Thursday, 19th September 2024

ಎಸ್‌ಎಸ್‌ಎಲ್‌ಸಿ , ಪಿ.ಯು ಪರೀಕ್ಷೆ ವ್ಯವಸ್ಥಿತವಾಗಿ ನಡೆಯಲಿ

ಪ್ರಸ್ತುತ

. ದಿಲೀಪ್ ಕುಮಾರ್ ಸಂಪಡ್ಕ, ಮಂಗಳೂರು 

ಎಸ್‌ಎಸ್‌ಎಲ್‌ಸಿ ಮತ್ತು ಪಿ.ಯು ಪರೀಕ್ಷೆಗಳು ವಿದ್ಯಾಾರ್ಥಿಗಳ ಕಲಿಕಾ ಜೀವನದ ಪ್ರಮುಖ ಮೈಲುಗಲ್ಲು. ಈ ಪರೀಕ್ಷೆಗಳನ್ನು ನಡೆಸಲು ವೇಳಾಪಟ್ಟಿಿಗಳು ಸಹ ಪ್ರಕಟಗೊಂಡಿದೆ. ಶಿಕ್ಷಕರು ತಮ್ಮ ತಮ್ಮ ವಿಷಯಕ್ಕೆೆ ಸಂಬಂಧಿಸಿದಂತೆ ವಿಶೇಷ ತರಗತಿಗಳನ್ನು, ಕಲಿಕೆಯ ಸುಲಭ ತಂತ್ರಗಳ ಜತೆಗೆ ವಿದ್ಯಾಾರ್ಥಿಗಳನ್ನು ತಯಾರು ಮಾಡುವ ಸುಸಂದರ್ಭ ಬಂದಿದೆ.

ಇತ್ತೀಚೆಗೆ ಪ್ರಾಾಥಮಿಕ ಮತ್ತು ಪ್ರೌೌಢ ಶಿಕ್ಷಣ ಸಚಿವರು ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ಮಕ್ಕಳಲ್ಲಿ ಪರೀಕ್ಷೆಯ ಬಗ್ಗೆೆ ಧನಾತ್ಮಕ ಭಾವನೆಯನ್ನು ಬೆಳೆಸಲು ಪ್ರಾಾಥಮಿಕ ಹಂತದಲ್ಲಿಯೇ ಪಬ್ಲಿಿಕ್ ಪರೀಕ್ಷೆಯನ್ನು ಜಾರಿಗೊಳಿಸಲು ನಿರ್ಧರಿಸಿದ್ದರು. ಆದರೆ, ಹಲವು ವಲಯಗಳಿಂದ ಈ ನಿರ್ಧಾರಕ್ಕೆೆ ವಿರೋಧಗಳು ವ್ಯಕ್ತವಾದವು. ಹತ್ತನೇಯ ತರಗತಿಯ ನಂತರ ಪ್ರತಿ ಹಂತದಲ್ಲೂ ಸಂಬಂಧಿಸಿದ ಮಂಡಳಿಗಳು ವಿದ್ಯಾಾರ್ಥಿಗಳಿಗೆ ಪಬ್ಲಿಿಕ್ ಪರೀಕ್ಷೆಗಳನ್ನು ಮಾಡುತ್ತವೆ. ಹಿಂದಿನಿಂದಲೂ ಈ ಪರೀಕ್ಷೆಗಳು ಬದಲಾದ ಸನ್ನಿಿವೇಶಗಳಲ್ಲಿ ಹಲವು ಬದಲಾವಣೆಗಳನ್ನು ಕಾಣುತ್ತ ನಡೆಯುತ್ತಿಿದೆ. ಈ ಪರೀಕ್ಷೆಗಳು ಮಕ್ಕಳ ಕಲಿಕಾ ಸಾಮರ್ಥ್ಯಗಳನ್ನು ಮೌಲ್ಯಮಾಪನ ಮಾಡುವುದರ ಜತೆಗೆ, ಶಿಕ್ಷಕರ ಬೋಧನೆಯನ್ನು ಮತ್ತು ಶಾಲೆಯ ಪ್ರತಿಷ್ಠೆೆಯನ್ನು ಅಳೆಯುವ ಮನದಂಡವಾಗಿಯೂ ಪರಿಣಮಿಸಿರುವುದು ವಿಶೇಷ.

