Friday, 20th September 2024

ಹವಾಮಾನ ಬಿಕ್ಕಟ್ಟಿಗೆ ವರ್ಧಿತ ಅಂತಾರಾಷ್ಟ್ರೀಯ ಸಹಕಾರದ ಅಗತ್ಯವಿದೆ

ಅಭಿಪ್ರಾಯ

ಜೋನಾಥನ್ ಜಡ್ಕಾ

ದಕ್ಷಿಣ ಭಾರತಕ್ಕೆಇಸ್ರೇಲ್‌ನ ಕಾನ್ಸುಲ್‌ ಜನರಲ್‌

ಹವಾಮಾನ ಬದಲಾವಣೆಯಲ್ಲಿ ಇಸ್ರೇಲ್- ಭಾರತ ಸಹಕಾರವು ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ ರಕ್ಷಣೆ, ಬಾಹ್ಯಾಕಾಶ, ಕೃಷಿ ಮತ್ತು ನೀರಿನ ನಿರ್ವಹಣೆ ಯಲ್ಲಿ ರೋಮಾಂಚಕ ಸಹಕಾರವನ್ನು ಮುಂದುವರಿಸಲು ಎರಡೂ ದೇಶಗಳಿಗೆ ಉತ್ತಮ ಅವಕಾಶವಾಗಿದೆ. ಈ ಎಲ್ಲ ಕ್ಷೇತ್ರಗಳಲ್ಲಿ ‘ಹಸಿರುಚಿಂತನೆ’ ಅಳವಡಿಸಿ ಕೊಳ್ಳುವುದು ಹವಾಮಾನ ಸ್ಥಿತಿ ಸ್ಥಾಪಕತ್ವಕ್ಕೆ ಪ್ರಮುಖವಾಗಿರುತ್ತದೆ, ಮತ್ತು ಭಾರತ ಮತ್ತು ಇಸ್ರೇಲ್ ಒಟ್ಟಾಗಿ ಪ್ರಕೃತಿಯೊಂದಿಗೆ ಶಾಂತಿ ಸ್ಥಾಪಿಸಲು ಪ್ರಪಂಚದ ಪ್ರಯತ್ನಗಳಿಗೆ ಕಾರಣವಾಗಬಹುದು.

ಹವಾಮಾನ ಬಿಕ್ಕಟ್ಟಿನ ಬಗ್ಗೆ ವಿಶೇಷವಾಗಿ ತಿಳಿದಿಲ್ಲದವರು ಕೂಡ ಹವಾಮಾನದಲ್ಲಿನ ತೀವ್ರ ಬದಲಾವಣೆಗಳಿಂದ ಗಾಬರಿಗೊಂಡಿದ್ದಾರೆ. ಜರ್ಮನಿ ಮತ್ತು ಪಶ್ಚಿಮ
ಯುರೋಪಿನಲ್ಲಿ ಭಾರೀ ಪ್ರವಾಹಗಳು ನೂರಾರು ಜನರ ಜೀವವನ್ನು ಬಲಿತೆಗೆದುಕೊಂಡರೆ, ಚೀನಾ ಮತ್ತು ಭಾರತದ ಇಡೀ ಹಳ್ಳಿಗಳು ಭಾರೀ ಮಳೆಗೆ ಕೊಚ್ಚಿ ಹೋಗಿವೆ.

