ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 89
ಬೆಂಗಳೂರು: ಪ್ರತಿಯೊಬ್ಬರೂ ಇತರ ವ್ಯಕ್ತಿಯಿಂದ ಕಲಿಯಬಹುದಾಗಿದೆ. ನಾನು ಪ್ರಸ್ತುತ ಮೋದಿಯವರನ್ನು ಪ್ರಧಾನಿ, ಬಿಜೆಪಿ ನಾಯಕನಾಗಿ, ಸಿದ್ಧಾಂತದ ಪ್ರತಿಪಾದಕನಾಗಿ ನೋಡಲು ಹೋಗುವುದಿಲ್ಲ. ಮೋದಿ ಯವರಲ್ಲಿ ಅಳವಡಿಸಿಕೊಳ್ಳಬಹುದಾದ ಗುಣಗಳು ಅಧಿಕ. ಯಾರಲ್ಲಿಯೂ ಇಸಂಗಳನ್ನು ನೋಡದೇ ವ್ಯಕ್ತಿಯಾಗಿ ಕಲಿತುಕೊಳ್ಳಬಹುದು ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹೇಳಿದರು.
ವಿಶ್ವವಾಣಿ ಕ್ಲಬ್‌ಹೌಸ್‌ನ ನಾವು ಮೋದಿಯವರಿಂದ ಕಲಿಯಬಹುದಾದ್ದದ್ದೇನು? ಜನ್ಮದಿನದ ವಿಶೇಷ ಕಾರ್ಯ ಕ್ರಮದಲ್ಲಿ ಮಾತನಾಡಿ, ನಮಗೆ ನಾವು ಯಾರು ಎಂಬುದು ತಿಳಿದಿದ್ದರೆ ಬೇರೆಯವರ ಮಾತಿಗೆ ತಲೆಕೆಡಿಸಿ ಕೊಳ್ಳುವ ಅಗತ್ಯವಿಲ್ಲ ಎಂಬುದನ್ನು ಮೋದಿಯವರಿಂದ ತಿಳಿಯಬಹುದಾಗಿದೆ. ನಾವು ಏನೇ ಬಂದರೂ ಕೈಚೆಲ್ಲಿ ಕುಳಿತುಕೊಳ್ಳಬಾರದು. ಮೋದಿಯವರಿಂದ ಏನು ಲಾಭ? ಏನು ಕಲಿತುಕೊಳ್ಳಬೇಕು ಎಂಬುದು ಮುಖ್ಯ.
ಸಾಮಾನ್ಯವಾಗಿ ಎಲ್ಲರೂ ಬೇರೆಯವರ ಹಾವಭಾವ, ನಡೆ ನುಡಿಯಿಂದ ವ್ಯಕ್ತಿತ್ವದಿಂದ ಪ್ರಭಾವಿತರಾಗುತ್ತಾರೆ. ವ್ಯಕ್ತಿಯಿಂದ ಏನೆಲ್ಲಾ ಕಲಿಯಬಹುದು? ಅವರ ಗುಣಗಳು ಹೇಗೆ ವ್ಯಕ್ತಿತ್ವಕ್ಕೆ ಹಾಸುಹೊಕ್ಕಾಗಿರುತ್ತವೆ ಎಂಬುದನ್ನು ಗಮನಿಸಬಹುದು. ಅವರ ಬದುಕಿನಲ್ಲಿ ಅಳವಡಿಸಿಕೊಂಡ ಪಾಠ, ಜೀವನದ್ರವ್ಯಗಳನ್ನು ಕಲಿಯಬಹುದು. ಮೋದಿಯವರು ಜೀವನದಲ್ಲಿ ವ್ಯಕ್ತಿಗಿಂತ ಧ್ಯೇಯ, ನಂಬಿಕೆ ಮತ್ತು ಸಿದ್ಧಾಂತಕ್ಕೆ ಪ್ರಾಮುಖ್ಯತೆ ಯನ್ನು ಕೊಟ್ಟವರು. ಜೀವನದಲ್ಲಿ ಧ್ಯೇಯ, ನಂಬಿಕೆ ಮತ್ತು ಸಿದ್ಧಾಂತಕ್ಕೆ ಪ್ರಾಮುಖ್ಯತೆಯನ್ನು ಕೊಡಬೇಕು. ಸಂಘದ ಸಿದ್ಧಾಂತ ಮೋದಿಯವರ ಸಿದ್ಧಾಂತವಾಗಿತ್ತು.