ಈಗ ಈ ಪರೀಕ್ಷೆಗಳನ್ನು ನಡೆಸಲು ವೇಳಾಪಟ್ಟಿಿಗಳು ಸಹ ಪ್ರಕಟಗೊಂಡಿದೆ. ಶಿಕ್ಷಕರು ತಮ್ಮ ತಮ್ಮ ವಿಷಯಕ್ಕೆೆ ಸಂಬಂಧಿಸಿದಂತೆ ವಿಶೇಷ ತರಗತಿಗಳನ್ನು, ಕಲಿಕೆಯ ಸುಲಭ ತಂತ್ರಗಳ ಜತೆಗೆ ವಿದ್ಯಾಾರ್ಥಿಗಳನ್ನು ತಯಾರು ಮಾಡುತ್ತಿಿದ್ದಾಾರೆ. ಇಲ್ಲಿ ಶಿಕ್ಷಕರು ಮತ್ತು ವಿದ್ಯಾಾರ್ಥಿಗಳು ಪಡುವ ಪಾಡು ಬಹಳಷ್ಟಿಿದೆ. ಆದರೆ, ಪರೀಕ್ಷೆ ಪ್ರಾಾರಂಭವಾಗಿ ಫಲಿತಾಂಶ ಪ್ರಕಟವಾಗುವವರೆಗೆ ಪ್ರತಿ ಹಂತದಲ್ಲೂ ಗೊಂದಲಗಳು ಆವರಿಸಿರುವುದು ಎಲ್ಲರನ್ನು ಪರೀಕ್ಷೆ ನಡೆಯುವ ಪ್ರಕ್ರಿಿಯೆಯ ಬಗ್ಗೆೆ ಅಸಮಧಾನ ಮೂಡಿಸುವಂತೆ ಮಾಡುತ್ತಿಿರುವುದು ವಿಷಾದನೀಯ. ಅವುಗಳನ್ನು ಈಗ ವಿಮರ್ಶೆ ಮಾಡಿ, ಪರಿಹಾರ ಕಂಡುಕೊಳ್ಳಲು ಈ ಕಾಲ ಪಕ್ವವಾಗಿದೆ. ಅವುಗಳಲ್ಲಿ ಮುಖ್ಯವಾದುದು.

ಪ್ರಶ್ನೆೆಪತ್ರಿಿಕೆ ಸೋರಿಕೆ ಮಾಡುವುದರಿಂದ ಕೆಲ ಪರೀಕ್ಷೆಯ ಪ್ರಶ್ನೆೆಪತ್ರಿಿಕೆಗಳು ಪರೀಕ್ಷೆಯ ಮೊದಲೇ ಸೋರಿಕೆಯಾಗುವುದನ್ನು ನಾವು ದಿನ ಪತ್ರಿಿಕೆಗಳಲ್ಲಿ ಆಗಾಗ ನೋಡುತ್ತಿಿರುತ್ತೇವೆ. ರಾಜ್ಯಮಟ್ಟದಲ್ಲಿ ಏಕ ಹಂತದಲ್ಲಿ ನಡೆಯುವ ಈ ಪರೀಕ್ಷೆಗಳ ವಿಚಾರದಲ್ಲಿ ಸಾಕಷ್ಟು ಗೌಪ್ಯತೆ ಮತ್ತು ಭದ್ರತೆ ಕ್ರಮಗಳನ್ನು ಕೈಗೊಂಡರೂ ಸಹ ಪ್ರಶ್ನೆೆಪತ್ರಿಿಕೆಗಳು ಸೋರಿಕೆಯಾಗುತ್ತಿಿರುವುದು ಪರೀಕ್ಷೆಯ ಪಾರದರ್ಶಕತೆಯ ಬಗ್ಗೆೆ ಅನುಮಾನ ಪೋಷಕರಲ್ಲಿ ಮತ್ತು ವಿದ್ಯಾಾರ್ಥಿಗಳಲ್ಲಿ ಮೂಡುತ್ತದೆ. ಕೆಲವೊಮ್ಮೆೆ ಕಿಡಿಗೇಡಿಗಳು ಗೊಂದಲ ಸೃಷ್ಟಿಿಸಲು ವಾಟ್‌ಸ್‌‌ಪ್ ಮೂಲಕ ತಪ್ಪುು ಮಾಹಿತಿಗಳನ್ನು ರವಾನೆ ಮಾಡುವುದು ಸಹ ಗೊಂದಲಕ್ಕೆೆ ಕಾರಣವಾಗಿದೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ.

