Thursday, 19th September 2024

ಹಾಂಕಾಂಗ್ ಓಪನ್: ಪಿ.ವಿ ಸಿಂಧುಗೆ ಸೋಲು

ಕ್ವಾಾರ್ಟರ್ ಫೈನಲ್‌ಸ್‌‌ಗೆ ಕಿಡಂಬಿ ಶ್ರೀಕಾಂತ್ ಕಶ್ಯಪ್, ಎಚ್.ಎಸ್ ಪ್ರಣಯ್ ನಿರ್ಗಮನ ಅಶ್ವಿನಿ-ರಂಕಿರೆಡ್ಡಿ ಜೋಡಿಗೂ ಸೋಲು

ಹಾಂಕಾಂಗ್:
ಇಲ್ಲಿ ನಡೆಯುತ್ತಿಿರುವ ಹಾಂಕಾಂಗ್ ಓಪನ್ ಬ್ಯಾಾಡ್ಮಿಿಂಟನ್ ಟೂರ್ನಿಯ ಪುರುಷರ ಸಿಂಗಲ್‌ಸ್‌ ವಿಭಾಗದಲ್ಲಿ ಭಾರತದ ಅಗ್ರ ಕ್ರಮಾಂಕದ ಆಟಗಾರ ಕಿಡಂಬಿ ಕ್ವಾಾರ್ಟರ್ ಫೈನಲ್‌ಸ್‌‌ಗೆ ಲಗ್ಗೆೆ ಇಟ್ಟಿಿದ್ದಾಾರೆ. ಆದರೆ, ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಅವರು ಎರಡನೇ ಸುತ್ತಿಿನ ಪಂದ್ಯದಲ್ಲಿ 18 ನೇ ಶ್ರೇಯಾಂಕಿತೆ ವಿರುದ್ಧ ಸೋತು ಟೂರ್ನಿಯಿಂದ ನಿರ್ಗಮಿಸಿದ್ದಾಾರೆ.

ಕಳೆದ ಆಗಸ್‌ಟ್‌ ನಲ್ಲಿ ವಿಶ್ವ ಚಾಂಪಿಯನ್ ಸಾಧನೆ ಮಾಡಿದ್ದ ಬಳಿಕ ಪಿ.ವಿ ಸಿಂಧು ಸತತ ವೈಫಲ್ಯದಿಂದ ತತ್ತರಿಸಿದ್ದಾಾರೆ. ಪ್ರಸ್ತುತ ನಡೆಯುತ್ತಿಿರುವ ಹಾಂಕಾಂಗ್ ಓಪನ್ ಟೂರ್ನಿಯಲ್ಲಿ ಪುಟಿದೆದ್ದು ಪ್ರಶಸ್ತಿಿ ಗೆಲ್ಲಬಹುದೆಂದು ಎಲ್ಲರೂ ನಿರೀಕ್ಷೆೆ ಇಟ್ಟಿಿದ್ದರು. ಆದರೆ, ಮತ್ತೆೆ ಎರಡನೇ ಸುತ್ತಿಿನಲ್ಲಿ ಸೋಲುವ ಭಾರಿ ನಿರಾಸೆ ಮೂಡಿಸಿದ್ದಾಾರೆ.

ಆರನೇ ಶ್ರೇಯಾಂಕಿತೆ ಸಿಂಧು, ಗುರುವಾರ ನಡೆದ ಮಹಿಳೆಯರ ಸಿಂಗಲ್‌ಸ್‌ ಎರಡನೇ ಸುತ್ತಿಿನ ಪಂದ್ಯದಲ್ಲಿ 18ನೇ ಶ್ರೇಯಾಂಕಿತೆ ಬುಸನಾನ್ ವಿರುದ್ಧ 18-21, 21-11, 16-21 ಅಂತರದಲ್ಲಿ ಪರಾಭವಗೊಂಡಿದ್ದಾಾರೆ. ಮೊದಲನೇ ಸೆಟ್ ಸೋಲಿನ ಬಳಿಕ ಎಚ್ಚೆೆತ್ತುಕೊಂಡ ಒಲಿಂಪಿಕ್‌ಸ್‌ ಬೆಳ್ಳಿಿ ಪದಕ ವಿಜೇತೆ, ಎರಡನೇ ಸೆಟ್‌ನಲ್ಲಿ ತೀವ್ರ ಪೈಪೋಟಿ ನೀಡಿ ಗೆದ್ದು ಸಮಬಲ ಸಾಧಿಸಿದ್ದರು. ಆದರೆ, ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಭಾರಿ ಅಂತರದಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿದರು.
ಮುನ್ನಡೆ:

