Thursday, 19th September 2024

ಅಡ್ಡಿಯಿಲ್ಲ; ಇನ್ನು ಅನುಕೂಲ ಸಿಂಧು ಮೈತ್ರಿಯಾದರೂ ಸೈ..

ರಾಂ ಎಲ್ಲಂಗಳ, ಮಂಗಳೂರು

‘ಯಡಿಯೂರಪ್ಪ ನಮಗೆ ಶತ್ರುವಲ್ಲ. ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ’. ಅಲ್ಲ ಅನ್ನುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಬಿಜೆಪಿಯತ್ತ ಮೃದು ಧೋರಣೆ ತಳೆದಿದ್ದಾಾರೆ. ಅನುಕೂಲ ಸಿಂಧು ಮೈತ್ರಿಿಗೆ ಮುನ್ನುಡಿ ಬರೆದಿದ್ದಾಾರೆ. ಅವರು ಅಂದದ್ದು ಸಾರ್ವಕಾಲಿಕ ಸತ್ಯ. ಅವರ ಮಟ್ಟಿಿಗಂತೂ ಅಕ್ಷರಶಃ ಸತ್ಯ.

ಅವರ ಮಟ್ಟಿಿಗಷ್ಟೇ ಅಲ್ಲ. ಅವರ ಮಗ ಎಚ್.ಡಿ. ಕುಮಾರಸ್ವಾಾಮಿ ಮಟ್ಟಿಿಗೂ ಅಷ್ಟೇ. ಇಬ್ಬರೂ ಬಂದ ಅವಕಾಶವನ್ನು ಬಿಡದೆ ಬಳಸಿಕೊಂಡವರು. ಒಂದು ರೀತಿಯಲ್ಲಿ ಅವಕಾಶವಾದಿಗಳು. ಅಪ್ಪ ದೇವೇಗೌಡ ಅನಿರೀಕ್ಷಿತವಾಗಿ ಪ್ರಧಾನಿಯಾದರು. ಮಗ ಕುಮಾರಸ್ವಾಾಮಿ ಆಕಸ್ಮಿಿಕವಾಗಿ ಸಿಎಂ ಇಬ್ಬರೂ ಹಾಗೆ ಆಗುವರೆಂದು ಕನಸಲ್ಲೂ ಅಂದುಕೊಂಡಿರಲಾರರು. ತಾವು ಸಂದರ್ಭದ ‘ಶಿಶು’ ಎಂದು ಅವರೇ ಅಂದು ಹೇಳಿಕೊಂಡಿದ್ದರು. ಅವರಷ್ಟೇ ಅಲ್ಲ. ಅವರ ಪಕ್ಷವೇ ಒಂದು ರೀತಿಯಲ್ಲಿ ಅವಕಾಶವಾದಕ್ಕೆೆ, ಅನುಕೂಲ ಸಿಂಧು ರಾಜಕೀಯಕ್ಕೆೆ ಮತ್ತೊೊಂದು ಹೆಸರು ಎಂಬುದು ಪಕ್ಷದ ಹೆಜ್ಜೆೆ ಗುರುತುಗಳನ್ನು ಗಮನಿಸಿದರೆ ಅರಿವಾಗದಿರದು.

ಜೆಡಿಎಸ್ ಈ ಹಿಂದೆ ಬಿಜೆಪಿಯೊಂದಿಗೆ ಕೈಜೋಡಿಸಿತ್ತು. ಕುಮಾರಸ್ವಾಾಮಿಯವರು ಯಡಿಯೂರಪ್ಪನವರೊಂದಿಗೆ ಕೈಜೋಡಿಸಿ ರಾಜ್ಯದಲ್ಲಿ ‘20ಃ20’ರ ಸರಕಾರ ರಚಿಸಿದ್ದರು. ಹಳೇ ಕಥೆಯಾದರೂ ಜನತೆಯಿನ್ನೂ ಆ ಪ್ರಹಸನವನ್ನು ಮರೆತಿರಲಾರರು. ಮುಂದೆ ಜೆಡಿಎಸ್ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಸಲುವಾಗಿ ಕಾಂಗ್ರೆೆಸಿನೊಂದಿಗೆ ಕೈಜೋಡಿಸಿತು. ಮೈತ್ರಿಿ ಸರಕಾರ ರಚಿಸಿತು. ಸಮ್ಮಿಿಶ್ರ ಸರಕಾರದ ಹೆಸರಿನಲ್ಲಿ ರಾಜ್ಯಕ್ಕೆೆ ಸಂಕಷ್ಟ ನೀಡಿತು. ಹಾಗೂ ಹೀಗೂ ಕುಂಟುತ್ತಾಾ ಸಾಗಿ ಕೊನೆಗೂ ಅತೃಪ್ತ ಶಾಸಕರಿಂದಾಗಿ ವರ್ಷದೊಳಗಾಗಿ ಪತನದ ಹಾದಿ ಹಿಡಿಯಿತು. ಅದಾಗಿ ತಿಂಗಳುಗಳೇ ಉರುಳಿದರೂ ಪತನಕ್ಕೆೆ ಕಾರಣರು ಯಾರು ಎಂಬ ವಿಚಾರವಾಗಿ ಪಾಲುದಾರ ಪಕ್ಷಗಳೆರಡೂ ಪರಸ್ಪರ ಬೆಟ್ಟು ಮಾಡುವುದು ನಿಂತಿಲ್ಲ. ಆರೋಪ ಪ್ರತ್ಯಾಾರೋಪಗಳಿನ್ನೂ ಮುಗಿದಂತಿಲ್ಲ. ಜೆಡಿಎಸ್ ಈಗ ಮತ್ತೆೆ ಬಿಜೆಪಿಯತ್ತ ಮುಖ ಸ್ನೇಹಹಸ್ತ ಚಾಚಲು ಸಿದ್ಧವಾಗಿದೆ ಎಂಬುದು ಮಾತು ಸುಳ್ಳಲ್ಲ!

