ಮುಂಬೈ: ಕ್ರೂಸ್ ಶಿಪ್ನಲ್ಲಿ ಡ್ರಗ್ಸ್ ಪಾರ್ಟಿ ನಡೆಸಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಬಾಲಿವುಡ್ ತಾರೆ ಶಾರುಖ್ ಖಾನ್ರ ಮಗ ಆರ್ಯನ್ ಖಾನ್ಗೆ ಜಾಮೀನು ಸಿಗಲಿಲ್ಲ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋಗೆ ಹೇಳಿಕೆ ಸಲ್ಲಿಸಲು ಅವಕಾಶ ನೀಡಿದ ಮುಂಬೈನ ವಿಶೇಷ ಎನ್ಡಿಪಿಎಸ್ ಕೋರ್ಟ್, ಜಾಮೀನು ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
ಎನ್ಸಿಬಿ ಅಧಿಕಾರಿಗಳಿಂದ ಬಂಧಿಸಲ್ಪಟ್ಟ 23 ವರ್ಷ ವಯಸ್ಸಿನ ಆರ್ಯನ್ ಖಾನ್, ಕಳೆದ ಶುಕ್ರವಾರದಿಂದ ಜೈಲಿನಲ್ಲಿದ್ದಾನೆ. ಜಾಮೀನು ಅರ್ಜಿಗೆ ಹೇಳಿಕೆ ಸಲ್ಲಿಸಲು ಸೋಮವಾರ ಎನ್ಸಿಬಿ ವಕೀಲರು ಶುಕ್ರವಾರದವರೆಗೆ ಕಾಲಾವಕಾಶ ಕೋರಿದರು. ಆದರೆ ನ್ಯಾಯಾಲಯ ಬುಧವಾರದೊಳಗೆ ಹೇಳಿಕೆ ಸಲ್ಲಿಸಬೇಕೆಂದು ಸೂಚಿಸಿ, ವಿಚಾರಣೆ ಮುಂದೂಡಿತು.