Thursday, 19th September 2024

ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಮಹತ್ವ

ಆಚರಣೆ

ಆದರ್ಶ್ ಶೆಟ್ಟಿಿ ಉಪ್ಪಿಿನಂಗಡಿ,ಪುತ್ತೂರು 

ಪ್ರತಿ ವರ್ಷದಂತೆ ಈ ವರ್ಷವೂ ನವೆಂಬರ್ 14 ರಿಂದ 20 ನೇ ತಾರೀಖಿನವರೆಗೆ 66 ನೇ ಸಹಕಾರಿ ಸಪ್ತಾಾಹವನ್ನು ದೇಶಾದ್ಯಂತ ಆಚರಿಸಲಾಗುತ್ತಿಿದೆ. ದೇಶದ ಆರ್ಥಿಕ ಅಭಿವೃದ್ಧಿಿ ಮತ್ತು ರೈತರ, ಉದ್ಯಮದಾರರ ಶ್ರೇಯೋಭಿವೃದ್ಧಿಿಗಾಗಿ ರಾಜ್ಯದಲ್ಲಿ ನೂರಾರು ವ್ಯವಸಾಯಿಕ ಸಂಘಗಳು, ಡಿಸಿಸಿ ಬ್ಯಾಾಂಕ್, ವಿವಿಧೋದ್ದೇಶ, ಕೆಎಂಎಫ್, ಪ್ರಾಾಥಮಿಕ ಪತ್ತಿಿನ ಸಂಘಗಳು ಹೀಗೆ ನಾನಾ ಉದ್ದೇಶಗಳಿಗಾಗಿ ನೂರಾರು ಸಹಕಾರಿ ಸಂಘಗಳು, ಯೂನಿಯನ್‌ಗಳು ಸಮಾಜಕ್ಕೆೆ ಹತ್ತಾಾರು ಕೊಡುಗೆಗಳನ್ನು ನೀಡಿದೆ. ಏಷ್ಯಾಾದಲ್ಲೇ ಮೊದಲಿಗೆ ಕರ್ನಾಟಕ ರಾಜ್ಯದ ಗದಗ ಜಿಲ್ಲೆಯಲ್ಲಿ ‘ಸಹಕಾರ ಚಳುವಳಿ’ ಆರಂಭಗೊಂಡು ಇಂದು ಗ್ರಾಾಮ ಗ್ರಾಾಮಗಳಲ್ಲಿ ಸಹಕಾರಿ ಸಂಘಗಳು ಕೃಷಿ, ವಾಣಿಜ್ಯ, ಕೈಗಾರಿಕೆ, ಗೃಹ, ವಾಹನ, ಅಡಮಾನ, ಚಿನ್ನಾಾಭರಣ ಸಾಲ ಸೇರಿದಂತೆ ನೂರಾರು ಸೇವೆಗಳನ್ನು ಗ್ರಾಾಮೀಣ ನಗರ ಭಾಗದ ಜನರಿಗೆ ನೀಡುತ್ತಿಿದೆ.

ಆಧುನಿಕತೆಗಳು ಬೆಳೆದಂತೆ ಹಿರಿಯ ಸಹಕಾರಿಗಳ ಪರಿಶ್ರಮದಿಂದ ಬ್ಯಾಾಂಕಿಂಗ್ ಕ್ಷೇತ್ರದಲ್ಲಿ ಪರಿವರ್ತನೆಗಳಾಗಿದ್ದು, ಗಣಕೀಕರಣ, ಡಿಜಿಟಲೀಕರಣ ಮೂಲಕ ಸಹಕಾರ ರಂಗ ಜನರ ಪ್ರಗತಿಗೆ ಸಾಕಷ್ಟು ಒತ್ತು ನೀಡುತ್ತಾಾ ಬರುತ್ತಿಿದೆ. ಸಹಕಾರ ಚಳವಳಿಗೆ ಹೆಚ್ಚಿಿನ ಪ್ರಾಾಶಸ್ತ್ಯ ನೀಡಿ ಈ ಕ್ಷೇತ್ರದ ಪ್ರಗತಿಗೆ ನೆರವಾದ ಪಂ.ಜವಹರ್ ಲಾಲ್ ನೆಹರು ಸ್ಮರಣೆಗಾಗಿ ಅವರ ಜನ್ಮದಿನದಂದು ಕಾರ್ಯಕ್ರಮ ಆರಂಭಿಸಿ ಸುಮಾರು ಏಳು ದಿನಗಳ ಕಾಲ ಜಿಲ್ಲಾವಾರು ಸಹಕಾರ ಯೂನಿಯನ್ ಮತ್ತು ಸಂಘಗಳ ಮೂಲಕ ಸಹಕಾರ ಸಪ್ತಾಾಹವನ್ನು ಹಮ್ಮಿಿಕೊಂಡು ವಿಚಾರ ಸಂಕಿರಣ, ಜಿಲ್ಲಾ ಮಟ್ಟದ ಸಹಕಾರ ಕ್ಷೇತ್ರದ ಸಾಧಕರಿಗೆ ಕಾರ್ಯಕ್ರಮ, ಕಾರ್ಯಾಗಾರ ಹೀಗೆ ಹತ್ತಾಾರು ಕಾರ್ಯಕ್ರಮಗಳನ್ನು ಹಮ್ಮಿಿಕೊಂಡು ಸಹಕಾರಿ ಸಪ್ತಾಾಹವನ್ನು ಸಹಕಾರ ರಂಗಗಳು ಅರ್ಥಪೂರ್ಣವಾಗಿ ಆಚರಿಸುತ್ತಾಾ ಬರುತ್ತಿಿದೆ. ಸಹಕಾರಿ ಸಪ್ತಾಾಹದ ಏಳು ದಿವಸದಲ್ಲಿ ಎಲ್ಲಾ ಸಹಕಾರ ಸಂಸ್ಥೆೆಗಳು ತಮ್ಮ ಕಟ್ಟಡದ ಮೇಲೆ ಕಡ್ಡಾಾಯವಾಗಿ ಸಹಕಾರಿ ಧ್ವಜವನ್ನು ಹಾರಿಸಬೇಕೆಂಬ ನಿಯಮಗಳಿದ್ದು, ಈ ಧ್ವಜವು ಕಾಮನ ಬಿಲ್ಲಿನ ಏಳು ಬಣ್ಣಗಳಾದ ನೀಲಿ, ಕೇಸರಿ, ಕೆಂಪು, ಹಸಿರು, ಹಳದಿ, ನೇರಳೆ ಬಣ್ಣಗಳನ್ನು ಒಳಗೊಂಡಿದೆ. ಏಳು ಬಣ್ಣಗಳು ಏಳು ತತ್ವಗಳನ್ನು ಒಳಗೊಂಡಿರುವುದಲ್ಲದೆ ಧ್ವಜ ಹಾರಿಸುವ ಕೆಂಪು ಬಣ್ಣವು ಮೇಲ್ಭಾಾಗಕ್ಕೆೆ ಬರುವಂತೆ ಹಾರಿಸಬೇಕೆಂಬ ಸಹಕಾರಿ ನಿಯಮವಿದೆ.