ಎಚ್.ಡಿ. ದೇವೇಗೌಡ ಮತ್ತು ಮುಖ್ಯಮಂತ್ರಿಿ ಬಿ.ಎಸ್. ಯಡಿಯೂರಪ್ಪ ಇಬ್ಬರಿಗೂ ಮೊದಲಿನಿಂದಲೂ ಅಷ್ಟಕ್ಕಷ್ಟೆೆ. ಆದರೀಗ ಇಬ್ಬರೂ ಪರಸ್ಪರ ಮೆತ್ತಗಾಗಿರುವುದಕ್ಕೆೆ ಬೇರೆ ಬೇರೆ ಅರ್ಥ ಕಲ್ಪಿಿಸಲಾಗುತ್ತದೆ. ಸದ್ಯದಲ್ಲೇ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಯಡಿಯೂರಪ್ಪನವರಿಗೆ ಅದೊಂದು ಪ್ರತಿಷ್ಠೆೆಯ ಪ್ರಶ್ನೆೆಯೆನಿಸಿದೆ. ಗೆದ್ದೇ ಗೆಲ್ಲುವ ಅನಿವಾರ್ಯತೆಯಿದೆ. ಇದೀಗ ಅವರು ಜೆಡಿಎಸ್ ಬಗ್ಗೆೆ ತಳೆದಿರುವ ಮೃದು ಧೋರಣೆಯ ಹಿಂದೆ ಅಧಿಕಾರವುಳಿಸಿಕೊಳ್ಳುವ ಇರಾದೆಯಿದ್ದರೂ ಇರಬಹುದು. ಈ ಹಿಂದಿನ ಕದ್ದಾಾಲಿಕೆ ಪ್ರಕರಣವನ್ನು ಬಿಜೆಪಿ ಸಿಬಿಐಗೆ ಒಪ್ಪಿಿಸಿದೆ. ಗೌಡರ ಮೃದು ಧೋರಣೆಯ ಹಿಂದೆಯೂ ಅಷ್ಟೆೆ. ಬೀಸುವ ದೊಣ್ಣೆೆಯಿಂದ ತಪ್ಪಿಿಸಿಕೊಳ್ಳುವ ಉದ್ದೇಶವಿದ್ದರೂ ಇರಬಹುದು. ಉದ್ದೇಶ ಏನೇ ಇರಲಿ. ‘ದೊಡ್ಡಗೌಡರು ಸದ್ದಿಲ್ಲದೇ ದಾಳವುರುಳಿಸಿದ್ದಾಾರೆ’. ರಾಜ್ಯ ರಾಜಕೀಯದಾಟ ಎತ್ತ ಸಾಗುವುದೋ ಕಾದು ನೋಡಬೇಕಿದೆ.

