾಕಿತ್ತು. ಏಟಿಗೆ ಇದಿರೇಟು ಅಷ್ಟೆೆ!

ಚುನಾವಣೆ ಸಮೀಪಿಸಿದಾಗಂತೂ ಅಲ್ಲಿ ಇಲ್ಲಿ ತಡಕಾಡಿ ಇಂಥದ್ದೇನಾದರೂ ವಿಷಯವನ್ನು ಸರಕಾರದ ವಿರುದ್ಧ ಅಸ್ತ್ರವನ್ನಾಾಗಿ ಕೈಗೆತ್ತಿಿಕೊಳ್ಳುವುದು ರೂಢಿ. ಈಗ ಆದುದೂ ಅದೇ. ಸದ್ಯದಲ್ಲೇ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಸರಕಾರ ಪತನಕ್ಕೆೆ ಸಹಕಾರಿಯಾಗಬಹುದೆಂಬ ಲೆಕ್ಕಾಾಚಾರದಿಂದ ಕಾಂಗ್ರೆೆಸ್ ಯಡಿಯೂರಪ್ಪ ವಿರುದ್ಧ ಸಿಡಿ ಅಸ್ತ್ರವನ್ನು ಕೈಗೆತ್ತಿಿಕೊಂಡಿತು. ಆದರೆ, ಅಸ್ತ್ರಕ್ಕೆೆ ಪ್ರತ್ಯಸ್ತ್ರ ಇದ್ದೇ ಇದೆಯಲ್ಲ. ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಮತ್ತೊೊಂದು ಸಿಡಿ ಅಸ್ತ್ರವನ್ನು ಕೈಗೆತ್ತಿಿಕೊಂಡಿತು. ಯಾವುದೂ ಸಾಬೀತಾಗುವುದೆನ್ನುವಂತಿಲ್ಲ. ಒಂದಷ್ಟು ದಿನ ಸದ್ದು ಮಾಡಿ ಮತ್ತೆೆ ತಣ್ಣಗಾದರೂ ಅಚ್ಚರಿಯಿಲ್ಲ.

ಹಿಂದೆ ಸಂಸತ್ತಿಿನಲ್ಲೂ ‘ಜೈನ್ ಹವಾಲಾ ಡೈರಿ’ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಅದರಲ್ಲಿ ಬಿಜೆಪಿ ನಾಯಕ ಎಲ್.ಕೆ. ಅಡ್ವಾಾಣಿ ಹೆಸರು ಉಲ್ಲೇಖವಾಗಿತ್ತು. ವಿಶೇಷವೆಂದರೆ ಅಡ್ವಾಾಣಿಯವರು ಆ ಕಾರಣಕ್ಕಾಾಗಿಯೇ ಲೋಕಸಭಾ ಸ್ಥಾಾನಕ್ಕೆೆ ರಾಜೀನಾಮೆ ನೀಡಿದ್ದರು. ನ್ಯಾಾಯಾಲಯದಲ್ಲಿ ವಿಚಾರಣೆ ನಡೆದು ಖುಲಾಸೆಗೊಂಡ ಬಳಿಕವಷ್ಟೇ ಸಂಸತ್ತಿಿಗೆ ಮರಳಿ ಪ್ರವೇಶಿಸಿದ್ದರು. ಅದೊಂದು ಅಪರೂಪದ ಸಂದರ್ಭ. ಸಿಡಿ ಪ್ರಕರಣವಾಗಲೀ ಡೈರಿ ಹಗರಣವಾಗಲೀ ವಿಚಾರಣೆಗೊಳಪಟ್ಟು ಸತ್ಯಾಾಂಶ ಹೊರಬಿದ್ದ ಮತ್ತೊೊಂದು ಉದಾಹರಣೆಯಿದ್ದಂತಿಲ್ಲ. ರಾಜ್ಯದಲ್ಲಿ ಮೈತ್ರಿಿ ಸರಕಾರ ಅಸ್ತಿಿತ್ವದಲ್ಲಿದ್ದ ವೇಳೆ ಆಪರೇಶನ್ ಕಮಲಕ್ಕೆೆ ಸಂಬಂಧಿಸಿದ ಆಡಿಯೋ ಪ್ರಕರಣ ಸದ್ದು ಮಾಡಿತ್ತು. ಅದರ ತನಿಖಾ ಕಾರ್ಯವನ್ನು ಎಸ್‌ಐಟಿಗೆ ಒಪ್ಪಿಿಸುವಂತೆ ಮೈತ್ರಿ ಸರಕಾರ ಆಗ್ರಹಿಸಿತು. ಬಿಜೆಪಿ ವಿರೋಧಿಸಿತು. ಪರಿಣಾಮವಾಗಿ ಪ್ರಕರಣ ಎಲ್ಲಿ ಅಡಿಗೆ ಬಿತ್ತೋೋ ತಿಳಿಯದು.

