Friday, 13th December 2024

ಕೂ ಆಪ್ ಸೇರಿದ ಭಾರತೀಯ ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್

‘ಕೂ’ ಭಾರತದ ಕ್ರೀಡಾಂಗಣವೆಂದು ಕರೆದು, ಅಭಿಮಾನಿಗಳನ್ನು #IndiaKaSabseBadaStadium ಗೆ ಆಹ್ವಾನಿಸಿದರು

ಬೆಂಗಳೂರು: ಕ್ರಿಕೆಟ್ ದಂತಕಥೆ ವೀರೇಂದ್ರ ಸೆಹ್ವಾಗ್ ಭಾರತದ ಅತಿದೊಡ್ಡ ಬಹು ಭಾಷಾ ಮೈಕ್ರೋ ಬ್ಲಾಗಿಂಗ್ ಆಪ್ – ಕೂ ಸೇರಿ ದ್ದಾರೆ.

@VirenderSehwag ಹ್ಯಾಂಡಲ್ ಬಳಸಿ ತಮ್ಮಆಗಮನದ ಬಗ್ಗೆ ಮೊದಲ ಕೂನಲ್ಲಿ ಹಂಚಿಕೊಂಡರು. ‘ಹೇಗೆ ಬೆಂಗಳೂರು, ದೆಹಲಿ ಮತ್ತು ಚೆನ್ನೈ ಪ್ಲೇಆಫ್ ಪ್ರವೇಶಿಸಿವೆ ಹಾಗೆ ನಾನೂ ಕೂ ಕ್ರೀಡಾಂಗಣವನ್ನು ಪ್ರವೇಶಿಸಿದ್ದೇನೆ’ ಎಂದು ಸೆಹ್ವಾಗ್ ಕೂ ಮಾಡಿದ್ದಾರೆ.

ಐಪಿಎಲ್ ಪಂದ್ಯಗಳನ್ನು ವಿಮರ್ಶಿಸುವ ಆನ್ಲೈನ್ ಸರಣಿಯಾದ #DejaViru ಬಗ್ಗೆ ತಮ್ಮ ಕೂ ವಿನಲ್ಲಿ ಉಲ್ಲೇಖಿಸಿದ್ದಾರೆ. ಸೆಹ್ವಾಗ್ ಅವರ ಕೂ ಪ್ರವೇಶವು ಬಳಕೆದಾರರಿಗೆ ಭಾರತೀಯ ಭಾಷೆಗಳಲ್ಲಿ ಲೈವ್ ಆಕ್ಷನ್ ಮತ್ತು ಮ್ಯಾಚ್ ಕಾಮೆಂಟರಿಯನ್ನು ತಿಳಿಯುವು ದಕ್ಕೆ ಉತ್ಸಾಹ ತರುತ್ತದೆ.

ಯುಎಇ ಮತ್ತು ಒಮಾನ್ ನಲ್ಲಿ ಅಕ್ಟೋಬರ್ 17 ರಿಂದ ಟಿ 20 ವಿಶ್ವಕಪ್ ಆರಂಭವಾಗ ಲಿದ್ದು, ಈ ಸಂದರ್ಭದಲ್ಲಿ ಸೆಹ್ವಾಗ್ ಕೂ ಸೇರಿರುವುದು ಕ್ರಿಕೆಟ್ ಪ್ರೇಮಿಗಳಿಗೆ ದುಪ್ಪಟ್ಟು ಸಂಭ್ರಮ ದೊರೆಯಲಿದೆ. ಕೂ ಸೇರಿದ ಕೆಲವೇ ಗಂಟೆಗಳಲ್ಲಿ ಕ್ರಿಕೆಟ್ ಮತ್ತು ಟ್ರೆಂಡಿಂಗ್ ವಿಷಯಗಳ ಬಗ್ಗೆ ಚುರುಕಾದ ಪ್ರತಿಕೆಯಗಳು ಮತ್ತು ಚಮತ್ಕಾರಿ ಕಾಮೆಂಟ್ ಗಳಿಗೆ ಹೆಸರುವಾಸಿಯಾದ ಸೆಹ್ವಾಗ್ ಅಭಿಮಾನಿ ಗಳಿಂದ ಅದ್ಭುತ ಪ್ರತಿಕ್ರಿಯೆ ಪಡೆದರು!

