ಲಕ್ನೋ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ರೈತರು, ಕೊವಿಡ್ 19 ವಾರಿಯರ್ಸ್, ಶಿಕ್ಷಕರು ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತ ಹಲವು ಅಂಶಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.
ರಾಜ್ಯದ ಹಲವು ಪತ್ರಕರ್ತರ ವಿರುದ್ಧ ಹಾಕಲಾದ ಸುಳ್ಳು ಕೇಸ್ಗಳನ್ನು ಹಿಂಪಡೆಯುವುದಾಗಿಯೂ ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ. ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ಛತ್ತೀಸ್ಗಢ್ನಂತೆಯೇ ಇಲ್ಲಿಯೂ ಕೂಡ ರೈತರ ಎಲ್ಲ ರೀತಿಯ ಕೃಷಿ ಸಾಲ ಮನ್ನಾ ಮಾಡಲಾಗುವುದು. ಭತ್ತ ಮತ್ತು ಗೋಧಿಯನ್ನು ಪ್ರತಿ ಕ್ವಿಂಟಲ್ಗೆ 2500 ರೂ.ಗೆ ಖರೀದಿ ಮಾಡಲಾಗುವುದು ಮತ್ತು ಕಬ್ಬನ್ನು ಪ್ರತಿ ಕ್ವಿಂಟಲ್ಗೆ 400 ರೂಪಾಯಿಗೆ ಖರೀದಿಸಲಾಗುವುದು. ವಿದ್ಯುತ್ ಬಿಲ್ನಲ್ಲಿ ಅರ್ಧದಷ್ಟು ಕಡಿಮೆ ಮಾಡಲಾ ಗುತ್ತದೆ ಮತ್ತು ಕೊರೊನಾ ಸಾಂಕ್ರಾಮಿಕ ಅವಧಿಯಲ್ಲಿ ಬಾಕಿ ಇರುವ ಗ್ರಾಹಕರ್ ಬಿಲ್ನ ಹಣವನ್ನು ಮನ್ನಾ ಮಾಡಲಾಗುತ್ತದೆ ಎಂದೂ ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.
ಬೀಡಾಡಿ ಹಸುಗಳಿಂದ ಬೆಳೆ ಹಾನಿ ಸಂಕಷ್ಟ ಅನುಭವಿಸಿದ ರೈತರಿಗೆ 3 ಸಾವಿರ ರೂಪಾಯಿ ಪರಿಹಾರ, 2. ಛತ್ತೀಸ್ಗಢ್ನಂತೆ ಉತ್ತರಪ್ರದೇಶದಲ್ಲೂ ಕೂಡ ಹಸುವಿನ ಸಗಣಿಗೆ ಕೆಜಿಗೆ 2 ರೂಪಾಯಿಯನ್ನು ಕೊಟ್ಟ ಖರೀದಿಸಲಾಗುವುದು, 3. ಕೊರೊನಾ ಸಾಂಕ್ರಾಮಿಕ ವಿರುದ್ಧ ಹೋರಾಡಿ ಅದರಲ್ಲೇ ಪ್ರಾಣ ಕಳೆದುಕೊಂಡ ಕೊವಿಡ್ 19 ವಾರಿಯರ್ಸ್ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ, 4. ಹೊರಗುತ್ತಿಗೆ ನೌಕರಿ ವ್ಯವಸ್ಥೆ ನಿಲ್ಲಿಸಿ, ತಾತ್ಕಾಲಿಕ ವಾಗಿ ಕೆಲಸ ಮಾಡುತ್ತಿ ರುವ ಉದ್ಯೋಗಿಗಳನ್ನು ಮಾಡುವ ಭರವಸೆ, 5. ತಾತ್ಕಾಲಿಕ ಶಿಕ್ಷಕರು ಮತ್ತು ಶಿಕ್ಷಾ ಮಿತ್ರರ ಖಾಯಂ ಮತ್ತು ಸಂಸ್ಕೃತ-ಉರ್ದು ಶಿಕ್ಷಕ ಹುದ್ದೆಗಳ ಭರ್ತಿ, 6. ಗ್ರಾಮೀಣ ಮತ್ತು ನಗರ ಭಾಗದಲ್ಲಿರುವ ಬಡಜನರು-ಮಧ್ಯಮವರ್ಗದವರಿಗೆ ವಸತಿ ವ್ಯವಸ್ಥೆ.
7. ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಪದವಿವರೆಗೂ ಉಚಿತ ಶಿಕ್ಷಣ, ಈ ವರ್ಗದ ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿಯಲ್ಲೂ ಮೀಸಲಾತಿ. 8. ಶಾಲಾ ಅಡುಗೆ ಯವರ ವೇತನ ತಿಂಗಳಿಗೆ 5000 ರೂ.ಗೆ ಹೆಚ್ಚಳ. ಸೇರಿದಂತೆ ಹಲವು ಆಫರ್ಗಳನ್ನ ಪ್ರಿಯಾಂಕ ಗಾಂಧಿ ಜನರ ಮುಂದೆ ಇಟ್ಟಿದ್ದಾರೆ.