ಬಹುತೇಕ ಆರೋಪಗಳ ಹಿಂದೆ ಸತ್ಯಾಾಂಶವಿರುವುದಿಲ್ಲ. ಆದರೆ, ಸರಕಾರವನ್ನು ಅಲ್ಲಾಾಡಿಸುವ ಉದ್ದೇಶವಿರುತ್ತದೆ. ಇಲ್ಲವೇ ಮುಂದೆ ಸಾಗುತ್ತಿರುವವರ ಕಾಲೆಳೆಯುವ ದುರುದ್ದೇಶವಿರುತ್ತದೆ. ಮತ್ತೊೊಬ್ಬರ ಪ್ರಾಾಬಲ್ಯವನ್ನು ಕುಗ್ಗಿಿಸಿಯಾದರೂ ತಾವು ಮುಂದೆ ಬರಬೇಕೆಂಬ ಸ್ವಾಾರ್ಥವಿರುತ್ತದೆ. ಆಗಿಂದಾಗ್ಗೆೆ ಸರಕಾರ ಬದಲಾದಾಗೆಲ್ಲ ಪ್ರತಿಪಕ್ಷ ಸ್ಥಾಾನದಲ್ಲಿ ಕೂರುವ ಪಕ್ಷವು ಸರಕಾರ ಪತನಗೊಳ್ಳುವುದನ್ನೇ ಚಾದಗೆಯಂತೆ ಬಾಯಿಬಿಟ್ಟು ಕಾಯುವುದು ಕ್ರಮ. ಹಿಂದೆ ಮೈತ್ರಿಿ ಸರಕಾರ ಅಧಿಕಾರದಲ್ಲಿದ್ದಾಾಗ ಅದು ಪತನಗೊಳ್ಳುವುದನ್ನೇ ಕಾದು ಕುಳಿತಿತ್ತು ಬಿಜೆಪಿ. ಆ ಬಗ್ಗೆೆ ಕಾಂಗ್ರೆೆಸಿನ ರಾಮಸ್ವಾಾಮಿಯವರು ಬಿಜೆಪಿಯನ್ನು ಕತ್ತೆೆಗೆ ಹೋಲಿಸಿ ಹೇಳಿದ ಕತೆಯೊಂದು ನೆನಪಿಗೆ ಬರುತ್ತಿಿದೆ. ಸರ್ಕಸ್ಸಿಿನಲ್ಲಿ ಹಗ್ಗದ ಮೇಲೆ ಬಾಲಕಿ ನಡೆಯುವಾಗ ಬಿದ್ದರೆ ಕತ್ತೆೆ ಜತೆ ಮದುವೆ ಮಾಡಿಸುವುದಾಗಿ ಅಪ್ಪ ಹೆದರಿಸುತ್ತಿಿದ್ದನಂತೆ. ಕತ್ತೆೆ ಕಾದದ್ದೇ ಬಂತು. ವಯಸ್ಸಾಾಗಿ ಸತ್ತೇ ಹೋಯಿತಂತೆ. ಈ ಕತೆ ಹೇಳಿದ ಕೆಲವೇ ದಿನಗಳಲ್ಲಿ ಮೈತ್ರಿಿ ಕತೆ ಮುಗಿದಿದೆ. ಆ ವಿಚಾರ ಬಿಡಿ.

