Friday, 20th September 2024

ಚಿನ್ನ ಅಡವಿಟ್ಟವರು, ದೇಶದ ಆಸ್ತಿ ಮಾರಾಟವೆಂದು ಅರಚುತ್ತಿದ್ದಾರೆ

ವೀಕೆಂಡ್ ವಿಥ್ ಮೋಹನ್‌

ಮೋಹನ್ ವಿಶ್ವ

camohanbn@gmail.com

ಸುಳ್ಳು ಹೇಳುವುದಕ್ಕೂ ಒಂದು ಮಿತಿಯಿರಬೇಕು, ಅಧಿಕಾರವಿಲ್ಲದೆ ನೀರಿನಿಂದ ಹೊರಬಿಟ್ಟ ಮೀನಿನಂತೆ ವಿಲವಿಲವೆಂದು ಒದ್ದಾಡುತ್ತಿರುವ ಕಾಂಗ್ರೆಸಿಗರಿಗೆ ಬೆಳಗಾದರೆ ಕೇಂದ್ರ ಸರಕಾರದ ನಿರ್ಧಾರಗಳು ಮೈ ಕೈ ಪರಚಿಕೊಳ್ಳುವ ಪರಿಸ್ಥಿತಿಯನ್ನು ತಂದೊಡ್ಡುತ್ತಿದೆ. ತನ್ನ ಅಧಿಕಾರವಧಿಯಲ್ಲಿ ಕೇವಲ ಚುನಾವಣೆಯ ಸಲುವಾಗಿ ಘೋಷಣೆಗಳನ್ನು ಮಾಡಿ ನೆಲಮಟ್ಟದಲ್ಲಿ ಅನುಷ್ಠಾನಗೊಳಿಸದೇ ಜನರನ್ನು ಮೂರ್ಖ ರನ್ನಾಗಿಸಿಕೊಂಡೇ ಏಳು ದಶಕಗಳ ಕಾಲ ಆಡಳಿತ ನಡೆಸಿದ್ದು
ಕಾಂಗ್ರೆಸ್.

1971ರ ಚುನಾವಣೆಯಲ್ಲಿ ಇಂದಿರಾ ಗಾಂಧಿ ಮಾಡಿದ ಗರೀಬಿ ಹಟಾವೋ ಘೋಷಣೆಯನ್ನು 2019ರಲ್ಲಿ ಪುನಃ ಅವರ ಮೊಮ್ಮಗ ರಾಹುಲ್ ಗಾಂಧಿ ಮಾಡಿದ್ದರು. ತಮ್ಮ ಸುತ್ತಲೂ ದಡ್ಡ ಶಿಖಾಮಣಿಗಳ ದೊಡ್ಡದೊಂದು ಪಟಾಲಂ ಇಟ್ಟುಕೊಂಡಿದ್ದ ಇಂದಿರಾ ಗಾಂಧಿ ಭಾರತದ ಆರ್ಥಿಕತೆಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುವ ಬಗ್ಗೆ ಚಿಂತಿಸಲೇ ಇಲ್ಲ. ಇಂದಿಗೂ ಸಹ ಬ್ಯಾಂಕುಗಳ ರಾಷ್ಟ್ರೀಕರಣ ಇಂದಿರಾ ಗಾಂಧಿ ಮಾಡಿದ ಬಹುದೊಡ್ಡ ಸಾಧನೆಯೆಂಬಂತೆ ಅರಚುವ ಕಾಂಗ್ರೆಸ್ಸಿಗರು, 2004ರಿಂದ 2014ರ ನಡುವೆ ಕೇವಲ ಒಂದು ಫೋನ್ ಕರೆಯ ಮೇರೆಗೆ ಸಾವಿರಾರು ಕೋಟಿಯ ಸಾಲವನ್ನು ಇಂದಿರಾ ಗಾಂಧಿಯವರು ರಾಷ್ಟ್ರೀಕರಣ ಮಾಡಿದ್ದ ಬ್ಯಾಂಕುಗಳಿಂದಲೇ ಕೊಡಿಸಿದ್ದರ ಬಗ್ಗೆ ಮಾತನಾಡುವುದಿಲ್ಲ, ‘ಕೊಟ್ಟವನು ಕೋಡಂಗಿ ತಗೊಂಡವನು ವೀರಭದ್ರ ನೆಂಬಂತೆ’ ಹಣ ತೆಗೆದುಕೊಂಡವನು ದೇಶ ಬಿಟ್ಟು ಓಡಿಹೋದ.

ಕೇಂದ್ರ ಸರಕಾರವು ಜಾರಿಗೊಳಿಸುತ್ತಿರುವ ’’NATIONAL MONETISATION PIPELINE’ (ಎಂ.ಎನ್.ಪಿ) ಬಗ್ಗೆ ಅಪಪ್ರಚಾರ ಮಾಡುತ್ತಿರುವ ಕಾಂಗ್ರೆಸ್, ಸರಕಾರವು ದೇಶದ ಆಸ್ತಿಯನ್ನು ಮಾರ ಹೊರಟಿದೆಯೆಂದು ಸುಳ್ಳು ಹೇಳುತ್ತಿದೆ. ಮಾರಾಟಕ್ಕೂ, ಭೋಗ್ಯಕ್ಕೂ ವ್ಯತ್ಯಾಸ ತಿಳಿಯದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ಹತಾಶ ಮನಸ್ಥಿತಿಯಲ್ಲಿ ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿಕೊಂಡು ಬರುತ್ತಿದೆ. 1991ರಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದಂತಹ ಸಂದರ್ಭದಲ್ಲಿ ನಮ್ಮಲ್ಲಿನ ಚಿನ್ನವನ್ನು ಲಂಡನ್‌ನ ಬ್ಯಾಂಕಿನಲ್ಲಿ ಅಡವಿಟ್ಟು, ಮೊಟ್ಟ ಮೊದಲ ಬಾರಿಗೆ ಭಾರತದ ಆಸ್ತಿಯನ್ನು ಅಡವಿಟ್ಟಂತಹ ಕೀರ್ತಿ ಸಂಪಾದಿಸಿತ್ತು.