ಆದರೆ, ನಮ್ಮ ದೌರ್ಭಾಗ್ಯವೋ ಏನೋ. ಇತ್ತೀಚಿಗೆ ಸ್ಥಿಿರ ಸರಕಾರ ತೀರಾ ವಿರಳ. ರಾಜ್ಯದ ಮಟ್ಟಿಿಗಂತೂ ಇದು ನೂರಕ್ಕೆೆ ನೂರು ಸತ್ಯ. ಇಲ್ಲಿ ಮೂರು ಪ್ರಮುಖ ಪಕ್ಷಗಳಿರುವುದರಿಂದ ಇತ್ತೀಚಿಗಿನ ಚುನಾವಣೆಗಳಲ್ಲಿ ಯಾವ ಸ್ಪಷ್ಟ ಬಹುಮತವಿಲ್ಲ. ಸರಕಾರ ರಚನೆಗೆ ಮೈತ್ರಿಿ ಅನಿವಾರ್ಯವಾಗತೊಡಗಿತು. ಒಂದೋ ಚುನಾವಣಾ ಪೂರ್ವ ಇಲ್ಲವೇ ಚುನಾವಣೋತ್ತರ ಮೈತ್ರಿಿ. ಹಿಂದಿನ ಜೆಡಿಎಸ್ ಮತ್ತು ಕಾಂಗ್ರೆೆಸ್ ಮೈತ್ರಿಿ ಸರಕಾರವು ಚುನಾವಣೋತ್ತರ ಮೈತ್ರಿಿಗೊಂದು ಉದಾಹರಣೆ. ಅದು ಎಷ್ಟರಮಟ್ಟಿಿಗೆ ಯಶಸ್ವಿಿಯಾಗಿದೆ ಎಂಬುದಕ್ಕೆೆ ವರ್ಷದೊಳಗೆ ಪತನ ಹೊಂದಿದ್ದೇ ಸಾಕ್ಷಿಯಾಗಿತ್ತು.

ಚುನಾವಣೋತ್ತರ ಮೈತ್ರಿಿಯೆಂದಲ್ಲ. ಈಗ ನೋಡಿದರೆ ಚುನಾವಣಾ ಪೂರ್ವ ಮೈತ್ರಿಿಯೂ ಸುಗಮವೆನ್ನುವಂತಿಲ್ಲ. ಪ್ರಸ್ತುತ ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿನ ಹಲವು ವಿದ್ಯಮಾನಗಳನ್ನು ಗಮನಿಸಿದರೆ ಹಾಗನಿಸದಿರದು. ಅಲ್ಲಿ ಬಿಜೆಪಿ ಮತ್ತು ಶಿವಸೇನೆ ಕೂಟ ಜತೆಯಾಗಿಯೇ ಚುನಾವಣೆಯನ್ನೆೆದುರಿಸಿತ್ತು. ಬಿಜೆಪಿ 105 ಸ್ಥಾಾನಗಳನ್ನು ಪಡೆದಿದ್ದು ಶಿವಸೇನೆ 56 ಸ್ಥಾಾನ ಗಳಿಸಿತ್ತು. ಸರಕಾರ ರಚನೆಗೆ ಸ್ಪಷ್ಟ ಬಹುಮತವೇನೋ ಪಡೆದುಕೊಂಡಿತ್ತು. ಆದರೆ, ಪಾಲುದಾರ ಪಕ್ಷ ಶಿವಸೇನೆ 50ಃ50ರ ಅನುಪಾತದಲ್ಲಿ ಅಧಿಕಾರ ಹಂಚಿಕೊಳ್ಳಲು ಪಟ್ಟು ಹಿಡಿದುದರ ಪರಿಣಾಮವಾಗಿ ಫಲಿತಾಂಶ ಪ್ರಕಟಗೊಂಡು ಸಹ ಎರಡು ವಾರಗಳುರುಳಿದರೂ ಸರಕಾರ ರಚನೆ ಸರ್ಕಸ್ ಕೊನೆಗೊಂಡಿಲ್ಲ!

ಇಲ್ಲಿ ಒಂದೇ ಪಕ್ಷ ಸ್ಪಷ್ಟ ಬಹುಮತ ಪಡೆದರೆ ಲೇಸೆಂದು ಹೇಳುವುದಿದೆ. ಈಗ ಅಲ್ಲೂ ತಾಪತ್ರಯ ತಪ್ಪಿಿದ್ದಲ್ಲ. ಎಲ್ಲರಿಗೂ ದಾಹ ಇದ್ದೇ ಇರುತ್ತದೆ. ಎಲ್ಲ ಪಕ್ಷಗಳಲ್ಲೂ ಅತೃಪ್ತರು ಇದ್ದೇ ಇರುತ್ತಾಾರೆ. ಯಾವ ಕ್ಷಣದಲ್ಲಿ ಭಿನ್ನಮತ ಸ್ಫೋೋಟವಾಗುವುದೋ, ಪಕ್ಷದಲ್ಲಿ ಬಿರುಕು ಮೂಡುವುದೋ ಹೇಳುವಂತಿಲ್ಲ. ಮಹಾರಾಷ್ಟ್ರದಲ್ಲಿ ಸರಕಾರ ರಚನೆಯ ಸರ್ಕಸ್ಸಿಿನಲ್ಲಿ ಒಂದು ಹಂತದಲ್ಲಿ ಶಿವಸೇನೆಯೇ ಒಡೆದು ಇಬ್ಭಾಾಗವಾಗುವ ಮಟ್ಟಕ್ಕೆೆ ಬಂದಿತ್ತು. ಸದ್ಯಕ್ಕೆೆ ಶಮನ ಕಂಡಿದ್ದರೂ ಮುಂದೇನಾಗುವುದೋ ಎಂಬ ಆತಂಕ ಇದ್ದೇ ಇದೆ. ಅಧಿಕಾರದಾಹವೇ ಮುಖ್ಯವೆನಿಸಿದರೆ ಇನ್ನೇನು?

