Thursday, 19th September 2024

ಮೊದಲನೇ ದಿನ ಭಾರತಕ್ಕೆ ಮೇಲುಗೈ

ಮೊದಲನೇ ಟೆಸ್‌ಟ್‌ ಪಂದ್ಯ: ಬಾಂಗ್ಲಾಾದೇಶ 150 ಕ್ಕೆೆ ಆಲೌಟ್ ಶಮಿಗೆ ಮೂರು ವಿಕೆಟ್ ಕೊಹ್ಲಿಿ ಪಡೆ ಉತ್ತಮ ಆರಂಭ

ಬೌಲಿಂಗ್ ಹಾಗೂ ಬ್ಯಾಾಟಿಂಗ್ ಎರಡೂ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಆತಿಥೇಯ ಭಾರತ ತಂಡ, ಪ್ರಥಮ ಟೆಸ್‌ಟ್‌ ನ ಮೊದಲನೇ ದಿನ ಪ್ರವಾಸಿ ಬಾಂಗ್ಲಾಾದೇಶ ವಿರುದ್ಧ ಮೇಲುಗೈ ಸಾಧಿಸಿದೆ.
ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಾಟಿಂಗ್ ಮಾಡಿದ 58.3 ಓವರ್ ಗಳಿಗೆ ತನ್ನೆೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 150 ರನ್ ಗಳಿಸಿತು. ಬಳಿಕ, ಪ್ರಥಮ ಇನಿಂಗ್‌ಸ್‌ ಆರಂಭಿಸಿದ ಭಾರತ ತಂಡ 26 ಓವರ್ ಗಳಿಗೆ ಒಂದು ವಿಕೆಟ್ ನಷ್ಟಕ್ಕೆೆ 86 ರನ್ ಗಳಿಸಿ 64 ರನ್ ಹಿನ್ನಡೆಯಲ್ಲಿದೆ.

ಟಾಸ್ ಗೆದ್ದು ಮೊದಲು ಬ್ಯಾಾಟಿಂಗ್ ಆಯ್ಕೆೆ ಮಾಡಿಕೊಂಡ ಬಾಂಗ್ಲಾಾ ನಾಯಕ ಮೊಮಿನುಲ್ ಹಕ್ ಅವರ ನಿರ್ಧಾರಕ್ಕೆೆ ಭಾರತದ ಬೌಲರ್‌ಗಳು ಪೆಟ್ಟು ನೀಡಿದರು. ಆರಂಭಿಕರಾಗಿ ಕಣಕ್ಕೆೆ ಇಳಿದ ಶದ್ಮನ್ ಇಸ್ಲಾಾಮ್ ಹಾಗೂ ಕಾಯೆಸ್ ಅವರನ್ನು ತಂಡದ ಮೊತ್ತ 12 ರನ್ ಇರುವಾಗಲೇ ಇಶಾಂತ್ ಶರ್ಮಾ ಹಾಗೂ ಉಮೇಶ್ ಯಾದವ್ ಔಟ್ ಮಾಡಿದರು.

ಮೊಹಮ್ಮದ್ ಮಿಥುನ್ (13) ಅವರನ್ನು ಮೊಹಮ್ಮದ್ ಶಮಿ ಎಲ್‌ಬಡಬ್ಲ್ಯು ಬಲೆಗೆ ಬೀಳಿಸಿದರು.
ನಾಲ್ಕನೇ ವಿಕೆಟ್‌ಗೆ ಜತೆಯಾದ ನಾಯಕ ಮೊಮಿನುಲ್ ಹಕ್ ಹಾಗೂ ಮುಷ್ಫಿಿಕರ್ ರಹೀಮ್ ಜೋಡಿ ಕೆಲ ಕಾಲ ಭಾರತದ ಬೌಲರ್‌ಗಳನ್ನು ಎದುರಿಸಿದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 68 ರನ್ ಗಳಿಸಿ ತಂಡಕ್ಕೆೆ ಆಸರೆಯಾಗಿತ್ತು. ಇದರೊಂದಿಗೆ ದೊಡ್ಡ ಕಟ್ಟಬಹುದು ಎಂದು ನಿರೀಕ್ಷೆೆ ಮಾಡಲಾಗಿತ್ತು. ಆದರೆ, ನಾಯಕ ಮೊಮಿನುಲ್ ಹಕ್ ಅವರನ್ನು ಕ್ಲೀನ್ ಬೌಲ್‌ಡ್‌ ಮಾಡುವ ಮೂಲಕ ಆರ್. ಅಶ್ವಿಿನ್ ಈ ಜೋಡಿಯನ್ನು ಬೇರ್ಪಡಿಸಿದರು. ಮೊಮಿನುಲ್ ಹಕ್ ಅವರು 80 ಎಸೆತಗಳಲ್ಲಿ ಆರು ಬೌಂಡರಿಯೊಂದಿಗೆ 37 ರನ್ ಗಳಿಸಿದ್ದರು.