ಸಾಮೂಹಿಕ ನಕಲು ಎಂಬುದು ಇನ್ನು ಹಲವು ಪರೀಕ್ಷಾ ಕೇಂದ್ರಗಳಲ್ಲಿ ಸಾಮೂಹಿಕ ನಕಲಿಗೆ ಅವಕಾಶ ಮಾಡಿಕೊಡುತ್ತಿಿರುವುದರ ಬಗ್ಗೆೆ ದಾಖಲೆ ಸಮೇತ ದೃಶ್ಯ ಮಾಧ್ಯಮದಲ್ಲಿ ಪ್ರಸಾರಗೊಳ್ಳುತ್ತಿಿರುವುದಕ್ಕೆೆ ನಾವು ಸಾಕ್ಷಿಯಾಗಿದ್ದೇವೆ. ಇದಕ್ಕೆೆ ಅಧಿಕಾರಿ ವರ್ಗದವರ ಸಹಕಾರ ಇದೆ ಎನ್ನುವುದು ‘ಬೇಲಿ ಎದ್ದು ಹೊಲ ಮೇಯ್ದಂತೆ’ ಎಂಬುದಕ್ಕೆೆ ಇಂಬು ನೀಡಿದಂತಾಗಿದೆ. ಇದನ್ನು ತಪ್ಪಿಿಸಲು ಇಲಾಖೆ ಸಿಸಿ ಕ್ಯಾಾಮೆರಾ ಅಳವಡಿಸಿದರೆ, ಅವುಗಳನ್ನು ಪರೀಕ್ಷಾ ಕೇಂದ್ರದ ಹೊರ ಜಗುಲಿ ಹಾಕುತ್ತಿಿರುವುದು ಸಾಮಾನ್ಯ. ಇದರಿಂದ ಸಿಸಿ ಕ್ಯಾಾಮೆರಾ ಅಳವಡಿಕೆಯ ಪ್ರಯೋಜನವಾದರೂ ಏನು? ಇನ್ನು ಸಿಸಿ ಕ್ಯಾಾಮೆರಾ ಅಳವಡಿಕೆ ವಿದ್ಯಾಾರ್ಥಿಗಳಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತದೆ ಎಂಬ ಸಮಜಾಯಿಷಿ ಸಾಮೂಹಿಕ ನಕಲಿಗೆ ಪ್ರೋೋತ್ಸಾಾಹ ನೀಡುವಂತಾಗಿದೆ.

ಪ್ರಶ್ನೆೆಪ್ರತಿಕೆಯಲ್ಲಿ ದೋಷಗಳು ಉಂಟಾದ ಪ್ರತಿ ಪ್ರಶ್ನೆೆಪ್ರತಿಕೆಗಳನ್ನು ಸಾಕಷ್ಟು ಪೂರ್ವ ತಯಾರಿಗಳೊಂದಿಗೆ ವಿಷಯವಾರು ತಜ್ಞರಿಂದ ಸಹಾಯಗಳನ್ನು ಪಡೆದು ರೂಪಿಸಬೇಕಾಗುತ್ತದೆ. ಆದರೆ, ಹಲವು ಸಲ ಪ್ರಶ್ನೆೆಪ್ರತಿಕೆಗಳಲ್ಲಿ ದೋಷಗಳಿರುವುದನ್ನು ನೋಡಿರುತ್ತೇವೆ. ಇದು ವಿದ್ಯಾಾರ್ಥಿಗಳನ್ನು ಪರೀಕ್ಷಾ ಕೇಂದ್ರದಲ್ಲಿ ಗೊಂದಲಕ್ಕಿಿಡುಮಾಡುತ್ತಿಿದೆ. ಹಾಗಾಗಿ ಪ್ರಶ್ನೆೆಪ್ರತಿಕೆಗಳನ್ನು ಸೂಕ್ತ ಮೇಲ್ವಿಿಚಾರಣೆ ಮಾಡಿ ತಯಾರು ಮಾಡಲು ಕ್ರಮಕೈಗೊಳ್ಳಬೇಕಿದೆ.