ಅಂದು ವಿತ್ತ ಸಚಿವರಾಗಿದ್ದ ಮನಮೋಹನ್ ಸಿಂಗ್, ಉದಾರೀಕರಣ, ಜಾಗತೀಕರಣ ಹಾಗೂ ಖಾಸಗೀಕರಣದ ಹೆಸರಿನಲ್ಲಿ ಭಾರತದ ಆರ್ಥಿಕತೆಯನ್ನು ಜಾಗತಿಕ ಮಟ್ಟದಲ್ಲಿ ಮೊಟ್ಟ ಮೊದಲ ಬಾರಿಗೆ ವಿಸ್ತರಿಸುವ ನೀತಿಯನ್ನು ಜಾರಿಗೆ ತಂದರು. ಅಂದು ತಾನೇ ಜಾರಿಗೆ ತಂದ ನೀತಿಯನ್ನು ಇಂದು ತಾನೇ
ವಿರೋಧಿಸುವ ಮೂಲಕ ಕಾಂಗ್ರೆಸ್ ತನ್ನ ದಿವಾಳಿ ತನವನ್ನು ಪ್ರದರ್ಶಿಸಿದೆ.

1947ರ ಯುದ್ಧದ ನಂತರ 13297 ಚದರ ಕಿ.ಮೀ ಭೂಭಾಗವನ್ನು ಪಾಕಿಸ್ತಾನಕ್ಕೆ ಉಚಿತವಾಗಿ ಕೊಟ್ಟು, 1962ರ ಯುದ್ಧದ ನಂತರ ಸುಮಾರು 43000 ಚದರ ಕಿ.ಮೀ ಭೂ ಭಾಗವನ್ನು ಚೀನಾ ದೇಶಕ್ಕೆ ಉಚಿತವಾಗಿ ಬಿಟ್ಟುಕೊಟ್ಟಂತಹ ಕಾಂಗ್ರೆಸ್, ಕೇಂದ್ರ ಸರಕಾರದ ಎಂ.ಎನ್.ಪಿಯ ಬಗ್ಗೆ ಮಾತ ನಾಡುವ ಯಾವ ನೈತಿಕ ಹಕ್ಕನ್ನು ಹೊಂದಿದೆ ? ತನ್ನ ಅಧಿಕಾರಾವಧಿಯಲ್ಲಿಯೇ ಖಾಸಗಿ ಹಾಗೂ ವಿದೇಶಿ ಬಂಡವಾಳವನ್ನು ಬೆಂಬಲಿಸಿ ಭಾರತದ ಆರ್ಥಿಕತೆಯನ್ನು ವಿಸ್ತರಿಸಿದ ಕಾಂಗ್ರೆಸ್ ಇಂದಿಗೂ ಅದನ್ನು ತಾನು ಮಾಡಿದ ಸಾಧನೆಯೆಂದು ಹೇಳಿಕೊಳ್ಳುತ್ತವೆ. ಆದರೆ ಅದೇ ಕೆಲಸವನ್ನು ಬಿಜೆಪಿ ಸರಕಾರ ಮಾಡಿದರೆ ದೇಶದ ಅಸ್ತಿ ಮಾರಾಟವೆಂದು ಹೇಳುತ್ತಿದೆ.

ಕರೋನಾದಿಂದ ಕಂಗೆಟ್ಟು ಕಳೆದೆರಡು ವರ್ಷಗಳಿಂದ ಇಡೀ ವಿಶ್ವವೇ ಆರ್ಥಿಕ ಹೊಡೆತದಿಂದ ಮಕಾಡೆ ಮಲಗಿದೆ, ಜಗತ್ತಿನ ದೊಡ್ಡ ದೊಡ್ಡ ರಾಷ್ಟ್ರಗಳೇ ಸಂಪನ್ಮೂಲ ಕ್ರೋಢೀಕರಣದ ಭಾಗವಾಗಿ ಹಲವು ಆರ್ಥಿಕ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಭಾರತದಲ್ಲಿಯೂ ಸಹ ಕರೋನಾ ಪರಿಣಾಮದಿಂದಾಗಿ ಹದಗೆಟ್ಟಿರುವ ಸರಕಾರದ ಬೊಕ್ಕಸವನ್ನು ತುಂಬಿಸಿ ದೇಶವನ್ನು ಮುಂದುವರಿಸಿಕೊಂಡು ಹೋಗಲು ಎಂ.ಎನ್.ಪಿಯ ಅವಶ್ಯಕತೆ ಇದೆ. ಈ ಯೋಜನೆಯೇನು ಹೊಸತಲ್ಲ, ಸರಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ’PPP’ ಮಾದರಿಯಲ್ಲಿ ಈಗಾಗಲೇ ಹಲವು ಯೋಜನೆಗಳು ನಡೆಯುತ್ತಿವೆ, ಅದರ ಮುಂದುವರೆದ ಭಾಗವೇ ಎಂ.ಎನ್.ಪಿ. ನಮ್ಮ ದೇಶದಲ್ಲಿ ಹಲವು ದಶಕಗಳಿಂದ ಬಳಸಲಾಗದೇ ಖಾಲಿ ಉಳಿದಿರುವ ಲಕ್ಷಾಂತರ ಎಕರೆ ಸರಕಾರಿ ಜಾಗಗಳಿವೆ, ಈ ಜಾಗಗಳನ್ನು ಸದ್ಬಳಕೆ ಮಾಡಿಕೊಂಡು ಬರುವ ಹಣವನ್ನು ದೇಶದ ಅಭಿವೃದ್ಧಿಗೆ ಬಳಸಬೇಕಂತಿರುವುದು ಈ ಯೋಜನೆಯ ಪ್ರಮುಖ ಉದ್ದೇಶ.

