Monday, 16th September 2024

ಒಮೈಕ್ರಾನ್ ಭೀತಿ: ಸೂಚ್ಯಂಕಗಳಲ್ಲಿ ಭಾರೀ ಇಳಿಕೆ, ಕೋಟ್ಯಂತರ ರೂ.ನಷ್ಟ

sensex

ಮುಂಬೈ: ವಿಶ್ವಾದ್ಯಂತ ಒಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಭೀತಿಯಿಂದಾಗಿ ಹೂಡಿಕೆ ದಾರರು ಮಾರಾಟಕ್ಕೆ ಮುಗಿದು ಬಿದ್ದರು. ಪರಿಣಾಮ ಭಾರತೀಯ ಶೇರು ಮಾರುಕಟ್ಟೆಗಳು ಸೋಮವಾರವೇ ತೀವ್ರ ಆಘಾತಕ್ಕೆ ಗುರಿಯಾಗಿವೆ.

ಬಾಂಬೆ ಶೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ 1189.73(ಶೇ.2.09) ಅಂಶಗಳಷ್ಟು ಕುಸಿದು 55,822.01ರಲ್ಲಿ ದಿನದಾಟ ಮುಗಿಸಿದ್ದರೆ ಅತ್ತ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದ ನಿಫ್ಟಿ 371 ಅಂಶಗಳಷ್ಟು ಕುಸಿದು 16,614.20ರಲ್ಲಿ ಅಂತ್ಯಗೊಂಡಿದ್ದು, ಹೂಡಿಕೆದಾರರು ಕೋಟ್ಯಂತರ ರೂ.ನಷ್ಟ ಅನುಭವಿಸಿದ್ದಾರೆ.

ಬಿಪಿಸಿಎಲ್, ಟಾಟಾ ಸ್ಟೀಲ್, ಟಾಟಾ ಮೋಟರ್ಸ್,‌ ಇಂಡಸ್‌ಇಂಡ್ ಬ್ಯಾಂಕ್ ಮತ್ತು ಎಸ್‌ಬಿಐ ಹೆಚ್ಚು ಕುಸಿತವನ್ನು ದಾಖಲಿಸಿರುವ ಶೇರುಗಳಲ್ಲಿ ಸೇರಿವೆ.

ಹೂಡಿಕೆದಾರರು 11,23,010.78 ಕೋ.ರೂ.ಗಳ ನಷ್ಟವನ್ನು ಅನುಭವಿಸಿದ್ದಾರೆ. ಮಧ್ಯಂತರ ವಹಿವಾಟಿನಲ್ಲಿ ಸೆನ್ಸೆಕ್ಸ್ 1879.06 ಮತ್ತು ನಿಫ್ಟಿ 575 ಅಂಶ ಗಳಷ್ಟು ಕುಸಿದಿದ್ದವು. ವಿದೇಶಿ ಹೂಡಿಕೆದಾರರು ಡಿಸೆಂಬರ್‌ ತಿಂಗಳಲ್ಲಿ ಈವರೆಗೆ 17,696 ಕೋ.ರೂ.ಗಳನ್ನು ಭಾರತೀಯ ಮಾರುಕಟ್ಟೆಗಳಿಂದ ಹಿಂದೆಗೆದು ಕೊಂಡಿದ್ದಾರೆ.