ಬೇಸಿಗೆಯ ಮಧ್ಯದಲ್ಲಿ ದೈತ್ಯ ಆಲಿಕಲ್ಲುಗಳು ಇಟಲಿಯ ಮೇಲೆ ಸುರಿದವು, ಮತ್ತು ಬ್ರಿಟನ್ ಮತ್ತು ಸ್ವಿಟ್ಜಲೆಂಡ್ ಮಳೆ ಮತ್ತು ಒರಟು ವಾತಾವರಣದಿಂದ ಆಶ್ಚರ್ಯ ಚಕಿತರಾದವು. ಸಾರ್ಡಿನಿಯಾ, ಗ್ರೀಸ್ ಮತ್ತು ಸೈಬೀರಿಯಾಗಳು ವ್ಯಾಪಕವಾದ ಬೆಂಕಿಗೆ ತುತ್ತಾಗಿವೆ, ಮತ್ತು ಕ್ಯಾಲಿಫೋರ್ನಿಯಾದಲ್ಲಿ ತಾಪಮಾನವು 56 ಡಿಗ್ರಿ ಸೆಲ್ಸಿಯಸ್’ನಷ್ಟು ದಾಖಲೆಗಳನ್ನು ತಲುಪಿತು, ಇದು ನಿವಾಸಿಗಳು ನಿಜ ಜೀವನದ ಒಲೆಯಲ್ಲಿ ಸುಳಿಯುತ್ತಿರುವಂತೆ ಭಾಸವಾಯಿತು. ಇವೆಲ್ಲವನ್ನೂ ಪರಿಗಣಿಸಿ, ಹವಾಮಾನ ಬದಲಾವಣೆಯ ಕುರಿತು ಸರಕಾರಿ ಸಮಿತಿಯು ಇತ್ತೀಚೆಗೆ ಬಿಡುಗಡೆ ಮಾಡಿದ ಒಂದು ಪ್ರಮುಖ ವರದಿಯು ನಮ್ಮೆಲ್ಲರಿಗೂ ಗಂಭೀರ ಎಚ್ಚರಿಕೆಯ ಸಂಕೇತವಾಗಿ ಕಾರ್ಯ ನಿರ್ವಹಿಸುತ್ತದೆ.

ಭೂಮಿಯ ಹವಾಗುಣ, ಪ್ರಕೃತಿ ಮತ್ತು ಪರಿಸರವನ್ನು ಬೆಂಬಲಿಸುವ ಆದರೆ ಅಡ್ಡಿಪಡಿಸದ ಜೀವನಶೈಲಿ ಮತ್ತು ಆರ್ಥಿಕತೆಗೆ ನಾವು ನಮ್ಮ ಮಾರ್ಗಗಳನ್ನು ಮತ್ತು
ಪರಿವರ್ತನೆಯನ್ನು ಬದಲಾಯಿಸಬೇಕಾಗಿದೆ. ಸಾವಿರಾರು ಸುಸ್ಥಾಪಿತ ಮತ್ತು ವೈವಿಧ್ಯಮಯ ವೈಜ್ಞಾನಿಕ ಅಧ್ಯಯನಗಳ ಆಧಾರದ ಮೇಲೆ ಈ ವರದಿಯ
ಬರವಣಿಗೆಯಲ್ಲಿ ಭಾಗವಹಿಸಿದ ನೂರಾರು ವಿಜ್ಞಾನಿಗಳ ಸಾಕ್ಷ್ಯಗಳು ಅತ್ಯಂತ ಮಹತ್ವದ್ದಾಗಿದೆ. ಬದಲಾವಣೆಯ ಸಮಯ ಬಂದಿದೆ. ಆದಾಗ್ಯೂ, ಬದಲಾವಣೆ ಕಷ್ಟ. 2050 ರ ವೇಳೆಗೆ ಶೂನ್ಯ-ಹೊರಸೂಸುವಿಕೆ ಆರ್ಥಿಕತೆಯತ್ತ ಸಾಗಲು ಮತ್ತು 2030 ರ ವೇಳೆಗೆ ಮನುಷ್ಯ ವರ್ಗದ ಹಸಿರು ಮನೆ ಅನಿಲ ಹೊರ ಸೂಸುವಿಕೆಯನ್ನು ಅರ್ಧಕ್ಕೆ ಇಳಿಸಲು ನಮಗೆ ಯಶಸ್ಸಿನ ಕಥೆಗಳು, ಪೀರ್ಸಮಾನಸ್ಕಂಧರ ಕಲಿಕೆ ಮತ್ತು ತಂತ್ರ ಜ್ಞಾನಗಳು ಬೇಕಾಗುತ್ತವೆ.