ಮೋದಿಯವರು ವೈಯಕ್ತಿಕ ಕಡಿಮೆ ಸಾರ್ವಜನಿಕ ಅಧಿಕ ಪ್ರಾಮುಖ್ಯವಾಗಿತ್ತು. ಮೋದಿ ಸೈದ್ಧಾಂತಿಕ ಭೂಮಿಕೆ ಯಲ್ಲಿ ವ್ಯಕ್ತಿತ್ವ ಬೆಳೆಸಿಕೊಂಡವರು. ಸಣ್ಣ ಸಂಕಷ್ಟಕ್ಕೆ ಧೃತಿಗೆಡಬಾರದು. ಜನರ ಟೀಕೆಗೆ ತುತ್ತಾಗದೇ, ಸತ್ವಪರೀಕ್ಷೆಗೆ ಒಳಪಡದೇ ಜನರು ಯಾರನ್ನೂ ಒಪ್ಪಿಕೊಳ್ಳುವುದಿಲ್ಲ. ಟೀಕೆ ಆರೋಪಗಳು ಜನರಿಂದ ಬರುತ್ತವೆ. ಏನೂ ಸಿಗದೇ ಇದ್ದಾಗ ಕೊನೇ ಅಸವಾಗಿ ಚಾರಿತ್ರ್ಯ ಹರಣ ಮಾಡುತ್ತಾರೆ. ಆದರೆ ಇದಕ್ಕೆ ಪ್ರಾಮುಖ್ಯತೆಯನ್ನು ಕೊಡಬಾರದು. ಮೋದಿಯವರ ಜೀವನದಲ್ಲಿಯೂ ಇದಾಗಿತ್ತು. ನಾವು ಟೀಕೆಗೆ ಜಗ್ಗಬಾರದು. ಟೀಕೆಗಳಿಗೆ ಪ್ರತಿಕ್ರಿಯೆ ನೀಡಬೇಕಾದ ಅಗತ್ಯವಿಲ್ಲ.
ಪರಿಶ್ರಮವೇ ಏಳಿಗೆಗೆ ಮುಖ್ಯ: ಮೋದಿಯವರಿಂದ ನಾವು ಕಲಿಯಬಹುದಾದ ಉತ್ತಮ ಅಂಶಗಳು ನಮ್ಮ ಏಳಿಗೆಗೆ ನಮ್ಮ ಹಿನ್ನೆಲೆ, ಕುಟುಂಬ ಹಾಗೂ ಯಾರ ನೆರವೂ ಮುಖ್ಯವಲ್ಲ. ನಮ್ಮ ಪರಿಶ್ರಮವೇ ಏಳಿಗೆಗೆ ಮುಖ್ಯ. ಮೋದಿಯವರು ಇಂತಹ ಗುಣ ಹೊಂದಿದವರು. ಅವರ ತಂದೆಯ ಹೆಸರು ಅನೇಕರಿಗೆ ತಿಳಿದಿಲ್ಲ.
ಅಜ್ಞಾತವಾಗಿಯೇ ಉಳಿದವರು: ಪ್ರಧಾನಿ ಮೋದಿಯವರು ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಮೋದಿಯವರು ಮಹತ್ತರವಾದುದನ್ನು ಸಾಧಿಸುವ ತನಕ ಯಾರಿಗೂ ಅವರನ್ನು ಗಮನಿಸಿರಲಿಲ್ಲ. ಆರ್‌ಎಸ್‌ಎಸ್ ಸೇರಿದಾಗ ಸಂಘವು ಹೊಣೆಗಾರಿಕೆಯನ್ನು ವಹಿಸಿದಾಗ ೨ ವರ್ಷಗಳ ಕಾಲ ನಿಷ್ಠೆಯಿಂದ ಮಾಡಿದರು.