ವೇದಿಕೆಗೆ ಸೆಹ್ವಾಗ್ ಅವರನ್ನು ಸ್ವಾಗತಿಸಿದ ಕೂ ವಕ್ತಾರರು, “ಕ್ರಿಕೆಟ್ ಕೇವಲ ಒಂದು ಆಟವಲ್ಲ – ಭಾರತೀಯರ ಬದುಕು ಮತ್ತು ಉಸಿರಿನ ಜೊತೆಯಲ್ಲಿ ಬೆರೆತ ಭಾವ. ನಮ್ಮ ಸಾಂಸ್ಕೃತಿಕ ಮತ್ತು ಭಾಷಾ ವೈವಿದ್ಯತೆಗಳನ್ನು ಮೀರಿ ನಮ್ಮೆಲ್ಲರನ್ನು ಒಟ್ಟಿಗೆ ಬಂಧಿಸುವ ಅಭಿವ್ಯಕ್ತಿ. ಹಾಗೆಯೇ, ಕೂ ಬಹುಭಾಷೆಯ ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಆಗಿದ್ದು, ಭಾರತೀಯರು ತಮ್ಮ ಸ್ಥಳೀಯ ಭಾಷೆಗಳಲ್ಲಿ ತಮ್ಮನ್ನು ತಾವು ಅಭಿವ್ಯಕ್ತಪಡಿಸಲು ಶಕ್ತಿಯಾಗುವ ಉದ್ದೇಶ ಹೊಂದಿದೆ. ಟಿ 20 ವಿಶ್ವಕಪ್ ಮುಂಚಿತ ವಾಗಿ ವೀರೇಂದ್ರ ಸೆಹ್ವಾಗ್ ಅವರ ಕೂ ಪ್ರವೇಶವು ಬಳಕೆದಾರರು ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಅದ್ಭುತವಾದ ಉತ್ಸಾಹವನ್ನು ಕೆರಳಿಸಿದೆ’ ಎಂದು ಹೇಳಿದರು.

ಕೂ ಬಗ್ಗೆ: ಕೂ ಮಾರ್ಚ್ 2020 ರಲ್ಲಿ ಭಾರತೀಯ ಭಾಷೆಗಳನ್ನೊಳಗೊಂಡ ಮೈಕ್ರೋ-ಬ್ಲಾಗಿಂಗ್ ವೇದಿಕೆಯಾಗಿ ಸ್ಥಾಪಿತವಾ ಯಿತು. ಇದು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ, ಇಲ್ಲಿ ಭಾರತದ ವಿವಿಧ ಪ್ರದೇಶಗಳ ಜನರು ತಮ್ಮ ಮಾತೃಭಾಷೆ ಯಲ್ಲಿಯೇ ತಮ್ಮ ಮನದಾಳವನ್ನು ವ್ಯಕ್ತಪಡಿಸಿಕೊಳ್ಳಬಹುದು. ಕೇವಲ 10% ಜನರು ಇಂಗ್ಲಿಷ್ ಮಾತನಾಡುವ ಭಾರತ ದೇಶದಲ್ಲಿ, ಭಾರತೀಯ ಬಳಕೆದಾರರಿಗೆ ಮನಮುಟ್ಟುವಂತೆ ಭಾಷಾ ಅನುಭವಗಳನ್ನು ತಲುಪಿಸಬಲ್ಲ ಮತ್ತು ಪರಸ್ಪರ ಸಂಪರ್ಕ ಸಾಧಿಸಲು ಸಹಾಯ ಮಾಡುವ ಸಾಮಾಜಿಕ ಜಾಲತಾಣ ವೇದಿಕೆ ಅತ್ಯವಶ್ಯವಾಗಿದೆ. ಭಾರತೀಯ ಭಾಷೆಗಳಿಗೆ ಆದ್ಯತೆ ನೀಡುವ ಭಾರತೀಯರ ಧ್ವನಿಗಳಿಗೆ ಕೂ ಒಂದು ವೇದಿಕೆಯನ್ನು ಒದಗಿಸುತ್ತದೆ.