ಮೌಲ್ಯಮಾಪನಕ್ಕೆೆ ಶಿಕ್ಷಕರು ಬಹಿಷ್ಕಾಾರ ಹಾಕುತ್ತಿಿರುವುದು ಸಹ ಪ್ರತಿ ವರ್ಷ ಸಾಮಾನ್ಯವಾಗಿದೆ. ಇದಕ್ಕೆೆ ಮುಖ್ಯ ಕಾರಣ ಮೌಲ್ಯಮಾಪಕರಿಗೆ ನೀಡುವಂತಹ ಗೌರವಧನವೂ ತೀರ ಕಡಿಮೆಯಾಗಿರುವುದು. ಬಹುತೇಕ ಮೌಲ್ಯಮಾಪನ ಕಾರ್ಯಗಳು ರಜಾ ದಿನಗಳಲ್ಲಿ ನಡೆಯುತ್ತವೆ. ಶಿಕ್ಷಕರು ತಮ್ಮ ರಜಾ ದಿನಗಳನ್ನು ತ್ಯಾಾಗ ಮಾಡಿ, ಈ ಕಾರ್ಯದಲ್ಲಿ ಭಾಗವಹಿಸಿ ಎಲ್ಲಾಾ ಪ್ರಕ್ರಿಿಯೆಗಳನ್ನು ನಿಗದಿಪಡಿಸಿದ ಸಮಯದಲ್ಲಿ ಮುಗಿಸಿದರೂ, ಅವರಿಗೆ ನೀಡುವ ಗೌವರಧನವೂ ತೀರ ಕಡಿಮೆ ಮತ್ತು ವಿಳಂಬವಾಗುವುದು ಬಹಿಷ್ಕರಿಸಲು ಕಾರಣವಾಗಿರಬಹುದು. ಮೌಲ್ಯಮಾಪಕರಿಗೆ ನಿಗದಿಪಡಿಸಿರುವ ಗೌರವಧನವನ್ನು ಹೆಚ್ಚಿಿಸಿದ್ದಲ್ಲಿ ಈ ಸಮಸ್ಯೆೆಯನ್ನು ಬಗೆಹರಿಸಬಹುದು.

ಮೌಲ್ಯಮಾಪನದಲ್ಲಿ ನಿರ್ಲಕ್ಷ್ಯದಿಂದಾಗಿ ಕೆಲ ಮೌಲ್ಯಮಾಪಕರು ತಮ್ಮ ಮೌಲ್ಯಮಾಪನ ಕಾರ್ಯವನ್ನು ಸರಿಯಾಗಿ ನಿರ್ವಹಿಸದೇ ಇರುವುದು ಇತ್ತೀಚಿನ ದಿನಗಳಲ್ಲಿ ತೀರಾ ಹೆಚ್ಚಾಾಗಿದೆ. ಇವರ ನಿರ್ಲಕ್ಷ್ಯದಿಂದ ಪರೀಕ್ಷೆಯಲ್ಲಿ ಪಾಸಾಗಬೇಕಾದ ವಿದ್ಯಾಾರ್ಥಿಗಳು ಕೂಡ ಅನುತೀರ್ಣಗೊಂಡು, ಪುನಃ ಮರು ಮೌಲ್ಯಮಾಪನದಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿರುವುದು ದಾಖಲೆಯಾಗಿರುವುದು ಮೌಲ್ಯಮಾಪನ ಪ್ರಕ್ರಿಿಯೆಯ ಬಗ್ಗೆೆ ಅನುಮಾನ ಮೂಡಿಸಿದೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಇನ್ನು ಮಾಧ್ಯಮವಾರು ಮಾಲ್ಯಮಾಪನ ಮಾಡುವಾಗ ಕನ್ನಡ ಮಾಧ್ಯಮದ ಶಿಕ್ಷಕರು, ತಾವು ಬೋಧಿಸದ ಮಾಧ್ಯಮದ ಉತ್ತರ ಪತ್ರಿಿಕೆಗಳನ್ನು ಮೌಲ್ಯಮಾಪನ ಮಾಡುತ್ತಿಿರುವುದು ಆಯಾ ಮಾಧ್ಯಮದ ವಿದ್ಯಾಾರ್ಥಿಗಳಿಗೆ ನ್ಯಾಾಯ ಒದಗಿಸಲು ಸಾಧ್ಯವೇ ಎನ್ನುವುದನ್ನು ಸ್ವತಃ ಸಂಬಂಧಿಸಿದ ಮೌಲ್ಯಮಾಪಕರು ಮನನ ಮಾಡಿಕೊಳ್ಳಬೇಕಿದೆ.

