Friday, 20th September 2024

ದಿನಸಿ ವಿತರಣಾ ಸೇವೆ ಸ್ಥಗಿತಕ್ಕೆ ಜೊಮಾಟೊ ನಿರ್ಧಾರ ?

ನವದೆಹಲಿ: ಆನ್‌ಲೈನ್ ಆಹಾರ ವಿತರಣಾ ವೇದಿಕೆಯಾದ ಜೊಮಾಟೊ ತನ್ನ ದಿನಸಿ ವಿತರಣಾ ಸೇವೆಯನ್ನು ಸೆ.17 ರಿಂದ ನಿಲ್ಲಿಸಲು ನಿರ್ಧರಿಸಿದೆ.

ಗ್ರಾಹಕರ ವ್ಯತಿರಿಕ್ತ ಅನುಭವ, ಪ್ರತಿಕ್ರಿಯೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ. ಗ್ರೋಫರ್ಸ್‌ನಲ್ಲಿನ ಹೂಡಿಕೆ ತನ್ನ ಕಿರಾಣಿ ಪ್ರಯತ್ನಗಳಿಗಿಂತ ತನ್ನ ಷೇರುದಾರ ರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.

ನಾವು ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಮತ್ತು ನಮ್ಮ ವ್ಯಾಪಾರಿ ಪಾಲುದಾರರಿಗೆ ಅತಿದೊಡ್ಡ ಬೆಳವಣಿಗೆಯ ಅವಕಾಶಗಳನ್ನು ನೀಡುತ್ತೇವೆ ಎಂದು ನಂಬುತ್ತೇವೆ. ಪ್ರಸ್ತುತ ಮಾದರಿಯು ತಲುಪಿ ಸಲು ಉತ್ತಮ ಮಾರ್ಗ ಎಂದು ನಾವು ನಂಬುವುದಿಲ್ಲ. ಆದ್ದರಿಂದ, ನಾವು ಪೈಲಟ್ ದಿನಸಿ ವಿತರಣಾ ಸೇವೆಯನ್ನು ಸೆ.17  ರಿಂದ ನಿಲ್ಲಿಸಲು ಉದ್ದೇಶಿಸಿದ್ದೇವೆ’ ತನ್ನ ಕಿರಾಣಿ ಪಾಲುದಾರರಿಗೆ ಕಳಿಸಿರುವ ಇಮೇಲ್ ನಲ್ಲಿ ಜೊಮಾಟೊ ಸಂಸ್ಥೆ ತಿಳಿಸಿದೆ.

ಜೊಮಾಟೊ ಈ ವರ್ಷ ಜುಲೈನಲ್ಲಿ ತನ್ನ ಗ್ರಾಹಕರಿಗೆ ಕಿರಾಣಿ ವಿತರಣೆಯನ್ನು ನೀಡುವ ಆಯ್ದ ಮಾರುಕಟ್ಟೆಗಳಲ್ಲಿ ಪೈಲಟ್ ಕಿರಾಣಿ ವಿತರಣಾ ಸೇವೆಯನ್ನು ಆರಂಭಿಸಿತು. ಜೊಮಾಟೊ ಪ್ರೊ ಎಂಬ ಸೌಲಭ್ಯ ಆರಂಭಿಸಿದ್ದ ಜೊಮ್ಯಾಟೋ ನಂತರ ಹಲವೆಡೆ ಹಿಂಪಡೆದುಕೊಂಡಿದೆ. ಈ ಸೌಲಭ್ಯದಲ್ಲಿ ಸದಸ್ಯರು ಈ ಹಿಂದಿ ಗಿಂತ ಹೆಚ್ಚಿನ ರೆಸ್ಟೋರೆಂಟ್‌ಗಳು, ಕೆಫೆಗಳು, ಬಾರ್‌ಗಳು, ಮತ್ತು ತ್ವರಿತ-ಸೇವಾ ರೆಸ್ಟೋರೆಂಟ್‌ಗಳವರೆಗೆ ಅಸ್ವಿತ್ವದಲ್ಲಿರುವ ಕೊಡುಗೆಗಳನ್ನು ಪಡೆಯುವುದನ್ನು ಮುಂದುವರಿಸಲಿದ್ದಾರೆ.