Thursday, 19th September 2024

ನೆಹರೂ 58ನೇ ಪುಣ್ಯತಿಥಿ: ಗಣ್ಯರ ನಮನ

ನವದೆಹಲಿ: ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ 58ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಹಲವು ಸಲ್ಲಿಸಿದರು.

ದೆಹಲಿಯ ಶಾಂತಿವನದಲ್ಲಿರುವ ನೆಹರೂ ಸ್ಮಾರಕಕ್ಕೆ ಭೇಟಿ ನೀಡಿದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಅನೇಕರು ಪುಷ್ಪನಮನ ಸಲ್ಲಿಸಿದರು.

ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸ್ವಾತಂತ್ರ್ಯಕ್ಕಾಗಿ ಅಚಲವಾದ ಸಮರ್ಪಣೆ, ಉತ್ತಮ ನಾಳೆಗಾಗಿ ಅಪ್ರತಿಮ ದೃಷ್ಟಿ, ನ್ಯಾಯ ಮತ್ತು ಸಮಾನತೆಯನ್ನು ಎತ್ತಿಹಿಡಿಯಲು ರಾಜಿಯಾಗದ ಮನೋಭಾವ. ಪಂ. ಜವಾಹರಲಾಲ್ ನೆಹರು ಅವರು ಇಂದಿಗೂ ಭಾರತವನ್ನು ಶ್ರೇಷ್ಠತೆಯತ್ತ ಮುನ್ನಡೆಸುತ್ತಿರುವ ನಾಯಕ ರಲ್ಲಿ ಒಬ್ಬರು ಎಂದು ಹೇಳಿದೆ.

ಒಂದು ನಮ್ಮ ರಾಷ್ಟ್ರದ ಸ್ವಾತಂತ್ರ್ಯ, ಮತ್ತೊಂದು ನಮ್ಮ ಜನರ ಏಳಿಗೆ. ನಿರ್ಭೀತಿ ವ್ಯಕ್ತಿತ್ವ ಹೊಂದಿದ್ದ ನೆಹರೂ ಅವರು ಭಾರತದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಗೆ ಉತ್ಸಾಹದಿಂದ ಅವಿರತವಾಗಿ ಶ್ರಮಿಸಿದ್ದಾರೆ. ದೇಶಕ್ಕಾಗಿ ಅವರು ಕಂಡ ಕನಸುಗಳನ್ನು ನನಸಾಗಿಸಲು ಪಟ್ಟುಬಿಡದೆ ಶ್ರಮಿಸಿದ್ದಾರೆ’ ಎಂದು ಸ್ಮರಿಸಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಜವಾಹರಲಾಲ್ ನೆಹರೂ ಅವರು ನಿಧನರಾಗಿ 58 ವರ್ಷಗಳು ಕಳೆದಿವೆ. ಆದರೆ, ಅವರ ರಾಜಕೀಯ ಆಲೋಚನೆಗಳು, ರಾಷ್ಟ್ರದ ಅಭಿವೃದ್ಧಿಗೆ ಹೊಂದಿದ್ದ ದೃಷ್ಟಿಕೋನಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ’ ಎಂದು ಹೇಳಿದ್ದಾರೆ.