ಕುಟುಂಬ ರಾಜಕಾರಣ ಅಲ್ಲ: ಮೋದಿಯವರು ವೈಯಕ್ತಿಕ ಹಿತಾಸಕ್ತಿಗಿಂತ ರಾಷ್ಟ್ರದ ಹಿತಾಸಕ್ತಿ ಮುಖ್ಯ ಎಂದು ಚಿಂತಿಸುವವರು ಮೋದಿಯವರು. ಇವರು ಯಾವತ್ತಿಗೂ ತಮ್ಮ ಕುಟುಂಬವನ್ನು ರಾಜಕೀಯಕ್ಕೆ ಎಳೆತಂದಿಲ್ಲ. ಕುಟುಂಬ ರಾಜಕಾರಣ ಅವರ ಪದಕೋಶದಲ್ಲಿಯೂ ಇಲ್ಲ, ಪಿತೃಕೋಶದಲ್ಲಿಯೂ ಇಲ್ಲ. ಮೋದಿ ಭ್ರಷ್ಟ ಎಂದರೆ ಯಾರೂ ನಂಬುವುದಿಲ್ಲ. ಇದಕ್ಕೆ ಕ್ಲಾಸಿಕ್ ಉದಾಹರಣೆ ಚೌಕಿದಾರ್ ಚೋರ್ ಹೈ. ಇದನ್ನು ಯಾರೂ ನಂಬಿಲ್ಲ. ರಾಜಕಾರಣಕ್ಕೆ ಬಂದಾಗ ಕುಟುಂಬವನ್ನು ಎಲ್ಲಿಡಬೇಕೋ ಅಲ್ಲೇ ಇಡಬೇಕು. ನಾವು ಅಧಿಕಾರಕ್ಕೆ ಬಂದಾಗ ಕುಟುಂಬವನ್ನು ಎಲ್ಲಿಡಬೇಕೋ ಅಲ್ಲೇ ಇಡಬೇಕು. ಎರಡು ಮನೆ ಸೇರಿಸಿ ಒಂದೇ
ಮನೆ ಮಾಡಿದರು ಅಂತ ಆಪಾದನೆ ಬಂದಿದೆ. ಅವರು ಅದೇ ಮನೆಯಲ್ಲಿದ್ದಾರೆ. ಆದರೆ ಎಂದು ಈ ಮನೆಯಲ್ಲಿ ತಾಯಿ ಹೀರಾ ಬೆನ್ ಅವರನ್ನೂ ಇಟ್ಟು ಕೊಂಡಿರ ಲಿಲ್ಲ.
ದಣಿವರಿಯದ ನಾಯಕ
ಸಂಸದರಾಗಿ ಮೋದಿ ಅವರನ್ನು ಹತ್ತಿರದಿಂದ ಬಲ್ಲ ಪ್ರತಾಪ್ ಸಿಂಹ ಮಾತನಾಡಿ, ಮೋದಿ ಅವರು ದಣಿವರಿಯದ ನಾಯಕ, ಅವರು ವಿದೇಶಾಂಗ ನೀತಿಯಲ್ಲಿ ನಿಪುಣರು, ಟ್ರಂಪ್, ಒಬಾಮಾ ಬಾಂಗ್ಲಾ ಟೆಕ್ಸ್ ಟೈಲ್‌ನಲ್ಲಿ ಮುಂದಿದ್ದು ಅದನ್ನು ಕಡಿಮೆ ಮಾಡಲು ಟೆಕ್ಸ್ ಟೈಲ್ ಪಾರ್ಕ್ ಆರಂಭ ಮಾಡಿದ್ದು, ಮಲೇಷ್ಯಾ ಚೀನಾ ಜತೆಗೆ ಹೋಗುತ್ತಿರುವ ಕಾರಣಕ್ಕೆ ಈಶಾನ್ಯ ರಾಜ್ಯದಲ್ಲಿ ತಾಳೆ ಎಣ್ಣೆ ಬೆಳೆಗೆ ಹೆಚ್ಚು ಗಮನ ನೀಡಿ, ಮಲೇಷ್ಯಾ ಮೇಲಿನ ಅವಲಂಬನೆ ಮಾಡಿಮೆ ಮಾಡುವ ಪ್ರಯತ್ನದ ಮೂಲಕ ತಮ್ಮ ದೂರದೃಷ್ಟಿ ಎಂತಹದ್ದು ಎಂಬುದನ್ನು ಸಾಭೀತು ಮಾಡಿದ್ದಾರೆ. ಪಕ್ಷದ ಯಾವುದೇ ಸಭೆಯಲ್ಲಿ ಅವರು ಇತರರ ಮಾತುಗಳನ್ನು ಗಮನವಿಟ್ಟು ಕೇಳುತ್ತಾರೆ. ಎಂದೂ ಆಲಸ್ಯಗೊಂಡಿದ್ದು, ಆಕಳಿದ್ದನ್ನು ನಾನು ಕಂಡಿಲ್ಲ, ಜತೆಗೆ, ಅದೆಲ್ಲವನ್ನೂ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು
ಉತ್ತಮ ನಾಯಕನಾಗಲು ಸಾಧ್ಯವಿಲ್ಲ: ಉನ್ನತ ಸ್ಥಾನಕ್ಕೇರಿದಾಗ ಆ ಸ್ಥಾನದಲ್ಲೇ ಇರಲು ಉತ್ತಮ ಪ್ರದರ್ಶನ ನೀಡುತ್ತಿರಬೇಕು. ಮೋದಿಯವರನ್ನು ಇಷ್ಟ ಪಡಲು ಇದೂ ಒಂದು ಕಾರಣ. ನಾಯಕ ಎಂದು ಒಪ್ಪಿಕೊಳ್ಳಲು ಅನೇಕ ಗುಣಲಕ್ಷಣಗಳು ಇರಬೇಕು. ನಾಯಕನಾದವನು ಜತೆಗಿರುವವರು, ದೇಶವಾಸಿ ಗಳು ತನ್ನ ಮಾತನ್ನು ಹಿಂಬಾಲಿಸುವಂತೆ ಮಾಡುವ ಸಾಮರ್ಥ್ಯವನ್ನು ಹೊಂದಿರಬೇಕು. ಉತ್ತಮ ನಾಯಕನಾಗಬೇಕಾದರೆ ಉತ್ತಮ ಬಲಿಷ್ಠ, ಪ್ರಾಮಾಣಿಕರ ಜನಪರ ಹೋರಾಡುವ ತಂಡವನ್ನು ಹೊಂದಿರಬೇಕು. ತಂಡ ಇಲ್ಲದಿದ್ದರೆ ಉತ್ತಮ ನಾಯಕನಾಗಲು ಸಾಧ್ಯವಿಲ್ಲ. ನಿಷ್ಠಾವಂತ, ಪ್ರಾಮಾಣಿಕ ತಂಡವನ್ನು ವಿಶಿಷ್ಟ ಹೊಣೆಗಾರಿಕೆಯನ್ನು ನೀಡುವುದರಿಂದ ಉತ್ತಮ ನಾಯಕತ್ವ ಸಾಧ್ಯವಿದೆ.