ನೀವು ಸ್ಫೂರ್ತಿ ಮತ್ತು ಉತ್ತಮ ಆಲೋಚನೆಗಳಿಗಾಗಿ ಸುತ್ತಲೂ ನೋಡಿದರೆ, ಇಸ್ರೇಲ್ ಜನ ಸಂದಣಿಯಿಂದ ಎದ್ದು ಕಾಣುತ್ತದೆ. ದಶಕಗಳಲ್ಲಿ, ಇಸ್ರೇಲ್ ಮರು ಭೂಮಿ ಮತ್ತು ಶುಷ್ಕ ಪ್ರದೇಶಗಳಲ್ಲಿ ಕೃಷಿಯನ್ನು ಸ್ಥಾಪಿಸಲು ಕಲಿತಿದೆ, ಅದರ ತ್ಯಾಜ್ಯ ನೀರಿನ 90% ಮರು ಬಳಕೆ ಮತ್ತು ಕುಡಿಯುವ ನೀರನ್ನು ಶುದ್ಧೀಕರಿಸಿದೆ. ಇದು ಶಕ್ತಿಯನ್ನು ಸಂಗ್ರಹಿಸಲು, ಶಕ್ತಿಯನ್ನು ಸಮರ್ಥವಾಗಿ ಬಳಸಲು ಮತ್ತು ನವೀಕರಿಸಬಹುದಾದ ಶಕ್ತಿಯನ್ನು ಬಳಸಿಕೊಳ್ಳಲು ಅದ್ಭುತವಾದ ಪರಿಹಾರಗಳನ್ನು ಅಭಿವೃದ್ಧಿಪಡಿಸಿದೆ. ಈ ದೇಶವು ಪ್ರಾಣಿ ಪ್ರೋಟಿನ್ ಬದಲಿಗಳ ಒಂದು ಮೂಲಭೂತ ಉದ್ಯಮವನ್ನು ಬೆಳೆಸಿದೆ ಮತ್ತು ಬರ ಮತ್ತು ಶುಷ್ಕತೆಯ ಪರಿಸ್ಥಿತಿಯಲ್ಲಿ ಅರಣ್ಯಗಳನ್ನು ಹೇಗೆ ಸಂರಕ್ಷಿಸುವುದು ಎಂದು ತಿಳಿದಿದೆ.

ಹವಾಮಾನ ಬಿಕ್ಕಟ್ಟಿಗೆ ಪ್ರಾಯೋಗಿಕ ಪರಿಹಾರಗಳ ಅಭಿವೃದ್ಧಿಗೆ ಇಸ್ರೇಲ್ ಜೀವಂತ ಪ್ರಯೋಗಾಲಯವಾಗಿದೆ. ಇಸ್ರೇಲ್‌ನ ಹವಾಮಾನ ಆವಿಷ್ಕಾರವು ಇಡೀ ವಿಶ್ವವು ಹವಾಮಾನ ಬಿಕ್ಕಟ್ಟಿಗೆ ಹೊಂದಿ ಕೊಳ್ಳುವ ಸಾಮರ್ಥ್ಯಗಳನ್ನು ಅಭಿವೃದ್ಧಿ ಪಡಿಸಲು ಮತ್ತು ಸ್ಥಿತಿ ಸ್ಥಾಪಕತ್ವವನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಪ್ರಾಣಿ ಪ್ರೋಟಿನ್ ಬದಲಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅದ್ಭುತ ಸಂಶೋಧನೆ ಮತ್ತು ಅಭಿವೃದ್ಧಿ ಅತ್ಯುತ್ತಮ ಉದಾಹರಣೆಯಾಗಿದೆ. ಮಾಂಸ, ಹಾಲು ಮತ್ತು
ಮೊಟ್ಟೆಗಳಂತಹ ಉತ್ಪನ್ನಗಳನ್ನು ಪ್ರಯೋಗಾಲಯಗಳಲ್ಲಿ ಹಸಿರು ಮನೆ ಅನಿಲಗಳನ್ನು ಹೊರ ಸೂಸದ ವಿಧಾನಗಳನ್ನು ಬಳಸಿ ಉತ್ಪಾದಿಸಲಾಗುತ್ತಿದೆ ಮತ್ತು ಇದು ಪರಿಸರ ಮರು ಸ್ಥಾಪನೆ ಮತ್ತು ಮರು ಅರಣ್ಯೀಕರಣಕ್ಕಾಗಿ ಕೃಷಿ ಭೂಮಿಯನ್ನು ಮುಕ್ತಗೊಳಿಸಲು ಅನುವು ಮಾಡಿಕೊಡುತ್ತದೆ.

