Thursday, 19th September 2024

ಲಿಬಿಯಾದ ಸರ್ವಾಧಿಕಾರಿ ಗಡಾಫಿ ಪುತ್ರ ಅಲ್‌-ಸಾದಿ ಗಡಾಫಿ ಬಿಡುಗಡೆ

ಕೈರೊ: ತಂದೆಯ ಆಡಳಿತದ ವಿರುದ್ಧ ದಂಗೆ ಎದ್ದ ಆರೋಪದ ಮೇಲೆ ಏಳು ವರ್ಷಗಳ ಹಿಂದೆ ಗಡಿಪಾರಾಗಿ, ಟ್ರಿಪೋಲಿಯಲ್ಲಿ ಬಂಧನಕ್ಕೊಳಗಾಗಿದ್ದ ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಅವರ ಪುತ್ರ ಅಲ್‌-ಸಾದಿ ಗಡಾಫಿ ಅವರನ್ನು ಬಂಧನದಿಂದ ಬಿಡುಗಡೆ ಮಾಡಿದ್ದಾರೆ.

ನ್ಯಾಯಾಲಯದ ಆದೇಶದ ಅನುಸಾರ, ಅಲ್-ಸಾದಿ ಗಢಾಫಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ನಿಯೋಜಿತ ಪ್ರಧಾನಿ ಅಬ್ದುಲ್ ಹಮೀದ್ ಟ್ವೀಟ್‌ ಮಾಡಿದ್ದಾರೆ.

ವಕ್ತಾರ ಮೊಹಮ್ಮದ್‌ ಹಮೌದಾ, ‘ಅಲ್‌-ಸಾದಿ ಗಢಾಪಿಯನ್ನು ರಾಜಧಾನಿ ಟ್ರಿಪೊಲಿಯ ಅಲ್‌-ಹದಬ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. 2011ರ ದಂಗೆಯ ವೇಳೆ ಬಂಧಿತರಾಗಿರುವ ಗಡಾಫಿ ಆಡಳಿತದ ಅನೇಕ ಅಧಿಕಾರಿ ಗಳು ಇನ್ನೂ ಜೈಲಿನಲ್ಲೇ ಇದ್ದಾರೆ’ ಎಂದು ಹೇಳಿದರು. ಗಡಾಫಿ ಹತ್ಯೆ ಮತ್ತು ಪುತ್ರ ಬಿಡುಗಡೆಯ ಸಂದರ್ಭಗಳ ಕುರಿತು ಹಮೌದಾ ಹೆಚ್ಚಿನ ಮಾಹಿತಿ ನೀಡಿಲ್ಲ.

ತನ್ನ ತಂದೆಯ ಆಡಳಿತದ ವಿರುದ್ಧ ದಂಗೆ ನಡೆಸಿದ್ದ ಆರೋಪದಲ್ಲಿ ಅಲ್ -ಸಾದಿ ಗಡಾಫಿಯನ್ನು ಬಂಧಿಸಲಾಗಿತ್ತು. ಈ ಆರೋಪದಿಂದ ಮುಕ್ತಗೊಳಿಸಿದ ನಂತರ ಇವರನ್ನು ಬಿಡುಗಡೆ ಮಾಡಲಾಯಿತು ಎಂದು ಸ್ಥಳೀಯ ಮಾಧ್ಯಮ ಗಳು ವರದಿ ಮಾಡಿವೆ.