ಸಮರ್ಥರಾದವರಿಗೆ ಸಾಮರ್ಥ್ಯಕ್ಕನುಗುಣವಾಗಿ ಕೆಲಸಕೊಡಬೇಕು. ಯಾರ‍್ಯಾರಿಗೆ ಯೋಗ್ಯತೆ ಇದೆಯೋ ಆ ಕೆಲಸವನ್ನೇ ಕೊಡಬೇಕು. ಯಾರನ್ನು ಎಲ್ಲಿಡ ಬೇಕೋ ಅಲ್ಲೇ ಇಡಬೇಕು. ಇನ್ನು ಕಠಿಣ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯಬಾರದು. ಕಠಿಣ ನಿರ್ಧಾರ ತೆಗೆದುಕೊಳ್ಳುವಾಗ ಹಿಂದೇಟು ಹಾಕದೇ ಮುಂದು ವರಿಯಬೇಕು. ಈ ನಿರ್ಧಾರವನ್ನು ತೆಗೆದುಕೊಂಡಾಗ ಮುಂದೊಂದು ದಿನ ಅದು ನಮಗೇ ಎದುರಾಗಿ ನಿಲ್ಲಬಹುದು. ಆದರೆ ನಾವು ಆ ಪ್ರತಿಕೂಲ ಪರಿಸ್ಥಿತಿಗೂ ಸಿದ್ಧರಾಗಿರಬೇಕು. ಪ್ರತಿಕೂಲ ಪರಿಸ್ಥಿತಿಯನ್ನು ಅನುಕೂಲಕ್ಕೆ ಬಳಸಿಕೊಳ್ಳಬೇಕು. ಜೀವನದಲ್ಲಿ ನಡೆಯುವ ಪ್ರತಿಕೂಲ ಪರಿಸ್ಥಿತಿಯನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಬೇಕು. ಮೋದಿಯವರನ್ನು ಚಾಯ್ ವಾಲಾ ಅಂದರು, ಅದನ್ನು ಚಾಯ್ ಪೇ ಚರ್ಚಾ ಅಂತ ಬಳಸಿಕೊಂಡರು, ಚೌಕಿದಾರ್ ಚೋರ್ ಹೈ ಅಂದಾಗ ಅದನ್ನು ಕ್ಯಾಂಪೇನ್ ತರಹ ಬಳಸಿಕೊಂಡರು. ಪುಲ್ವಾಮಾ ದಾಳಿ ಕೂಡಾ ಮೋದಿ ಪರವಾಗಿಯೇ ನಿಂತು ಹೋಯಿತು.
ಪ್ರೆಸೆಂಟೇಷನ್ ಬಹಳ ಮುಖ್ಯ
ನಮ್ಮನ್ನು ನಾವು ಹೇಗೆ ಪ್ರಸ್ತುತ ಪಡಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಮೋದಿಗೆ ಭಾಷೆ ಅನ್ನುವಂತಹದ್ದು ತೊಡಕಾಗಿಲ್ಲ. ಅವರು ಜಿ೨೦ ಸಮ್ಮಿಟ್,
ಬ್ರಿಕ್ ಸಮ್ಮಿಟ್‌ನಲ್ಲಿ, ಅರ್ತ್ ಸಮ್ಮಿಟ್‌ನಲ್ಲಿ ಮಾತನಾಡುವುದನ್ನು ಕಂಡಿದ್ದೇನೆ. ಇಂಗ್ಲಿಷ್‌ನಲ್ಲಿ ಮಾತನಾಡುವಾಗ ಅವರದ್ದೇ ಭಾಷೆಯಲ್ಲಿ ಮಾತನಾಡುವ ರೀತಿ, ನಮ್ಮನ್ನು ನಾವು ಹೇಗೆ ಅಭಿವ್ಯಕ್ತಗೊಳಿಸುತ್ತೇವೆ ಅನ್ನುವುದು ಮುಖ್ಯವಾದುದು.