ಇದರ ಜತೆಗೆ, ಈ ತಂತ್ರಜ್ಞಾನಗಳು ಹವಾಮಾನ ಬಿಕ್ಕಟ್ಟಿನ ಯುಗದಲ್ಲಿ ಜಾಗತಿಕ ಆಹಾರ ಭದ್ರತೆಯನ್ನು ಹೆಚ್ಚಿಸಲು ದಾರಿ ಮಾಡಿಕೊಡುತ್ತದೆ. ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಇಸ್ರೇಲ್‌ನ ಹವಾಮಾನ ನಾವೀನ್ಯತೆಯನ್ನು ಸಹ ಬಳಸಬಹುದು. ಸಂಕುಚಿತ – ವಾಯು ಶಕ್ತಿ ಸಂಗ್ರಹಣೆ,
ಸಮುದ್ರದ ಅಲೆಗಳಿಂದ ಶಕ್ತಿಯ ಉತ್ಪಾದನೆ, ಇಂಧನ ನಿರ್ವಹಣೆಗೆ ಸುಧಾರಿತ ಕಂಪ್ಯೂಟಿಂಗ್ ಉಪಕರಣಗಳ ಬಳಕೆ, ಇತ್ಯಾದಿ ಕ್ಷೇತ್ರಗಳಲ್ಲಿ ಈ ದೇಶವು ಇಂದು ವಿಶ್ವದ ಅತ್ಯಂತ ಆಕರ್ಷಕ ಪರಿಹಾರಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದಲ್ಲದೆ, ಇಸ್ರೇಲ್ ಮತ್ತು ಭಾರತವು ತಮ್ಮ ವಿಭಿನ್ನ ಭೌಗೋಳಿಕ, ಆರ್ಥಿಕ ಮತು ಜನ ಸಂಖ್ಯಾ ಗಾತ್ರದ ಜತೆಗೆ ವಿಭಿನ್ನ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸನ್ನಿವೇಶಗಳ ಹೊರತಾಗಿಯೂ ಪ್ರಮುಖ ಸಾಮ್ಯತೆಗಳನ್ನು ಹಂಚಿಕೊಳ್ಳುತ್ತವೆ. ಎರಡೂ ದೇಶಗಳು ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯ ಕೇಂದ್ರಗಳಾಗಿವೆ, ಆದರೆ ಪುರಾತನ ನಾಗರಿಕತೆಯಲ್ಲಿ ಉತ್ಕೃಷ್ಟ, ಸಾಂಸ್ಕೃತಿಕ ಮತ್ತು ಬೌದ್ಧಿಕ ಪರಂಪರೆಯೊಂದಿಗೆ ಬೇರೂರಿದೆ; ಸವಾಲಿನ ಪರಿಸರದಲ್ಲಿ ಅವರು ರೋಮಾಂಚಕ, ಉದಾರವಾದಿ ಪ್ರಜಾಪ್ರಭುತ್ವಗಳಾಗಿ ಸೇವೆ ಸಲ್ಲಿಸುತ್ತಾರೆ; ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಗತಿಯಲ್ಲಿ ಅಂತಾರಾಷ್ಟ್ರೀಯ ಸಮುದಾಯದ ರಚನಾತ್ಮಕ ಸದಸ್ಯ ರಾಗಿ ಸೇವೆ ಸಲ್ಲಿಸಲು ಇಬ್ಬರೂ ಬದ್ಧರಾಗಿದ್ದಾರೆ.