ಸರಕಾರವು ಈ ಜಾಗಗಳನ್ನು ಮಾರುತ್ತಿಲ್ಲವೆಂದು ನಿರ್ಮಲಾ ಸೀತಾರಾಮನ್ ಕರಾರುವಕ್ಕಾಗಿ ಹೇಳಿದ್ದಾರೆ. ಮುಂದಿನ 4 ವರ್ಷಗಳಲ್ಲಿ ಸುಮಾರು 600000 ಕೋಟಿ ಆದಾಯವನ್ನು ಇದರಿಂದ ನಿರೀಕ್ಷಿಸಲಾಗಿದೆ. ಸುಮ್ಮನೆ ಖಾಲಿ ಇರುವ ಆಸ್ತಿಗಳ ನಗದೀಕರಣವಾದರೆ ತಪ್ಪೇನು? ಕರ್ನಾಟಕದ ಉದಾಹರಣೆಯನ್ನು ತೆಗೆದುಕೊಂಡರೆ ಕಳೆದ ಏಳು ವರ್ಷ ಗಳಲ್ಲಿ ರಸ್ತೆಗಳ ವಿಚಾರದಲ್ಲಿ ಆದಂತಹ ಅಭಿವೃದ್ಧಿ ಕಾರ್ಯಗಳು ನಮ್ಮ ಕಣ್ಣಿಗೆ ರಾಚುತ್ತಿವೆ,
ಚಾಮರಾಜನಗರ – ನಂಜನಗೂಡು – ಮೈಸೂರು – ಬೆಂಗಳೂರು – ತುಮಕೂರು – ಸಿರಾ – ಚಿತ್ರದುರ್ಗ – ದಾವಣಗೆರೆ – ಹಾವೇರಿ – ಹುಬ್ಬಳ್ಳಿ – ಬೆಳಗಾವಿ ಯವರೆಗೂ ಆಗಿರುವ ರಸ್ತೆ ಕಾಮಗಾರಿಗಳು ನಮ್ಮ ಕಣ್ಣ ಮುಂದಿವೆ.

ಮೈಸೂರು ಬೆಂಗಳೂರು ದಶಪಥ ರಸ್ತೆಗೆ ಸುಮಾರು ೭,೨೦೦ ಕೋಟಿಯ ಹಣ ವ್ಯಯಿಸಲಾಗಿದೆ, ಚಿತ್ರದುರ್ಗದಿಂದ ಹೊಸಪೇಟೆ, ಬಳ್ಳಾರಿ ಕಡೆಗೆ ಆಗಿರುವ ರಸ್ತೆಗಳು ಅವಽಗಿಂತಲೂ ಮೊದಲೇ ಪೂರ್ಣಗೊಂಡಿವೆ. ಈ ರಸ್ತೆಗಳೆಲ್ಲವೂ ’PPP’ ಯೋಜನೆ ಯಲ್ಲಿ ಸರಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿಯೇ ನಡೆದಿದೆ. ಕಲಬುರಗಿ, ಬೀದರ್, ಬಳ್ಳಾರಿ, ಶಿವಮೊಗ್ಗದಲ್ಲಿ (ಕಾಮಗಾರಿ ಪ್ರಗತಿಯಲ್ಲಿದೆ) ವಿಮಾನ ನಿಲ್ದಾಣಗಳಾಗಿವೆ, ಮೈಸೂರಿಂದ ಹಲವು ನಗರಗಳಿಗೆ ವಿಮಾನಗಳಿವೆ. ಬೆಳಗಾವಿ, ಹುಬ್ಬಳ್ಳಿ ವಿಮಾನ ನಿಲ್ದಾಣಗಳಿಂದ ಪ್ರಮುಖ ನಗರಗಳಿಗೆ ವಿಮಾನಯಾನ ಸೇವೆ ಆರಂಭವಾಗಿದೆ ಇವೂ ಸಹ ’PPP’ ಯೋಜನೆಯಲ್ಲಿ ಆಗಿರುವುದು. ಈಗ ಸುಳ್ಳು ಹೇಳುವ ಕಾಂಗ್ರೆಸ್ ತನ್ನ ಅವಧಿಯಲ್ಲಿ ದೆಹಲಿ ಮೆಟ್ರೋ ಕಾಮಗಾರಿಯನ್ನು ಖಾಸಗಿ ಸಹಭಾಗಿತ್ವದಲ್ಲಿಯೇ ಮಾಡಿತ್ತು.

ಸುಮಾರು 8000 ಕೋಟಿಯ ಮುಂಬೈ ಪುಣೆ EXPRESS ಹೆದ್ದಾರಿ ಕಾಮಗಾರಿಯನ್ನು ಅಂಟೋನಿಯೋ ಮೈನೋ ಅಧಿಕಾರದಲ್ಲಿದ್ದಾಗಲೇ ಖಾಸಗಿಯ ವರಿಗೆ ನೀಡಲಾಗಿತ್ತು, ಆಗ ನೆನೆಪಾಗದ ದೇಶದ ಅಸ್ತಿ ಈಗ ನೆನಪಾಗುತ್ತಿರುವುದು ಕಾಂಗ್ರೆಸಿನ ರಾಜಕೀಯ ದುರುದ್ದೇಶವನ್ನು ಎತ್ತಿ ತೋರಿಸುತ್ತದೆ. ಅಂಬಾನಿ ಹಾಗೂ ಅದಾನಿಯನ್ನು ಅಡ್ಡ ತಂದು ರಾಜಕೀಯ ಮಾಡುವ ಕಾಂಗ್ರೆಸ್, ತನ್ನದೇ ಆಡಳಿತವಿರುವ ರಾಜಸ್ಥಾನದಲ್ಲಿ ಕೆಲವೇ ತಿಂಗಳುಗಳ ಹಿಂದೆ ಸಾವಿರಾರು ಕೋಟಿಯ ಸೋಲಾರ್ ಪವರ್ ಕಾಮಗಾರಿಯನ್ನು ಅದಾನಿ ಸಂಸ್ಥೆಗೆ ನೀಡಿದೆ. ಆಂಧ್ರ ಪ್ರದೇಶದ ಗಂಗಾವರಂ ಬಂದರಿನಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರಕಾರ ಅದಾನಿ ಸಂಸ್ಥೆಗೆ ಶೇ.೧೦.೪ರಷ್ಟು ಮಾಲೀಕತ್ವವನ್ನು ಇತ್ತೀಚಿಗೆ ನೀಡಿದೆ.

