ನದಿ ಎಂದೂ ತನ್ನ ಗುಣವನ್ನು ಬದಲಿಸುವುದಿಲ್ಲ. ಹೀಗಾಗಿ ಅದಕ್ಕೆ ಎಂಥ ಬಂಡೆಗಳು, ಅಡೆತಡೆಗಳು ಎದುರಾದರೂ ಅದು ಹರಿಯುತ್ತಲೇ ಹೋಗುತ್ತದೆ. ಅದಕ್ಕೆ ಯಾರೂ ಮಾರ್ಗ ಅಥವಾ ಪಥವನ್ನು ನಿರ್ಮಿಸಿಕೊಡಬೇಕಿಲ್ಲ. ಅದೇ ತನ್ನ ಮಾರ್ಗವನ್ನು ಕಂಡುಕೊಳ್ಳುತ್ತದೆ. ನಮ್ಮ ದಾರಿ ಕಂಡುಕೊಳ್ಳಲು ನದಿಯೇ ನಮಗೆ ಉತ್ತಮ ನಿದರ್ಶನವಾಗಬಲ್ಲುದು.