ಈಗ ಈ ಕತೆ ಕಾಂಗ್ರೆೆಸಿಗೇ ಅನ್ವಯವಾಗುವಂತಿದೆ. ಇದೀಗ ಕಾಯುವ ಸರದಿ ಕಾಂಗ್ರೆೆಸಿನದು. ಸದ್ಯದಲ್ಲೇ ನಡೆಯಲಿರುವ ವಿಧಾನಸಭಾ ಉಪಚುನಾವಣೆಯ ಬಳಿಕ ಯಡಿಯೂರಪ್ಪ ಸರಕಾರ ಪತನಗೊಳ್ಳಬಹುದೆಂಬ ನಿರೀಕ್ಷೆ ಅದರದು. ಯಡಿಯೂರಪ್ಪನವರು ಅನರ್ಹ ಶಾಸಕರ ಬಗ್ಗೆೆ ಆಡಿದರೆನ್ನಲಾದ ಧ್ವನಿಸುರುಳಿ ಬಿಡುಗಡೆ ಆ ನಿಟ್ಟಿಿನಲ್ಲೊೊಂದು ಪ್ರಯತ್ನ. ಅತಂತ್ರ ಶಾಸಕರಲ್ಲೋೋ ಸುಪ್ರೀಂ ಕೋರ್ಟ್ ಆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದಲ್ಲಿ ತಮ್ಮ ಭವಿಷ್ಯ ಅತಂತ್ರವಾಗುವ ಆತಂಕ. ಯಡಿಯೂರಪ್ಪನವರಿಗೋ ಸಿಡಿ ವೈರಲ್ ಮಾಡುವಲ್ಲಿ ಸ್ವಪಕ್ಷೀಯರ ಕೈವಾಡವಿರುವ ಅನುಮಾನ! ಕಾಂಗ್ರೆೆಸ್ ಕೂಡಾ ಹಾಗೆಂದೇ ಹೇಳಿದೆ.

ಸಿಡಿ ಬೆನ್ನಿಿಗೆ ಸಿಡಿ ಬಿಡುಗಡೆಯಾಗಲಿ. ಆದರೆ, ಸತ್ಯಾಾಂಶ ಬೆಳಕಿಗೆ ಬರುವ ಸಾಧ್ಯತೆ ತೀರಾ ವಿರಳ. ವಿಪಕ್ಷಕ್ಕಂತೂ ಅದು ಸರಕಾರವನ್ನು ಅಲ್ಲಾಾಡಿಸುವುದಕ್ಕೊೊಂದು ಅಸ್ತ್ರ. ಅದಲ್ಲವೆಂದರೆ ಏನಕೇನ ಪ್ರಕಾರೇಣ ಸುದ್ದಿಯಲ್ಲಿದ್ದುಕೊಂಡು ತನ್ನ ಅಸ್ತಿಿತ್ವವನ್ನು ಪ್ರಚುರಪಡಿಸುವುದಕ್ಕೊೊಂಡು ದಾರಿ. ದುರಂತವೆಂದರೆ ಇಂತಹ ಅಲ್ಪ ವಿಷಯಗಳ ಕುರಿತ ಚರ್ಚೆಗೆ ವ್ಯಯವಾಗುವ ಸಮಯ ಹಾಗೂ ಶ್ರಮ ನಾಡಿನ ಅಭಿವೃದ್ಧಿಿಪರ ಕಾರ್ಯಗಳ ಕುರಿತ ಚರ್ಚೆಗೆ ಸದ್ವಿಿನಿಯೋಗವಾಗುವುದಿಲ್ಲವಲ್ಲಾಾ!