ನರೇಂದ್ರ ಮೋದಿಯವರ ವಿರುದ್ಧ ಹೋರಾಡಲು ಅಸ್ತ್ರಗಳಿಲ್ಲದೆ ಸೋತಿರುವ ಕಾಂಗ್ರೆಸ್, ಅದಾನಿ ಎಂಬ ಗುಮ್ಮವನ್ನು ಆಗಾಗ ಜನರ ಮುಂದೆ ತಂದು ತೋರಿಸು ತ್ತಿರುತ್ತದೆ. ಅದಾನಿ ಸಮೂಹ ಸಂಸ್ಥೆಗಳು 1987ರಲ್ಲಿಯೇ ತಮ್ಮ ವ್ಯವಹಾರವನ್ನು ಶುರುಮಾಡಿದ್ದರು. ಅವರೇನು 2014ರಿಂದ ವ್ಯವಹಾರ ನಡೆಸುತ್ತಿಲ್ಲ. ಅಂಬಾನಿ ಸಂಸ್ಥೆಯು ಶುರು ವಾದದ್ದು 1970ರ ದಶಕದಲ್ಲಿ, ಈ ಎರಡೂ ಸಂಸ್ಥೆಗಳು ಸೊನ್ನೆಯಿಂದ ಲಕ್ಷಾಂತರ ಕೋಟಿಯಷ್ಟು ಅಸ್ತಿ ಮಾಡಿರುವ
ಅವಽಯಲ್ಲಿ ಹೆಚ್ಚಾಗಿ ಆಡಳಿತ ನಡೆಸಿದ್ದು ಕಾಂಗ್ರೆಸ್ ಪಕ್ಷ. 1987 ರ ತನಕ ಜಪಾನ್ ಸರಕಾರದ ರೈಲ್ವೆ ಸಂಸ್ಥೆಗಳು ನಷ್ಟದಲ್ಲಿದ್ದವು ಆಗ ಜಪಾನ್ ಸರಕಾರ ಎಂ.ಎನ್.ಪಿ (ಹೆಸರು ಬೇರೆ ಇರಬಹುದು ಆದರೆ ಯೋಜನೆಯೊಂದೇ) ಜಾರಿಗೊಳಿಸಿತ್ತು, ಅದರ ಪರಿಣಾಮವಾಗಿ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಹೊಂದಿದ ಜಪಾನ್ ರೈಲ್ವೆ ಸಂಸ್ಥೆ ಇಂದು ವಿಶ್ವದ ಅತ್ಯುತ್ತಮ ರೈಲ್ವೆ ಸಂಪರ್ಕವನ್ನು ಹೊಂದಿದೆ.

ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ, ನೂತನ ತಂತ್ರeನಗಳನ್ನು ಅಳವಡಿಸಿ ಯೋಜನೆಯನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಿ ನಷ್ಟದಲ್ಲಿದಂತಹ
ಸಂಸ್ಥೆಯನ್ನು ಲಾಭಕ್ಕೆ ಬರುವಂತೆ ಮಾಡಿ ಯಶಸ್ವಿಯಾದರು. ಜಪಾನಿನ ಬಹುತೇಕ ರೈಲುಗಳು ಇಂದು ಸರಕಾರದ ಸಹಾಯಧನವಿಲ್ಲದೆಯೇ ನಡೆಯುತ್ತಿವೆ. ಆಸ್ಟ್ರೇಲಿಯಾ ದೇಶವೂ ಸಹ ಎಂ.ಎನ್.ಪಿ ಜಾರಿಗೊಳಿಸಿ ಸಿಡ್ನಿಯ ಪಶ್ಚಿಮ ಭಾಗದ ಪ್ರಮುಖ ಹೆದ್ದಾರಿಗಳಲ್ಲಿದಂತಹ ಅರ್ಧದಷ್ಟು ಶೇರುಗಳನ್ನು 2018ರಲ್ಲಿ ಖಾಸಗಿಯವರಿಗೆ ಮಾರಾಟ ಮಾಡಿತ್ತು, ಈ ಮಾರಾಟದಿಂದ ಸುಮಾರು 80000 ಕೋಟಿಯಷ್ಟು ಹಣವು ಸರಕಾರಕ್ಕೆ ಸಂದಾಯವಾಗಿತ್ತು.