ಮರು ಮೌಲ್ಯಮಾಪನದ ಸಂಕಟದ ಸಂದರ್ಭದಲ್ಲಿ ಇತ್ತೀಚಿನ ದಿನಗಳಲ್ಲಿ ಮೌಲ್ಯಮಾಪಕರ ಬದ್ಧತೆ ಕಡಿಮೆಯಾಗುತ್ತಿಿರುವುದರಿಂದ ವಿದ್ಯಾಾರ್ಥಿಗಳಲ್ಲಿ ಗೊಂದಲವು ಹೆಚ್ಚಾಾಗುತ್ತಿಿದೆ. ಅಲ್ಲದೇ, ಅನುತ್ತೀರ್ಣಗೊಂಡ ವಿದ್ಯಾಾರ್ಥಿಗಳು ಮರು ಮೌಲ್ಯಮಾಪನದ ನಂತರ ಉತ್ತೀರ್ಣಗೊಳ್ಳುತ್ತಿಿರುವ ಪ್ರಕರಣಗಳು ಹೆಚ್ಚಾಾಗಿವೆೆ. ಇದು ಅನುತ್ತೀರ್ಣಗೊಂಡ ಹಲವು ವಿದ್ಯಾಾರ್ಥಿಗಳನ್ನು ಅಷ್ಟು ಶುಲ್ಕ ಪಾವತಿಸಿ, ಮರುಮೌಲ್ಯಮಾಪನ ಅರ್ಜಿ ಸಲ್ಲಿಸಬೇಕೆ ಬೇಡವೇ ಎನ್ನುವ ಸಂಕಟವನ್ನು ಉಧ್ಭವಿಸುವಂತೆ ಮಾಡಿದೆ. ಇದನ್ನು ತಪ್ಪಿಿಸಲು ಅಧಿಕಾರಿಗಳು ಮೌಲ್ಯಮಾಪನದ ಸಂಪೂರ್ಣ ಪ್ರಕ್ರಿಿಯೆಯ ಮೇಲೆ ಹೆಚ್ಚಿಿನ ನೀಗಾ ವಹಿಸಬೇಕಿದೆ.

ಗ್ರೇಸ್ ಅಂಕಗಳ ಹಾವಳಿ ಇರುವುದು; ಹಲವು ಸಲ ಪ್ರಶ್ನೆೆಪತ್ರಿಿಕೆಗಳಲ್ಲಿ ವಿದ್ಯಾಾರ್ಥಿಗಳು ಅಧ್ಯಯನ ಮಾಡಿರದ ವಿಷಯಗಳ ಬಗ್ಗೆೆ ಪ್ರಶ್ನೆೆಗಳು ಮುದ್ರಣವಾಗಿರುವುದು, ಪ್ರಶ್ನೆೆಯ ವಿನ್ಯಾಾಸದ ಗೊಂದಲದಿಂದ ವಿದ್ಯಾಾರ್ಥಿಗಳಲ್ಲಿ ಗೊಂದಲವಾಗಿರುವುದು, ಹೀಗೆ ಹತ್ತು ಹಲವು ಕಾರಣಗಳಿಂದ ಮಂಡಳಿಗಳು ಹಲವು ಪ್ರಶ್ನೆೆಗಳಿಗೆ ಗ್ರೇಸ್ ಅಂಕಗಳನ್ನು ನಿಗಧಿ ಮಾಡುತ್ತದೆ. ಇದು ಪ್ರತಿಭಾವಂತ ವಿದ್ಯಾಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತದೆ. ಅಲ್ಲದೇ, ಪರೀಕ್ಷಾ ಪದ್ಧತಿಯ ಬಗ್ಗೆೆ ಗೌರವ ಕಡಿಮೆಯಾಗಲು ದಾರಿ ಮಾಡಿಕೊಡುತ್ತದೆ.