ಸಹಕಾರಿ ಸಂಘಗಳು ಸ್ವಸಹಾಯ, ಪ್ರಜಾಸತ್ತೆೆ, ಸಮಾನತೆ, ಸ್ವಾಾವಲಂಬನೆ ಹಾಗೂ ಸ್ವಯಂ ಹೊಣೆಗಾರಿಕೆ ಮೌಲ್ಯಗಳ ಮೇಲೆ ಅವಲಂಬಿತವಾಗಿದ್ದು, ಸಹಕಾರಿ ರಂಗಗಳು ಯಾವುದೇ ಅವ್ಯವಹಾರದಿಂದ ಕೂಡಿರದೆ ಪಾರದರ್ಶಕ ಸೇವೆಗಳ ಜತೆಗೆ ಸದಸ್ಯರು ಪ್ರಾಾಮಾಣಿಕತೆ ಹಾಗೂ ಜವಾಬ್ದಾಾರಿಯಿಂದ ಕಾರ್ಯನಿರ್ವಹಿಸಬೇಕಾದ ಹೊಣೆಯು ಅತ್ಯವಶ್ಯಕ. ಸಹಕಾರವೆಂದರೆ ಎಲ್ಲರೂ ಒಟ್ಟಾಾಗಿ ಕಾರ್ಯನಿರ್ವಹಿಸುವುದು, ಸಹಕಾರವೆಂದರೆ ಒಟ್ಟುಗೂಡುವುದರ ಜತೆಗೆ ಸರ್ವರ ಹಿತವನ್ನು ಕಾಪಾಡುವುದು ಸಹಕಾರಿ ರಂಗಗಳ ಮೂಲಕ ಐಕ್ಯತೆಯನ್ನು ಕಾಪಾಡುವ ಅಡಕವಾಗಿದೆ. ಇಂದು ರಾಜಕೀಯ ರಂಗಕ್ಕೆೆ ಮತ್ತು ಸಹಕಾರಿ ರಂಗಕ್ಕೆೆ ಬಹಳ ಹತ್ತಿಿರದ ನಂಟಿನ ಜತೆಗೆ ರಾಜ್ಯದ ಹಲವಾರು ರಾಜಕಾರಣಿಗಳ ಯಶಸ್ಸಿಿನ ಮೊದಲ ಮೆಟ್ಟಿಿಲು ಕೂಡ ಸಹಕಾರಿ ರಂಗವೇ ಎಂಬುವುದು ಗಮನಾರ್ಹ ಅಂಶ. ಸಹಕಾರಿ ರಂಗದಲ್ಲಿ ಸೇವೆ ಸಲ್ಲಿಸಿ ರಾಜಕೀಯ ಪ್ರವೇಶಿಸಿದ ಹಲವಾರು ರಾಜಕಾರಣಿಗಳು ಸಮಾಜದ ಅಗ್ರಪಂಕ್ತಿಿಯಲ್ಲಿ ಕಾಣಸಿಗುತ್ತಾಾರೆ. ಒಟ್ಟಿಿನಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಸಾಕಷ್ಟು ಕೊಡುಗೆ ನೀಡಿರುವ ಸಹಕಾರಿ ರಂಗದ 66 ನೇ ಸಪ್ತಾಾಹದ ಹೊಸ್ತಿಿಲಿನಲ್ಲಿದೆ. ದೇಶದ ಸಹಕಾರ ಕ್ಷೇತ್ರವು ಇನ್ನಷ್ಟು ಸರ್ವವ್ಯಾಾಪಿ, ಸರ್ವಸ್ಪರ್ಶಿಯಾಗಿ ಜನರಿಗೆ ಸೇವೆಗಳನ್ನು ಒದಗಿಸುವಲ್ಲಿ ಮುಂದಡಿಯಿಡಲಿ ಎಂಬುದು ಹಾರೈಕೆ.