ಬಂದ ಹಣವನ್ನು ದೀರ್ಘಕಾಲದ ಮೂಲಭೂತ ಸೌಲಭ್ಯಗಳಲ್ಲಿ ಹೂಡಲಾಯಿತು. ಇನ್ನುಳಿದ ಭಾಗವನ್ನು ಮಾರಾಟ ಮಾಡಿ ಕರೋನಾದಿಂದ ಕೆಂಗೆಟ್ಟಿರುವ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಿ ಮತ್ತಷ್ಟು ಸಾರ್ವಜನಿಕ ವಲಯದಲ್ಲಿ ಹೂಡಿಕೆ ಮಾಡಲು ಅಲ್ಲಿನ ಸರಕಾರ ಈಗಾಗಲೇ ಚಿಂತಿಸಿದೆ. ಜಗತ್ತಿನ ಬಹುತೇಕ ಮುಂದುವರೆದ ದೇಶಗಳು ’PPP’ ಮಾದರಿ ಯಲ್ಲಿ ರಸ್ತೆ, ರೈಲು, ವಿಮಾನಯಾನ, ಬಂದರು, ಅನಿಲ, ಪೆಟ್ರೋಲ್ ನಲ್ಲಿ ಹೂಡಿಕೆಯನ್ನು ಮಾಡಿವೆ. ಯೂರೋಪಿ ನಲ್ಲಿನ ಬಹುತೇಕ ದೇಶಗಳ ರೈಲು ವ್ಯವಸ್ಥೆ ಖಾಸಗೀಕರಣ ವಾಗಿ ಎಷ್ಟೋ ವರ್ಷಗಳಾಗಿವೆ. ಅಲ್ಲಿನ ರೈಲುಗಳಲ್ಲಿ ಓಡಾಡುವುದೇ ಒಂದು ಅದ್ಬುತ ಅನುಭವ. ನಾನು 2017ರಲ್ಲಿ ಇಟಲಿಯ ರೋಮನಿಂದ ವೆನಿಸ್ ನಗರಕ್ಕೆ ಹೋಗಿz, ಸುಮಾರು 526 ಕಿಲೋಮೀಟರು ದೂರವಿರುವ ಈ ಎರಡು ನಗರಗಳನ್ನು ಕೇವಲ ಮೂರು ಘಂಟೆಯಲ್ಲಿ ರೈಲಿನಲ್ಲಿ ತಲುಪಿದ್ದೆ.

ಸ್ವಿಜರ್ ಲ್ಯಾಂಡ್ ದೇಶವಂತೂ ತನ್ನ ಮೂಲೆ ಮೂಲೆಗಳಿಗೆ ವೇಗದ, ಅಗ್ಗದ ರೈಲುಗಳನ್ನು ವಿಸ್ತರಿಸಿದೆ. ಖಾಸಗೀಕರಣವಾದರೆ ಈಗಿರುವ ಕೆಲಸಕ್ಕೆ ಕುತ್ತು
ಬರುತ್ತದೆಯೆಂಬುದು ಬಹುದೊಡ್ಡ ಸುಳ್ಳು, ಒಮ್ಮೆ ಖಾಸಗೀಕರಣವಾದ ನಂತರ ಉಂಟಾಗುವ ಮಾರುಕಟ್ಟೆಯ ಸ್ಪರ್ಧೆಯಲ್ಲಿ ನೂತನ ಬಂಡವಾಳಶಾಹಿಗಳು ಬರುತ್ತಾರೆ, ಆಗ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆ. ’ಟೆಲಿಕಾಂ’ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದ ಉಂಟಾದ ಬದಲಾವಣೆಯನ್ನೇ ಗಮನಿಸಿ, ಕೇವಲ BSNL ಸಂಸ್ಥೆಯನ್ನು ನೆಚ್ಚಿಕೊಂಡಿದ್ದರೆ ಇಂದು ಒಂದು ರುಪಾಯಿಗೆ ಒಂದು ಜಿಬಿ ಡೇಟಾ ಸಿಗುತ್ತಿರಲಿಲ್ಲ, ವಿಮಾ ವಲಯದಲ್ಲಿ ಉಂಟಾದ ಖಾಸಗೀಕರಣದ
ಪರಿಣಾಮವಾಗಿ ಎಲ್ಲರೂ ವಿಮೆಯನ್ನು ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ, ವಿಮಾನಯಾನದಲ್ಲಿ ಉಂಟಾದ ಬದಲಾವಣೆಯಿಂದಾಗಿ ಎಲ್ಲರೂ ವಿಮಾನ ಹತ್ತುವ ಭಾಗ್ಯ ದೊರಕಿದೆ.

ಅಂದು ಖಾಸಗೀಕರಣವನ್ನು ವಿರೋಧಿಸಿದ್ದರೆ ಇಂದು ಈ ಮಟ್ಟದ ಬೆಳವಣಿಗೆಯಾಗುತ್ತಿರಲಿಲ್ಲ. ಆಗಲೇ ಹೇಳಿದ ಹಾಗೆ ಇಂದಿರಾಗಾಂಧಿ ತನ್ನ ಸುತ್ತಲೂ ದಡ್ಡ ಶಿಖಾಮಣಿಗಳನ್ನು ಸಲಹೆಗಾರರನ್ನಾಗಿರಿಸಿಕೊಂಡಿದ್ದರ ಪರಿಣಾಮವಾಗಿ ಭಾರತದ ವೇಗದ ಅಭಿವೃದ್ಧಿ ಕಾಣಲಿಲ್ಲ. ವ್ಯವಹಾರವೆಲ್ಲವೂ ಸರಕಾರದ ಅಧೀನ ದಲ್ಲಿರಬೇಕೆಂಬ ಕಾಂಗ್ರೆಸ್ಸಿನ ನೀತಿ ಸುಮಾರು 4 ದಶಕಗಳ ಕಾಲ ಭಾರತದ ಅಭಿವೃದ್ಧಿಯ ಪಥವನ್ನು ನಿಧಾನಗೊಳಿಸಿತ್ತು.