ತರಾತುರಿಯಲ್ಲಿ ಫಲಿತಾಂಶ ಪ್ರಕಟ ಮಾಡುವುದರಿಂದ ಹಲವು ಬಾರಿ ಮೌಲ್ಯಮಾಪನ ಪ್ರಕ್ರಿಿಯೆಗಳು ಸಂಪೂರ್ಣವಾಗಿ ಮುಕ್ತಾಾಯವಾಗುವ ಮುಂಚೆಯೇ ಫಲಿತಾಂಶ ದಿನಾಂಕವನ್ನು ಪ್ರಕಟಿಸುವುದರಿಂದ, ಇದು ಮೌಲ್ಯಮಾಪಕರ ಮೇಲೆ ಒತ್ತಡವನ್ನು ಹೆಚ್ಚಿಿಸುತ್ತದೆ. ಆದುದರಿಂದ, ಮೌಲ್ಯಮಾಪನದ ಎಲ್ಲಾಾ ಪ್ರಕ್ರಿಿಯೆಗಳನ್ನು ಸಂಪೂರ್ಣವಾಗಿ ಮುಗಿಸಿದ ನಂತರ ಎಲ್ಲಾಾ ವ್ಯವಸ್ಥೆೆಗಳನ್ನು ಮಾಡಿಕೊಂಡು ಫಲಿತಾಂಶವನ್ನು ದಿನಾಂಕ ಪ್ರಕಟಿಸುವುದು ಒಳಿತು.
ಒಟ್ಟಾಾರೆಯಾಗಿ ಹೇಳುವುದಾದರೆ, ಎಸ್‌ಎಸ್‌ಎಲ್‌ಸಿ ಮತ್ತು ಪಿ.ಯು ಪರೀಕ್ಷೆಗಳು ವಿದ್ಯಾಾರ್ಥಿಗಳ ಕಲಿಕಾ ಜೀವನದ ಪ್ರಮುಖ ಮೈಲುಗಲ್ಲು. ವಿದ್ಯಾಾರ್ಥಿಗಳು ಸಹ ಈ ಪರೀಕ್ಷೆಗಳಿಗೆ ಹೆಚ್ಚಿಿನ ಒತ್ತನ್ನು ನೀಡುತ್ತಿಿದ್ದಾಾರೆ. ಇಂಥ ಸಾರ್ವತ್ರಿಿಕ ವ್ಯವಸ್ಥೆೆಯಲ್ಲಿ ಪರೀಕ್ಷೆಗಳನ್ನು ಕೇವಲ ಶೈಕ್ಷಣಿಕ ಆಡಳಿತದ ಭಾಗ ಎಂದು ಭಾವಿಸದೇ, ಇದರಲ್ಲಿ ವಿದ್ಯಾಾರ್ಥಿಗಳ ಮತ್ತು ಶಿಕ್ಷಕರ ಶ್ರಮದ ಭಾಗವಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಂಡು ಇದಕ್ಕೆೆ ಗೌರವ ಸಲ್ಲಿಸುವ ಕಾರ್ಯನಡೆಯಲಿ.
ಈ ಬಾರಿಯ ಈ ಪರೀಕ್ಷೆಗಳು ಇಂಥ ಯಾವುದೇ ಅಹಿತಕರ ಘಟನೆಗಳಿಗೆ ದಾರಿ ಮಾಡಿಕೊಡದಿರಲಿ ಎಂದು ಹಾರೈಸೋಣ.