ಗುರುವಾರ ನಡೆದ ಪುರುಷರ ಸಿಂಗಲ್‌ಸ್‌ ಎರಡನೇ ಸುತ್ತಿಿನ ಪಂದ್ಯದಲ್ಲಿ ಪ್ರಾಾಬಲ್ಯ ಮೆರೆದ ಕಿಡಂಬಿ ಶ್ರೀಕಾಂತ್ ಅವರು 21-11, 15-21, 21-19 ಅಂತರದಲ್ಲಿ ಭಾರತದ ಮತ್ತೊೊರ್ವ ಆಟಗಾರ ಸೌರಭ್ ವರ್ಮಾ ವಿರುದ್ಧ ಗೆದ್ದು ಅಂತಿಮ ಎಂಟರ ಕದ ತಟ್ಟಿಿದರು. ಮೊದಲನೇ ಸುತ್ತಿಿನ ಪಂದ್ಯದಲ್ಲಿ ಕಿಡಂಬಿ ಶ್ರೀಕಾಂತ್‌ಗೆ ವಿಶ್ವದ ಅಗ್ರ ಶ್ರೇಯಾಂಕಿತ ಕೆಂಟೊ ಮೊಮೊಟಾ ಅವರ ವಿರುದ್ಧ ಕಠಿಣ ಸವಾಲು ಎದುರಾಗಿತ್ತು. ಆದರೆ, ಮೊಮೊಟಾ ಅನಿರೀಕ್ಷಿಿತವಾಗಿ ಹಾಂಕಾಂಗ್ ಓಪನ್ ವಿಥ್‌ಡ್ರಾಾ ಇದರ ಲಾಭ ಪಡೆದ ಶ್ರೀಕಾಂತ್ ಎರಡನೇ ಸುತ್ತಿಿಗೆ ಪ್ರವೇಶ ಮಾಡಿದ್ದರು. ಅದರಂತೆ, ಎರಡನೇ ಸುತ್ತಿಿನಲ್ಲಿ ಯಶಸ್ವಿಿಯಾಗಿದ್ದಾಾರೆ.

ಪುರುಷರ ಸಿಂಗಲ್‌ಸ್‌ ಪಂದ್ಯದಲ್ಲಿ ಎಚ್. ಎಸ್ ಪ್ರಣಯ್ ಅವರು ವಿಶ್ವದ ಆರನೇ ಶ್ರೇಯಾಂಕಿತ ಜೊನಾಥನ್ ಕ್ರಿಿಸ್ಟಿಿ ವಿರುದ್ಧ 12-21, 19-21 ಅಂತರದ ನೇರ ಸೆಟ್‌ಗಳಲ್ಲಿ ಸೋಲು ಅನುಭವಿಸಿದ್ದಾಾರೆ. ಮತ್ತೊೊಂದು ಪುರುಷರ ಸಿಂಗಲ್‌ಸ್‌ ಪಂದ್ಯದಲ್ಲಿ ಭಾರತದ ಮತ್ತೊೊರ್ವ ಆಟಗಾರ ಪರುಪಳ್ಳಿಿ ಕಶ್ಯಪ್ ಅವರು ತೈವಾನ್‌ನ ಚೌ ಟೀನ್ ಚೆನ್ ವಿರುದ್ಧ 21-12, 21-23, ಅಂತರದಲ್ಲಿ ಸೋಲು ಒಪ್ಪಿಿಕೊಂಡರು.
ಮಿಶ್ರ ಡಬಲ್‌ಸ್‌ ಜೋಡಿಗೆ ಸೋಲು:
ಸಾತ್ವಿಿಕ್‌ಸಾಯಿರಾಜ್ ರಂಕಿರೆಡ್ಡಿಿ ಹಾಗೂ ಅಶ್ವಿಿನ್ ಪೊನ್ನಪ್ಪ ಮಿಶ್ರ ಡಬಲ್‌ಸ್‌ ಜೋಡಿಯು, ಯುಟ ವಟನಾಬೆ ಮತ್ತು ಅರಿಸಾ ಹಿಗಶಿನೊ ಜೋಡಿಯ ವಿರುದ್ಧ 19-21, 12-21 ಅಂತರದಲ್ಲಿ ಸೋತು ಟೂರ್ನಿಯಿಂದ ಹೊರ ನಡೆಯಿತು.

==