ಮೈತ್ರಿಿ ಸರಕಾರ ಹೋಗಿ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಸ್ತಿಿತ್ವಕ್ಕೆೆ ಬಂದು ಮೊನ್ನೆೆ ನೂರು ದಿನಗಳೇನೋ ಸಂದು ಹೋದುವು. ಆದರೆ, ಅಂದುಕೊಂಡಂತೆ ಆಗಲಿಲ್ಲ. ಒಂದೆಡೆ ಈ ಬಾರಿ ಸುರಿದ ಭಾರಿ ಮಳೆಯಿಂದಾದ ಅಪಾರ ಕಷ್ಟ ಸಂಕಷ್ಟಗಳು ಮಗದೊಂದೆಡೆ ಅತೃಪ್ತ ಶಾಸಕರಿಂದ ತೆರವಾದ ಸ್ಥಾಾನಗಳಿಗೆ ಸದ್ಯದಲ್ಲೆೆ ನಡೆಯಲಿರುವ ಉಪಚುನಾವಣೆಯಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆ! ಈ ಮಧ್ಯೆೆ ಮಾಜಿ ಮುಖ್ಯಮಂತ್ರಿಿ ಸಿದ್ದರಾಮಯ್ಯನವರು ಮತ್ತೊೊಮ್ಮೆೆ ಮುಖ್ಯಮಂತ್ರಿಿಯಾಗುವ ಕನಸನ್ನು ಬಿಟ್ಟಿಿಲ್ಲ. ಅಕ್ರಮ ಆಸ್ತಿಿ ಪ್ರಕರಣದಲ್ಲಿ ತಿಹಾರ್ ಜೈಲ್ ಸೇರಿದ ಕಾಂಗ್ರೆೆಸ್ ಮುಖಂಡ ಡಿ.ಕೆ. ಶಿವಕುಮಾರ್ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು ಬಿಡುಗಡೆಯೂ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಯಡಿಯೂರಪ್ಪನವರೇನೋ ಇಳಿವಯಸಿನಲ್ಲೂ ಈ ಎಲ್ಲ ಆತಂಕಗಳ ನಡುವೆಯೂ ಅಭಿವೃದ್ಧಿಿ ಮಂತ್ರ ಪಠಿಸುತ್ತ ಮುನ್ನಡೆಯಬೇಕೆಂಬ ಹುಮ್ಮಸ್ಸಿಿನಲ್ಲಿದ್ದಾಾರೆ. ಆದರೆ, ಕ್ಷಣ ಕ್ಷಣ ಬದಲಾಗುತ್ತಿಿರುವ ರಾಜಕೀಯ ವಿದ್ಯಮಾನಗಳನ್ನು ನಂಬುವಂತಿಲ್ಲ. ಎರಡು ವರ್ಷಗಳಲ್ಲೇ ಎರಡು ಸರಕಾರ ಕಂಡ ದೌರ್ಭಾಗ್ಯ ನಮ್ಮದು. ಇನ್ನೇನೂ ಬೇಡ. ಪದೇ ಪದೆ ಸರಕಾರ ಪತನಗೊಳ್ಳದಿದ್ದರೆ ಸಾಕು. ಇವೆಲ್ಲವನ್ನೂ ಗಮನಿಸಿದರೆ ದೇವೇಗೌಡರಿಗಷ್ಟೇ ಅಲ್ಲ. ನಮಗೂ ಅನಿಸುತ್ತದೆ. ‘ಅಡ್ಡಿಿಯಿಲ್ಲ; ಅನುಕೂಲ ಸಿಂಧು ಮೈತ್ರಿಿಯಾದರೂ ಸೈ. ಇದ್ದ ಪತನಗೊಳ್ಳದೆ ಸದ್ಯ ಅವಧಿ ಪೂರೈಸಿದರೆ ಅದೇ ಮಹಾಪ್ರಸಾದ’ ಏನಂತೀರಾ?