ಕೇಂದ್ರದ ನೀತಿ ಆಯೋಗದ ವರದಿಯ ಪ್ರಕಾರ ಎಂ.ಎನ್.ಪಿನ ಮೊದಲ ಭಾಗದಲ್ಲಿ ಸುಮಾರು 26700 ಕಿ.ಮೀ ಉದ್ದದ ರಸ್ತೆಯನ್ನು ಹಣಗಳಿಕೆಗಾಗಿ
ಬಳಸಿ ಕೊಳ್ಳಲಾಗುತ್ತದೆ. ಇದರಿಂದ ಸುಮಾರು 160200 ಕೋಟಿಯಷ್ಟು ಆದಾಯವು ಕೇಂದ್ರ ಸರಕಾರಕ್ಕೆ ಬರುವ ನಿರೀಕ್ಷೆಯಿದೆ. ದೇಶದ ಒಟ್ಟಾರೆ ರಸ್ತೆಯ ಶೇ.20 ರಷ್ಟು ಭಾಗವನ್ನು ಮಾತ್ರ ಇಲ್ಲಿ ಬಳಸಿಕೊಳ್ಳಲಾಗಿದೆ, ಅಂದರೆ ಉಳಿದ ಶೇ.೮೦ ರಸ್ತೆಯನ್ನು ಬಾಡಿಗೆಯ ರೂಪದಲ್ಲಿ ನೀಡಲಾಗುತ್ತಿಲ್ಲ. ರಾಯಲ್ಟಿಯ ರೂಪದಲ್ಲಿ ಕಿಲೋಮೀಟರಿಗೆ ಸರಾಸರಿ 4 ರಿಂದ 6 ಕೋಟಿಯಷ್ಟು ಹಣವನ್ನು ಸರಕಾರಕ್ಕೆ ನೀಡಬೇಕಾಗಬಹುದು.

ಪ್ರತಿಯೊಂದು ರಾಜ್ಯದಲ್ಲಿಯೂ ಇಂತಿಷ್ಟು ರಾಷ್ಟ್ರೀಯ ಹೆದ್ದಾರಿಗಳನ್ನು ಗುರುತಿಸಿ ವರದಿಯನ್ನು ನೀತಿ ಆಯೋಗವು ಸಿದ್ಧಪಡಿಸಿದೆ. ಕರ್ನಾಟಕದಲ್ಲಿ, ಮಹಾರಾಷ್ಟ್ರ /ಬೆಳಗಾವಿಯ ಸುಮಾರು 78 ಕಿ.ಮೀ, ಹೈದರಾಬಾದ್/ಬೆಂಗಳೂರಿನ ಸುಮಾರು 251 ಕಿ.ಮೀ, ಬೆಂಗಳೂರು ಹೊಸೂರಿನ ಸುಮಾರು 14 ಕಿ.ಮೀ, ದೇವನ ಹಳ್ಳಿ/ಆಂಧ್ರ ಗಡಿಯ ಸುಮಾರು 72 ಕಿ.ಮೀ, ಗಬ್ಬೂರ್/ದೇವಗಿರಿಯ ಸುಮಾರು 64 ಕಿ.ಮೀ, ಹಟ್ಟರಗಿ/ಹಿರೇಬಾಗೇವಾಡಿಯ ಸುಮಾರು 22
ಕಿ.ಮೀ ರಸ್ತೆ ಗಳು ಈ ಯೋಜನೆಯಡಿಯಲ್ಲಿವೆ. ರೈಲ್ವೆ ವಲಯದಲ್ಲಿ ಸುಮಾರು 152496 ಕೋಟಿಯಷ್ಟು ಆದಾಯವನ್ನು ನಿರೀಕ್ಷಿಸಲಾಗಿದೆ.

400 ರೈಲ್ವೆ ನಿಲ್ದಾಣಗಳು (ಒಟ್ಟಾರೆಯ ಶೇ 5.5), 90 ಸಾರ್ವಜನಿಕ ರೈಲುಗಳು (ಒಟ್ಟಾರೆಯ ಶೇ.5), 1400 ಕಿ.ಮೀ. ಉದ್ದದ ರೈಲ್ವೆ ಮಾರ್ಗ, 741 ಕಿ.ಮೀ ಉದ್ದದ ಕೊಂಕಣ ರೈಲ್ವೆ ಮಾರ್ಗ, 244 ಕಿ.ಮೀ ಉದ್ದದ ಗುಡ್ಡಗಾಡು ರೈಲ್ವೆ ಮಾರ್ಗ (ಸ್ವಿಜರ್ಲ್ಯಾಂಡಿನ ಪರ್ವತ ರೈಲುಗಳ ಮಾದರಿ), 265 ಸರಕು ರೈಲ್ವೆ ಗೋದಾಮುಗಳು, 15 ರೈಲ್ವೆ ಕ್ರೀಡಾಂಗಣ ಹಾಗು ಕಾಲೋನಿಗಳು ಎಂ.ಎನ್.ಪಿನ ಅಡಿಯಲ್ಲಿ PPP ಮಾದರಿಯಲ್ಲಿ ಆದಾಯದ ಮೂಲವಾಗಲಿವೆ. ಮೊದಲನೇ ಶ್ರೇಣಿ, ಎರಡನೇ ಶ್ರೇಣಿ ಹಾಗು ಮೂರನೇ ಶ್ರೇಣಿಯ ನಗರಗಳನ್ನು ಆಯ್ಕೆ ಮಾಡಿಕೊಂಡು ಮೂರು ಶ್ರೇಣಿಯ ನಗರಗಳಲ್ಲಿನ ರೈಲ್ವೆ ಸೌಕರ್ಯ ಗಳನ್ನು ಎಂ.ಎನ್.ಪಿ ನಡಿಯಲ್ಲಿ ತರಲಾಗಿದೆ. ಒಂದು ಕಾಲದಲ್ಲಿ ರೈಲ್ವೆ ನಿಲ್ದಾಣವೆಂದರೆ ಗಬ್ಬು ನಾರುವ ಪರಿಸ್ಥಿತಿಯಿತ್ತು. ಆದರೆ ಕಳೆದ ಏಳು ವರ್ಷಗಳಿಂದ ರೈಲ್ವೆ ನಿಲ್ದಾಣಗಳಗಿರುವ ಅಮೂಲಾಗ್ರ ಬದಲಾವಣೆಗಳು ನಮ್ಮ ಕಣ್ಣ ಮುಂದಿವೆ.