ಅಂತೆಯೇ, ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿನ ಸಹಕಾರವು ಭವಿಷ್ಯದ ಸಹಯೋಗಗಳಿಗೆ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ.
ಹವಾಮಾನ ಬದಲಾವಣೆಯಲ್ಲಿ ಇಸ್ರೇಲ್- ಭಾರತ ಸಹಕಾರವು ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ ರಕ್ಷಣೆ, ಬಾಹ್ಯಾಕಾಶ, ಕೃಷಿ ಮತ್ತು ನೀರಿನ ನಿರ್ವಹಣೆ ಯಲ್ಲಿ ರೋಮಾಂಚಕ ಸಹಕಾರವನ್ನು ಮುಂದುವರಿಸಲು ಎರಡೂ ದೇಶಗಳಿಗೆ ಉತ್ತಮ ಅವಕಾಶವಾಗಿದೆ. ಈ ಎಲ್ಲ ಕ್ಷೇತ್ರಗಳಲ್ಲಿ ‘ಹಸಿರುಚಿಂತನೆ’ ಅಳವಡಿಸಿ ಕೊಳ್ಳುವುದು ಹವಾಮಾನ ಸ್ಥಿತಿ ಸ್ಥಾಪಕತ್ವಕ್ಕೆ ಪ್ರಮುಖವಾಗಿರುತ್ತದೆ, ಮತ್ತು ಭಾರತ ಮತ್ತು ಇಸ್ರೇಲ್ ಒಟ್ಟಾಗಿ ಪ್ರಕೃತಿಯೊಂದಿಗೆ ಶಾಂತಿ ಸ್ಥಾಪಿಸಲು
ಪ್ರಪಂಚದ ಪ್ರಯತ್ನಗಳಿಗೆ ಕಾರಣವಾಗಬಹುದು.

ಈ ಅಭೂತ ಪೂರ್ವ ಬಿಕ್ಕಟ್ಟನ್ನು ಯಾವುದೇ ದೇಶ ಒಂಟಿಯಾಗಿ ನಿಭಾಯಿಸಲು ಸಾಧ್ಯವಿಲ್ಲ ಎಂಬುದು ಈಗ ಎಲ್ಲರಿಗೂ ಸ್ಪಷ್ಟವಾಗಿದೆ. ಈ ದೊಡ್ಡ ಹಡಗನ್ನು (ನಮ್ಮ ಗ್ರಹ ಭೂಮಿ) ಸುರಕ್ಷಿತವಾಗಿ ತೀರದ ಕಡೆಗೆ ತಿರುಗಿಸಲು ನಾವು ಮಾನವ ಕುಲದ ಎಲ್ಲಾ ಅದ್ಭುತ ಸಾಮರ್ಥ್ಯಗಳನ್ನು ಒಟ್ಟಾಗಿ ಬಳಸಿಕೊಳ್ಳಬೇಕು. ಮತ್ತು ಇದನ್ನು ಮಾಡಲು ಏಕೈಕ ಮಾರ್ಗವೆಂದರೆ ಒಟ್ಟಿಗೆ ಕೆಲಸ ಮಾಡುವುದು, ಮಾಹಿತಿ ಮತ್ತು ಅನುಭವವನ್ನು ಹಂಚಿಕೊಳ್ಳುವುದು ಮತ್ತು ಪರಸ್ಪರ
ಬೆಂಬಲ ವನ್ನು ಒದಗಿಸುವುದು. ಇಸ್ರೇಲ್ ತನ್ನ ಅನುಭವವನ್ನು ಹಂಚಿಕೊಳ್ಳಲು ಹಾಗೂ ಇತರರ ಅನುಭವಗಳಿಂದ ಕಲಿಯಲು ಸಿದ್ಧವಾಗಿದೆ.