ಒಬ್ಬ ರಾಜಕಾರಿಣಿಗೆ ಮೋದಿಗಿಂತ ಉತ್ತಮ ರೋಲ್ ಮಾಡೆಲ್ ದೊರೆಯುವುದಿಲ್ಲ. ಪೂರ್ವಭಾವಿ ಸಿದ್ಧತೆ ಅಗತ್ಯ. ಒಬ್ಬ ವ್ಯಕ್ತಿಯನ್ನು ಭೇಟಿಯಾಗುವ ಮೊದಲು
ಅವರ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಮೋದಿಯವರನ್ನು ಭೇಟಿ ಮಾಡಿದಾಗ ನಮ್ಮ ಪತ್ರಿಕೆಯ ಬಗ್ಗೆಯೂ ಮಾತನಾಡಿದರು.ಈ ರೀತಿಯಲ್ಲಿ ನಮ್ಮ ಬಗ್ಗೆ
ಮಾಹಿತಿಯನ್ನು ತಿಳಿದುಕೊಂಡಿದ್ದರು. ನಾವು ಬೇರೆಯವರ ಬಗ್ಗೆ ತಿಳಿದುಕೊಂಡು ನಮಗೆ ಬೇರೆಯವರಲ್ಲಿಯೂ ಆಸಕ್ತಿಯಿದೆ ಎಂಬುದೂ ಮುಖ್ಯ. ಮೋದಿಯವರಲ್ಲಿ ಕಂಡಿದ್ದು, ನಮಗೆ ನಾವೇ ಮಾದರಿ. ಮೋದಿಯವರನ್ನು ಇನ್ನೊಬ್ಬರಿಗೆ ಹೋಲಿಸಲು ಸಾಧ್ಯವಿಲ್ಲ. ನಮಗೆ ನಾವೇ ಮಾದರಿಯಾಗುವುದು ತುಂಬಾ ಮುಖ್ಯ. ಅವರಿಗಿಂತ ದೊಡ್ಡ ಬ್ರ್ಯಾಂಡ್ ಮೌಲ್ಯ ಹೊಂದಿರುವವರು ಇನ್ನೊಬ್ಬರಿಲ್ಲ. ಮೋದಿಯವರಿಗೆ ಪೊರೆ ಕಳಚಿ ಬೇರೆ ವ್ಯಕ್ತಿಯಾಗಲು ಸಧ್ಯವಿಲ್ಲ. ಮಾರ್ಪಾಟು ಮಾಡಿಕೊಳ್ಳಲು ಸಾಧ್ಯವಿಲ್ಲ. ನಾನು ಇಲ್ಲಿ ನರೇಂದ್ರದಾಮೋದರ್ ದಾಸ್ ಮೋದಿಯನ್ನು ಮಾತ್ರ ನೋಡಿದ್ದೇನೆ. ಮೋದಿಯವರಲ್ಲಿ ಕಾಣು ವಂತಹದ್ದು ಅಳವಡಿಸಿಕೊಳ್ಳಬಹುದಾದ ಗುಣಗಳು ಅಧಿಕ. ನಾನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಗುಣಗಳಿರುವ ಮೋದಿ. ಕಾರ್ಯಕ್ರಮದಲ್ಲಿ ಶ್ರೋತೃಗಳು ಮೋದಿ ಕುರಿತಾದಂತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಆಯ್ಕೆ ಮಾಡಲು ಸಹಾಯ: ಮೋದಿಯು ಆಟದ ನಿಯಮವನ್ನು ಬದಲಿಸುವ ಬದಲು ಆಟವನ್ನೇ ಬದಲಿಸಿದರು. ಯಾವಾಗ ನಿಯಮವನ್ನು ಬದಲಿಸಲು
ಸಾಧ್ಯವಿಲ್ಲವೋ ಆಗ ಆಟವನ್ನೇ ಬದಲಿಸಬೇಕು. ಅಮೆರಿಕದಲ್ಲಿರುವಂತೆ ಅಧ್ಯಕ್ಷನನ್ನು ನೋಡಿ ಮತ ಹಾಕಿ ಎನ್ನುವಂತೆ ಹೇಳಿದವರು ಮೋದಿ. ಇದರಿಂದ ಜನರಿಗೆ
ಹೋಲಿಸುವುದು ಸಾಧ್ಯವಾಯಿತು. ಆ ಮೂಲಕ ಜನರು ಉತ್ತಮ ನಾಯಕನನ್ನು ಆರಿಸಲು ಸಾಧ್ಯವಾಯಿತು. ಮೋದಿಯವರು ೧೦೦ ಪ್ರತಿಪಕ್ಷವನ್ನು ತೋರಿಸಿ ಉತ್ತಮರಿಗೆ ಮತ ನೀಡುವಂತೆ ಹೇಳಿದರು. ಆಗ ಜನರಿಗೆ ಆಯ್ಕೆ ಮಾಡಲು ಸಹಾಯವಾಯಿತು.