ದಾವಣಗೆರೆಯ ರೈಲು ನಿಲ್ದಾಣವನ್ನೊಮ್ಮೆ ಹೊಕ್ಕಿ ಬನ್ನಿ ಸುಸಜ್ಜಿತವಾದ ಸುಂದರ ರೈಲ್ವೆ ನಿಲ್ದಾಣವಾಗಿ ಮಾರ್ಪಟ್ಟಿದೆ, ಹುಬ್ಬಳ್ಳಿಯ ರೈಲ್ವೆ ನಿಲ್ದಾಣವಂತೂ ವಿಮಾನ ನಿಲ್ದಾಣವನ್ನೂ ಮೀರಿಸುವಂತಿದೆ, ಮೈಸೂರಿನ ರೈಲು ನಿಲ್ದಾಣವು ಸ್ವಚ್ಛ, ಸುಂದರ ರೈಲು ನಿಲ್ದಾಣವಾಗಿ ಮಾರ್ಪಟ್ಟಿದೆ, ಬೆಂಗಳೂರಿನ ಬೈಯಪ್ಪನಹಳ್ಳಿ ರೈಲು ನಿಲ್ದಾಣ ವಿಶ್ವ ದರ್ಜೆಯ ರೈಲು ನಿಲ್ದಾಣವಾಗುವತ್ತ ಹೆಜ್ಜೆಯಿಡುತ್ತಿದೆ. ಇವೆಲ್ಲವೂ ಸಾಧ್ಯವಾದದ್ದು ಕೇಂದ್ರ ಸರಕಾರದ ’PPP’ ಯೋಜನೆಯಲ್ಲಿ ಸಿದ್ಧಪಡಿಸಿದ ನೀತಿಯಿಂದ. ಎಂ.ಎನ್.ಪಿ ಅಡಿಯಲ್ಲಿ ಮೊದಲ ಹಂತದಲ್ಲಿ ಸುಮಾರು 150 ಸಾರ್ವಜನಿಕ ರೈಲುಗಳನ್ನು ಖಾಸಗಿ ಸಂಸ್ಥೆಯವರು ಚಲಾಯಿಸಲಿದ್ದು ಬಹುಷ್ಯ ಕಿ.ಮೀಗೆ ಇಂತಿಷ್ಟು ಅಥವಾ ಪ್ರಯಾಣಿಕರಿಂದ ಬಂದಂತಹ ಟಿಕೆಟ್ ಹಣದಲ್ಲಿ ಇಂತಿಷ್ಟು ಭಾಗವು ಸರಕಾರದ ಆದಾಯವಾಗಲಿದೆ, ಬಹುತೇಕ ಖಾಲಿಯಿರುವ ಹಲವು ರೈಲು ಮಾರ್ಗಗಳನ್ನು ಸಮಯ ನಿರ್ವಹಣೆಗೆ ಅನುಗುಣವಾಗಿ ಖಾಸಗಿಯವರಿಗೆ ಬಾಡಿಗೆಗೆ ನೀಡುವುದರಿಂದ ಸರಕಾರಕ್ಕೆ ಆದಾಯ ಬರುತ್ತದೆ, ಈಗ
ನೀವೇ ಯೋಚಿಸಿ ಹೀಗೆ ಮಾಡುವುದು ತಪ್ಪೇ ? ದೇಶದ ಹಲವು ವಿದ್ಯುತ್ ಪ್ರಸರಣ ಕಂಪನಿಗಳು ಈಗಾಗಲೇ ನಷ್ಟದಲ್ಲಿವೆ, ಈ ಕಂಪನಿಗಳಲ್ಲಿನ ಹಲವು
ಮೂಲಭೂತ ಆಸ್ತಿಗಳು ಸರಿಯಾಗಿ ಬಳಕೆಯಾದಲ್ಲಿ ಆದಾಯವು ಹೆಚ್ಚುತ್ತದೆ.

ಇದನ್ನು ಮನಗೊಂಡಿರುವ ಸರಕಾರ ಸುಮಾರು 28608 ಕಿ.ಮೀ ನಷ್ಟು (ಇದು ಒಟ್ಟಾರೆ ಪ್ರದೇಶದ ಶೇ.17ರಷ್ಟು ಮಾತ್ರ) ಪ್ರಸರಣ ಪ್ರದೇಶವನ್ನು
ಎಂ.ಎನ್.ಪಿನಡಿಯಲ್ಲಿ ತಂದು 45200 ಕೋಟಿಯ ಆದಾಯದ ನಿರೀಕ್ಷೆಯಲ್ಲಿದೆ. ಈಗಿರುವ ಇರುವ ಸೌಕರ್ಯಗಳನ್ನು ಬಳಸಿಕೊಂಡು ಹಾಗೂ ಸಣ್ಣಪುಟ್ಟ
ಪ್ರಮಾಣದ ಬಂಡವಾಳ ವನ್ನು ಹೂಡಿ ಒಂದು ಕಿ.ಮೀಗೆ ಸುಮಾರು 1.58 ಕೋಟಿಯ ಹೆಚ್ಚಿನ ಆದಾಯವನ್ನು ನಿರೀಕ್ಷಿಸಲಾಗಿದೆ. ಟೆಲಿಕಾಂ ವಲಯದಲ್ಲಿ ಸರಕಾರವು ಈಗಾಗಲೇ ಹೂಡಿಕೆ ಮಾಡಿರುವ ಸಾವಿರಾರು ಕಿ.ಮೀ. ’OPTIC FIBER’ ಕೇಬಲ್ ಹಾಗೂ ’MOBILE TOWER’  ಲಭ್ಯವಿದೆ, ಹಲವೆಡೆ ಕೇಬಲ್‌ಗಳು ಹಾಗೂ TOWER ಗಳು ಸರಿಯಾಗಿ ಬಳೆಯಾಗುತ್ತಿಲ್ಲ.