ನಂತರ, ಕ್ರೀಸ್‌ಗೆ ಬಂದ ಮಹ್ಮೂದುಲ್ಲ (10) ಅವರಿಗೂ ಆರ್. ಅಶ್ವಿಿನ್ ಪೆವಿಲಿಯನ್ ಹಾದಿ ತೋರಿಸಿದರು. ಒಂದು ತುದಿಯಲ್ಲಿ ಮುಷ್ಫಿಿಕರ್ ರಹೀಮ್ ಗಟ್ಟಿಿಯಾಗಿ ನಿಂತಿದ್ದರು. ತಾಳ್ಮೆೆಯಿಂದ ಬ್ಯಾಾಟಿಂಗ್ ಮಾಡುತ್ತಿಿದ್ದ ಅವರು, ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. 105 ಎಸೆತಗಳನ್ನು ಎದುರಿಸಿದ ಅವರು ಒಂದು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಯೊಂದಿಗೆ 43 ರನ್ ಗಳಿಸಿದ್ದರು. ಅರ್ಧ ಶತಕದಂಚಿನಲ್ಲಿದ್ದ ಅವರನ್ನು ಮೊಹಮ್ಮದ್ ಶಮಿ ಕ್ಲೀನ್ ಬೌಲ್‌ಡ್‌ ಮಾಡಿದರು.

ಇವರು ವಿಕೆಟ್ ಒಪ್ಪಿಿಸುತ್ತಿಿದ್ದಂತೆ ಕೇವಲ 10 ರನ್‌ಗಳ ಅಂತರದಲ್ಲಿ ಇನ್ನುಳಿದ ನಾಲ್ಕೂ ವಿಕೆಟ್‌ಗಳು ಬಹುಬೇಗ ಉರುಳಿದವು. ಲಿಟನ್ ದಾಸ್ 21 ರನ್ ನಿರೀಕ್ಷೆೆ ಹುಸಿ ಮಾಡಿದರು.
ಭಾರತದ ಪರ ಅದ್ಭುತ ಬೌಲಿಂಗ್ ಮಾಡಿದ ಮೊಹಮ್ಮದ್ ಶಮಿ ವಿಕೆಟ್ ಪಡೆದರೆ, ಇಶಾಂತ್ ಶರ್ಮಾ, ಉಮೇಶ್ ಯಾದವ್ ಹಾಗೂ ಆರ್. ಅಶ್ವಿಿನ್ ತಲಾ ಎರಡು ವಿಕೆಟ್ ಕಿತ್ತರು.

ಭಾರತ ಉತ್ತಮ ಆರಂಭ:

