Saturday, 23rd November 2024

ನೊಬೆಲ್ ಪ್ರಶಸ್ತಿ ಗೆದ್ದ ಮನಾಬೆ, ಕ್ಲಾಸ್ ಹ್ಯಾಸೆಲ್ಮನ್ ಮತ್ತು ಜಾರ್ಜಿಯೊ ಪ್ಯಾರಿಸಿ

ಸಿಯುಕುರೊ ಮನಾಬೆ, ಕ್ಲಾಸ್ ಹ್ಯಾಸೆಲ್ಮನ್ ಮತ್ತು ಜಾರ್ಜಿಯೊ ಪ್ಯಾರಿಸಿ ಅವರು ‘ಸಂಕೀರ್ಣ ಭೌತಿಕ ವ್ಯವಸ್ಥೆಗಳ ಬಗ್ಗೆ ನಮ್ಮ ತಿಳುವಳಿಕೆಗೆ ಅದ್ಭುತ ಕೊಡುಗೆಗಳಿಗಾಗಿ 2021ರ ನೊಬೆಲ್ ಪ್ರಶಸ್ತಿ ಗೆದ್ದಿದ್ದಾರೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಮಂಗಳವಾರ ಘೋಷಿಸಿದೆ.

ಕಳೆದ ವರ್ಷ, ಕಪ್ಪು ರಂಧ್ರಗಳ ಸಂಶೋಧನೆಗಾಗಿ ಅಮೆರಿಕದ ಆಂಡ್ರಿಯಾ ಘೆಜ್, ಬ್ರಿಟನ್ʼನ ರೋಜರ್ ಪೆನ್ರೋಸ್ ಮತ್ತು ಜರ್ಮನಿಯ ರೀನ್ ಹಾರ್ಡ್ ಗೆನ್ಜೆಲ್ ಅವರಿಗೆ ಬಹುಮಾನ ಲಭಿಸಿತ್ತು.

ಪ್ರತಿಷ್ಠಿತ ಪ್ರಶಸ್ತಿಯು ಚಿನ್ನದ ಪದಕ ಮತ್ತು 10 ಮಿಲಿಯನ್ ಸ್ವೀಡಿಷ್ ಕ್ರೊನಾರ್ ($1.14 ದಶಲಕ್ಷಕ್ಕೂ ಹೆಚ್ಚು)  ಒಳಗೊಂಡಿದೆ.