ಸುಮಾರು 286000 ಕಿ.ಮೀ ನಷ್ಟು ’OPTIC FIBER’ ಹಾಗು 14917 ’MOBILE TOWER’ ಗಳನ್ನು ಎಂ.ಎನ್ .ಪಿನಡಿಯಲ್ಲಿ ತಂದು ಸರಿಯಾಗಿ ಬಳಕೆ ಮಾಡಿ ಸುಮಾರು 35000 ಕೋಟಿಯಷ್ಟು ಆದಾಯವನ್ನು ನಿರೀಕ್ಷಿಸಲಾಗಿದೆ. ಹಲವು ’MOBILE TOWER’ ಗಳು ’BSNL’ ಹಾಗು ’MTNL’ ಒಡೆತನ ದಲ್ಲಿರುವುದರಿಂದ, ಈ ’MOBILE TOWER’ ಗಳನ್ನು ಇತರ ಟೆಲಿಕಾಂ ನಿರ್ವಾಹಕರಿಗೆ ’SUB LEASE’ ಗೆ ನೀಡುವುದು ಎಂ.ಎನ್.ಪಿ ನ ಒಂದು ಭಾಗ. (ಈಗಾಗಲೇ ಖಾಸಗೀಯವರಿಗೆ ಹಲವು ವರ್ಷಗಳಿಂದ ನೀಡುತ್ತಾ ಬಂದಿದೆ). ವಿದ್ಯುತ್ ಉತ್ಪಾದನಾ ವಲಯದಲ್ಲಿರುವ ಶೇ ೬ರಷ್ಟು ಆಸ್ತಿಯನ್ನು ಬಳಸಿಕೊಂಡು ಸುಮಾರು 39832 ಕೋಟಿಯ ಆದಾಯವನ್ನು ನಿರೀಕ್ಷಿಸಲಾಗಿದೆ, ನೈಸರ್ಗಿಕ ಅನಿಲ ಕೊಳವೆಯಲ್ಲಿರುವ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು ಸುಮಾರು 24462 ಕೋಟಿಯ ಆದಾಯವನ್ನು ನಿರೀಕ್ಷಿಸಲಾಗಿದೆ, ಸರಕಾರಿ ಗೋದಾಮುಗಳ ಸದ್ಬಳಕೆಯಿಂದ ಸುಮಾರು 28900 ಕೋಟಿಯ ಆದಾಯವನ್ನು ನಿರೀಕ್ಷಿಸಲಾಗಿದೆ, ವಿಮಾನ ನಿಲ್ದಾಣಗಳಿಂದ ಸುಮಾರು 20782 ಕೋಟಿಯ ಆದಾಯವನ್ನು ನಿರೀಕ್ಷಿಸಲಾಗಿದೆ.

ಒಂದಂತೂ ಸ್ಪಷ್ಟ ಎಂ.ಎನ್.ಪಿ ನಡಿಯಲ್ಲಿ ಸರಕಾರದ ಯಾವ ಆಸ್ತಿಯನ್ನೂ ಮಾರುವುದಿಲ್ಲ, ಬದಲಾಗಿ ಈಗಾಗಲೇ ಇರುವ ಸರಕಾರಿ ಆಸ್ತಿಗಳ ಸದ್ಬಳಕೆಯ ಮೂಲಕ 600000 ಕೋಟಿಯ ಹೆಚ್ಚಿನ ಆದಾಯವನ್ನು ನಿರೀಕ್ಷಿಸಲಾ ಗಿದೆ. ನೀತಿ ಆಯೋಗವು ಪ್ರತಿಯೊಂದು ವಲಯದಲ್ಲಿ ಯಾವ ರೀತಿಯಲ್ಲಿ ಹೆಚ್ಚಿನ ಆದಾಯ ವನ್ನು ನಿರೀಕ್ಷಿಸಲಾಗಿ ದೆಯೆಂದು ಆಳವಾಗಿ ಹಾಗೂ ಸ್ಪಷ್ಟವಾಗಿ ೧೧೪ ಪುಟಗಳ ದಾಖಲೆಯಲ್ಲಿ ಹೇಳಿದೆ (ಓದುಗರು ದಯವಿಟ್ಟು ಒಮ್ಮೆ ಓದಿ ಮತ್ತಷ್ಟು ವಿಷಯಗಳು ಸ್ಪಷ್ಟವಾಗಿ ತಿಳಿಯುತ್ತದೆ).

ಸರಕಾರಗಳು ಎಂದೂ ಸಹ ವ್ಯವಹಾರವನ್ನು ಮಾಡಬಾರದು, ಸರಕಾರದ ಕೆಲಸವೇನಿದ್ದರೂ ದೇಶವನ್ನು ಸುಸಜ್ಜಿತವಾಗಿ ನಡೆಸುವುದು. ತನ್ನ ಅಽಕಾರಾವಽ ಯಲ್ಲಿ ದೇಶದ ಬಗ್ಗೆ ಹೆಚ್ಚು ಗಮನ ಕೊಡದೆ ವ್ಯವಹಾರವನ್ನೇ ನಡೆಸಿಕೊಂಡು ಬಂದಿರುವ ಕಾಂಗ್ರೆಸ್ ಪಕ್ಷ ಸುಳ್ಳನ್ನೇ ಹೇಳುವುದು.