ಬಾಂಗ್ಲಾಾದೇಶವನ್ನು ಕಡಿಮೆ ಮೊತ್ತಕ್ಕೆೆ ಕಟ್ಟಿಿ ಹಾಕಿದ ಬಳಿಕ ಪ್ರಥಮ ಇನಿಂಗ್‌ಸ್‌ ಆರಂಭಿಸಿದ ಭಾರತ ಮೊದಲನೇ ವಿಕೆಟ್ ಬೇಗ ಕಳೆದುಕೊಂಡರೂ ಉತ್ತಮ ಆರಂಭ ಪಡೆಯಿತು. ಕಳೆದ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ರೋಹಿತ್ ಶರ್ಮಾ ಕೇವಲ ಆರು ರನ್‌ಗೆ ವಿಕೆಟ್ ಒಪ್ಪಿಿಸುವ ಮೂಲಕ ನಿರಾಸೆ ಮೂಡಿಸಿದರು. ನಂತರ ಮಯಾಂಕ್ ಅಗರ್ವಾಲ್ ಹಾಗೂ ಚೇತೇಶ್ವರ ಪೂಜಾರ ಜೋಡಿ ಎ ರಡನೇ ವಿಕೆಟ್‌ಗೆ 72 ರನ್ ಗಳಿಸಿತು.
ಬ್ಯಾಾಟಿಂಗ್ ಲಯ ಮುಂದುವರಿಸಿರುವ ಮಯಾಂಕ್ ಅಗರ್ವಾಲ್ 81 ಎಸೆತಗಳಲ್ಲಿ ಆರು ಬೌಂಡರಿಯೊಂದಿಗೆ 37 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾಾರೆ. ಮತ್ತೊೊಂದು ತುದಿಯಲ್ಲಿ ಚೇತೇಶ್ವರ ಪೂಜಾರ 61 ಎಸೆತಗಳಲ್ಲಿ ಏಳು ಬೌಂಡರಿಯೊಂದಿಗೆ 43 ರನ್ ಗಳಿಸಿ ಅಜೇಯರಾಗಿದ್ದಾಾರೆ.

ಸಂಕ್ಷಿಪ್ತ ಸ್ಕೋರ್
ಬಾಂಗ್ಲಾಾದೇಶ: 58.3 ಓವರ್‌ಗಳಿಗೆ 150/10 (ಮುಷ್ಫಿಿಕರ್ ರಹೀಮ್ 43, ಮೊಮಿನುಲ್ 37, ಲಿಟನ್ ದಾಸ್ 21; ಮೊಹಮ್ಮದ್ ಶಮಿ 27 ಕ್ಕೆೆ 3, ಇಶಾಂತ್ ಶರ್ಮಾ 20 ಕ್ಕೆೆ 2, ಉಮೇಶ್ ಯಾದವ್ 47 ಕ್ಕೆೆ 2, ಆರ್. ಅಶ್ವಿಿನ್ 43 ಕ್ಕೆೆ 2)
ಭಾರತ: 26 ಓವರ್‌ಗಳಿಗೆ 86/1 (ಚೇತೇಶ್ವರ ಪೂಜಾರ ಔಟಾಗದೆ 43, ಮಯಾಂಕ್ ಅಗರ್ವಾಲ್ ಔಟಾಗದೆ 37; ಅಬು ಝಾಯೆದ್ 21 ಕ್ಕೆೆ 1)

ಅಶ್ವಿನ್ ಮುಡಿಗೆ 250 ವಿಕೆಟ್
ಭಾರತದ ಹಿರಿಯ ಸ್ಪಿಿನ್ನರ್ ರವಿಚಂದ್ರನ್ ಅಶ್ವಿಿನ್ ಅವರು ತವರು ನೆಲದಲ್ಲಿ ನೂತನ ಮೈಲುಗಲ್ಲು ಸೃಷ್ಟಿಿಸಿದ್ದಾಾರೆ. ಬಾಂಗ್ಲಾಾದೇಶ ವಿರುದ್ಧದ ಮೊದಲನೇ ಟೆಸ್‌ಟ್‌ ಪಂದ್ಯದ ಮೊದಲನೇ ದಿನ ಅಶ್ವಿಿನ್ ಮೊಮಿನುಲ್ ಹಕ್ ಅವರ ವಿಕೆಟ್ ಪಡೆಯುತ್ತಿಿದ್ದಂತೆ ವೃತ್ತಿಿ ಜೀವನದಲ್ಲಿ ತವರು ಮಣ್ಣಿಿನಲ್ಲಿ 250 ವಿಕೆಟ್ ತನ್ನ ಖಾತೆಗೆ ಸೇರಿಸಿಕೊಂಡರು. ಆ ಮೂಲಕ ಸ್ಪಿಿನ್ ದಂತಕತೆ ಅನಿಲ್ ಕುಂಬ್ಳೆೆ ಹಾಗೂ ಹರಭಜನ್ ಸಿಂಗ್ ನಂತರ ಭಾರತದ ಮೂರನೇ ಸ್ಪಿಿನ್ನರ್ ಎಂಬ ಗೌರವಕ್ಕೆೆ ಚೆನ್ನೈ ಆಟಗಾರ ಭಾಜನರಾದರು.