ಮೋದಿ ಉತ್ತಮ ಸಂವಹನಕಾರರು. ಮನಸಿನಲ್ಲಿರುವುದನ್ನು ಜನರಿಗೆ ಹೇಳುವಂತಹದ್ದೇ ಮನ್ ಕೀ ಬಾತ್. ಯಾರೂ ಕೂಡಾ ರೇಡಿಯೋವನ್ನು ಬಳಸಿಕೊಂಡಿರಲಿಲ್ಲ. ಮೋದಿ ಇದನ್ನು ಉತ್ತಮವಾಗಿ ಬಳಸಿಕೊಂಡರು. ರೇಡಿಯೋ ಮುಖಾಂತರ ದೇಶದುದ್ದಕೂ ಸಂಪರ್ಕಿಸಲು ಸಾಧ್ಯವಾಯಿತು.
ಪ್ರಧಾನಿಯಾದವರು ಜನರನ್ನು ಆವರಿಸಿಕೊಳ್ಳಬೇಕು. ಎಲ್ಲರ ತಲೆಯಲ್ಲೂ ಮೋದಿ ಗೂಡು ಕಟ್ಟಿಕೊಂಡಿದ್ದಾರೆ. ನಾನು ಇರದೇ ಹೋಗ್ಲಿ, ಇರಲಿ ಜನರ ಮನಸಿನಲ್ಲಿ ಇರಬೇಕು ಎನ್ನುವ ಗುಣ ಮೋದಿಯವರದು.
ಮೋದಿ ಅವರಿಂದ ಕಲಿಯಬೇಕಾದ್ದು ಏನು?
? ನಮ್ಮ ಪರಿಶ್ರಮವೇ ಏಳಿಗೆಗೆ ಮುಖ್ಯ.
? ನಮ್ಮ ಅಸ್ತಿತ್ವವನ್ನು ಪ್ರಸ್ತುತಪಡಿಸಬೇಕು
? ಮಹತ್ತರವಾದುದನ್ನು ಸಾಧಿಸುವವರೆಗೆ ಯಾರೂ ಗುರುತಿಸುವುದಿಲ್ಲ
? ಮೋದಿ ಸೈದ್ಧಾಂತಿಕ ಭೂಮಿಕೆಯಲ್ಲಿ ವ್ಯಕ್ತಿತ್ವ ಬೆಳೆಸಿಕೊಂಡವರು
? ಸಣ್ಣ ಸಂಕಷ್ಟಕ್ಕೆ ಧೃತಿಗೆಡಬಾರದು
? ನಾವು ಟೀಕೆಗೆ ಜಗ್ಗಬಾರದು
? ಆಟದ ನಿಯಮ ಬದಲಿಸಲು ಸಾಧ್ಯವಿಲ್ಲದಿದ್ದರೆ ಆಟವನ್ನೇ ಬದಲಿಸಿ
? ಉತ್ತಮ ಸಂವಹನತೆಯನ್ನು ಬೆಳೆಸಿಕೊಳ್ಳಬೇಕು
? ವೈಯಕ್ತಿಕ ಹಿತಾಸಕ್ತಿಗಿಂತ ರಾಷ್ಟ್ರದ ಹಿತಾಸಕ್ತಿ ಬಯಸಿದವರು
? ಯಶಸ್ವಿ ನಾಯಕನಾಗಬೇಕಾದರೆ ಉತ್ತಮ ತಂಡ ಇರಬೇಕು
? ಉತ್ತಮ ಸ್ಥಾನಕ್ಕೇರಿದಾಗ ಉತ್ತಮ ಪ್ರದರ್ಶನವನ್ನೇ ನೀಡುತ್ತಿರಬೇಕು